MGNREGA : ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದೊಂದಿಗೆ ಮಹಿಳೆಯರಿಗೆ ಮತ್ತು ಗ್ರಾಮೀಣ ಭಾಗದ ಜನಸಾಮಾನ್ಯರಿಗೆ ಸಿಕ್ಕೇ ಬಿಟ್ಟು ನೋಡಿ ಬಹುದೊಡ್ಡ ಸಹಾಯಧನದ ಮೊತ್ತ!. (MGNREGA) ಯಾವ ಯೋಜನೆ ? ಎಷ್ಟು ಸಹಾಯಧನ ? ಅರ್ಜಿ ಸಲ್ಲಿಸುವುದಾದರೂ ಹೇಗೆ ? ಎನ್ನುವ ಆತುರ ನಿಮ್ಮಲ್ಲಿ ಇದ್ದರೆ ಕೆಳಗೆ ಸಂಪೂರ್ಣವಾದ ಮಾಹಿತಿಯನ್ನ ಆದಷ್ಟು ಬೇಗ ಓದಿ ತಿಳಿಯಿರಿ.
MGNREGA Scheme In Kannada
ಎರಡು ಸರ್ಕಾರಗಳ ಜಂಟಿ ಅನುಷ್ಠಾನದೊಂದಿಗೆ ನರೇಗಾ ಯೋಜನೆ (MGNREGA) ಅಡಿಯಲ್ಲಿ ಮಹಿಳೆಯರಿಗೆ ಮತ್ತೆ ಗ್ರಾಮೀಣ ಭಾಗದ ಜನಸಾಮಾನ್ಯರಿಗೆ ಕೋಳಿ ಶೆಡ್ ನಿರ್ಮಾಣಕ್ಕೆ ಸುಮಾರು ₹60,000 ಸಹಾಯಧನ ಕೊಡಲು 2026ರ ಹೊಚ್ಚಹೊಸ ಆನ್ಲೈನ್ ಅಪ್ಲಿಕೇಶನ್ ಆರಂಭವಾಗಿದ್ದು, ಆಸಕ್ತ ಹಾಗೂ ಅರ್ಹ ಗ್ರಾಮೀಣ ಭಾಗದ ಅಭ್ಯರ್ಥಿಗಳು ಸರ್ಕಾರ ನೀಡಲಾದ ಅಂತಿಮ ಗಡುವಿನೊಳಗೆ ಅರ್ಜಿಯನ್ನು ಸಲ್ಲಿಸುವುದು ಉತ್ತಮ.
ಮುಖ್ಯವಾಗಿ 2026 ನೇ ಸಾಲಿನಲ್ಲಿ ಇದೇ ಮೊದಲ ಬಾರಿ ಅಂದರೆ ಫೆಬ್ರವರಿ ತಿಂಗಳಲ್ಲಿ ಆನ್ಲೈನ್ ಅಪ್ಲಿಕೇಶನ್ ಆರಂಭಿಸಿರುವಂತದ್ದು ಹಾಗೆ ಈ ಯೋಜನೆ ಅಡಿಯಲ್ಲಿ ಅತಿ ಹೆಚ್ಚಿನ ಲಾಭವನ್ನ ಅಂದರೆ ಪ್ರಾಮುಖ್ಯತೆಯನ್ನ ಮಹಿಳೆಯರಿಗೆ ಸರ್ಕಾರ ಕೊಟ್ಟಿದೆ.
MGNREGA : ಮಹಿಳೆಯರು ಮನೆಯಲ್ಲಿಯೇ ಕೋಳಿ ಸಾಕಾಣಿಕೆಯ ಮುಖಾಂತರ ಆದಾಯವನ್ನು ಗಳಿಸಬೇಕು ಹಾಗೆ ಗ್ರಾಮೀಣ ಭಾಗದಲ್ಲಿ ಇರುವ ರೈತರ ಮಕ್ಕಳು ಅಥವಾ ರೈತರು ಇನ್ನಿತರೆ ಕೃಷಿ ಜೊತೆಗೆ ಕೋಳಿ ಸಾಕಾಣಿಕೆಯ ಕೃಷಿಯನ್ನು ಆರಂಭಿಸಿ ಹೆಚ್ಚಿನ ಆದಾಯವನ್ನು ಗಳಿಸಬೇಕೆನ್ನುವ ಉದ್ದೇಶದಿಂದ ಸರ್ಕಾರ ಯೋಜನೆಯನ್ನ ಅನುಷ್ಠಾನ ಗೊಳಿಸಿರುವಂತದ್ದು.
ಏನಿದು ನರೇಗಾ ಯೋಜನೆ (MGNREGA) ? ಯಾವಾಗ ಜಾರಿಯಾಗಿದ್ದು ?
ಆತ್ಮೀಯರೇ ನಿಮಗೆಷ್ಟು ಗೊತ್ತಿದೆ ಈ ನರೇಗಾ ಯೋಜನೆಯ ಬಗ್ಗೆ, ಯಾವಾಗಲಾದರೂ ಈ ಯೋಚನೆಯ ಲಾಭವನ್ನು ಪಡೆದಿದ್ದೀರ ?
“ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (MGNREGA) ಏನೆಂದು ತಿಳಿಯದೆ ಇದ್ದರೆ ಬೇಸರವಾಗುವುದು ಬೇಡ ಇಂದೇ ತಿಳಿಯುವ ಪ್ರಯತ್ನ ಮಾಡಿ. ಏಕೆಂದರೆ ಸರ್ಕಾರ ನಿಮಗಾಗಿ ಬರೋಬ್ಬರಿ 60,000 ಹಣವನ್ನ ಕೊಡುತ್ತಾ ಬಂದಿದೆ ಹಾಗಾಗಿ ಈ ಯೋಜನೆಯ ಬಗ್ಗೆ ಅರಿವು ನಿಮಗೆ ಖಂಡಿತವಾಗಿಯೂ ಇರಲೇಬೇಕು”.
ನರೇಗಾ ಯೋಜನೆ ಅಡಿಯಲ್ಲಿ ಕೋಳಿ ಶೆಡ್ ಮಾಡಲು ಗ್ರಾಮೀಣ ಮಹಿಳೆಯರಿಗೆ ಮತ್ತು ರೈತರಿಗೆ ಸ್ವಂತ ಉದ್ಯೋಗ ಮಾಡಲು ಸರ್ಕಾರ(MGNREGA) ನೀಡಿರುವ ಉಚಿತವಾದ ಬಹುದೊಡ್ಡ ಕೊಡುಗೆಯಾಗಿರುತ್ತದೆ. “ನಿಮ್ಮ ಜಮೀನಿನಲ್ಲಿ ಸುಮಾರು 150 ರಿಂದ 200 ಚದುರ ಅಡಿ ಶಡ್ ಕಟ್ಟಲು ಸರ್ಕಾರವೇ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತದೆ”.
ಕೇಂದ್ರ ಸರ್ಕಾರದ ಈ ನರೇಗಾ ಯೋಜನೆ ಆರಂಭವಾಗಿದ್ದು ಸುಮಾರು 2006ರಲ್ಲಿ ಆದರೆ ಕೋಳಿ ಶೆಡ್ ಗಳಂತಹ ವೈಯಕ್ತಿಕ “ಆಸ್ತಿ ಸೃಜನೇ”(Individual Asset Creation) ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ಸಿಕ್ಕಿದ್ದು 2014 ಮತ್ತು 15ರ ನಂತರ. ಕರ್ನಾಟಕ ಸರ್ಕಾರ ಪಶುಪಾಲನ ಇಲಾಖೆ ಮತ್ತು ಗ್ರಾಮೀಣ ಅಭಿವೃದ್ಧಿ ಇಲಾಖೆಗಳ ಅನ್ವಯದೊಂದಿಗೆ ಈ ಯೋಜನೆಗಳು ಪ್ರತಿ ವರ್ಷವೂ ಚಾಲ್ತಿಯಲ್ಲಿರುತ್ತದೆ. ಹಾಗೆ ಪ್ರಸ್ತುತ 2025 26ನೇ ಸಾಲಿನ (MGNREGA) ಆಯವ್ಯಯದ ಅನ್ವಯ ಮತ್ತು ಹೆಚ್ಚಿನ ರೈತರಿಗೆ ಹೊಸ ಉದ್ಯೋಗ ನೀಡಲು ಈ ಯೋಜನೆಯನ್ನು ವಿಸ್ತರಣೆ ಮಾಡಲಾಗಿದೆ.
ನರೇಗಾ (MGNREGA) ಕೋಳಿ ಶೆಡ್ ಯೋಜನೆ – 2026ರ ಸಮಗ್ರ ನೋಟ :-
| ವರ್ಗ | ಪ್ರಮುಖ ವಿವರಗಳು | ವಿಶೇಷ ಸೂಚನೆ |
|---|---|---|
| ಯೋಜನೆಯ ಸ್ವರೂಪ | ವೈಯಕ್ತಿಕ ಆಸ್ತಿ ಸೃಜನೆ (Individual Asset) | ಇದು ಉಚಿತ ಸಹಾಯಧನ, ಸಾಲವಲ್ಲ. |
| ಆರ್ಥಿಕ ನೆರವು | ಒಟ್ಟು 60,000 ವರೆಗೆ | ಜಿಲ್ಲಾವಾರು ಕೂಲಿ ದರಕ್ಕೆ ಅನುಗುಣವಾಗಿ ವ್ಯತ್ಯಾಸವಾಗುತ್ತದೆ. |
| ಹಣ ಪಾವತಿ ಹಂತ | ಮೂರು ಹಂತ (ಪ್ರಾರಂಭ, ಮಧ್ಯಂತರ, ಅಂತಿಮ) | ನೇರವಾಗಿ ಅರ್ಜಿದಾರರ ಬ್ಯಾಂಕ್ ಖಾತೆಗೆ (DBT). |
| ಶೆಡ್ ಸಾಮರ್ಥ್ಯ | 100 ರಿಂದ 200 ನಾಟಿ ಕೋಳಿಗಳ ಸಾಕಾಣಿಕೆ | ಸ್ಥಳೀಯ ಹವಾಮಾನಕ್ಕೆ ತಕ್ಕಂತೆ ವಿನ್ಯಾಸವಿರಲಿ. |
| ಯಾರಿಗೆ ಆದ್ಯತೆ? | ಮಹಿಳಾ ರೈತರು ಮತ್ತು ಸಣ್ಣ ಹಿಡುವಳಿದಾರರು | ಮನೆಯ ಮಹಿಳೆಯ ಹೆಸರಿನಲ್ಲಿ ಅರ್ಜಿ ಸಲ್ಲಿಸುವುದು ಉತ್ತಮ. |
| ತಾಂತ್ರಿಕ ನೆರವು | ಪಶು ವೈದ್ಯಾಧಿಕಾರಿ ಮತ್ತು ಪಂಚಾಯತ್ ಇಂಜಿನಿಯರ್ | ಇವರಿಂದ ಸ್ಥಳ ಪರಿಶೀಲನೆ ಕಡ್ಡಾಯ. |
ಯೋಜನೆ ಜಾರಿ ಮಾಡಿರುವುದು ಸರ್ಕಾರ ಯಾವ ಉದ್ದೇಶಕ್ಕಾಗಿ :-
ಅಬಬ್ಬಾ! ಈ ಯೋಜನೆಯು ಗ್ರಾಮೀಣ ಭಾಗದ ಆರ್ಥಿಕತೆಯ ಚಿತ್ರಣವನ್ನೇ ಬದಲಿಸುವ ಪ್ರಮುಖ ಗುರಿಯನ್ನ ಹೊಂದಿದೆ.
- ರೈತರು ಕೇವಲ ಬೆಳೆ ಬೇಸಾಯಗಳ ಆಧಾರಿತ ಕೃಷಿಯನ್ನ ನಂಬಿ ಬದುಕದೆ ವರ್ಷಪೂರ್ತಿ ಒಂದು ರೀತಿಯಲ್ಲಿ ಸ್ಥಿರವಾದ ಆದಾಯ ತರುವ ನಾಟಿ ಕೋಳಿ ಸಾಕಾಣಿಕೆಯಂತಹ ಕಸುಬಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಮಾಡುವುದು ಈ ಯೋಜನೆಯಾ ಪ್ರಮುಖ ಗುರಿಯಾಗಿದೆ.
- ಸಣ್ಣ ಮತ್ತು ಅತಿ ಸಣ್ಣ ರೈತರು ಆರ್ಥಿಕವಾಗಿ ಸದೃಢರಾಗುವ ಜೊತೆಗೆ ಗ್ರಾಮೀಣ ಕುಟುಂಬಗಳಿಗೆ ಪ್ರೋಟೀನ್ ಯುಕ್ತ ಮೊಟ್ಟೆ, ಮಾಂಸ ಪೌಷ್ಟಿಕತೆಯನ್ನು ಹೆಚ್ಚಿಸುವುದು ಯೋಜನೆಯ ಉದ್ದೇಶ.
- ಕೇವಲ ಹಣಕಾಸಿನ ನೆರವು ನೀಡುವುದಕ್ಕಿಂತ ಹೆಚ್ಚಾಗಿ ರೈತರ ಜಮೀನಿನಲ್ಲಿ ಒಂದು ಸುಸ್ಸರ್ಜಿತವಾದ ಕೋಳಿ ಎಂಬ ಕಾಯಂ ಆಸ್ತಿಯನ್ನು ಹುಟ್ಟಿ ಹಾಕುವುದು ಹಾಗೆ ಇದು ರೈತರು ದೀರ್ಘಕಾಲದವರೆಗೆ ಹೊಸ ಉದ್ಯೋಗವನ್ನು ಮುಂದುವರಿಸಲು ಅವಕಾಶ ಯೋಜನೆಯಿಂದ ಸಿಕ್ಕಂತಾಗುತ್ತದೆ.
- ಇಂದಿನ ದಿನಗಳಲ್ಲಿ ಹಳ್ಳಿಯಲ್ಲಿರುವಂತಹ ಯುವಕರು ತಮ್ಮ ರೈತಪಿ ಕೆಲಸವನ್ನು ಬಿಟ್ಟು ಉದ್ಯೋಗವನ್ನು ಹುಡುಕಿ, ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿರುವುದನ್ನು ಮನಗಂಡ ಸರ್ಕಾರ ಇದನ್ನ ತಪ್ಪಿಸಲೇಬೇಕೆಂದು ಸ್ವಂತ ಜಮೀನಿನಲ್ಲಿಯೇ ಲಾಭದಾಯಕ ಉದ್ಯೋಗವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ.
- ಸರ್ಕಾರವು ನರೇಗಾ ಯೋಜನೆ (MGNREGA) ಅಡಿ ಕೋಳಿ ಸಾಕಾಣಿಕೆಗೆ ಮಾಡಲು ಶೆಡ್ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆಯನ್ನು ಮಹಿಳೆಯರಿಗೆ ಕೊಟ್ಟಿದೆ. ಯಾಕೆಂದರೆ ಮಹಿಳೆಯರು ಮನೆ ಕೆಲಸದ ಜೊತೆಗೆ ತಮ್ಮ ಆದಾಯದ ಮೂಲವನ್ನು ಗಳಿಸುವಂತೆ ಉತ್ತೇಜಿಸುವುದು ಸರ್ಕಾರದ ಉದ್ದೇಶವಾಗಿದೆ.
ಕೋಳಿ ಶೆಡ್ ಮಾಡೋಕೆ ಎಷ್ಟು ಸಹಾಯಧನದ ಮೊತ್ತ ಸಿಗುತ್ತದೆ ಗೊತ್ತಾ ?
ಕೋಳಿ ಶೆಡ್ ನಿರ್ಮಾಣಕ್ಕೆ ಒಟ್ಟು ಸರ್ಕಾರದಿಂದ ರೂ 60,000 ವರೆಗೆ ಸಹಾಯಧನ ದೊರೆಯುತ್ತದೆ ಈ ಮೊತ್ತವನ್ನ ಎರಡು ಭಾಗಗಳಾಗಿಯೂ ಸರ್ಕಾರ ಇದುವರೆಗೂ ನೀಡುತ್ತಾ ಬಂದಿದೆ. ಹಾಗೆ ಇದೀಗ 2026ರಲ್ಲಿ ಹೊಸದಾಗಿ ಅರ್ಜಿ ಸಲ್ಲಿಸುವ ಅವಕಾಶ ದೊಂದಿಗೆ ನರೇಗಾ ಯೋಜನೆ ಬಂದಿದೆ.
ಸರ್ಕಾರದ ಎರಡು ವಿಧಾನಗಳನ್ನು ಈ ಕೆಳಗೆ ನೋಡಿ :
- ಶರ್ಟ್ ನಿರ್ಮಾಣಕ್ಕೆ ಬೇಕಾಗುವ ಮಾನವ ದಿನಗೂಲಿ ಗಳ ಕೆಲಸಕ್ಕೆ ನೇರವಾಗಿ ಅರ್ಜಿದಾರರ ಬ್ಯಾಂಕ್ ಖಾತೆಗೆ ಕೂಲಿ ಹಣವು ವರ್ಗಾವಣೆ ಆಗುತ್ತದೆ.
- ನಂತರ ಷಡ್ ನಿರ್ಮಾಣ ಮಾಡಲು ಸಿಮೆಂಟ್, ಶೀಟ್, ಮರಳು, ಇನ್ನಿತರ ಸಾಮಗ್ರಿಗಳ ಖರೀದಿಗಾಗಿ ಹಣವನ್ನ ವರ್ಗಾವಣೆ ಮಾಡಲಾಗುತ್ತದೆ.
ಯಾರಿಗೆ ಯೋಜನೆಯ ಸಂಪೂರ್ಣ ಲಾಭ ಸಿಗುತ್ತೆ ? ನೀವು ತಿಳಿಯಲೇಬೇಕಾದ ಅಂಶ :-
- ಕಡ್ಡಾಯವಾಗಿ ನರೇಗಾ ಯೋಜನೆಯ ಜಾಬ್ ಕಾರ್ಡ್ ಹೊಂದಿದವರು ಈ ಯೋಜನೆಯ ಲಾಭವನ್ನು ಪಡೆಯಲು ಅರ್ಹರಾಗಿರುತ್ತಾರೆ.
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೆ ಬಿಪಿಎಲ್ ಕಾರ್ಡ್ ಹೊಂದಿರುವವರು ಮತ್ತು ಮಹಿಳಾ ಫಲಾನುಭವಿಗಳು ಈ ಯೋಜನೆ ಅಡಿಯಲ್ಲಿ ವಿಶೇಷವಾದ ಆದ್ಯತೆಯನ್ನ ಹೊಂದಿರುತ್ತಾರೆ.
- ಗ್ರಾಮೀಣ ಭಾಗದಲ್ಲಿನ ರೈತರು ಮತ್ತು ಅತಿ ಸಣ್ಣ ರೈತರು ಹಾಗೆ ಕೃಷಿ ಕಾರ್ಮಿಕರು ಅರ್ಜಿ ಸಲ್ಲಿಸಲು ಅರ್ಹ ವ್ಯಕ್ತಿಗಳು.
- ಕರ್ನಾಟಕ ರಾಜ್ಯದ ಕೆಲವು ಭಾಗದಲ್ಲಿ ಮಾತ್ರ ಮಹಿಳಾ ಸ್ವಸಹಾಯ ಗುಂಪಿನ ಸದಸ್ಯರು ಈ ಯೋಜನೆಯ ಲಾಭವನ್ನು ಪಡೆಯಲು ಅರ್ಹರಾಗಿರುತ್ತಾರೆ.
ಅರ್ಜಿದಾರರಿಗೆ ಸರ್ಕಾರ ನೀಡಿರುವ ಷರತ್ತುಗಳು (Conditions/Terms/Clauses):-
ಯಾವುದೇ ಸರ್ಕಾರವಿರಲಿ ಒಂದು ಯೋಜನೆಯನ್ನ ಅನುಷ್ಠಾನಕ್ಕೆ ತೊಂದರೆ ಕೆಲವೊಂದು ಶರತ್ತುಗಳನ್ನು ಸಹ ನೀಡಿರುತ್ತದೆ. ಅದೇ ರೀತಿ ಈ ನರೇಗಾ ಯೋಜನೆ ಅಡಿಯಲ್ಲಿಯೂ ಸಹ ಕೋಳಿ ಶೆಡ್ ನಿರ್ಮಾಣಕ್ಕೆ ನೀವು ಸಹಾಯಧನ ಪಡೆಯಲು ಈ ಕೆಳಗೆ ಕೊಡಲಾದ ಶರತ್ತುಗಳಿಗೆ ಒಳಗಾಗಿರಬೇಕು.
- MGNREGA ಜಾಬ್ ಕಾರ್ಡ್ ಕಡ್ಡಾಯ
- ಕೋಳಿ ಶೆಡ್ ನಿರ್ಮಿಸಲು ಸ್ವಂತ ಜಮೀನು ಇರಬೇಕು (RTC/ಪಹಣಿ ಅಗತ್ಯ)
- ಅರ್ಜಿದಾರರ ಬ್ಯಾಂಕ್ ಖಾತೆ ಇರಬೇಕು
- ಬ್ಯಾಂಕ್ ಖಾತೆ ಆಧಾರ್‌ಗೆ ಲಿಂಕ್ ಆಗಿರಬೇಕು (DBTಗಾಗಿ)
- ಶೆಡ್ ಅನ್ನು ಕೋಳಿ ಸಾಕಾಣಿಕೆಗಾಗಿ ಮಾತ್ರ ಬಳಸಬೇಕು
- ಜಾಬ್ ಕಾರ್ಡ್ ಸಕ್ರಿಯವಾಗಿರಬೇಕು
- SC / ST, BPL, ಮಹಿಳೆಯರು, ಸಣ್ಣ ರೈತರಿಗೆ ಆದ್ಯತೆ
- ಜಮೀನು ವಿವಾದರಹಿತವಾಗಿರಬೇಕು
- ಪಂಚಾಯತ್ ಅನುಮೋದನೆ ನಂತರವೇ ನಿರ್ಮಾಣ ಪ್ರಾರಂಭಿಸಬೇಕು
- ಹಿಂದೆ ಇದೇ ಯೋಜನೆ ಅಡಿಯಲ್ಲಿ ಲಾಭ ಪಡೆದಿರಬಾರದು
- ಪಶುವೈದ್ಯಾಧಿಕಾರಿ / ಪಂಚಾಯತ್ ಇಂಜಿನಿಯರ್ ಸ್ಥಳ ಪರಿಶೀಲನೆ ಕಡ್ಡಾಯ
- ಸರ್ಕಾರ ಸೂಚಿಸಿದ ಗಾತ್ರ (ಸುಮಾರು 150–200 ಚದರ ಅಡಿ) ಪಾಲಿಸಬೇಕು
- ಅರ್ಜಿದಾರರು ಗ್ರಾಮೀಣ ಪ್ರದೇಶದ ನಿವಾಸಿ ಆಗಿರಬೇಕು
ನಿರ್ಮಾಣವಾಗುವ ಕೋಳಿ ಷಡ್ ನ ಉದ್ದ ಮತ್ತು ಅಗಲದ ವಿವರ :-
- ಶೆಡ್ ಸೈಜ್ ನಿರ್ಮಾಣವು ಸುಮಾರು 150 ರಿಂದ 200 ಚದರ ಅಡಿ ಇರಬೇಕು
ಅಂದರೆ ಉದಾಹರಣೆಯ ಮೂಲಕ ಕೆಳಗೆ ತಿಳಿಸಲಾಗಿದೆ :
- 10 ಅಡಿ ಉದ್ದ × 15 ಅಡಿ ಅಗಲ ಅಥವಾ 10 ಅಡಿ ಉದ್ದ × 20 ಅಡಿ ಅಗಲ ಅಂದರೆ ನಿಮ್ಮ ಮನೆಯ ಒಂದು ದೊಡ್ಡ ಕೊಠಡಿಯಷ್ಟೇ ಜಾಗ ಬೇಕು.
- ಸರ್ಕಾರದ 60,000 ಸಹಾಯಧನದಲ್ಲಿ ನೀವು ಕೋಳಿ ಶಬನ ನಿರ್ಮಾಣ ಮಾಡಿ ಸುಮಾರು 100 ರಿಂದ 200 ಕೋಳಿಯನ್ನು ಆರಾಮವಾಗಿ ಸಾಕಿ ಹೆಚ್ಚಿನ ಆದಾಯವನ್ನು ಗಳಿಸಬಹುದು. ಈ ಆದಾಯವು ಕೇವಲ ತಿಂಗಳಿಗೆ ಒಂದು ಎರಡು ವರ್ಷಕ್ಕೆ ಸೀಮಿತ ಇರುವುದಿಲ್ಲ, “ದೀರ್ಘಾವಧಿಯ ಆದಾಯವಾಗಿರುವುದು ಹಾಗೆಯೇ ಹಳ್ಳಿ ಜನರಿಗಂತು ಹೇಳಿ ಮಾಡಿಸಿಟ್ಟಿರುವ ಯೋಜನೆ ಇದಾಗಿದೆ”.
ಯೋಜನೆಯಿಂದ ಸಿಗುವ ಪ್ರಯೋಜನ (Benefit) :-
- ಸರ್ಕಾರದ ಮರಗ ಯೋಜನೆ ಅಡಿಯಲ್ಲಿ ಕೋಳಿ ಶೆಡ್ ಮಾಡುವವರಿಗೆ ಸುಮಾರು 60,000 ಇದು ಯಾವುದೇ ರೀತಿಯ ಸಾಲವಲ್ಲ ಹಾಗೆಯೇ ಹಿಂತಿರುಗಿಸಬೇಕಲ್ಲ ಎಂದು ಚಿಂತೆ ಅಗತ್ಯವಿಲ್ಲ.
- ರೈತರು ಹಾಗೆ ಹಿಂದುಳಿದ ವರ್ಗದವರು ಮತ್ತು ಮಹಿಳೆಯರು, ಯುವಕರು ಮನೆಯಲ್ಲಿಯೇ ಕುಳಿತು ಸ್ವಂತವಾಗಿ ಒಂದು ಉದ್ಯೋಗವನ್ನು ತಮ್ಮ ಮನೆಯಲ್ಲಿಯೇ ಆರಂಭಿಸಬಹುದು.
- ಈ ಶರ್ಟ್ ನಿರ್ಮಾಣಕ್ಕೆ ಸರ್ಕಾರದಿಂದ ಬರುವ ಸಹಾಯಧನವು ಯಾವುದೇ ಮಧ್ಯವರ್ತಿಗಳ ಪಾಲಾಗದೆ ನೇರವಾಗಿ ಅರ್ಜಿದಾರರ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುತ್ತದೆ.
- ಸುಮಾರು 100 ರಿಂದ 200 ಕೋಳಿಗಳನ್ನು ಸರ್ಕಾರ ಕೊಡುವ ಸಹಾಯಧನದಿಂದ ಶಡ್ ನಿರ್ಮಿಸಿ ಪ್ರತಿ ತಿಂಗಳು ಹೆಚ್ಚಿನ ಆದಾಯವನ್ನು ಗಳಿಸಬಹುದು ಅಷ್ಟೇ ಅಲ್ಲದೆ ಕೇವಲ ತಿಂಗಳ ಆದಾಯ ಇದಾಗಿರುವುದಿಲ್ಲ ವರ್ಷವಿಡಿ ದೀರ್ಘಕಾಲಿನ ಆದಾಯವಾಗಿರುತ್ತದೆ.
- ಮಹಿಳೆಯರಿಗೆ ಸರ್ಕಾರದಿಂದ ಹೆಚ್ಚಿನ ಆದ್ಯತೆ ಇರುವುದರ ಜೊತೆಗೆ ಮನೆ ಕೆಲಸದ ಜೊತೆಗೆ ಈ ಹೊಸ ಉದ್ಯೋಗವನ್ನು ಆರಂಭಿಸಿ ಹೆಚ್ಚಿನ ಆದಾಯವನ್ನು ಗಳಿಸಬಹುದು
- ಶೆಡ್ ನಿಮ್ಮ ಜಮೀನಿನಲ್ಲಿ ಶಾಶ್ವತ ಆಸ್ತಿ ಆಗಿ ಉಳಿಯುತ್ತದೆ
ಅಗತ್ಯ ದಾಖಲೆಗಳು :-
- ಜಮೀನು ದಾಖಲೆ (RTC / ಪಹಣಿ)
- MGNREGA ಜಾಬ್ ಕಾರ್ಡ್ (ಕಡ್ಡಾಯ)
- ರೇಷನ್ ಕಾರ್ಡ್ (BPL ಇದ್ದರೆ ಉತ್ತಮ)
- ಬ್ಯಾಂಕ್ ಪಾಸ್ ಬುಕ್ ನಕಲು (ಆಧಾರ್ ಲಿಂಕ್ ಆಗಿರಬೇಕು)
- ಜಾತಿ ಪ್ರಮಾಣ ಪತ್ರ (SC/ST ಇದ್ದರೆ)
- ಪಾಸ್‌ಪೋರ್ಟ್ ಸೈಸ್ ಫೋಟೋ
- ಮೊಬೈಲ್ ನಂಬರ್ (ಸಂಪರ್ಕಕ್ಕಾಗಿ)
- ಆಧಾರ್ ಕಾರ್ಡ್
ನರೇಗಾ ಕೋಳಿ ಶೆಡ್ ಯೋಜನೆ – 2026, ಅರ್ಜಿ ಸಲ್ಲಿಸುವ ವಿಧಾನ :-
ಸರ್ಕಾರ ಗ್ರಾಮೀಣ ಭಾಗದವರಿಗೆ ಅರ್ಜಿ ಸಲ್ಲಿಸಲು ಅನುಕೂಲವಾಗಲೆಂದು ಆನ್ಲೈನ್ ಮತ್ತು ಆಫ್ಲೈನ್ ಎರಡು ವಿಭಾಗದಲ್ಲೂ ಅರ್ಜಿ ಸಲ್ಲಿಸುವ ಅವಕಾಶವನ್ನು ಕಲ್ಪಿಸಿದೆ, ಹಾಗಿದ್ರೆ ಹೇಗೆ ಅರ್ಜಿ ಸಲ್ಲಿಸೋದು ಈ ಕೆಳಗೆ ತಿಳಿತಾ ಹೋಗೋಣ.
ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ:
- ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮೊದಲು ಗ್ರಾಮ ಪಂಚಾಯತ್ ಅಥವಾ nrega.nic.in ವೆಬ್‌ಸೈಟ್ ಓಪನ್ ಮಾಡಿ.
- ನಿಮ್ಮ ಜಾಬ್ ಕಾರ್ಡ್ + ಆಧಾರ್ ಬಳಸಿ ಲಾಗಿನ್ ಆಗಬೇಕಾಗುತ್ತದೆ.
- ನಂತರದಲ್ಲಿ ಒಂದು ಅಪ್ಲಿಕೇಶನ್ ಓಪನ್ ಆಗುತ್ತೆ ಅಲ್ಲಿ ನಿಮ್ಮ ಹೆಸರು, ವಿಳಾಸ, ಜಾಬ್ ಕಾರ್ಡ್ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ.
- ಹಾಗೆ ಸರಿಯಾಗಿ ನಿನ್ನ ಜಮೀನಿನ ಆರ್ ಟಿ ಸಿ ನಮೂದಿಸುವುದರ ಜೊತೆಗೆ ಬ್ಯಾಂಕ್ ಖಾತೆ ವಿವರವನ್ನು ಅಂದರೆ ಐ ಎಫ್ ಐ ಸಿ ಮತ್ತು ಖಾತೆ ಸಂಖ್ಯೆಯನ್ನ ಸರಿಯಾಗಿ ಫಾರಂನಲ್ಲಿ ಭರ್ತಿ ಮಾಡಿ.
- ನಂತರದಲ್ಲಿ ಆಧಾರ್ ಕಾರ್ಡ್, ಪಾಸ್ಪೋರ್ಟ್ ಸೈಜ್ ಫೋಟೋ, ಜಾತಿ ಪ್ರಮಾಣ ಪತ್ರ ಅಥವಾ ಬಿಪಿಎಲ್ ಕಾರ್ಡ್ ಸ್ಕ್ಯಾನ್ ಮಾಡಿಟ್ಟುಕೊಂಡು ಅಗತ್ಯ ದಾಖಲೆಗಳೊಂದಿಗೆ ಅಪ್ಲೋಡ್ ಮಾಡಿ.
- ನೀವು ಕೋಳಿ ಶೆಡ್ ಅನ್ನು ನಿರ್ಮಿಸಲು ಗಾತ್ರ, ಕೋಳಿಗಳ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.
- ಮನೆಯಲ್ಲಿ ನೀವು ಬರ್ತಿ ಮಾಡಲಾದ ಎಲ್ಲಾ ಮಾಹಿತಿಗಳು ಸರಿ ಇದೆಯೇ ಎಂದು ಪರಿಶೀಲನೆ ನಡೆಸಿ ಸಬ್ಮಿಟ್ ಬಟನ್ ಮೇಲೆ ಪ್ರೆಸ್ ಮಾಡಿ.
- ತಿರುಗಿ ದಿನದಲ್ಲಿ ನಿಮ್ಮ ಅರ್ಜಿಯು ಅನುಮೋದನೆಗೊಂಡ ನಂತರ ನಿಮ್ಮ ಊರಿನ ಸ್ಥಳೀಯ ಅಧಿಕಾರಿಗಳು ಬಂದು ನಿರ್ಮಾಣ ಮಾಡುವ ಪರಿಶೀಲನೆ ಮಾಡುತ್ತಾರೆ, ನಂತರ ಹಣ ನೇರವಾಗಿ ಅರ್ಜಿದಾರರ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುತ್ತದೆ.
3 ಹಂತದಲ್ಲಿ ಹಣದ ವರ್ಗಾವಣೆ :
- ಮಾನವ ದಿನಗೂಲಿ, ಶೆಡ್ ಸಾಮಗ್ರಿ ಖರೀದಿ, ಶೆಡ್ ಪೂರ್ಣಗೊಂಡ ನಂತರ ಅಂತಿಮ ಪಾವತಿ
ಆಫ್ ಲೈನ್ ಅರ್ಜಿ ಸಲ್ಲಿಸಲು ನೀವು ಬಯಸಿದರೆ ಈ ವಿಧಾನವನ್ನು ಅನುಸರಿಸಿ :-
- ಗ್ರಾಮ ಪಂಚಾಯತ್ ಕಚೇರಿಗೆ ಭೇಟಿ ನೀಡಿ
- ಅರ್ಜಿಯ ಫಾರ್ಮ್ ತೋರಿಸಿಕೊಳ್ಳಿ ಅಥವಾ ಪಡೆಯಿರಿ
- ಹೆಸರು, ವಿಳಾಸ, ಜಾಬ್ ಕಾರ್ಡ್ ಸಂಖ್ಯೆ ಭರ್ತಿ ಮಾಡಿ
- ಜಮೀನು ದಾಖಲೆ (RTC / ಪಹಣಿ) ಜೊತೆ ಸಲ್ಲಿಸಿ
- ಬ್ಯಾಂಕ್ ಖಾತೆ ವಿವರ (IFSC, ಖಾತೆ ಸಂಖ್ಯೆ) ನೀಡಿರಿ
- ಅಗತ್ಯ ದಾಖಲೆಗಳು ಜೊತೆಗೆ ನೀಡಿ
- ಆಧಾರ್ ಕಾರ್ಡ್, ಪಾಸ್ಪೋರ್ಟ್ ಸೈಜ್ ಫೋಟೋ, ಜಾತಿ ಪ್ರಮಾಣ ಪತ್ರ / BPL ಕಾರ್ಡ್ (ಅವಶ್ಯಕರೆ)
- ಶೆಡ್ ಗಾತ್ರ ಮತ್ತು ಕೋಳಿಗಳ ಸಂಖ್ಯೆ ನಮೂದಿಸಿ
- ಪಂಚಾಯತ್ ಸಿಬ್ಬಂದಿ ನಿಮ್ಮ ಮಾಹಿತಿ ಪರಿಶೀಲಿಸುತ್ತಾರೆ ಹಾಗೆ ಪಶುವೈದ್ಯಾಧಿಕಾರಿ / ಪಂಚಾಯತ್ ಇಂಜಿನಿಯರ್ ಶೆಡ್ ಸ್ಥಳ ಪರಿಶೀಲನೆ ಮಾಡುತ್ತಾರೆ
- ನಂತರ ಅನುಮೋದನೆ ಸಿಕ್ಕಿ, ನೀವು ಷಡ್ ನಿರ್ಮಾಣ ಪ್ರಾರಂಭ ಮಾಡಬಹುದು
ನನ್ನ ಕೊನೆಯ ಮಾತು :-
| “ಸರ್ಕಾರದ ಸಹಾಯದಿಂದ ನಿಮ್ಮ ಜಮೀನಿನಲ್ಲಿ ಅಥವಾ ಮನೆಯ ಬಳಿಯೇ ಕೋಳಿ ಶೆಡ್ ಕಟ್ಟಿಸಿ, ಮಹಿಳೆಯರು ಮತ್ತು ಕುಟುಂಬದವರು ಮನೆಯಲ್ಲೇ ಸ್ವಂತ ಆದಾಯ ಗಳಿಸಬಹುದು. ₹60,000ವರೆಗೆ ಉಚಿತ ಸಹಾಯಧನ ಪಡೆದು 100–200 ಕೋಳಿಗಳನ್ನು ಸಾಕಿ, ಹಳ್ಳಿಯಲ್ಲೇ ಸುರಕ್ಷಿತ, ಸ್ಥಿರ ಉದ್ಯೋಗವನ್ನು ನಿಮ್ಮ ಕುಟುಂಬಕ್ಕೆ ಸೃಷ್ಟಿಸಿಕೊಳ್ಳಿ.” |
ಇತರೆ ಯೋಜನೆಯ ಪ್ರಮುಖ ಲಿಂಕುಗಳು:
- Traffic Rules Alert : ವಾಹನ ಸವಾರರೇ ಎಚ್ಚರಿಕೆ!
- PM Surya Ghar Yojana : ಉಚಿತ ವಿದ್ಯುತ್ ಜೊತೆಗೆ ₹78,000 ಸಬ್ಸಿಡಿ!
- BESCOM WhatsApp Service : ಇನ್ನು ವಿದ್ಯುತ್ ಸಮಸ್ಯೆಗೆ ಓಡಾಟ ಬೇಡ!


Shed
K. Melanahalli turuvekere taluk tumkur district
K . melanahalli turuvekere taluk tumkur district
ನಾನು ಕುರಿ ಶೆಡ್ ಮಾಡ್ಬೇಕು
ನಾನು ಕುರಿ ಶೆಡ್ ಮಾಡ್ಬೇಕು ೫೦ ಕುರಿ ಬೆಡ್ಬೇಕು