ರಾಜ್ಯದ ಅಡಿಕೆ ಬೆಳೆ ರೈತರಿಗೆ ಬಂಪರ್ ಸುದ್ದಿ! 2026 ನೇ ವರ್ಷದಲ್ಲಿ ಹೊಸದಾಗಿ ಅಡಿಕೆ ಗಿಡ ನಟ್ಟು ನಮ್ಮ ಜಮೀನಿನಲ್ಲೂ ಅಡಿಕೆ ಬೆಳೆಯಬೇಕೆಂದು (Arecanut Plantation Subsidy) ಯೋಚನೆ ಮಾಡುತ್ತಿದ್ದೀರಾ? ಅಥವಾ ಅಡಿಕೆ ಸಸಿ ನೆಟ್ಟು ಎಲ್ಲರಂತೆ ನಾನು ತೋಟ ಮಾಡಾಬೇಕು ಆದರೆ ಬಂಡವಾಳ ಇಲ್ಲ, ಮುಂದೇನು ಮಾಡುವುದು ಎಂಬ ಚಿಂತೆ ನಿಮ್ಮನ್ನ ದಿನೇ ದಿನೇ ಕಾಡುತ್ತಿದೆಯಾ?
Arecanut Plantation Subsidy In Kannada
ಆತ್ಮೀಯ ರೈತರೇ ಈ ವಿಷಯವಾಗಿ ನೀವು ಚಿಂತೆ ಮಾಡುವುದು ಬೇಡ, ದುಃಖಿಸುವುದು ಬೇಡ. ಯಾಕೆ ಗೊತ್ತಾ? ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಮ್ಮಿಶ್ರದೊಂದಿಗೆ “ರಾಷ್ಟ್ರೀಯ ತೋಟಗಾರಿಕಾ ಮಿಷಿನ್ ಯೋಜನೆ ಅಡಿಯಲ್ಲಿ (NHM)” ಹೊಸದಾಗಿ ಅಡಿಕೆ ತೋಟ (Arecanut Plantation Subsidy) ಮಾಡುವವರಿಗೆ ಸಹಾಯಧನ ನೀಡಲು 2026 ನೇ ಸಾಲಿನಲ್ಲಿ ಇದೇ ಮೊದಲ ಬಾರಿ ಆನ್ಲೈನ್ ಅರ್ಜಿ ಆರಂಭವಾಗಿದೆ.
ಅಡಿಕೆ ತೋಟ ಮಾಡಲು ಸಬ್ಸಿಡಿ ಯೋಜನೆ:
ಹೌದು ರೈತರು ತಮ್ಮ ಹೊಲ, ಗದ್ದೆ, ಜಮೀನಿನಲ್ಲಿ ತೋಟ ಮಾಡಲು ಅಂದರೆ ಜಾಗವನ್ನ ಸರಿಪಡಿಸಿ ಗಿಡಗಳನ್ನ ನೆಟ್ಟು ನೀರಾವರಿ ವ್ಯವಸ್ಥೆಗಳನ್ನ ಮಾಡಲು ಮತ್ತು ಗಿಡಗಳ ಪಾಲನೆ ಪೋಷಣೆ ಮಾಡಲು ರೈತರಿಗೆ ಸರ್ಕಾರದಿಂದ ಈ ಸಹಾಯಧನ ಸಿಗುತ್ತದೆ.
ಯಾವಾಗ ಈ ಯೋಜನೆ ಜಾರಿ ಯಾಗಿದ್ದು? ನಮ್ಮಗೆ ಇನ್ನು ತಿಳಿದಿದಲ್ಲ ಅನ್ನುವವರು ಇಲ್ಲಿ ಗಮನಿಸಿ :-
ರಾಷ್ಟ್ರೀಯ ತೋಟಗಾರಿಕಾ ಮಿಷಿನ್ (NHM) ಯೋಜನೆ ಸುಮಾರು 2005/2006ನೇ (ಜೂನ್ 30, 2005 ರಂದು ಪ್ರಾರಂಭವಾಗಿ) ಹಣಕಾಸು ವರ್ಷದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದೊಂದಿಗೆ (Arecanut Plantation Subsidy)ಈ ಯೋಜನೆ ಜಾರಿಯಾಗಿದೆ. ಇದರ ಉದ್ದೇಶ ಹಣ್ಣು, ತರಕಾರಿ, ಅಡಿಕೆ, ಮಸಾಲೆ ಹಾಗೂ ಇತರ ತೋಟಗಾರಿಕೆ ಬೆಳೆಗಳ ಬೆಳೆಗಳಿಗೆ ಮತ್ತು ತೋಟಗಾರಿಕೆ ತಂತ್ರಜ್ಞಾನಗಳನ್ನ ಹೆಚ್ಚಿಸಲು ಸರ್ಕಾರ ಸಹಾಯಧನ ನೋಡುವ ನಿರ್ಧಾರವನ್ನ ಮಾಡಿರುವಂತದ್ದು.
Arecanut Plantation Subsidy ಆದರೆ ಈ ಯೋಜನೆಯು ಮೊದಲು ಕೆಲವೇ ಕರ್ನಾಟಕದ ಕೆಲವೇ ಜಿಲ್ಲೆಗಳಲ್ಲಿ ಮಾತ್ರ ಜಾರಿ ಆಯಿತು ಹಾಗೆ ನಂತರ ಅಂದರೆ 2015-16ನೇ ಸಾಲಿನಲ್ಲಿ ಉಳಿದ ಎಲ್ಲಾ ಜಿಲ್ಲೆಗಳಿಗೂ ಈ ಯೋಜನೆ ಜಾರಿ ಆಗಿರುವಂತದ್ದು. ಇದೀಗ 2025–26ನೇ ಸಾಲಿನ ವೇಳೆಯಲ್ಲಿ ತೋಟಗಾರಿಕೆ (ಹೆಚ್ಚಾಗಿ ಅಡಿಕೆ ಸೇರಿದಂತೆ) ಬೆಳೆಗಳಲ್ಲಿ ಸಹಾಯಧನ ನೀಡಲು ಆನ್ಲೈನ್ ಅರ್ಜಿಗಳನ್ನು ಸರ್ಕಾರ ಆಹ್ವಾನಿಸಿದೆ.
“ಹಳ್ಳಿ ಹೊಲದಲ್ಲಿಯೇ ಬಂಪರ್ ಆದಾಯ – ಅಡಿಕೆ ತೋಟ ನಿಮ್ಮ ಕೈಯಲ್ಲಿ, ಸರ್ಕಾರ ನಿಮ್ಮ ಬೆಂಬಲದ ಜೊತೆ!”
ಯೋಜನೆಯ ಮುಖ್ಯ ನೋಟ :-
| ವಿಭಾಗ | ವಿವರ |
|---|---|
| ಯೋಜನೆ ಹೆಸರು | ರಾಷ್ಟ್ರೀಯ ತೋಟಗಾರಿಕಾ ಮಿಷನ್ (NHM) |
| ಅರ್ಹರು | – ಕರ್ನಾಟಕದ ನೈಜ ರೈತರು- ಹೊಸ ತೋಟಗಾರಿಕೆ ಪ್ರಾರಂಭಿಸಲು ಬಯಸುವವರು- ಹೊಲ/ಜಮೀನು ಹೊಂದಿರುವವರು |
| ಯೋಜನೆಯ ಉದ್ದೇಶಗಳು | – ಹೊಸ ತೋಟ ನಿರ್ಮಾಣಕ್ಕೆ ನೆರವು- ಗಿಡ ನಾಟಿಕೆ, ನೀರಾವರಿ ವ್ಯವಸ್ಥೆ- ತೋಟದ ನಿರಂತರ ಪಾಲನೆ ಮತ್ತು ತಾಂತ್ರಿಕ ಮಾರ್ಗದರ್ಶನ- ರೈತರಿಗೆ ಸ್ಥಿರ ಆದಾಯದ ಅವಕಾಶ |
| ಸಹಾಯಧನ ಕಾರ್ಯಕ್ರಮಗಳು | – ತೋಟದ ಜಾಗ ತಯಾರಿ- ಗಿಡ ನಾಟಿಕೆ ಮತ್ತು ನೀರಾವರಿ ವ್ಯವಸ್ಥೆ- ತೋಟ ನಿರ್ವಹಣೆ, ಪೋಷಣೆ ಮತ್ತು ತರಬೇತಿ- ಮಾರ್ಕೆಟಿಂಗ್ ಮತ್ತು ಮೌಲ್ಯವರ್ಧಿತ ಉತ್ಪನ್ನ ಬೆಂಬಲ |
| ಅರ್ಜಿ ಸಲ್ಲಿಸುವ ವಿಧಾನ | – ಆನ್ಲೈನ್ ಅರ್ಜಿ: ರಾಜ್ಯ/ಕೇಂದ್ರ ತೋಟಗಾರಿಕೆ ಪೋರ್ಟ್ಲ್- ಸ್ಥಳೀಯ ತೋಟಗಾರಿಕೆ ಕಚೇರಿ ಮೂಲಕ |
| ಅಗತ್ಯ ದಾಖಲೆಗಳು | – ಜಮೀನು / ಕೃಷಿ ದಾಖಲೆಗಳು- ಗುರುತು / ಪರಿಚಯ ಪತ್ರ- ತೋಟ ಯೋಜನೆ (Plantation plan)- ಬ್ಯಾಂಕ್ ಖಾತೆ ವಿವರಗಳು |
ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು :-
- ಕರ್ನಾಟಕ ರಾಜ್ಯದ ನಿವಾಸಿಗಳು
- ಹಣ್ಣು, ಅಡಿಕೆ, ತರಕಾರಿ, ಮಸಾಲೆ ಹಾಗೆ ಇನ್ನಿತರ ಬೆಳೆಗಳಿಗೆ ಹೊಸ ತೋಟ ನಿರ್ಮಿಸಲು ಬಯಸುವ ರೈತರು ಅರ್ಜಿಯನ್ನು ಸಲ್ಲಿಸಬಹುದು.
- ತಮ್ಮ ಗದ್ದೆ ಅಥವಾ ಜಮೀನಿನಲ್ಲಿ ತೋಟ ಮಾಡಲು ಸಿದ್ದರಾಗಿರಬೇಕು
- ಮೊದಲ ಕಡಿಮೆ ಕೃಷಿಯಲ್ಲಿ ಕಡಿಮೆ ಅನುಭವ ಹೊಂದಿದವರು ಅರ್ಹರಾಗುವುದಿಲ್ಲ ಆದರೆ ತೋಟ ನಿರ್ವಹಣೆಗೆ ತಕ್ಕ ಶ್ರಮ ಮತ್ತು ಶಕ್ತಿಯನ್ನು ನೀಡಲು ಸಿದ್ದರಾಗಿರುವ ರೈತರು ಅರ್ಜಿ ಹಾಕಬಹುದು.
- ಸರ್ಕಾರಿ ಮಾರ್ಗ ಸೂಚನೆಯ ಪ್ರಕಾರ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು 18 ವರ್ಷದಿಂದ 65 ವರ್ಷದೊಳಗಿನ ರೈತರು ಮಾತ್ರ ಅರ್ಜಿ ಸಲ್ಲಿಸುವ ಅವಕಾಶ ಪಡೆಯುತ್ತಾರೆ.
NHM ಯೋಜನೆಯ ಪ್ರಮುಖ ಉದ್ದೇಶ :-
ರಾಷ್ಟ್ರೀಯ ತೋಟಗಾರಿಕಾ ಮಿಷಿನ್ ಯೋಜನೆಯು ಒಂದಿಷ್ಟು ತನ್ನದೇ ಆದ ಉದ್ದೇಶವನ್ನು ಒಳಗೊಂಡಿದೆ
- ರೈತರು ತಮ್ಮ ಜಮೀನಿನಲ್ಲಿ ಅಡಿಕೆ ತೋಟ ಮಾಡುವುದು ಹಾಗೆ ಗಿಡ ನೆಡುವುದು ಮತ್ತು ಸುಸ್ಥಿರ ಬೆಳವಣಿಗೆಗೆ ನೆರವು
- ಕರ್ನಾಟಕದ ರೈತರು ಗದ್ದೆ /ಜಮೀನು /ಹೊಲದಲ್ಲಿ ಹಣ್ಣು, ತರಕಾರಿ, ಹೊಸದಾಗಿ ಅಡಿಕೆ ತೋಟ ಹೀಗೆ ಇನ್ನು ಅನೇಕ ಮಸಾಲೆ ತೋಟಗಳನ್ನು ಪ್ರಾರಂಭಿಸಲು ಸಹಾಯಧನ.
- ಈ ಯೋಜನೆಯು ರೈತರ ಆದಾಯದ ಮೂಲವನ್ನು ಹೆಚ್ಚಿಸುವುದು ಹಾಗೆ ಆಧುನಿಕ ಬೇಸಾಯ ವಿಧಾನವನ್ನು ಪ್ರೋತ್ಸಾಹಿಸುವುದು ಮತ್ತು ನೀರಿನ ಸದುಪಯೋಗ ಹಾಗೆಯೇ ಪರಿಸರ ಸಂರಕ್ಷಣೆಯನ್ನ ಉದ್ದೇಶ ಉತ್ತೇಜಿಸುವ ಉದ್ದೇಶವನ್ನ ಹೊಂದಿದೆ.
- ಇಂದಿನ ದಿನಗಳಲ್ಲಿ ಅತಿ ವೇಗವಾಗಿ ಕೃಷಿ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆಗಳು ಹೆಚ್ಚಾಗುತ್ತಿದೆ ಇದನ್ನ ಮನಗಂಡ ಸರ್ಕಾರ ರೈತರ ಆದಾಯ ಮೂಲವನ್ನ ಹೆಚ್ಚಿಸಬೇಕೆನ್ನುವ ಉದ್ದೇಶವನ್ನ ಒಳಗೊಂದು ಹೊಸ ಅಡಿಕೆ ತೋಟ (Arecanut Plantation Subsidy) ಮಾಡೋ ರೈತರಿಗೆ ಸಹಧನ ಕೊಡಲು ಮುಂದಾಗಿದೆ.
- ಯೋಜನೆ ಅಡಿಯಲ್ಲಿ ಕೇವಲ ರೈತರಿಗೆ ಅನುಕೂಲವಾಗುವುದಿಲ್ಲ ಹಸಿರು ಪರಿಸರ ಉಳಿಸುವುದು ಹಾಗೆ ಸಸ್ಯ ವೈವಿಧ್ಯತೆಯನ್ನ ಬೆಂಬಲಿಸುವ ಉದ್ದೇಶವನ್ನ ಒಳಗೊಂಡಿದೆ.
ನಿಮ್ಮಗೆ ಹೊಸ ಅಡಿಕೆ ತೋಟ ಮಾಡಲು ಯೋಜನೆ ಇಂದ ಸಿಗುವ ಸಹಾಯಧನ ಮತ್ತು ಸಬ್ಸಿಡಿ ಎಷ್ಟು ಗೊತ್ತ ?
2026 ನೇ ಸಾಲಿನಲ್ಲಿ ರೈತರು ತಮ್ಮ ಹೊಲಗದೆಗಳಲ್ಲಿ ಹೊಸದಾಗಿ ಅಡಿಕೆ ಸಸಿಯನ್ನು ನಟ್ಟು (Arecanut Plantation Subsidy) ಆದಾಯದ ಮೂಲವನ್ನ ಸೃಷ್ಟಿಸಿಕೊಳ್ಳಲು ಸರ್ಕಾರದಿಂದ ಬಹುದೊಡ್ಡ ಮಟ್ಟದಲ್ಲಿ ಸಬ್ಸಿಡಿ ಮತ್ತು ಸಹಾಯಧನವನ್ನ ಪಡೆಯಬಹುದಾಗಿದೆ. ಯೋಜನೆಯ ಬಗ್ಗೆ ತಿಳಿದುಕೊಂಡ ಮೇಲೆ ನಿಮ್ಮ ಮನಸ್ಸಲ್ಲಿ ನನಗೆ ಸಿಗುವ ಸಹಾಯಧನ ಮೊತ್ತ ಎಷ್ಟು ? ಎನ್ನುವ ಪ್ರಶ್ನೆ ನಿಮ್ಮ ಮನಸಲ್ಲಿ ಮೂಡಿರುತ್ತದೆ ಆ ಪ್ರಶ್ನೆಗೆ ಈ ಕೆಳಗೆ ಸಂಪೂರ್ಣವಾಗಿ ವಿವರಣೆ ನೀಡಲಾಗಿದೆ.
- 2026 ನೇ ಸಾಲಿನಲ್ಲಿ ರೈತರು ಹೊಸದಾಗಿ ತಮ್ಮ ಜಮೀನಿನಲ್ಲಿ ಅಡಿಕೆ ತೋಟ ನಿರ್ಮಾಣ ಮಾಡುವ ಯೋಜನೆಗೆ ಸರ್ಕಾರ 40%/50% ಸಬ್ಸಿಡಿ ಅಂದರೆ ಪ್ರತಿ 2.5 ಎಕರೆಗೆ ಸುಮಾರು 1ಲಕ್ಷದವರೆಗೆ ಸಾಲ.
- ನೀನು ನಿಮ್ಮ ತೋಟದಲ್ಲಿ ಅಡಿಕೆ ಸಸಿಗಳಿಗೆ ಹನಿ ನೀರಾವರಿಯನ್ನು ಮಾಡಲು ಯೋಚಿಸಿದರೆ ಸುಮಾರು 90 ಪರ್ಸೆಂಟ್ ಸಬ್ಸಿಡಿ ಸಿಗುತ್ತದೆ ಇದು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ.
- ನಂತರದಲ್ಲಿ ಗಿಡಗಳನ್ನು ನೆಟ್ಟ ಮೇಲೆ ಅವುಗಳ ಸಂರಕ್ಷಣೆಗೆ ಅಂದರೆ ಔಷಧಿ ಸಿಂಪಡಣೆಗೆ ಮತ್ತು ನೀಡಲು ಸುಮಾರು ₹1500 ಸಹಾಯಧನ ಸಿಗಲಿದೆ.
- ಆತ್ಮೀಯರೇ ನೀವು ಎಸ್ಸಿ ಎಸ್ಟಿ ವರ್ಗಕ್ಕೆ ಆತ್ಮೀಯರೇ ನೀವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ರೈತರ ಆದರೆ ಸುಮಾರು 90% ವರೆಗೂ ಸಹಾಯಧನ ಸಿಗುತ್ತದೆ.
- ರೈತನು ಗರಿಷ್ಠ 5 ಎಕರೆ ಒಳಗೆ ತಮ್ಮ ತೋಟದ ನಿರ್ಮಾಣ ಮಾಡಲು ಈ ಸಹಾಯಧನ ಸಿಗುತ್ತದೆ
ಇಲ್ಲಿ ಗಮನಿಸಿ : ಹೆಚ್ಚಿನ ಮಾಹಿತಿಗಾಗಿ, ನಿಮ್ಮ ಹತ್ತಿರದ ತೋಟಗಾರಿಕಾ ಇಲಾಖೆಯ ಕಚೇರಿಯನ್ನು ಅಥವಾ ತೋಟಗಾರಿಕೆ ಇಲಾಖೆಯ ವೆಬ್ಸೈಟ್ ಸಂಪರ್ಕಿಸಿ (Karnataka Government).
ಯೋಜನೆಯ ಅನಾನುಕೂಲ :-
- ಅಡಿಕೆ ಬೆಳೆ ದೀರ್ಘಾವಧಿ ಹೂಡಿಕೆಯಾಗಿರುತ್ತದೆ ರೈತರಿಗೆ ಅಡಿಕೆ ಗಿಡದಿಂದ (Arecanut Plantation Subsidy೦ ಆದಾಯ ಸಿಗುವುದಿಲ್ಲ. ಐದು ವರ್ಷದ ಬಳಿಕ ರೈತರಿಗೆ ಆದಾಯ ಸಿಗುವಂತದ್ದು.
- ರೈತರು ತೋಟ ನಿರ್ಮಾಣಕ್ಕೆ ಮೊದಲು ತಮ್ಮ ಕೈಯಿಂದಲೇ ಹಣವನ್ನ ಹಾಕಬೇಕು ಸರ್ಕಾರದಿಂದ ಮೊದಲೇ ಹಣ ರೈತರ ಬ್ಯಾಂಕ್ ಖಾತೆಗೆ ವರ್ಗಾವಣೆ ಯಾಗಿರುವುದಿಲ್ಲ.
- ಅರ್ಜಿದಾರರ ಅರ್ಜಿಯು ಅನುಮೋದನೆಗೊಂಡ ನಂತರ ರೈತರ ಖಾತೆಗೆ ಸಹಾಯಧನ ಬಿಡುಗಡೆ ಕೆಲವು ಬಾರಿ ವಿಳಂಬವಾಗುವ ಸಾಧ್ಯತೆ ಇರುತ್ತದೆ
- ಸರ್ಕಾರ ಕೊಡುವ ಸಹಾಯಧನ ರೈತರು ತೋಟ ಮಾಡಲು ಇಂದಿನ ದಿನಗಳಲ್ಲಿ ಸಾಲುವುದಿಲ್ಲ ಅದರ ಖರ್ಚು ವೆಚ್ಚವು ಬಹಳಷ್ಟು ಇರುತ್ತದೆ
- ಸರ್ಕಾರದ ಈ ಯೋಜನೆ ಅಡಿಯಲ್ಲಿ (Arecanut Plantation Subsidy) ಕರ್ನಾಟಕ ರೈತರು ಕೆಲವು ಬಾರಿ ಹವಾಮಾನದ ಪರಿಸ್ಥಿತಿಯಿಂದಾಗಿ ಅಂದರೆ ಅತಿಯಾದ ಮಳೆ, ಗಾಳಿ,ಇಂದ ಹೆಚ್ಚಿನ ನಷ್ಟಕ್ಕೆ ಒಳಗಾಗುತ್ತಾರೆ.
- ತೋಟವನ್ನು ರೈತರು ತಮ್ಮ ಜಮೀನಿನಲ್ಲಿ ನಿರ್ಮಿಸಲು ಕಾರ್ಮಿಕರ ಅವಶ್ಯಕತೆ ಹೆಚ್ಚಾಗಿರುತ್ತದೆ ಅಂದರೆ ಗಿಡನಡಲು ಮತ್ತು ನೀರಾವರಿ ವ್ಯವಸ್ಥೆ ಮಾಡಲು ಹೆಚ್ಚಿನ ಅಳುಗಳು ಬೇಕಾಗುತ್ತದೆ.
ಅರ್ಜಿ ಸಲ್ಲಿಸಲು ನಮ್ಮಲ್ಲಿ ಯಾವ ದಾಖಲೆಗಳು ಇರಬೇಕು ?
- ಜಮೀನಿನ ನಕ್ಷೆ / ಸ್ಕೆಚ್
- ಮೊಬೈಲ್ ನಂಬರ್ (ಆಧಾರ್ಗೆ ಲಿಂಕ್ ಆಗಿರಬೇಕು)
- ಪಾಸ್ಪೋರ್ಟ್ ಸೈಸ್ ಫೋಟೋ
- ಬ್ಯಾಂಕ್ ಪಾಸ್ಬುಕ್ (ಖಾತೆ ವಿವರಗಳೊಂದಿಗೆ)
- ಆಧಾರ್ ಕಾರ್ಡ್ ಪ್ರತಿಗಳು
- ತೋಟ ಯೋಜನೆ ವಿವರ (Plantation Plan)
- ಜಮೀನು ದಾಖಲೆ (RTC / ಪಹಣಿ)
- ಸ್ವಯಂ ಘೋಷಣೆ ಪತ್ರ (Self Declaration)
- ಜಾತಿ ಪ್ರಮಾಣಪತ್ರ (SC/ST ರೈತರಿಗೆ – ಅಗತ್ಯವಿದ್ದಲ್ಲಿ)
- ಮಣ್ಣಿನ ಪರೀಕ್ಷಾ ವರದಿ (ಕೆಲ ಸಂದರ್ಭಗಳಲ್ಲಿ)
ಅರ್ಜಿ ಸಲ್ಲಿಸಲು ಬಯಸುವ ರೈತರು ಕೆಳಗೆ ಕೊಡಲಾದ ವಿಧಾನವನ್ನ ಅನುಸರಿಸಿ :-
NHM ಯೋಜನೆಗೆ ರೈತರು ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶವನ್ನು ಸರ್ಕಾರ ಮಾಡಿಕೊಟ್ಟಿದೆ.
ಮೊದಲು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಎನ್ನುವುದನ್ನು ಈ ಕೆಳಗೆ ವಿವರವಾಗಿ ತಿಳಿಸಲಾಗಿದೆ.
- ರೈತರು ಮೊದಲು ಹತ್ತಿರದ ತಾಲೂಕು ಅಥವಾ ಜಿಲ್ಲಾ ತೋಟಗಾರಿಕೆ ಇಲಾಖೆ ಕಚೇರಿಗೆ ಭೇಟಿ ನೀಡಿ
- ಸಂಬಂಧಿಸಿದ ಯೋಜನೆಯ ಅರ್ಜಿಯನ್ನ ಅಲ್ಲಿನ ಸಿಬ್ಬಂದಿ ಹತ್ತಿರ ಕೇಳಿ ಪಡೆಯಿರಿ
- ಫಾರಂನಲ್ಲಿ ವೈಯಕ್ತಿಕ ಮತ್ತು ಜಮೀನು ವಿವರವನ್ನು ಸರಿಯಾಗಿ ನೋಡಿ ಬರ್ತಿ ಮಾಡುವುದು ಒಳ್ಳೆಯದು
- ನಂತರದಲ್ಲಿ ಅಗತ್ಯ ದಾಖಲೆಗಳನ್ನು ಅಂದರೆ ನಿಮ್ಮ ಆರ್ ಟಿ ಸಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಫೋಟೋ ಈ ಎಲ್ಲಾ ದಾಖಲೆಗಳನ್ನು ಲಘುತಿಸಬೇಕಾಗುತ್ತದೆ
- ಹಾಗೆ ಬರ್ತಿ ಮಾಡಿದ ಅರ್ಜಿಯನ್ನು ಅದೇ ಕಚೇರಿಯಲ್ಲಿ ಸಲ್ಲಿಸಿ ಅಧಿಕಾರಿ ಬಳಿ ಸ್ವೀಕೃತಿ ರಶೀದಿ ಕೇಳಿ ಪಡೆಯುವುದು ಮರೆಯಬೇಡಿ
- ಅಧಿಕಾರಿಗಳಿಂದ ನಂತರದಲ್ಲಿ ನಿಮ್ಮ ಜಮೀನು ಪರಿಶೀಲನೆಗೆ ಒಳಗಾಗುತ್ತದೆ
- ನಂತರ ಸರ್ಕಾರದ ಅನುಮೋದನೆ ಬಳಿಕ ತೋಟ ಸ್ಥಾಪನೆ ಆರಂಭಿಸುವುದು ಮತ್ತು ಪರಿಶೀಲನೆ ನಂತರ ರೈತರ ಬ್ಯಾಂಕ್ ಖಾತೆಗೆ ಸಹಾಯಧನವು ವರ್ಗಾವಣೆಯಾಗುತ್ತದೆ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ :-
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ರೈತರು ರಾಜ್ಯ ತೋಟಗಾರಿಕಾ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಮೊದಲು ಭೇಟಿ ನೀಡಿ
- ರೈತರು ಫಾರ್ಮರ್ ರಿಜಿಸ್ಟ್ರೇಷನ್ (ರೈತ ನೋಂದಣಿ) ನಲ್ಲಿ ರೈತರ ಹೆಸರು ವಿಳಾಸ, ಜಮೀನಿನ ವಿವರವನ್ನು ಅಧಿಕೃತವಾಗಿ ದಾಖಲಿಸುವುದು.
- ನೀವು ಇದೇ ಮೊದಲನೇ ಬಾರಿ ಹೊಸ ಅಡಿಕೆ ತೋಟ (Arecanut Plantation Subsidy೦ ಅಥವಾ ಹನಿ ನೀರಾವರಿ ಯೋಜನೆಗೆ ಅರ್ಜಿ ಸಲ್ಲಿಸುವ ರೈತರದರೆ ಲಾಗಿನ್ ಮಾಡಿ ಸಂಬಂಧಿತ ಯೋಜನೆಯನ್ನ ಆಯ್ಕೆ ಮಾಡಬೇಕು.
- ನಂತರ ಅಲ್ಲಿನ ಫಾರಂನಲ್ಲಿ ನಿಮ್ಮ ಹೆಸರು, ನಿಮ್ಮ ವಿಳಾಸ, ಹಾಗೆ ಎಷ್ಟು ಎಕರೆಗೆ ತೋಟ ಹಾಕುತ್ತೀರಾ ಎನ್ನುವುದರ ವಿವರ ಎಲ್ಲವನ್ನ ಭರ್ತಿ ಮಾಡಬೇಕು.
- ನಂತರದಲ್ಲಿ ರೈತರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಲು ನಿಮ್ಮ ಸರಿಯಾದ ಬ್ಯಾಂಕ್ ಖಾತೆಯ ವಿವರವನ್ನು ಭರ್ತಿ ಮಾಡಿ.
- ಹಾಗೆ ಆರ್ ಟಿ ಸಿ, ಆಧಾರ್ ಕಾರ್ಡ್, ಇನ್ನಿತರ ಅಗತ್ಯ ದಾಖಲೆಗಳನ್ನು ಸ್ಕಾನ್ ಮಾಡಿಟ್ಟುಕೊಂಡು ಅಪ್ಲೋಡ್ ಮಾಡಬೇಕು.
- ಕೊನೆಯಲ್ಲಿ ಅರ್ಜಿಯನ್ನ ಸರಿಯಾಗಿದೆ ಎಂದು ಪರಿಶೀಲಿಸಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ.
- ಕೊನೆಯಲ್ಲಿ ರೈತರು ಕಡ್ಡಾಯವಾಗಿ ಸ್ವೀಕೃತಿ ಸಂಖ್ಯೆ ಅಂದರೆ ಅಪ್ಲಿಕೇಶನ್ ಐಡಿ ಸ್ಕ್ರಿನ್ ಶಾಟ್ ತೆಗೆದುಕೊಳ್ಳುವುದು ಒಳ್ಳೆಯದು.
- ಅಂತಿಮವಾಗಿ ನಿಮ್ಮ ಅರ್ಜಿ ಪ್ರಕ್ರಿಯೆ ಮುಗಿದ ನಂತರ ಅಧಿಕಾರಿಗಳು ನಿಮ್ಮ ಸ್ಥಳಕ್ಕೆ ಬಂದು ನಿನ್ನ ಜಮೀನನ್ನ ಪರಿಶೀಲನೆ ಮಾಡಿ ಅನುಮೋದನೆ ಮಾಡುತ್ತಾರೆ ಪರಿಶೀಲನೆ ಮಾಡುತ್ತಾರೆ.
- ನಂತರದಲ್ಲಿ ಸರ್ಕಾರದಿಂದ ಅನುಮೋದನೆಗೊಂಡ ನಂತರ ಸಹಾಯಧನವು ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುತ್ತದೆ.
ರೈತರಿಗೆ ವಿಶೇಷ ಸೂಚನೆ:
| ಈ ಯೋಜನೆಯ ಮೂಲಕ ರೈತರಿಗೆ ಅಡಿಕೆ ತೋಟ (Arecanut Plantation Subsidy In Karnataka ) ಮಾಡಲು ಸರ್ಕಾರದಿಂದ ಸಬ್ಸಿಡಿ ಹಾಗೂ ಸಾಲ ಸೌಲಭ್ಯ ಸಿಗುತ್ತಿದ್ದು ಈ ಯೋಜನೆ ಎಲ್ಲಾ ಜಿಲ್ಲೆಯಲ್ಲಿ ಚಾಲ್ತಿಯಲ್ಲಿ ಇಲ್ಲ, ಹಾಗಾಗಿ ಈ ಯೋಜನೆಯ ಬಗ್ಗೆ ನಿಮ್ಮ ಹತ್ತಿರದ ತೋಟಗಾರಿಕಾ ಇಲಾಖೆ ಅಥವಾ ಕೃಷಿ ಇಲಾಖೆಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆದು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು. ಈ ಯೋಜನೆಯ ಬಗ್ಗೆ ಯಾರಾದರೂ ತಪ್ಪು ಮಾಹಿತಿಯನ್ನು ನಿಮಗೆ ತಲುಪಿಸಿ ಹಣ ಹಣ ಪಡೆದುಕೊಳ್ಳುವ ಪ್ರಯತ್ನ ಮಾಡಿದರೆ ದಯವಿಟ್ಟು ಇಂಥವರಿಗೆ ಹಣವನ್ನು ಕೊಟ್ಟು ಮೋಸ ಹೋಗಬೇಡಿ. |
ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ :-
೧ . ರಾಜ್ಯ ತೋಟಗಾರಿಕೆ ಕಚೇರಿ, ಬೆಂಗಳೂರು
- ದೂರವಾಣಿ:- 080‑26571925
- ಇಮೇಲ್:- horticulturedirector@gmail.com
೨ . ರಾಷ್ಟ್ರೀಯ ತೋಟಗಾರಿಕೆ ಮಿಷನ್ (NHM)
- ಇಮೇಲ್:- nhmkarnataka@gmail.com
- ದೂರವಾಣಿ:- 080‑26572324
೩ . ಜಿಲ್ಲಾ ತೋಟಗಾರಿಕೆ ಕಚೇರಿ ಉದಾಹರಣೆ:
- ಹುಬ್ಬಳ್ಳಿ:- 0836‑2377136
- ಚಿತ್ರದುರ್ಗ:- 08194‑230141
- ಬೆಳಗಾವಿ:- 0831‑2407296
- ಬಳ್ಳಾರಿ:- 08392‑278177
ಮುಖ್ಯ ಸಲಹೆ :–
ನಿಮ್ಮ ಹತ್ತಿರದ ತಾಲ್ಲೂಕಿನ ತೋಟಗಾರಿಕೆ ಅಧಿಕಾರಿಯನ್ನು ಸಂಪರ್ಕಿಸಿ, ಅವರು ನಿಮಗೆ ಎಲ್ಲ ವಿವರಗಳನ್ನು ತಿಳಿಸುತ್ತಾರೆ.
“ಹೊಸ ಅಡಿಕೆ ತೋಟ (Arecanut Plantation Subsidy) ನೆಟ್ಟು, 2026ರಲ್ಲಿ ಸಹಾಯಧನ ನಿಮ್ಮ ಕೈಗೆ. ಆದಾಯ ನಿಮ್ಮ ಹೊಲಕ್ಕೆ, ಹಸಿರು ಪರಿಸರ ಎರಡೂ ಗೆಲ್ಲಲಿ!”
ರೈತರಿಗೆ ನನ್ನ ಕಿವಿ ಮಾತು :-
| ಆತ್ಮೀಯ ರೈತರೇ,, ನಿಮ್ಮ ಹೊಲವನ್ನ ಹಸಿರಾಗಿಸಿಕೊಳ್ಳಿ ಮತ್ತು ಹೊಸ ಆದಾಯದ ಮೂಲವನ್ನ ನಿರ್ಮಿಸಿಕೊಳ್ಳಿ! 2026 ನೇ ಸಾಲಿನಲ್ಲಿ ಹೊಸ ಅಡಿಕೆ ತೋಟ (Arecanut Plantation Subsidy) ನೆಟ್ಟರೆ ಸರ್ಕಾರದಿಂದ ಸಹಾಯಧನಾ ದೊರೆಯುತ್ತದೆ. ಈ ಯೋಜನೆಯಡಿ ಗಿಡ ನೆಟ್ಟು, ನೀರಾವರಿ ವ್ಯವಸ್ಥೆ ಮಾಡಿಸಿ, ತೋಟದ ನಿರಂತರ ಪಾಲನೆ ಮಾಡಿಕೊಂಡರೆ ನಿಮ್ಮ ಆದಾಯ ಮತ್ತು ಪರಿಸರ ಎರಡರಲ್ಲೂ ಸಮೃದ್ಧಿಯಾಗುತ್ತದೆ ಅಂದರೆ “ಹಸಿರು ಹೊಲ ಬರವಸೆ ಮತ್ತು ಸ್ಥಿರ ಆದಾಯ ನಿಮ್ಮ ಕೈಯಲ್ಲಿ, ಈಗ ಪ್ರಾರಂಭಿಸಿ ನಿಮ್ಮ ಹೊಲಕ್ಕೆ ಭವಿಷ್ಯದ ಬೆಳಕು ನೀಡಿರಿ! |
ಇತರೆ ಪ್ರಮುಖ ಲಿಂಕುಗಳು :-
- PMEGP : 20 ಲಕ್ಷ ಸಾಲ! ಯಾವುದೇ ಆಸ್ತಿ ಅಥವಾ ಶ್ಯೂರಿಟಿ ಬೇಕಿಲ್ಲ!
- DLSA: ಚಾಮರಾಜನಗರ ಜಿಲ್ಲಾ ನ್ಯಾಯಾಲಯ ನೇಮಕಾತಿ 2026
- Residential Schools Admission

