Top 10 Tourist Places : ಕರ್ನಾಟಕದ ಟಾಪ್ 10 ಅದ್ಭುತ ಸ್ಥಳಗಳು ! ಜೀವನದಲ್ಲಿ ಒಮ್ಮೆ ಆದ್ರೂ ನೀವು ನೋಡಲೇ ಬೇಕು!

top 10 tourist places in karnataka

ಕರ್ನಾಟಕದಲ್ಲಿ ಅತಿ ಅದ್ಭುತವಾದ 10 ಸ್ಥಳಗಳ (Top 10 Tourist Places) ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು ನೀವು ಜೀವನದಲ್ಲಿ ಒಂದು ಸಾರಿಯಾದರೂ ಇಲ್ಲಿ ವಿಸಿಟ್ ಮಾಡಲೇಬೇಕು ಅಷ್ಟು ಅದ್ಭುತವಾದ ಸ್ಥಳ ಇವುಗಳಾಗಿದ್ದು ಪುರಾತನ ಕಾಲದಿಂದಲೂ ಸಹ ಈ ಸ್ಥಳಗಳಿಗೆ ತುಂಬಾನೇ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ. ಹಾಗೂ ಇವು ಇತಿಹಾಸ ಪ್ರಸಿದ್ಧ ಸ್ಥಳಗಳಲ್ಲಿ ಒಂದಾಗಿವೆ.


Top 10 Tourist Places In Karnataka

ಹಾಗಾಗಿ ಈ ಸ್ಥಳಗಳ ಬಗ್ಗೆ ಈ ಕೆಳಗೆ ಸಂಪೂರ್ಣವಾದ ವಿವರವನ್ನು ನೀಡಲಾಗಿದ್ದು ಹತ್ತಿರದ ನಗರ ಸೇರಿದಂತೆ ಒಟ್ಟು ಎಷ್ಟು ಕಿಲೋಮೀಟರ್ ಆಗುತ್ತದೆ ಅನ್ನುವಂತ ಮಾಹಿತಿಯನ್ನು ಸಹ ನೀವು ನೋಡಬಹುದು ನೀವು ಹೊಸದಾಗಿ ಒಂದು ಟೂರಿಸ್ಟ್ ಪ್ಲಾನ್ ಮಾಡ್ತಾ ಇದ್ರೆ ಖಂಡಿತವಾಗಿಯೂ ಈ ಸ್ಥಳಗಳಿಗೆ ನೀವು ಭೇಟಿ ನೀಡಿ ಉತ್ತಮ ಅನುಭವವನ್ನು ಹಾಗೂ ಒಂದು ಒಳ್ಳೆಯ ಸಂಸ್ಕೃತಿಯ ಬಿಂಬಗಳನ್ನ ನೀವು ಅಳವಡಿಸಿಕೊಳ್ಳಬಹುದು.

ಕರ್ನಾಟಕದಲ್ಲಿ ಅತಿ ಅದ್ಭುತವಾದ 10 ಸ್ಥಳಗಳ ವಿವರಗಳು (Top 10 Tourist Places In Karnataka) :

ಕರ್ನಾಟಕದಲ್ಲಿ ಅತಿ ಅದ್ಭುತವಾದ 10 ಪ್ರವಾಸಿ ತಾಣಗಳ ಬಗ್ಗೆ ಈ ಕೆಳಗೆ ಹಂತ ಹಂತವಾದ ಮಾಹಿತಿಯನ್ನು ನೀಡಲಾಗಿದ್ದು ನೀವು ಸಹ ಹೊಸದಾಗಿ ಒಂದು ಟೂರಿಸ್ಟ್ ಪ್ಲಾನ್ ಮಾಡ್ತಾ ಇದ್ರೆ ಖಂಡಿತವಾಗಿಯೂ ಈ 10 ಸ್ಥಳಕ್ಕೆ ವಿಸಿಟ್ ಮಾಡಬಹುದು.

1.ಹಂಪಿ (Hampi)

ಹಂಪಿ (Hampi)
  • ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿರುವಂತ ಒಂದು ಅದ್ಭುತ ಸ್ಥಳ ಹಂಪಿ
  • ಇದು ವಿಜಯನಗರ ಸಾಮ್ರಾಜ್ಯದ ಘತ ವೈಭವವನ್ನು ಸಾರುವ ಅವಶೇಷಗಳಿಗೆ ಪ್ರಸಿದ್ಧವಾಗಿರುವಂತ ಒಂದು ಸುಂದರವಾದ ಸ್ಥಳ
  • ಇಲ್ಲಿ ಬೃಹತ್ ಬಂಡೆಗಳು ಸೇರಿದಂತೆ ಕಲ್ಲಿನ ರಥ ಮತ್ತು ವಿರೂಪಾಕ್ಷ ದೇವಾಲಯ ಪ್ರಮುಖ ಆಕರ್ಷಣೆಗಳು ಆಗಿದೆ
  • ಈ ಸ್ಥಳ ವಿಜಯನಗರ ಜಿಲ್ಲೆಯಲ್ಲಿದೆ
  • ಬೆಂಗಳೂರಿಂದ ಸುಮಾರು 340 ಕಿಲೋಮೀಟರ್ ದೂರದಲ್ಲಿದೆ
  • ತುಂಗಭದ್ರ ಡ್ಯಾಮ್ ಮತ್ತು ಆನೆಗೊಂದಿಯಿಂದ ಸುಮಾರು ಹದಿನೈದು ಕಿಲೋಮೀಟರ್ ಹತ್ತಿರದಲ್ಲಿದೆ
  • ಉತ್ತಮವಾದ ಪ್ರವಾಸಿ ಅನುಭವವನ್ನು ಪಡೆದುಕೊಳ್ಳಲು ಈ ತಾಣಕ್ಕೆ ಒಂದು ಸಾರಿ ಭೇಟಿ ನೀಡಿ

2.ಮೈಸೂರು ಅರಮನೆ (Mysore Palace):

ಮೈಸೂರು ಅರಮನೆ (Mysore Palace)
  • ಮೈಸೂರು ಅಂದಾಕ್ಷಣ ಮೊದಲಿಗೆ ನೆನಪಾಗುವುದು ಮೈಸೂರು ಅರಮನೆ.
    • ಈ ಅರಮನೆಯು ಇಂಡೋ ಸಾರ್ಸನಿಕ್ ಶೈಲಿಯ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ
    • ಇದು ಭಾರತದ ಅತ್ಯಂತ ಸುಂದರವಾದ ಅರಮನೆಗಳಲ್ಲಿ ಒಂದಾಗಿದ್ದು ಇಲ್ಲಿ ನಡೆಯುವ ದಸರಾ ಉತ್ಸವ ವಿಶ್ವವಿಖ್ಯಾತವಾಗಿದೆ
    • ಇದು ಮೈಸೂರು ಜಿಲ್ಲೆಯಲ್ಲಿದೆ
    • ಬೆಂಗಳೂರಿನಿಂದ ಸುಮಾರು 145 ಕಿಲೋ ಮೀಟರ್ ದೂರವನ್ನು ಹೊಂದಿದೆ
    • ಶ್ರೀರಂಗಪಟ್ಟಣ ಮತ್ತು ಚಾಮುಂಡಿ ಬೆಟ್ಟ ಸುಮಾರು ಹದಿನೈದು ಕಿಲೋಮೀಟರ್ ಅಂತರದಲ್ಲಿದೆ
    • ಯಾರಾದರೂ ಒಂದು ಹೊಸ ಟೂರಿಸ್ಟ್ ಪ್ಲಾನ್ ಮಾಡ್ತಾ ಇದ್ರೆ ಖಂಡಿತವಾಗಿಯೂ ಮೈಸೂರು ಅರಮನೆಗೆ ಒಂದು ಸಾರಿ ಭೇಟಿ ನೀಡಿ

3.ಗೋಕರ್ಣ (Gokarna):

Gokarna
  • ಗೋಕರ್ಣ ಗೋವಾ ಗೆ ಹೋಲಿಸಿದರೆ ಇದು ಶಾಂತಿಯುತವಾದ ಪರ್ಯಾಯ ತಾಣವಾಗಿದೆ
  • ಮಹಾಬಲೇಶ್ವರ ದೇವಾಲಯಕ್ಕೆ ಇದು ಹೆಸರುವಾಸಿಯಾಗಿದೆ
  • ಇಂತಹ ಅದ್ಭುತವಾದ ಸ್ಥಳವನ್ನು ಒಂದು ಸರಿಯಾದ ಕಣ್ಣು ತುಂಬಿ ಕೊಳ್ಳಬೇಕು ಎನ್ನುವುದು ಸಾಕಷ್ಟು ಜನರ ಒಂದು ಆಸೆಯಾಗಿದೆ
  • ಗೋಕರ್ಣವು ಉತ್ತರ ಕನ್ನಡ ಜಿಲ್ಲೆಯಲ್ಲಿದೆ
  • ಬೆಂಗಳೂರಿನಿಂದ ಸುಮಾರು 485 km ದೂರದಲ್ಲಿದೆ
  • ಹತ್ತಿರದಲ್ಲಿ ಮುರುಡೇಶ್ವರ 78 ಕಿಲೋಮೀಟರ್ ನಲ್ಲಿ ಇದೆ

ಹೊಸದಾಗಿ ಟೂರಿಸ್ಟ್ ಬ್ಯಾನ್ ಮಾಡುತ್ತಿರುವವರಿಗೆ ಗೋಕರ್ಣ ಒಂದು ಅದ್ಭುತ ಸ್ಥಳ ಆಗಿದೆ

4.ಕೊಡಗು / ಕೂರ್ಗ್ (Coorg)

Coorg
  • ಕೊಡಗು ಭಾರತದ ಸ್ಕಾಟ್ಲೆಂಡ್ ಎಂದು ಕರೆಯಲಾಗುತ್ತದೆ
  • ಇಲ್ಲಿ ಗಿರಿಧಾಮವಿದ್ದು ಕಾಫಿ ತೋಟಗಳು ಸೇರಿದಂತೆ ಮಂಜಿನಿಂದ ಕೂಡಿದ ಭೂ ದೃಶ್ಯಗಳು ಮತ್ತು ಅಬ್ಬಿ ಜಲಪಾತ ಇಲ್ಲಿನ ಪ್ರಮುಖ ಆಕರ್ಷಣೀಯ ಸ್ಥಳಗಳಾಗಿವೆ
  • ಇದು ಕೊಡಗು ಜಿಲ್ಲೆಯಲ್ಲಿದೆ
  • ಸುಮಾರು 250 ಕಿಲೋ ಮೀಟರ್ ಬೆಂಗಳೂರಿನಿಂದ ದೂರವನ್ನು ಹೊಂದಿದೆ
  • ಹತ್ತಿರದಲ್ಲಿ ದುಬಾರೆ ಆನೆ ಶಿಬಿರ ಮತ್ತು ಬೈಲಕುಪ್ಪೆ ಟಿಬೆಟಿಯನ್ ಕ್ಯಾಂಪುಗಳನ್ನು ವಿಸಿಟ್ ಮಾಡಬಹುದು

5.ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲು (Badami, Aihole, Pattadakal):

Badami, Aihole, Pattadakal
  • ಚಾಲುಕ್ಯರ ಕಾಲದಲ್ಲಿ ಗುಹಾಂತರ ದೇವಾಲಯಗಳು ಸೇರಿದಂತೆ ಕೆಂಪು ಮರಳು ಕಲ್ಲಿನ ಬಂಡೆಗಳಿಗೆ ಬಾದಾಮಿ ಪ್ರಸಿದ್ಧವಾದ ಸ್ಥಳವಾಗಿದೆ
  • ಪಟ್ಟದಕಲ್ಲು ಶಿಲ್ಪಕಲೆಗೆ ಹೆಸರಾದ ಐತಿಹಾಸಿಕ ಸ್ಥಳವಾಗಿದ್ದು ಇತಿಹಾಸ ಪ್ರಸಿದ್ಧವಾದ ಹಲವಾರು ಕುರುಹುಗಳನ್ನು ನೋಡಬಹುದು
  • ಇದು ಬಾಗಲಕೋಟೆ ಜಿಲ್ಲೆಯಲ್ಲಿದೆ
  • ಸುಮಾರು 450 km ಬೆಂಗಳೂರು ನಿಂದ ದೂರವನ್ನ ಹೊಂದಿದೆ
  • ಹತ್ತಿರದಲ್ಲಿ ಕೂಡಲಸಂಗಮ ಹಾಗೂ ಹಂಪಿ 140 ಕಿಲೋಮೀಟರ್ ದೂರದಲ್ಲಿದೆ

ಹೊಸದಾಗಿ ಟೂರಿಸ್ಟ್ ಪ್ಲಾನ್ ಮಾಡುವ ಹಲವರಿಗೆ ಈ ಪ್ರೇಕ್ಷಣೀಯ ಸ್ಥಳ ಹಾಗೂ ಐತಿಹಾಸಿಕ ಸ್ಥಳ ತುಂಬಾನೇ ಮೆರಗನ್ನ ಮೂಡಿಸುತ್ತದೆ

6.ಜೋಗ ಜಲಪಾತ (Jog Falls):

Jog Falls
  • ವಿಶ್ವ ವಿಖ್ಯಾತ ಜೋಗ ಜಲಪಾತ ಶರಾವತಿ ನದಿಯಿಂದ ಸೃಷ್ಟಿಯಾಗುವಂತ ಇದು ಭಾರತದ ಅತಿ ಎತ್ತರದ ಜಲಪಾತಗಳಲ್ಲಿ ಒಂದಾಗಿದೆ
  • ಮಳೆಗಾಲದಲ್ಲಿ ಇದರ ದೃಶ್ಯ ಅತ್ಯಂತ ರಮಣೀಯವಾಗಿರುತ್ತೆ
  • ಇದು ಶಿವಮೊಗ್ಗ ಜಿಲ್ಲೆಯಲ್ಲಿದೆ
  • ಬೆಂಗಳೂರಿನಿಂದ ಸುಮಾರು 400 ಕಿಲೋಮೀಟರ್ ದೂರವನ್ನು ಹೊಂದಿದೆ
  • ಹತ್ತಿರದ ಪ್ರವಾಸಿ ತಾಣಗಳು ಹೊನ್ನಾವರ ಅಥವಾ ಇಕ್ಕೇರಿ 60 ಕಿಲೋಮೀಟರ್ ದೂರದಲ್ಲಿದೆ

ಸಾಯೋದ್ರೊಳಗೆ ಒಮ್ಮೆಯಾದರೂ ಜೋಗದ ಗುಂಡಿಯನ್ನು ನೋಡಬೇಕು ಎಂದು ರಾಜಕುಮಾರವರು ಹೇಳಿದ್ದಾರೆ ನೀವೇನಾದ್ರೂ ಒಂದು ಟೂರಿಸ್ಟ್ ಪ್ಲಾನ್ ಮಾಡ್ತಾ ಇದ್ರೆ ಬರುವ ಮಳೆಗಾಲದಲ್ಲಿ ಈ ಸುಂದರವಾದ ಸ್ಥಳಕ್ಕೆ ಒಮ್ಮೆ ಭೇಟಿ ನೀಡಿ.

7.ಬಂಡೀಪುರ ರಾಷ್ಟ್ರೀಯ ಉದ್ಯಾನವನ (Bandipur National Park)

Bandipur National Park
  • ಬಂಡಿಪುರ ರಾಷ್ಟ್ರೀಯ ಉದ್ಯಾನವನ ಹುಲಿಗಳ ಸಂರಕ್ಷಿತ ಪ್ರದೇಶವಾಗಿರುವ ಇದು ವನ್ಯಜೀವಿ ಪ್ರಿಯರಿಗೆ ಸ್ವರ್ಗವಾದ ತಾಣವಾಗಿದೆ
  • ಸಫಾರಿ ಮೂಲಕ ಆನೆಗಳು ಸೇರಿದಂತೆ ಹುಲಿಗಳು ಮತ್ತು ಜಿಂಕೆಗಳನ್ನ ಇಲ್ಲಿ ಕಾಣಬಹುದಾಗಿದೆ
  • ಚಾಮರಾಜನಗರ ಜಿಲ್ಲೆಯಲ್ಲಿದೆ
  • ಬೆಂಗಳೂರಿನಿಂದ ಸುಮಾರು 220 ಕಿಲೋ ಮೀಟರ್ ದೂರದಲ್ಲಿದೆ
  • ಹತ್ತಿರದಲ್ಲಿ ಮಧುಮಲೈ ಮತ್ತು ಮೈಸೂರು ಸುಮಾರು 80 ಕಿಲೋಮೀಟರ್ ಅಂತರದಲ್ಲಿದೆ

ಹೊಸದಾಗಿ ಪ್ಲಾನ್ ಮಾಡ್ತಾ ಇರುವವರು ಖಂಡಿತವಾಗಿಯೂ ಈ ಅದ್ಭುತ ಸ್ಥಳಕ್ಕೆ ಬಿಜೆಪಿ ಮಾಡಬಹುದು

8.ಮುರುಡೇಶ್ವರ (Murudeshwar):

ಮುರುಡೇಶ್ವರ (Murudeshwar)
  • ಮುರುಡೇಶ್ವರ ಅರಬ್ಬಿ ಸಮುದ್ರದ ದಡದಲ್ಲಿರುವ ವಿಶ್ವದ ಎರಡನೇ ಅತಿ ಎತ್ತರದ ಶಿವನ ವಿಗ್ರಹ ಹೊಂದಿರುವಂತಹ ಒಂದು ಬೃಹತ್ ರಾಜಗೋಪುರಕ್ಕೆ ಇದು ಪ್ರಖ್ಯಾತಿ ಪಡೆದಿದೆ
  • ಇದು ಉತ್ತರ ಕನ್ನಡ ಜಿಲ್ಲೆಯಲ್ಲಿದೆ
  • ಬೆಂಗಳೂರಿನಿಂದ ಸುಮಾರು 490 ಕಿಲೋಮೀಟರ್ ದೂರದಲ್ಲಿದೆ
  • ಹತ್ತಿರದಲ್ಲಿ ಭಟ್ಕಳ ಅಥವಾ ಇಡುಗುಂಜಿ ಗಣಪತಿ ದೇವಾಲಯಗಳು ನೋಡಬಹುದು

ಒಮ್ಮೆ ಇಲ್ಲಿಗೆ ಭೇಟಿ ನೀಡಿದರೆ ಇಲ್ಲಿನ ಅದ್ಭುತವಾದ ಮುರುಡೇಶ್ವರ ಬೀಚ್ ಹಾಗೂ ದೇವಸ್ಥಾನವನ್ನು ಮರೆಯಲು ಸಾಧ್ಯವೇ ಇಲ್ಲ

9.ಚಿಕ್ಕಮಗಳೂರು (Chikmagalur):

ಚಿಕ್ಕಮಗಳೂರು (Chikmagalur)
  • ಚಿಕ್ಕಮಗಳೂರು ಕರ್ನಾಟಕದ ಕಾಫಿ ನಾಡು ಎಂದೇ ಪ್ರಖ್ಯಾತಿ ಪಡೆದಿರುವಂಥ ಚಿಕ್ಕಮಗಳೂರು ಇದು ಟ್ರಕ್ಕಿಂಗ್ ಗೆ ಜನಪ್ರಿಯವಾಗಿದೆ
  • ಮುಳ್ಳಿನ ಗಿರಿ ಅತ್ಯಂತ ರಾಜ್ಯದ ಎತ್ತರವಾದ ಶಿಖರ ಇದಾಗಿದ್ದು ಇಲ್ಲಿನ ಪ್ರಮುಖ ಆಕರ್ಷಣೀಯ ಸ್ಥಳ ಇದಾಗಿದೆ
  • ಇದು ಚಿಕ್ಕಮಂಗಳೂರು ಜಿಲ್ಲೆಯಲ್ಲಿದೆ
  • ಸುಮಾರು 245 ಕಿ.ಮೀ ಬೆಂಗಳೂರಿನಿಂದ ದೂರವನ್ನು ಹೊಂದಿದೆ
  • ಹತ್ತಿರದಲ್ಲಿ ಬೇಲೂರು ಮತ್ತು ಹಳೇಬೀಡು ಸುಮಾರು 25 ರಿಂದ 30 ಕಿಲೋಮೀಟರ್ ಅಂತರದಲ್ಲಿದೆ

ಒಮ್ಮೆ ಈ ಚಾರಣಕ್ಕೆ ಬಂದು ಹೋದರೆ ನಿಮ್ಮ ಜೀವನದಲ್ಲಿ ಎಂದೂ ಸಹ ಮರೆಯಲು ಸಾಧ್ಯವೇ ಇಲ್ಲ

10.ಉಡುಪಿ (Udupi):

  • ಉಡುಪಿಯ ಶ್ರೀ ಕೃಷ್ಣ ಮಠ ರುಚಿಕರವಾದ ಉಡುಪಿ ಊಟಕ್ಕೆ ಇದು ಪ್ರಸಿದ್ಧವಾಗಿದೆ
  • ಇಲ್ಲಿನ ಮಲ್ಪೆ ಬೀಚ್ ಮತ್ತು ಸೇಂಟ್ ಮೇರಿ ದೀಪ ನೋಡಲೇಬೇಕಾದ ಒಂದು ಸುಂದರವಾದ ಸ್ಥಳವಾಗಿದೆ
  • ಉಡುಪಿ ಜಿಲ್ಲೆಯಲ್ಲಿದೆ
  • ಬೆಂಗಳೂರಿನಿಂದ ಸುಮಾರು 45 ಕಿ.ಮೀ ದೂರದಲ್ಲಿದೆ
  • ಹತ್ತಿರದ ಪ್ರವಾಸಿ ತಾಣಗಳು ಮಲ್ಪೆ ಮತ್ತು ಮಣಿಪಾಲ ಸುಮಾರು 6 ಕಿಲೋಮೀಟರ್ ಅಂತರದಲ್ಲಿದೆ

ಇತರೆ ಯೋಜನೆಯ ಪ್ರಮುಖ ಲಿಂಕುಗಳು:

Leave a Reply

Your email address will not be published. Required fields are marked *