ನಮಸ್ಕಾರ ಸ್ನೇಹಿತರೆ, ನಿಮ್ಮ ಮನೆಯಲ್ಲಿ ಹೆಚ್ಚಿನ ಕರೆಂಟ್ ಬಿಲ್ ಬರ್ತಿದೀಯಾ? ಕರೆಂಟ್ ಬಿಲ್ ಹಣ ಪಾವತಿ ಮಾಡುವುದು ಹೊರೆಯಾಗಿ ಪರಿಣಮಿಸುತ್ತಿದೀಯಾ? ಇನ್ನು ದುಬಾರಿ ಕರೆಂಟ್ ಬಿಲ್ ಹಣವನ್ನು ಪಾವತಿ ಮಾಡುವ ಕುರಿತು ಚಿಂತೆ ಬೇಡ.
PM Surya Ghar Yojana in Kannada
ಕೇಂದ್ರ ಸರ್ಕಾರವು ನಿಮಗಾಗಿ ಪಿಎಂ ಸೂರ್ಯ ಘರ್: ಮುಫ್ಟ್ ಬಿಜಿಲಿ ಯೋಜನೆಯನ್ನು (PM Surya Ghar Yojana) ಜಾರಿಗೊಳಿಸಿದ್ದು, ಈ ಯೋಜನೆಯಡಿಯಲ್ಲಿ ನಿಮ್ಮ ಮನೆಯ ಮೇಲ್ಚಾವಣಿಯ ಮೇಲೆ ಸೋಲಾರ್ ಪ್ಯಾನಲ್ ಗಳನ್ನು ಅಳವಡಿಸಲು ಭಾರಿ ಮೊತ್ತದ ಸಬ್ಸಿಡಿ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ.
ಈ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಸಾಕಷ್ಟು ಅಭ್ಯರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಂಡಿದ್ದಾರೆ.
ಪಿಎಂ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆ PM Surya Ghar Yojana:
ವಿದ್ಯುತ್ ಬಿಲ್ ಪಾವತಿಯ ಹೊರೆಯನ್ನು ಕಡಿಮೆ ಮಾಡುವ ಈ ಒಂದು ಯೋಜನೆಯ ಲಾಭವನ್ನು ನೀವು ಪಡೆದುಕೊಳ್ಳಬೇಕಾ? ಹಾಗಿದ್ದರೆ ಪಿಎಂ ಸೂರ್ಯ ಘರ್ (PM Surya Ghar Yojana Website ) ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ. ಇನ್ನಷ್ಟು ಯೋಜನೆಗಳ ಕುರಿತು ಮಾಹಿತಿಗಾಗಿ ನಮ್ಮ ವೆಬ್ಸೈಟ್ ಕನ್ನಡಹೆಲ್ಪ್ ಗೆ ಭೇಟಿ ನೀಡಿ.
ಯೋಜನೆಯ ಕಿರು ಚಿತ್ರಣ:
| ಯೋಜನೆಯ ಹೆಸರು | ಪಿಎಂ ಸೂರ್ಯ ಘರ್: ಮುಫ್ಟ್ ಬಿಜಿಲಿ ಯೋಜನೆ (PM Surya Ghar Yojana) |
| ಅರ್ಜಿ ಸಲ್ಲಿಸಲು ಅರ್ಹರಾದ ಅಭ್ಯರ್ಥಿಗಳು | ಸ್ವಂತ ಮನೆ ಹೊಂದಿರುವವರು |
| ಫಲಾನುಭವಿಗಳು ಪಡೆಯುವ ಸೌಲಭ್ಯ | ಸೋಲಾರ್ ಪ್ಯಾನಲ್ ಅಳವಡಿಸಲು ಸಬ್ಸಿಡಿ ಸಹಾಯಧನ ಸಿಗಲಿದೆ. |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ |
ಏನಿದು ಪಿಎಂ ಸೂರ್ಯ ಘರ್ ಮುಫ್ಟ್ ಬಿಜಿಲಿ ಯೋಜನೆ?
ಕೇಂದ್ರ ಸರ್ಕಾರವು ಪಿಎಂ ಸೂರ್ಯ ಘರ್ ಮುಫ್ಟ್ ಬಿಜಿಲಿ ಯೋಜನೆಯನ್ನು (PM Surya Ghar Yojana In karnaaka ) 2024 ರಲ್ಲಿ ಜಾರಿಗೊಳಿಸಿದ್ದು, ಈ ಯೋಜನೆಯಡಿಯಲ್ಲಿ ಕೋಟ್ಯಂತರ ಮನೆಗಳಿಗೆ ಸೌರ ಶಕ್ತಿಯನ್ನು ತಲುಪಿಸುವ ಉದ್ದೇಶವನ್ನು ಹೊಂದಿದೆ.
ಈ ಯೋಜನೆಯಡಿಯಲ್ಲಿ ಪ್ರತಿ ಮನೆಗೆ ಉಚಿತ ವಿದ್ಯುತ್ ಅನ್ನು ಒದಗಿಸುವುದರ ಜೊತೆಗೆ ಪರಿಸರ ಸ್ನೇಹಿ ಇಂಧನಗಳನ್ನು ಬಳಸಲು ಉತ್ತೇಜನವನ್ನು ನೀಡುವುದಾಗಿದೆ.
ಫಲಾನುಭವಿಗಳು ತಮ್ಮ ಮನೆಗಳಿಗೆ ಸೋಲಾರ್ ಪ್ಯಾನಲ್ ಅಳವಡಿಸಿದ ನಂತರ ಈ ಯೋಜನೆಯಡಿಯಲ್ಲಿ ಸಬ್ಸಿಡಿ ಹಣವನ್ನು ಪಡೆಯಲು ಅರ್ಹರಾಗಿರುತ್ತಾರೆ.
ಈ ಯೋಜನೆಯಡಿಯಲ್ಲಿ ಪಡೆಯಬಹುದಾದ ಒಟ್ಟು ಸಬ್ಸಿಡಿ ಹಣ ಎಷ್ಟು?
ನೀವೇನಾದರೂ ನಿಮ್ಮ ಮನೆಯಲ್ಲಿ ಈ ಕೆಳಗೆ ನೀಡಿರುವ ವಿವಿಧ kW ಸಾಮರ್ಥ್ಯದ ಸೋಲಾರ್ ಪ್ಯಾನಲ್ ಅಳವಡನೆ ಮಾಡಿದರೆ, ಸೋಲಾರ್ ಪ್ಯಾನಲ್ ನ ಸಾಮರ್ಥ್ಯಕ್ಕೆ ಅನುಗುಣವಾಗಿ ಸಬ್ಸಿಡಿ ಸಹಾಯಧನ ಪಡೆದುಕೊಳ್ಳಬಹುದಾಗಿದೆ.
- 1 kW ಸಾಮರ್ಥ್ಯದ ಸೋಲಾರ್ ಪ್ಯಾನಲ್ ಗೆ : ₹30,000
- 2 kW ಸಾಮರ್ಥ್ಯದ ಸೋಲಾರ್ ಪ್ಯಾನಲ್ ಗೆ : ₹60,000
- 3kW ಸಾಮರ್ಥ್ಯದ ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಸೋಲಾರ್ ಪ್ಯಾನಲ್ ಗೆ : ₹78,000
ಈ ಯೋಜನೆಯಡಿಯಲ್ಲಿ ಏನೆಲ್ಲಾ ಲಾಭವನ್ನು ಪಡೆದುಕೊಳ್ಳಬಹುದು?
- ಈ ಯೋಜನೆಯಡಿಯಲ್ಲಿ ದೊರೆಯುವ ಹಣಗಳು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತದೆ. ಇದರಿಂದಾಗಿ ಯಾವುದೇ ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ.
- ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಂಡವರು ಪ್ರತಿ ತಿಂಗಳಿಗೆ ಸುಮಾರು 300 ಯುನಿಟ್ ಗಳಷ್ಟು ವಿದ್ಯುತ್ ಅನ್ನು ಉಳಿತಾಯ ಮಾಡಬಹುದು.
- ಮನೆ ಬಳಕೆಯ ನಂತರ ಉಳಿದ ಹೆಚ್ಚುವರಿ ವಿದ್ಯುತ್ ಅನ್ನು ಬೆಸ್ಕಾಂ ಗೆ ಮಾರಾಟ ಮಾಡಲು ಅವಕಾಶ. ಇದರಿಂದ ನಿಮ್ಮ ವಿದ್ಯುತ್ ಬಿಲ್ ದರ ಕಡಿಮೆಯಾಗುತ್ತದೆ ಇಲ್ಲವೇ ಪ್ರತಿ ಯುನಿಟ್ ಗೆ ಬೆಸ್ಕಾಂ ನಿಗದಿತ ಹಣವನ್ನು ನೀಡುತ್ತದೆ.
- ಸೋಲಾರ್ ಪ್ಯಾನಲ್ ಅಳವಡನೆ ಮಾಡಲು ಹಣದ ಕೊರತೆಯಾದರೆ ಬ್ಯಾಂಕ್ ನಿಂದ ಕೇವಲ 7% ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.
- 1 kW ಸಾಮರ್ಥ್ಯದ ಸೋಲಾರ್ ಪ್ಲಾಂಟ್ ಅಳವಡಣೆ ಮಾಡಲು ಕೇವಲ 10*10 ಅಡಿ ಜಾಗ ಸಾಕಾಗುತ್ತದೆ.
- ಸೋಲಾರ್ ಪ್ಯಾನಲ್ ಗಳು ದೀರ್ಘ ಕಾಲ ಬಾಳಿಕೆ ಬರುವುದರಿಂದ ಅಲ್ಲಿಯ ವರೆಗಿನ ವಿದ್ಯುತ್ ಬಿಲ್ ಅನ್ನು ಉಳಿತಾಯ ಮಾಡಬಹುದಾಗಿದೆ.
ಪ್ರತಿ ವರ್ಷ ಸೇವ್ ಮಾಡಬಹುದಾದ ಒಟ್ಟು ಎಲೆಕ್ಟ್ರಿಸಿಟಿ ಬಿಲ್:
ಸೋಲಾರ್ ಪ್ಯಾನಲ್ ಅಳವಡನೆ ಮಾಡುವುದರಿಂದ ಪ್ರತಿ ವರ್ಷಕ್ಕೆ ಎಷ್ಟು ಎಲೆಕ್ಟ್ರಿಸಿಟಿ ಬಿಲ್ ಅನ್ನು ಉಳಿತಾಯ ಮಾಡಬಹುದು ಎನ್ನುವ ಬಗ್ಗೆ ಈ ಕೆಳಗೆ ತಿಳಿಸಲಾಗಿದೆ.
1 kW ಸಾಮರ್ಥ್ಯದ ಸೋಲಾರ್ ಪ್ಯಾನಲ್ ಅಳವಡಿಸಿಕೊಂಡರೆ ಪ್ರತಿ ವರ್ಷ ₹9,600, 2 kW ಸಾಮರ್ಥ್ಯದ ಸೋಲಾರ್ ಪ್ಯಾನಲ್ ಅಳವಡಿಸಿಕೊಂಡರೆ ಪ್ರತಿ ವರ್ಷಕ್ಕೆ ₹21,600, 3kW ಸಾಮರ್ಥ್ಯದ ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಸೋಲಾರ್ ಪ್ಯಾನಲ್ ಅಳವಡಿಸಿಕೊಂಡರೆ ₹36,000 ಎಲೆಕ್ಟ್ರಿಸಿಟಿ ಬಿಲ್ ಅನ್ನು ಉಳಿತಾಯ ಮಾಡಬಹದುದು.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು?
- ಅರ್ಜಿದಾರರು ಕಡ್ಡಾಯವಾಗಿ ಭಾರತದ ಪ್ರಜೆಯಾಗಿರಬೇಕು.
- ಅರ್ಜಿದಾರರ ಮನೆಯ ಮೇಲ್ಚಾವಣಿಯಲ್ಲಿ ಸೋಲಾರ್ ಪ್ಯಾನಲ್ (PM Surya Ghar Yojana) ಅಳವಡಿಸಲು ನೆರಳಿಲ್ಲದ ಜಾಗ ಇರಬೇಕು.
- ಸೋಲಾರ್ ಪ್ಯಾನಲ್ ಅಳವಡಿಸಲು ಅರ್ಜಿದಾರರು ಸ್ವಂತ ಮನೆಯನ್ನು ಹೊಂದಿರಬೇಕು.
- ಅರ್ಜಿದಾರರ ಹೆಸರಿನಲ್ಲಿ ಅಥವಾ ಅವರ ಕುಟುಂಬದ ಸದಸ್ಯರ ಹೆಸರಿನಲ್ಲಿ ಬೆಸ್ಕಾಂ ವಿದ್ಯುತ್ ಸಂಪರ್ಕ ಇರಬೇಕು.
- ಅರ್ಜಿದಾರರು ಈ ಹಿಂದೆ ಸರ್ಕಾರದ ಯಾವುದೇ ಸೋಲಾರ್ ಸಬ್ಸಿಡಿ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಂಡಿರಬಾರದು.
| ಇಲ್ಲಿ ಗಮನಿಸಿ: “ಅರ್ಜಿದಾರರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೆ, ಅಥವಾ ತಮ್ಮ ಕೈಗಾರಿಕಾ ಉದ್ದೇಶದ ಕಟ್ಟಡಗಳಿಗೆ ಈ ಯೋಜನೆಯಡಿಯಲ್ಲಿ ಸಬ್ಸಿಡಿ ಸೌಲಭ್ಯವನ್ನು ಪಡೆಯಲು ಅರ್ಹರಲ್ಲ.” |
ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾವೆಲ್ಲ ಅಗತ್ಯ ದಾಖಲೆಗಳು ಬೇಕಾಗುತ್ತದೆ?
- ಅರ್ಜಿದಾರರ ಆಧಾರ್ ಕಾರ್ಡ್
- ಇತ್ತೀಚಿನ ಎಲೆಕ್ಟ್ರಿಸಿಟಿ ಬಿಲ್
- ವಾಸಸ್ಥಳ ಪುರಾವೆ
- ಬ್ಯಾಂಕ್ ಪಾಸ್ ಬುಕ್ ಪ್ರತಿ
ಹಾಗೂ ಇತರೆ ಅಗತ್ಯ ದಾಖಲೆಗಳು
ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ?
ಫಲಾನುಭವಿಗಳು ಈ ಒಂದು ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಬೇಕಾದರೆ ಮೊದಲು ಅಧಿಕೃತ ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಂಡು, ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ಅಧಿಕೃತ ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಳ್ಳುವುದು ಹೇಗೆ?
- ಅರ್ಹ ಫಲಾನುಭವಿಗಳು https://pmsuryaghar.gov.in/ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
- ಮೇಲ್ಚಾವಣಿ ಸೌರ ಶಕ್ತಿಗಾಗಿ ಅರ್ಜಿ ಸಲ್ಲಿಸಿ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ರಾಜ್ಯ ಹಾಗೂ ವಿದ್ಯುತ್ ವಿಸ್ತರಣಾ ಕಂಪನಿಯನ್ನು ಆಯ್ಕೆಮಾಡಿ.
- ನಂತರ ನಿಮ್ಮ ವಿದ್ಯುತ್ ಬಿಲ್ ನಲ್ಲಿ ಇರುವ ಕಸ್ಟಮರ್ ಅಕೌಂಟ್ ಐಡಿ ಹಾಗೂ ಫೋನ್ ನಂಬರ್ ಅನ್ನು ನಮೂದಿಸಿ ನೋಂದಣಿ ಪೂರ್ಣಗೊಳಿಸಿ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
- ನೋಂದಣಿ ಪೂರ್ಣಗೊಂಡ ನಂತರ, ಲಾಗಿನ್ ಆಗಿ.
- ಅರ್ಜಿ ನಮೂನೆಯಯ ಮೇಲೆ ಕ್ಲಿಕ್ ಮಾಡಿ.
- ಅರ್ಜಿ ನಮೂನೆಯಲ್ಲಿರುವ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಿ.
ಅಂತಿಮ ತೀರ್ಮಾನ:
ಕೇಂದ್ರ ಸರ್ಕಾರವು ಭಾರತದ ಪ್ರಜೆಗಳಿಗೆ ತಮ್ಮ ತಮ್ಮ ಮನೆಯಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಿಕೊಳ್ಳಲು ಪಿಎಂ ಸೂರ್ಯ ಘರ್: ಮುಫ್ಟ್ ಬಿಜಿಲಿ (PM Surya Ghar Yojana) ಯೋಜನೆಯಡಿಯಲ್ಲಿ ಸಬ್ಸಿಡಿ ಸಹಾಯಧನವನ್ನು ನೀಡುತ್ತಿದ್ದು, ಈ ಯೋಜನೆಯಡಿಯಲ್ಲಿ ನೀವೇನಾದರೂ ಲಾಭವನ್ನು ಪಡೆದುಕೊಂಡರೆ ದೊಡ್ಡ ಹೊರೆಯಾಗಿರುವ ಎಲೆಕ್ಟ್ರಿಸಿಟಿ ಬಿಲ್ ಅನ್ನು ಕಡಿಮೆ ಮಾಡಬಹುದು ಹಾಗೂ ಸೋಲಾರ್ ಪ್ಯಾನಲ್ ಅಳವಡಿಸುವುದರಿಂದ ಮನೆ ಬಳಕೆಯ ನಂತರ ಉಳಿದ ವಿದ್ಯುತ್ ಅನ್ನು ಬೆಸ್ಕಾಂ ಗೆ ಮಾರಾಟ ಮಾಡುವುದರಿಂದ ಹೆಚ್ಚಿನ ಆದಾಯವನ್ನು ಗಳಿಸಬಹುದಾಗಿದೆ.
ಇತರೆ ಯೋಜನೆಯ ಪ್ರಮುಖ ಲಿಂಕುಗಳು:
- ವಾಹನ ಸವಾರರೇ ಎಚ್ಚರಿಕೆ! ಒನ್-ವೇ ಉಲ್ಲಂಘನೆ ಮಾಡಿದರೆ DL ರದ್ದು ಖಚಿತ!
- ಇನ್ನು ವಿದ್ಯುತ್ ಸಮಸ್ಯೆಗೆ ಓಡಾಟ ಬೇಡ! ವಾಟ್ಸಾಪ್ಗೆ ಫೋಟೋ ಕಳುಹಿಸಿದ್ರೆ – ತಕ್ಷಣ ಪರಿಹಾರ!
- ₹20 ಲಕ್ಷ ಶೂರಿಟಿ ಇಲ್ಲದೆ ಸಿಗತ್ತೆ! RBI ಗುಡ್ ನ್ಯೂಸ್!
- ₹30 ಕೋಟಿ ಹೂಡಿಕೆ! ಸಾವಿರಾರು ಉದ್ಯೋಗಾವಕಾಶ!

