Sewing Machine : ಕರ್ನಾಟಕದ ಈ ಎರಡು ಜಿಲ್ಲೆಯ ಮಹಿಳೆಯರಿಗೆ ಬಂಪರ್ ಗಿಫ್ಟ್: ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಆಹ್ವಾನ!

Sewing Machine

ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಮಹಿಳೆಯರಿಗಾಗಿ ತಂದೇ ಬಿಡ್ತು ನೋಡಿ ಭರ್ಜರಿ ಯೋಜನೆ! ಮಹಿಳೆಯರ ನೆರವಿಗಾಗಿ ಯಾವ ಸರ್ಕಾರಗಳು ಬರುತ್ತೋ ಬಿಡುತ್ತೋ ಗೊತ್ತಿಲ್ಲ, ಆದರೆ “ನಮ್ಮ ರಾಜ್ಯ ಸರ್ಕಾರ ಮಹಿಳೆಯರ ನೆರವಿಗೆ ಸದಾ ಸಿದ್ಧ”. ಹೌದು ಮಹಿಳೆಯರೇ ನಿಮ್ಮ ಮನೆ ಕೆಲಸದೊಂದಿಗೆ ನೀವು ಮನೆಯಲ್ಲಿ ಸ್ವಂತ ಉದ್ಯೋಗ ಮಾಡಬೇಕೆಂದು ಕನಸು ಕಾಣುತ್ತಿದ್ದೀರಾ? ಅಥವಾ ಉದ್ಯೋಗ ಮಾಡಲು ಬಂಡವಾಳ ಎಲ್ಲಿಂದ ತರಲಿ, ನಮಗೆ ಯಾರು ಸಹಾಯ ಮಾಡುತ್ತಾರೆ ಎಂದು ಯೋಚಿಸುತ್ತಿದ್ದೀರಾ? ನಿಮ್ಮ ಯೋಚನೆಗೆ ಸರ್ಕಾರ ಇದೀಗ ಬ್ರೇಕ್ ಹಾಕಿದೆ.

Sewing machine Scheme Karnataka


ಎಲ್ಲ ಮಹಿಳೆಯರು ಅಂದರೆ ಹಳೆಯ/ಹೊಸ ಹೊಲಿಗೆ ಕೆಲಸ ಮಾಡುವವರು ಅಥವಾ ಟೈಲರಿಂಗ್ ಕೆಲಸ ಮಾಡಲು ಇಚ್ಛಿಸುವವರು ಅರ್ಜಿ ಸಲ್ಲಿಸಬಹುದಾಗಿದೆ”. ರಾಜ್ಯ ಸರ್ಕಾರ ಕೈಗಾರಿಕಾ ಇಲಾಖೆಯ ಮೂಲಕ ಉಚಿತವಾಗಿ ಅತ್ಯಾಧುನಿಕ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ಕೊಡಲು ಆನ್ಲೈನ್ ಅರ್ಜಿಯನ್ನ ಪ್ರಾರಂಭಿಸಿದೆ.

2026ನೇ ಸಾಲಿನಲ್ಲಿ ಸರ್ಕಾರದಿಂದ ಇದೆ ಮೊದಲು ಮಹಿಳೆಯರಿಗೆ ವಿದ್ಯುತ್ ಚಾಲಿತ ಹೋಳಿಗೆ ಯಂತ್ರ ಕೊಡಲು ಆನ್ಲೈನ್ ಅರ್ಜಿ ಆರಂಭವಾಗಿರುವತದ್ದು. ಅದರಲ್ಲೂ ಮುಖ್ಯವಾಗಿ ಕರ್ನಾಟಕದ ಎಲ್ಲ ಜೆಲ್ಲೆಯ ಮಹಿಳೆಯರಿಗೂ ಯಂತ್ರ (Sewing Machine) ಕೊಡಲು ಸರ್ಕಾರ ನಿರ್ಧಾರ ತೆಗೆದುಕೊಂಡಿರುವುದಲ್ಲ, “ಕೇವಲ ಎರೆಡು ಜಿಲ್ಲೆಯ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ”.

ಹೊಲಿಗೆ ಯಂತ್ರ ಅರ್ಜಿ 2026:

ಮಹಿಳೆಯರು ಆರ್ಥಿಕವಾಗಿ ಯಾರ ಮೇಲು ಅವಲಂಬದೇಯಾಗದೆ ತಮ್ಮ ಜೀವನವನ್ನು ಸ್ವಾವಲಂಬಿಯಾಗಿ ನಡೆಸಿಕೊಂಡು ಹೋಗಬೇಕೆಂದು ಸರ್ಕಾರ ಒಂದು ಹೊಚ್ಚಹೊಸ ಯೋಜನೆಯನ್ನು ಸಿದ್ಧಪಡಿಸಿದೆ. (Free Sewing Machine) ಯಾವ ಯೋಜನೆ ? ಯಾರು ಅರ್ಜಿ ಸಲ್ಲಿಸಲು ಅರ್ಹರು ? ಅರ್ಜಿ ಸಲ್ಲಿಸುವುದು ಹೇಗೆ ? ಇವೆಲ್ಲವನ್ನ ಈ ಕೆಳಗೆ ನೋಡುತ್ತಾ ಹೋಗೋಣ.

ಉಚಿತ ಹೊಲಿಗೆ ಯಂತ್ರದ ಹೈಲೆಟ್ಸ್ :-

ವಿಭಾಗವಿವರ
ಯೋಜನೆ ಹೆಸರುವಿದ್ಯುತ್ ಚಾಲಿತ ಹೊಲಿಗೆ ಯಂತ್ರ ವಿತರಣಾ ಯೋಜನೆ (Free Sewing Machine)
ಉದ್ದೇಶಹೊಲಿಗೆ ವೃತ್ತಿ ಮಹಿಳೆಯರಿಗೆ ಸ್ವಾವಲಂಬಿ ಕಲ್ಪಿಸುವುದು; ಮನೆಯಲ್ಲಿಯೇ ದುಡಿಮೆಯಿಂದ ಆರ್ಥಿಕ ಸ್ವತಂತ್ರತೆ.
ಯಂತ್ರದ ವೈಶಿಷ್ಟ್ಯಅತ್ಯಾಧುನಿಕ ವಿದ್ಯುತ್ ಚಾಲಿತ ಯಂತ್ರ; ಹಳೆಯ ತುಳಿಯುವ ಯಂತ್ರಕ್ಕಿಂತ ವೇಗವಾಗಿ, ಸುಲಭವಾಗಿ ಕೆಲಸ ಮಾಡಬಹುದು.
ಅರ್ಹತೆಮಹಿಳೆಯರು ಮಾತ್ರ; ಧಾರವಾಡ ಮತ್ತು ಬಳ್ಳಾರಿ ಜಿಲ್ಲೆಗಳ ನಿವಾಸಿಗಳು; ಹೊಲಿಗೆ ವೃತ್ತಿಯಲ್ಲಿ ತೊಡಗಿಸಿಕೊಂಡಿರುವವರು ಅಥವಾ ಹೊಸದಾಗಿ ತೊಡಗಿಕೊಳ್ಳಲು ಇಚ್ಛಿಸುವವರು.
ಕೊನೆಯ ದಿನಾಂಕಧಾರವಾಡ: 20 ಫೆಬ್ರವರಿ 2026
ಬಳ್ಳಾರಿ: 15 ಮಾರ್ಚ್ 2026
ಪ್ರಮುಖ ಪ್ರಯೋಜನಗಳುಮನೆಯಲ್ಲಿಯೇ ಕುಳಿತು ದುಡಿಮೆಯಿಂದ ಸ್ವಾವಲಂಬಿ ಆಗಬಹುದು; ಉದ್ಯಮ/ಹಸ್ತಕಲಾ ಕೆಲಸದಲ್ಲಿ ವೇಗ ಮತ್ತು ಉತ್ಪಾದಕತೆ ಹೆಚ್ಚುತ್ತದೆ; ಸರ್ಕಾರದ ಉಚಿತ ನೆರವು.

ಯೋಜನೆಯ ಉದ್ದೇಶ (Objective / Goal) :-

  • ಹೊಲಿಗೆ ಕೆಲಸದಲ್ಲಿ ತೊಡಗಿರುವ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಕಲ್ಪಿಸುವುದು ಸರ್ಕಾರದ ಉದ್ದೇಶ ಹಾಗೆ ತಮ್ಮ ದುಡಿಮೆಯೊಂದಿಗೆ ತಮ್ಮ ಜೀವನವನ್ನು ನಡೆಸಲು ಹಾಗೆ ಕುಟುಂಬವನ್ನು ನಡೆಸಲು ಸರ್ಕಾರ ಈ ಯೋಜನೆಯನ್ನ ಸಿದ್ಧಪಡಿಸಿದೆ.
  • ರಾಜ್ಯದ ಮಹಿಳೆಯರು ಮನೆ ಕೆಲಸ ಮಾಡುವುದರ ಜೊತೆಗೆ ತಮ್ಮ ಆದಾಯದ ಮೂಲವಲ್ಲ ರೂಪಿಸಿಕೊಳ್ಳಬೇಕು ಎನ್ನುವ ಗುರಿಯನ್ನು ಈ ಯೋಜನೆ ಹೊಂದಿದೆ
  • ಕೆಲವು ಕುಟುಂಬದ ಮಹಿಳೆಯರು ಇನ್ನು ಹಳೆಯ ಹೊಲಿಗೆ ಯಂತ್ರವನ್ನು (Free Sewing Machine) ಇಟ್ಟುಕೊಂಡು ಅದನ್ನ ರಿಪೇರಿ ಮಾಡಿಸುತ್ತಾ ಕಷ್ಟಪಟ್ಟು ಬಟ್ಟೆಗಳನ್ನ ಹೊಲೆಯುತ್ತಿರುತ್ತಾರೆ. ಅಂತವರಿಗಾಗಿ ಸರ್ಕಾರ ಅತ್ಯಾಧುನಿಕ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ನೀಡಿ ಅವರ ಕಷ್ಟವನ್ನು ಕಡಿಮೆ ಮಾಡಬೇಕೆನ್ನುವ ದೃಷ್ಟಿಯಿಂದ ಯೋಜನೆಯನ್ನ ರೂಪಿಸಿದೆ.
  • ಹೊಲಿಗೆ ವೃತ್ತಿಯಲ್ಲಿ ತೊಡಗಿಸಿಕೊಂಡು, ಮನೆಯಲ್ಲಿಯೇ ಉಡುಪು ತಯಾರಿಸಲು ಯಂತ್ರ ನೀಡುವುದು.
  • ಈ ಯೋಜನೆ ಕರ್ನಾಟಕ ರಾಜ್ಯ ಕೈಗಾರಿಕಾ ಇಲಾಖೆ ಮೂಲಕ ಜಾರಿ ಆಗಿರುವಂತದ್ದು ಉಚಿತ ಸಹಾಯ ಅಂದರೆ ಮಹಿಳೆಯರಿಗೆ ಯಂತ್ರ, ತರಬೇತಿ, ಮಾರ್ಗದರ್ಶನ, ಇನ್ನಿತರ ಸೌಲಭ್ಯಗಳಿಗೆ ಮಹಿಳೆಯರು ಖರ್ಚು ಮಾಡಬೇಕಿಲ್ಲ.
  • ಆರ್ಥಿಕವಾಗಿ ದುರ್ಬಲ ಕುಟುಂಬದಲ್ಲಿ ಇರುವ ಮಹಿಳೆಯರನ್ನ ಆರೋಗ್ಯಕರ ಸ್ವಾವಲಂಬಿ ಸ್ಥಿತಿಗೆ ತರುವ ಉದ್ದೇಶವನ್ನು ಹೊಂದಿದೆ.

ಯೋಜನೆಯ ಲಾಭ ಯಾರಿಗೆಲ್ಲ ಸಿಗುತ್ತೆ?

  • ಕರ್ನಾಟಕ ರಾಜ್ಯದ ಕಾಯಂ ನಿವಾಸಿಗಳಾಗಿರಬೇಕು
  • ಯೋಜನೆಗೆ ಕರ್ನಾಟಕ ರಾಜ್ಯದ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.
  • ಧಾರವಾಡ ಮತ್ತು ಬಳ್ಳಾರಿ ಜಿಲ್ಲೆಗಳ ನಿವಾಸಿಗಳು ಆಗಿರಬೇಕು
  • ಹೊಲಿಗೆ ವೃತ್ತಿಯಲ್ಲಿ ತೊಡಗಿಸಿಕೊಂಡಿರುವವರು ಅಥವಾ ಹೊಸದಾಗಿ ತೊಡಗಿಕೊಳ್ಳಲು ಇಚ್ಛಿಸುವವರು
  • 18 ವರ್ಷದಿಂದ 50 ವರ್ಷದೊಳಗಿನ ಮಹಿಳಾ ಅಭ್ಯರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ

ಪ್ರಮುಖ ಸೂಚನೆ :

  • ನೀವು ಸರ್ಕಾರದಿಂದ ಈ ಮೊದಲೇ ಹೊಲಿಗೆ ಯಂತ್ರವನ್ನು (Free Sewing Machine) ಪಡೆದಿದ್ದರೆ 2026 ನೇ ಸಾಲಿನಲ್ಲಿ ಸರ್ಕಾರ ನೀಡುತ್ತಿರುವ ಫ್ರೀಯಾಗಿ ಹೊಲಿಗೆ ಯಂತ್ರ ಪಡೆಯಲು ಅರ್ಹರಾಗಿರುವುದಿಲ್ಲ.

ಯಾವ ಜಿಲ್ಲೆಯ ಮಹಿಳೆಯರು ಅರ್ಜಿ ಸಲ್ಲಿಸಬಹುದು ?

2025-26ನೇ ಸಾಲಿನಲ್ಲಿ ಸಿದ್ದರಾಮಯ್ಯ ಸರ್ಕಾರವು ಕೇವಲ ಎರಡು ಜಿಲ್ಲೆಗಳ ಮಹಿಳೆಯರಿಗೆ ಅರ್ಜಿ ಸಲ್ಲಿಸುವ ಅವಕಾಶವನ್ನು ಮಾಡಿಕೊಟ್ಟಿದೆ. ಸದ್ಯದಲ್ಲೇ ಕರ್ನಾಟಕ ರಾಜ್ಯದ ಇನ್ನುಳಿದ ಜಿಲ್ಲೆಯಲ್ಲೂ ಅರ್ಜಿ ಸಲ್ಲಿಸುವ ಅವಕಾಶವನ್ನು ಮಹಿಳೆಯರಿಗೆ ಸರ್ಕಾರ ಮಾಡಿ ಕೊಡಬಹುದು. ನಂತರದ ದಿನಗಳಲ್ಲಿ ಈ ವಿಚಾರವನ್ನು ತಿಳಿಸಿದ ಕೂಡಲೇ ನಮ್ಮ ಕನ್ನಡ ಹೆಲ್ಪ್ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು ಹಾಗಾಗಿ ನಮ್ಮ ಹಾಗಾಗಿ ನಮ್ಮ ವೆಬ್ಸೈಟ್ಗೆ ಭೇಟಿ ನೀಡುತ್ತಿರಿ.

೧ .ಧಾರವಾಡ ಜಿಲ್ಲೆ (Dharwad District)

೨ .ಬಳ್ಳಾರಿ ಜಿಲ್ಲೆ (Ballari District)

ಮಹಿಳೆಯರ ಬಳಿ ಅರ್ಜಿ ಸಲ್ಲಿಸಲು ಇರಬೇಕಾದ ಪ್ರಮುಖ ದಾಖಲಾತಿಗಳು :-

  • ಆಧಾರ್ ಕಾರ್ಡ್ (Aadhaar Card)
  • ರೇಷನ್ ಕಾರ್ಡ್ (Ration Card)
  • ಪಾಸ್ಪೋರ್ಟ್ ಅಲತೆಯ ಭಾವಚಿತ್ರ (Passport Size Photo)
  • ಜಾತಿ ಮತ್ತು ಆದಾಯ ಪ್ರಮಾಣದ ಪ್ರಮಾಣ ಪತ್ರ  (Caste and Income Certificate)
  • ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್
  • ಕುಶಲಕರ್ಮಿ ಗುರುತಿನ ಚೀಟಿ ಅಥವಾ ಹೊಲಿಗೆ ತರಬೇತಿ ಪಡೆದ ಪ್ರಮಾಣ ಪತ್ರ (Artisan ID Card, Training Certificate) ಮಹಿಳೆಯರು ಈ ಯೋಜನೆಯ ಲಾಭ ಪಡೆಯಲು ಬಹಳ ಮುಖ್ಯವಾಗಿ ಇವುಗಳು ಇರಬೇಕಾಗುತ್ತದೆ.

ಯೋಜನೆಯ ಅನಾನುಕೂಲ (Disadvantage) :-

  • ಬಳ್ಳಾರಿ ಮತ್ತು ಧಾರವಾಡ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಕರ್ನಾಟಕದ ಇನ್ನುಳಿದ ಯಾವುದೇ ಜಿಲ್ಲೆಯ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸುವ ಅವಕಾಶ ಸರ್ಕಾರ ನೀಡಿಲ್ಲ.
  • ಕರೆಂಟ್ ಇಲ್ಲದಿದ್ದರೆ ಮಹಿಳೆಯರು ಈ ಯಂತ್ರ ಬಳಸಲು ಸಾಧ್ಯವಾಗುವುದಿಲ್ಲ.
  • ಈ ಉಚಿತ ಹೊಲಿಗೆ ಯಂತ್ರ (Free Sewing Machine) ಯೋಜನೆಯ ದಾಖಲೆಗಳ ಪರಿಶೀಲನೆಗೆ ಸುಮಾರು ಕಾಲಾವಕಾಶ ತೆಗೆದುಕೊಳ್ಳುವ ಸಾಧ್ಯತೆ ಇದೆ.
  • ಅರ್ಜಿ ಸಲ್ಲಿಸಿದ ಎಲ್ಲಾ ಮಹಿಳೆಯರಿಗೂ ಉಚಿತ ಹೊಲಿಗೆ ಯಂತ್ರ ಸಿಗದೇ ಇರುವ ಸಾಧ್ಯತೆ ಹೆಚ್ಚಿದೆ.
  • ಸರ್ಕಾರ ಯಾವುದೇ ತರಬೇತಿ ನೀಡದೆ ಉಚಿತವಾಗಿ ಹೊಲಿಗೆ ಯಂತ್ರ ವಿತರಣೆ ಮಾಡಿದರೆ ಮಹಿಳೆಯರಿಗೆ ಹೊಲಿಗೆ ಮಾಡಲು ಕಷ್ಟವಾಗುತ್ತದೆ ಹಾಗೆಯೇ ಮುಂದೆ ಯಂತ್ರದಲ್ಲಿ ಏನಾದರೂ ಸಮಸ್ಯೆ ಕಂಡು ಬಂದರೆ ಸ್ವತ ಮಹಿಳೆಯರೇ ಆ ಕರ್ಚನ್ನ ಹಾಕಿಕೊಳ್ಳಬೇಕು.

ಅರ್ಜಿ ಸಲ್ಲಿಸಲು ಸರ್ಕಾರ ನೀಡಿದ ಗಡುವು (Last Date) :-

ಮಹಿಳೆಯರೇ,,, “ಕೆಳಗೆ ಕೊಡಲಾದ ಅರ್ಜಿ ಸಲ್ಲಿಸುವ ದಿನಾಂಕವನ್ನು ಮರೆಯಬೇಡಿ, ಮರೆತು ನಿರಾಶರಾಗಬೇಡಿ”

ಜಿಲ್ಲೆಕೊನೆಯ ದಿನಾಂಕ
ಧಾರವಾಡ20 ಫೆಬ್ರವರಿ 2026
ಬಳ್ಳಾರಿ15 ಮಾರ್ಚ್ 2026

ಇಲ್ಲಿ ಗಮನಿಸಿ : ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಿ.
ಅವಕಾಶವನ್ನು ಕೈಚೆಲ್ಲಬೇಡಿ – ಸ್ವಾವಲಂಬಿ ಜೀವನದತ್ತ ನಿಮ್ಮ ಮೊದಲ ಹೆಜ್ಜೆ ಇಡಿ!

ವಿದ್ಯುತ್ ಚಾಲಿತ ಹೊಲಿಗೆ ಯಂತ್ರದ (Free Sewing Machine) ಉತ್ತಮ ಅಂಶ :

  • ಕೆಲಸದ ಗುಣಮಟ್ಟವನ್ನು ಹೆಚ್ಚಿಸುವ ನಿಖರ ಕಾರ್ಯಕ್ಷಮತೆ
  • ಮನೆಯಲ್ಲಿಯೇ ಸ್ವಾವಲಂಬಿ ಜೀವನಕ್ಕೆ ಬಲವಾದ ಹೆಜ್ಜೆ
  • ಸ್ವಂತ ಉದ್ಯಮ ಬೆಳೆಸಲು ಭದ್ರವಾದ ಆಧಾರ
  • ಆದಾಯ ಹೆಚ್ಚಿಸಲು ನೆರವಾಗುವ ವಿಶ್ವಾಸಾರ್ಹ ಸಾಧನ
  • ದುಡಿಮೆಗೆ ಹೊಸ ವೇಗ ಮತ್ತು ಶಕ್ತಿ ನೀಡುವ ಆಧುನಿಕ ಯಂತ್ರ
  • ಕಡಿಮೆ ಸಮಯದಲ್ಲಿ ಹೆಚ್ಚು ಹೊಲಿಗೆ ಕೆಲಸ ಮುಗಿಸಲು ಸಹಕಾರಿ

ಅರ್ಜಿ ಸಲ್ಲಿಸುವ ವಿಧಾನ :-

  • ಸರ್ಕಾರವು ಮಹಿಳೆಯರಿಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸರಳವಾಗಿ ಮಾಡಿಕೊಂಡಿದೆ
  • ನಿಮ್ಮ ಮೊಬೈಲ್ ಮೂಲಕ ಕರ್ನಾಟಕ ಸರ್ಕಾರದ ಅಧಿಕೃತ ಸೇವಾ ಸಿಂಧು ಪೋರ್ಟಲ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು
  • ಪೋರ್ಟಲ್‌ನಲ್ಲಿ ಕೈಗಾರಿಕಾ ಇಲಾಖೆಯ ಸೇವೆಗಳ ವಿಭಾಗ ಅಡಿಯಲ್ಲಿ ಅರ್ಜಿ ನಮೂದಿಸಬೇಕು ಅಥವಾ ಹತ್ತಿರದ ಗ್ರಾಮವನ್, ಕರ್ನಾಟಕ ವನ್, ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಅಗತ್ಯ ದಾಖಲೆಗಳನ್ನು ನೀಡುವ ಮೂಲಕ ಸುಲಭವಾಗಿ ಅರ್ಜಿ ಪ್ರಕ್ರಿಯೆ ಮಹಿಳೆಯರು ಪೂರ್ಣಗೊಳಿಸಿಕೊಳ್ಳಿ.

ಮೊಬೈಲ್ ಮೂಲಕ ಅರ್ಜಿ ಸಲ್ಲಿಸಲು ಈ ವಿಧಾನ ಅನುಸರಿಸಿ :-

  • ಮಹಿಳೆಯರು ಮೊದಲು ಇಂಟರ್ನೆಟ್ ಆನ್ ಮಾಡಿ
  • ನಂತರ ಸೇವಾ ಸಿಂಧು ವೆಬ್‌ಸೈಟ್ https://www.sevasindhu.karnataka.gov.in ತೆರೆಯಿರಿ
  • ಕೈಗಾರಿಕಾ ಇಲಾಖೆ (Industries Department) ಆಯ್ಕೆ ಮಾಡಿ
  • ಹೊಲಿಗೆ ಯಂತ್ರ ಯೋಜನೆ(Free Sewing Machine) ಕ್ಲಿಕ್ ಮಾಡಿ
  • ಅರ್ಜಿಯಲ್ಲಿ ನಿಮ್ಮ ಹೆಸರು, ವಿಳಾಸ, ಲಿಂಗ, ವಯಸ್ಸು ಹಾಗೆ ನಿಮ್ಮ ಜಿಲ್ಲೆ ಬಳ್ಳಾರಿನೊ ಅಥವಾ ದರವಾದನೋ ಹಾಗೆ ನೀವು ಹೊಲಿಗೆ ವೃತ್ತಿಯಲ್ಲಿ ತೊಡಗಿರುವ ಮಹಿಳೆಯೇ ಅಥವಾ ಹೊಸದಾಗಿ ತೊಡಗಿಸಿಕೊಳ್ಳಲು ಇಚ್ಚಿಸುತ್ತೀರಾ ಈ ಎಲ್ಲಾ ವಿವರವನ್ನು ಸರಿಯಾಗಿ ಭರ್ತಿ ಮಾಡಿ.
  • ಗುರುತಿನ ಪ್ರಮಾಣಪತ್ರ (Aadhaar / Voter ID), ನಿವಾಸದ ಸಾಬೀತು (Ration Card / Resident Certificate), BPL ಕಾರ್ಡ್ (ಅವಶ್ಯಕತೆ ಇದ್ದರೆ), Passport size ಫೋಟೋ ಈ ಎಲ್ಲ ದಾಖಲೆಗಳನ್ನ ಸ್ಕ್ಯಾನ್ ಮಾಡಿಟ್ಟುಕೊಂಡು ನಂತರ ಅಪ್ಲೀಡ್ ಮಾಡಬೇಕು.
  • ಅರ್ಜಿಯನ್ನು ಪರಿಶೀಲಿಸಿ Submit ಮಾಡಿ
  • ಅರ್ಜಿಯ ರಸೀದಿ / PDF ಸೇವ್ ಮಾಡಿ ಹಾಗೆ ಸಹಾಯ ಬೇಕಾದರೆ ಹತ್ತಿರದ ಗ್ರಾಮ ಒನ್ / ಕರ್ನಾಟಕ ಒನ್ / CSC ಕೇಂದ್ರ ಗೆ ಭೇಟಿ ನೀಡಿ
ಅರ್ಜಿ ಸಲ್ಲಿಸಲು ಲಿಂಕ್ ಇಲ್ಲಿ ಕ್ಲಿಕ್ ಮಾಡಿ

ಕೊನೆಯ ಮಾತು :

ಮಹಿಳೆಯರೇ, ನಿಮ್ಮ ದುಡಿಮೆ ನಿಮ್ಮ ಶಕ್ತಿ. ಈ ಅವಕಾಶವನ್ನು ಬಳಸಿಕೊಂಡು ನೀವು ಮನೆಯಲ್ಲಿಯೇ ಕುಳಿತು ಸ್ವಾವಲಂಬಿ ಜೀವನವನ್ನು ಆರಂಭಿಸಬಹುದು. ಹೊಲಿಗೆ ವೃತ್ತಿಯಲ್ಲಿ ತೊಡಗಿಸಿಕೊಂಡು, ಸರ್ಕಾರದಿಂದ ನೀಡಲಾದ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ (Free Sewing Machine0 ನಿಮ್ಮ ಉದ್ಯಮದ ವೇಗ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ಈ ಯಂತ್ರ ನಿಮ್ಮ ಕನಸುಗಳತ್ತ ನಿಮ್ಮ ಹೆಜ್ಜೆಯನ್ನು ವೇಗವಾಗಿ ಒಯ್ಯಲು ಸಹಾಯ ಮಾಡುವ ಉತ್ತಮ ಸಾಧನ. ಸ್ವಂತ ಶ್ರಮದಿಂದ ಆದಾಯ ಗಳಿಸಿ, ನಿಮ್ಮ ಕುಟುಂಬಕ್ಕೆ ಆರ್ಥಿಕ ಸುರಕ್ಷತೆ ತರಲು ಮತ್ತು ನಿಮ್ಮ ಸ್ವಪ್ನಗಳನ್ನು ನನಸಾಗಿಸಲು ಇದು ಚಿನ್ನದ ಅವಕಾಶ. ಆದ್ದರಿಂದ ಹಿಂಜರಿಯದೆ, ಧೈರ್ಯದಿಂದ ಮೊದಲ ಹೆಜ್ಜೆ ಇಡಿ ಮತ್ತು ಸ್ವಾವಲಂಬಿ ಬದುಕಿನತ್ತ ಪ್ರಾರಂಭ ಮಾಡಿ.

ಇತರೆ ಪ್ರಮುಖ ಲಿಂಕುಗಳು :-

Leave a Reply

Your email address will not be published. Required fields are marked *