ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಸಂಸ್ಥೆಯ ವತಿಯಿಂದ (BESCOM WhatsApp Service) ಗ್ರಾಹಕರಿಗೆ ಇದೀಗ ಮತ್ತೊಂದು ಗುಡ್ ನ್ಯೂಸ್ ನೀಡಲಾಗುತ್ತಿದೆ, ತ್ವರಿತವಾಗಿ ಸೇವೆ ನೀಡುವ ಉದ್ದೇಶದಿಂದ ಜಿಲ್ಲಾ ವಾರು ವಾಟ್ಸಪ್ ಸಹಾಯವಾಣಿ ವ್ಯವಸ್ಥೆಯನ್ನ ಜಾರಿಗೆ ತಂದಿದ್ದು ಈ ಸೇವೆಯ ಮೂಲಕ ವಿದ್ಯುತ್ತಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು.
BESCOM WhatsApp Service Helpline Kannada
ಈ ವಾಟ್ಸಪ್ ಮೂಲಕ ಯಾವುದೇ ಸಮಸ್ಯೆ ಇದ್ದಲ್ಲಿ ನೀವು ವಾಟ್ಸಪ್ ನಲ್ಲಿ ಸಂಸ್ಥೆಗೆ ಮೆಸೇಜ್ ಕಳುಹಿಸುವ ಮೂಲಕ ನಿಮ್ಮ ಸಮಸ್ಯೆಗೆ ಶೀಘ್ರವೇ ಪರಿಹಾರ ವನ್ನು ಕಂಡುಕೊಳ್ಳಬಹುದು. ಅಧಿಕಾರಿಗಳು ನಿಮ್ಮ ಮನೆಯ ಬಾಗಿಲಿಗೆ ಬಂದು ಆಗಿರುವಂತಹ ಸಮಸ್ಯೆಗಳನ್ನ ಪರಿಹಾರ ಮಾಡುವುದಕ್ಕೆ ಇದೊಂದು ಸುಲಭವಾದ ವಿಧಾನವಾಗಿದೆ
ನಿಮ್ಮ ಮನೆಯ ಹತ್ತಿರ ಯಾವುದಾದರೂ ಕಂಬ ಮುರಿದು ಹೋದರೆ ಅಥವಾ ಯಾವುದೇ ಶಾರ್ಟ್ ಸರ್ಕ್ಯೂಟ್ ಆದಲ್ಲಿ ಅದರ ಫೋಟೋವನ್ನು ತೆಗೆದು ಅಥವಾ ವಿಡಿಯೋವನ್ನು ತೆಗೆದು ವಾಟ್ಸಪ್ ನಲ್ಲಿ ಶೇರ್ ಮಾಡಿದಾಗ ಸಂಸ್ಥೆಯ ಅಧಿಕಾರಿಗಳು ಬಂದು ಶೀಘ್ರದಲ್ಲಿ ಪರಿಹಾರವನ್ನು ಕಂಡುಕೊಳ್ಳಲು ಸಹಾಯವಾಗುತ್ತದೆ (BESCOM WhatsApp Service) ಇದರ ಬಗ್ಗೆ ಈ ಕೆಳಗೆ ಮಾಹಿತಿಯನ್ನು ನೀಡಲಾಗಿದ್ದು ವಾಟ್ಸಪ್ ನಂಬರ್ ಹಾಗೂ ಇನ್ನಿತರ ಸೇವೆಗಳ ಬಗ್ಗೆನೂ ಕೂಡ ಈ ಕೆಳಗೆ ಮಾಹಿತಿಯನ್ನು ನೀಡಲಾಗಿದೆ.

BESCOM ವಾಟ್ಸಾಪ್ ಸೇವೆಯ ಪ್ರಮುಖ ವೈಶಿಷ್ಟ್ಯಗಳು (Features):
- ಫೋಟೋ ಮತ್ತು ವಿಡಿಯೋ ಮೂಲಕ ನೇರವಾಗಿ ಸಮಸ್ಯೆ ತಿಳಿಸಲು ಅವಕಾಶವನ್ನ ಕಲ್ಪಿಸಲಾಗಿದೆ
- ಕಚೇರಿಗೆ ಹೋಗುವ ಅವಶ್ಯಕತೆ ಇಲ್ಲ
- 24*7 ಸ್ಪಂದನೆ ಸಾಧ್ಯವಾಗುತ್ತದೆ
- ಸಮಸ್ಯೆಯ ಸ್ಥಳವನ್ನು ಸುಲಭವಾಗಿ ಗುರುತಿಸುವ ವ್ಯವಸ್ಥೆ
- ದೂರು ದಾಖಲಿಸಿದ ತಕ್ಷಣ ಸಂಬಂಧಪಟ್ಟ ವಿಭಾಗಕ್ಕೆ ಮಾಹಿತಿ ರವನೆಯನ್ನು ಮಾಡಲು ಸುಲಭವಾದ ಮಾರ್ಗ
ಯಾವ ಸಮಸ್ಯೆಗಳಿಗೆ ಈ ಸೇವೆ ಉಪಯುಕ್ತ? (Problem Solution):
- ವಿದ್ಯುತ್ ಕಂಬ ಹಾನಿ ಸೇರಿದಂತೆ
- ವಿದ್ಯುತ್ ಕಡಿತ ಸಮಸ್ಯೆ
- ತಂತಿ ತುಂಡಾಗಿರುವುದು
- ಟ್ರಾನ್ಸ್ಫರ್ಮ್ ಸಮಸ್ಯೆ
- ಸಾರ್ವಜನಿಕ ಸುರಕ್ಷತೆ ಅಪಾಯವುಂಟು ಮಾಡುವ ಸಂದರ್ಭದಲ್ಲಿ
- ವಿದ್ಯುತ್ ಸ್ಪಾರ್ಕ್ ಅಥವಾ ಅಪಾಯಕರ ಸ್ಥಿತಿ
ಈ ಎಲ್ಲಾ ಸಮಸ್ಯೆಗಳಿಗೆ ಈ ವಾಟ್ಸಾಪ್ ಹೆಲ್ಪ್ಲೈನ್ (BESCOM WhatsApp Service) ಉಪಯುಕ್ತವಾಗುತ್ತದೆ
BESCOM ವಾಟ್ಸಾಪ್ ಸೇವೆಯ ಲಾಭಗಳು (Benefits)
- ವಾಟ್ಸಾಪ್ ಸೇವೆಯಿಂದ (BESCOM WhatsApp Service) ಸಮಯ ಜನಸಾಮಾನ್ಯರಿಗೆ ಸುಲಭ ಸೇವೆ
- ಸಮಯ ಉಳಿತಾಯ
- ಹಿರಿಯ ನಾಗರಿಕರು ಹಾಗೂ ರೈತರಿಗೆ ಉಪಯುಕ್ತ
- ದೂರು ಪ್ರಕ್ರಿಯೆಯಲ್ಲಿ ಪಾರದರ್ಶಕತೆ
- ದೂರದ ಪ್ರದೇಶದ ಗ್ರಾಹಕರಿಗೂ ಶೀಘ್ರ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಸುಲಭ ಮಾರ್ಗ
- ವಿದ್ಯುತ್ ಸಮಸ್ಯೆಗಳ ತ್ವರಿತ ನಿರ್ವಹಣೆಗೆ ರಹಧಾರಿ
BESCOM ವಾಟ್ಸಾಪ್ ಮೂಲಕ ದೂರು ಸಲ್ಲಿಸುವ ವಿಧಾನ (How to Use):
- ನಿಮ್ಮ ಪ್ರದೇಶದ ವಿದ್ಯುತ್ ಸಮಸ್ಯೆಯ ಫೋಟೋ ಅಥವಾ ವಿಡಿಯೋ ವನ್ನು ತೆಗೆದುಕೊಳ್ಳಿ
- ನಿಮ್ಮ ಜಿಲ್ಲೆಗೆ ಸಂಬಂಧಪಟ್ಟ ಬೆಸ್ಕಾಂ ವಾಟ್ಸಪ್ ಸಹಾಯವಾಣಿ ಸಂಖ್ಯೆಗೆ ವಿಡಿಯೋ ಅಥವಾ ಫೋಟೋವನ್ನು ರವಾನಿಸಿ
- ಸಂದೇಶದಲ್ಲಿ ಈ ಕೆಳಗೆ ಕೊಟ್ಟಿರುವ ವಿವರವನ್ನು ಕಡ್ಡಾಯವಾಗಿ ನಮೂದಿಸಬೇಕು
- ಗ್ರಾಹಕರ ಸಂಖ್ಯೆ ಅಥವಾ ಮೀಟರ್ ಸಂಖ್ಯೆ
- ಸಂಪೂರ್ಣ ವಿಳಾಸ
- ಸಮಸ್ಯೆಯ ಸ್ವರೂಪ ಅಂದರೆ (ವಿದ್ಯುತ್ ವಿದ್ಯುತ್ ಕಡಿತ, ಕಂಬ ಬಿದ್ದಿದ್ದು, ತಂತಿಹಾನಿ) ಇತ್ಯಾದಿ
- ಕಡ್ಡಾಯವಾಗಿ ನಮೂದಿಸಿ ಕಳುಹಿಸಬೇಕು ಬೆಸ್ಕಾಂ ಅಧಿಕಾರಿಗಳು ನಿಮ್ಮ ದೂರು ಪರಿಶೀಲಿಸಿ ತ್ವರಿತವಾಗಿ ಸಮಸ್ಯೆಗೆ ಪರಿಹಾರವನ್ನು ನೀಡುತ್ತಾರೆ.
ವಿಶೇಷ ಸೂಚನೆ ಗಮನಿಸಿ :-
| ತುರ್ತು ಸಂದರ್ಭಗಳಲ್ಲಿ BESCOM ಸಹಾಯವಾಣಿ 1912 ಗೆ ಕರೆಮಾಡಬಹುದು |
ಜಿಲ್ಲಾವಾರು WhatsApp ಸಹಾಯವಾಣಿ ಸಂಖ್ಯೆಗಳು:
ಬೆಂಗಳೂರು ನಗರ:
| ದಕ್ಷಿಣ ವೃತ್ತ | https://wa.me/8277884011 |
| ಪಶ್ಚಿಮ ವೃತ್ತ | https://wa.me/8277884012 |
| ಪೂರ್ವ ವೃತ್ತ | https://wa.me/8277884013 |
| ಉತ್ತರ ವೃತ್ತ | https://wa.me/8277884014 |
ಇತರ ಜಿಲ್ಲೆಗಳು:
| ಕೋಲಾರ | https://wa.me/8277884015 |
| ಚಿಕ್ಕಬಳ್ಳಾಪುರ | https://wa.me/8277884016 |
| ಬೆಂಗಳೂರು ಗ್ರಾಮಾಂತರ | https://wa.me/8277884017 |
| ರಾಮನಗರ | https://wa.me/8277884018 |
| ತುಮಕೂರು | https://wa.me/8277884019 |
| ಚಿತ್ರದುರ್ಗ | https://wa.me/8277884020 |
| ದಾವಣಗೆರೆ | https://wa.me/8277884021 |
ಅಂತಿಮ ಮಾತು (Last Speech):
ಇಂದಿನ ಡಿಜಿಟಲ್ ಯುಗದಲ್ಲಿ ಬೆಸ್ಕಾಂ ಸಂಸ್ಥೆಯು ವಾಟ್ಸಾಪ್ ಸಹಾಯವಾಣಿಯನ್ನು ಆರಂಭಿಸಿರುವುದು ಜನಸಾಮಾನ್ಯರಿಗೆ ಒಂದು ಅತ್ಯಂತ ಅದ್ಭುತವಾದ ಅನುಕೂಲವಾಗಿದೆ ಒಂದೇ ಒಂದು ಫೋಟೋ ಅಥವಾ ವಿಡಿಯೋ ಕಳುಹಿಸುವ ಮೂಲಕ ಜನಸಾಮಾನ್ಯರು ತಮ್ಮ ವಿದ್ಯುತ್ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರವನ್ನು ಕಂಡುಕೊಳ್ಳಬಹುದು, ನಿಮ್ಮದು ಯಾವ ಜಿಲ್ಲೆ ಬರುತ್ತದೆ ಆ ಕಾಂಟಾಕ್ಟ್ ನಂಬರಿಗೆ ನಿಮ್ಮ ಸಮಸ್ಯೆಯನ್ನು ಕಳುಹಿಸುವ ಮೂಲಕ ವಿದ್ಯುತ್ ಸಮಸ್ಯೆಯಿಂದ ಶೀಘ್ರವಾಗಿ ಪರಿಹಾರವನ್ನು ಕಂಡುಕೊಳ್ಳಬಹುದು ಮೇಲೆ ಕಾಣಿಸಿರುವ ನಂಬರ್ಗೆ ವಾಟ್ಸಪ್ ಮಾಡಿ.
ಇತರೆ ಪ್ರಮುಖ ಲಿಂಕುಗಳು:
- RBI ಗುಡ್ ನ್ಯೂಸ್! ಉದ್ಯಮ ಆರಂಭಿಸಲು ಚಿನ್ನದ ಅವಕಾಶ!
- KSDL : ₹30 ಕೋಟಿ ಹೂಡಿಕೆ! ಸಾವಿರಾರು ಉದ್ಯೋಗಾವಕಾಶ!
- RailOne App : ರೈಲು ಪ್ರಯಾಣಿಕರಿಗೆ ದೊಡ್ಡ ಬದಲಾವಣೆ


Am indra kumar m iti pas em
Kasaba Hobali Sira Tq Melukunte Tumkur
Kasaba Hobali Sira Tq Melukunte Tumkur Karnataka
One year apprenticeship
Bescom
saibanna156@gmail.com
Dist,Raichur Taluk,Manvi,Bailmarchad
I have completed MBA graduation and I’m searching for job in KB