PMEGP : 20 ಲಕ್ಷ ಸಾಲ! ಯಾವುದೇ ಆಸ್ತಿ ಅಥವಾ ಶ್ಯೂರಿಟಿ ಬೇಕಿಲ್ಲ! ಸುಲಭ ಅರ್ಜಿ ಪ್ರಕ್ರಿಯೆ – ಅರ್ಜಿ ಸಲ್ಲಿಸುವುದು ಹೇಗೆ?

PMEGP

ಯಾರಿಗುಂಟು, ಯಾರಿಗಿಲ್ಲ ಹೊಸ ಉದ್ಯಮವನ್ನು ಶುರು ಮಾಡುವುದಕ್ಕೆ ಯಾವುದೇ ಶೂರಿಟಿ ಇಲ್ಲದೆ 20 ಲಕ್ಷದವರೆಗೆ ಸಾಲ ಸೌಲಭ್ಯವನ್ನು ಕೊಡಲು ಸರ್ಕಾರ ಮುಂದಾಗಿದೆ ಈ ಅವಕಾಶವನ್ನು ನೀವು ಬಳಸಿಕೊಂಡು ನಿಮ್ಮ ಕನಸಿನ ಬಿಸಿನೆಸ್ ಅನ್ನ ಶುರು ಮಾಡಿ ಕೈ ತುಂಬಾ ಸಂಪಾದನೆಯನ್ನು ಮಾಡಿ.


PMEGP Scheme In Kannada

ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಸಣ್ಣ ಪ್ರಮಾಣದ ಉದ್ಯಮಗಳಿಗೆ ಮಹತ್ವದ ಸ್ಥಾನಮಾನವಿದೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಲಕ್ಷಾಂತರ ಜನರಿಗೆ ಉದ್ಯೋಗವನ್ನು ನೀಡುತ್ತಿರುವಂತಹ ಕ್ಷೇತ್ರಗಳನ್ನು ಉತ್ತೇಜಿಸಲು ಸರ್ಕಾರ ಇದೀಗ ಇಂತಹ ಯೋಜನೆಯನ್ನು ಜಾರಿಗೆ ತಂದಿದೆ 20 ಲಕ್ಷದವರೆಗೆ ಸಾಲಕ್ಕೆ ಯಾವುದೇ ರೀತಿಯಾದ ಗಿರುವಿ ಇಡುವುದು ಕಡ್ಡಾಯವಲ್ಲ, ಈ ಒಂದು ನಿರ್ಧಾರದಿಂದ ಸಣ್ಣ ಪ್ರಮಾಣದ ಹಾಗೂ ಮಧ್ಯಮ ಪ್ರಮಾಣದ ಕಂಪನಿಗಳಿಗೆ ಬಾರಿ ಅನುಕೂಲವಾಗಲಿದೆ.

PMEGP Scheme In Kannada

ಯೋಜನೆ ಬಗ್ಗೆ (About the project:):

ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳ (PMEGP) ಬೆಳವಣಿಗೆಗೆ ವೇಗವನ್ನ ಹೆಚ್ಚಿಸಲು ಇದೀಗ ಹಳೆ ಯೋಜನೆಗೆ ಮತ್ತಷ್ಟು ಸಡಿಲತೆಯನ್ನು ತಂದು ಇದೀಗ ಉದ್ಯಮಗಳಿಗೆ ಆರ್ಥಿಕ ನೆರವನ್ನು ಕೊಡಲು ಸರ್ಕಾರ ಮುಂದಾಗಿದೆ, ಹೌದು ಯಾವುದೇ ಆಸ್ತಿ ಅಥವಾ ಶ್ಯುರಿಟಿ ಇಲ್ಲದೆ ಈಗ 20 ಲಕ್ಷದವರೆಗೆ ಸಾಲ ಸೌಲಭ್ಯವನ್ನು ನೀಡಲು ಸರ್ಕಾರ ಮುಂದಾಗಿದ್ದು, ಎಂ ಎಸ್ ಇ (MSME) ಗಳಿಗೆ 20 ಲಕ್ಷದವರೆಗೆ ಸಾಲ ಸೌಲಭ್ಯ ಸಿಗಲಿದೆ.

ಇನ್ನು ಮೇಲಾಧಾರ ರಹಿತ ಸಾಲವನ್ನು ನೀಡಬಹುದು ಅನ್ನುವಂತಹ ಮಾಹಿತಿಯನ್ನು ಆರ್ ಬಿ ಐ (RBI) ನೀಡಿದೆ, PMGEP ಯೋಜನೆ ಅಡಿ ಬರುವ ಎಲ್ಲರಿಗೂ ಬಂಪರ್ ಗುಡ್ ನ್ಯೂಸ್ ಇದಾಗಿದ್ದು ಔಪಚಾರಿಕ ಬ್ಯಾಂಕಿಂಗ್ ವ್ಯವಸ್ಥೆಗಳೊಳಗೆ ಸುಲಭವಾಗಿ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಯೋಜನೆಯ ಉದ್ದೇಶ (Project Objective):

ಪ್ರಾಥಮಿಕ ಯೋಜನೆಯ ಉದ್ದೇಶ ಸಣ್ಣ ಹಾಗೂ ಅತಿ ಸಣ್ಣ ಉದ್ಯಮಗಳಿಗೆ ಸರ್ಕಾರದ ಕಡೆಯಿಂದ 20 ಲಕ್ಷದವರೆಗೆ ಯಾವುದೇ ರೀತಿಯಾದ ಗಿರವಿ ಇಡದೆ ಸಾಲ ಸೌಲಭ್ಯವನ್ನು ನೀಡುತ್ತಿರುವುದು ಉದ್ಯಮ ಮಾಡುವವರಿಗೆ ಒಂದು ಗುಡ್ ನ್ಯೂಸ್ ಅಂತಾನೆ ಹೇಳಬಹುದು.

ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಯೋಜನೆಯಡಿಯಲ್ಲಿ (PMEGP) ಈ ಒಂದು ಯೋಜನೆಗೆ ಆರ್ಥಿಕ ಸಹಾಯಧನವನ್ನು ನೀಡುತ್ತಿದ್ದು ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಸಿಗುತ್ತದೆ ಹೊಸ ಉದ್ಯಮ ಆರಂಭಿಸಲು ಹಾಗೂ ವಿಸ್ತರಣೆ ಮಾಡಲು ಅನುಕೂಲಕರವಾಗುವಂತ ಒಂದು ಉದ್ದೇಶವನ್ನ ಇದು ಹೊಂದಿದ್ದು ಬ್ಯಾಂಕ್ ಮೂಲಕ ಸುಲಭವಾಗಿ ಸಾಲ ಸೌಲಭ್ಯ ದೊರೆಯುತ್ತದೆ.

ಯೋಜನೆಯ ಲಾಭಗಳು (Benefits):

  • ಮಹಿಳಾ ಉದ್ಯಮಿಗಳಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಲಾಗುತ್ತದೆ
  • ಆಸ್ತಿ ಇಲ್ಲದ ಯುವಕರಿಗೂ ಉದ್ಯಮ ಆರಂಭಿಸಲು ಸುವರ್ಣ ಅವಕಾಶ
  • ಮಧ್ಯವರ್ತಿಗಳಿಲ್ಲದೆ ನೇರ ಬ್ಯಾಂಕ್ ಮೂಲಕ ಸಾಲ ಸೌಲಭ್ಯ
  • ಗ್ರಾಮೀಣ ಪ್ರದೇಶದಲ್ಲಿ ಸ್ವಯಂ ಉದ್ಯೋಗ ಹೆಚ್ಚಳಕ್ಕೆ ರಹಧಾರಿ
  • ಆರ್ಥಿಕ ಸ್ವಾವಲಂಬನೆಗೆ ಅಡಿಗಲ್ಲು
  • ಉದ್ಯೋಗ ಸೃಷ್ಟಿಗೆ ಬರಪೂರ ಉತ್ತೇಜನ.

ಈ ಯೋಜನೆಯನ್ನು ಹೇಗೆ ಉಪಯೋಗಿಸಬಹುದು? (How to Use):

  • ನಿಮ್ಮ ಉದ್ಯಮದ ಯೋಜನೆ ಪ್ರಾಜೆಕ್ಟ್ ಅನ್ನ ತಯಾರು ಮಾಡಬೇಕು
  • ಪಿಎಂಇಜಿಪಿ (PMEGP) ಅಥವಾ ಎಂಎಸ್ಎಂಇ (MSME)ನೋಂದಣಿ ಮಾಡಿಸಿಕೊಳ್ಳಬೇಕು
  • ಉದ್ಯಮ ರಿಜಿಸ್ಟ್ರೇಷನ್ ಮಾಡಿಕೊಳ್ಳಬೇಕು.
  • ಸಮೀಪದ ಬ್ಯಾಂಕ್ ಸಂಪರ್ಕಿಸಬೇಕು ಅದಾದ ನಂತರ
  • ಅಗತ್ಯ ದಾಖಲೆಗಳೊಂದಿಗೆ ಸಾಲ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ
  • ಬ್ಯಾಂಕ್ ಪರಿಶೀಲನೆ ನಂತರ ನಿಮಗೆ ಸಾಲ ಮಂಜೂರು ಮಾಡಲಾಗುತ್ತದೆ

ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳ ವಿವರಗಳು:

  • ಫೋಟೋ
  • ಪಾನ್ ಕಾರ್ಡ್
  • ಆಧಾರ್ ಕಾರ್ಡ್
  • ವಿಳಾಸ ದೃಡೀಕರಣ ಪ್ರಮಾಣ ಪತ್ರ
  • ಬ್ಯಾಂಕ್ ಪಾಸ್ ಬುಕ್
  • ಉದ್ಯಮ ಯೋಜನಾ ವರದಿ
  • ಶಿಕ್ಷಣ ಅಥವಾ ಅನುಭವ ಪ್ರಮಾಣ ಪತ್ರ
  • ಉದ್ಯಮ ರಿಜಿಸ್ಟ್ರೇಷನ್ ಪ್ರಮಾಣಪತ್ರ ಹಾಗೂ ಇನ್ನಿತರ ಅಗತ್ಯ ದಾಖಲೆಗಳು

ವಿಶೇಷ ಸೂಚನೆ:

ಹೇಗೆ ಅರ್ಜಿ ಸಲ್ಲಿಸಬೇಕು? (How to Apply – Step by Step):

  • ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ
  • ಅಲ್ಲಿ ಕೊಟ್ಟಿರುವಂತ ಸಂಪೂರ್ಣವಾದ ಮಾಹಿತಿಯನ್ನು ಓದಿಕೊಂಡು
  • ಕೇಳಲಾಗಿರುವ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅದರ ಜೊತೆಗೆ ಪ್ರಾಜೆಕ್ಟ್ ರಿಪೋರ್ಟ
  • ಬ್ಯಾಂಕ್ ಸೆಲೆಕ್ಷನ್ ಆಯ್ಕೆ ಮಾಡಿ
  • ಅರ್ಜಿಯನ್ನು ಸಲ್ಲಿಸಿದ ನಂತರ ಟ್ರಾಕಿಂಗ್ ಮೂಲಕ ಅರ್ಜಿ ಸ್ಥಿತಿಯನ್ನು ಪರಿಶೀದಿಸಿಕೊಳ್ಳಬಹುದು

ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್:

ಅಧಿಕೃತ ವೆಬ್ಸೈಟ್ ಲಿಂಕ್ www.kviconline.gov.in

ಕೊನೆಯ ಮಾತು :(Conclusion)

ಸಣ್ಣ ಉದ್ಯಮಿಗಳಿಗೆ ದೇಶದ ಆರ್ಥಿಕ ಶಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ 20 ಲಕ್ಷದವರೆಗೆ ಯಾವುದೇ ರೀತಿಯಾದ ಶೂರಿಟಿ ಇಲ್ಲದೆ ಸಾಲ ಸೌಲಭ್ಯವನ್ನು ನೀಡಲು ಇದೀಗ ಕೇಂದ್ರ ಸರ್ಕಾರ ಮುಂದಾಗಿದ್ದು ಈ ಯೋಜನೆಯ ಮೂಲಕ ಹಲವಾರು ಉದ್ಯಮಿಗಳು ತಾವು ಮಾಡುತ್ತಿರುವ ಬಿಸಿನೆಸ್ ಅನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬಹುದು, ಹಾಗೂ ಹೊಸ ಉದ್ಯಮಿಗಳು ಈ ಸಾಲವನ್ನು ಪಡೆದುಕೊಂಡು ಬಿಸಿನೆಸ್ ಅಲ್ಲಿ ಡೆವಲಪ್ ಕಾಣಬಹುದು ಅಷ್ಟೇ ಅಲ್ಲದೆ ಉದ್ಯಮವೇ ಅಭಿವೃದ್ಧಿ ಮಾರ್ಗ ಅವಕಾಶವನ್ನು ಬಳಸಿಕೊಂಡು ನಿಮ್ಮ ಸ್ವಂತ ಉದ್ಯಮವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಈ ಯೋಜನೆಯ ಮೂಲಕ ಹಣ ಪಡೆದುಕೊಂಡು ಬಿಸಿನೆಸ್ ಅಲ್ಲಿ ಇನ್ನಷ್ಟು ಸಕ್ಸಸ್ ಆಗಬಹುದು.

ಇತರೆ ಸರ್ಕಾರೀ ಹುದ್ದೆಗಳ ಪ್ರಮುಖ ಲಿಂಕುಗಳು :-

Leave a Reply

Your email address will not be published. Required fields are marked *