PMVBRY : ಕೇಂದ್ರ ಸರ್ಕಾರ ಇದೀಗ ಯುವಶಕ್ತಿಗೆ ಪ್ರೋತ್ಸಾಹಿಸಲು ಭರ್ಜರಿ ಯೋಜನೆಯನ್ನು ಜಾರಿಗೆ ತಂದಿದೆ ಈ ಒಂದು ಯೋಜನೆಯ ಮೂಲಕ ಆರ್ಥಿಕ ಶಿಸ್ತನ್ನು ಕಲಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು ಈ ಒಂದು ಮಹತ್ವಕಾಂಕ್ಷಿಯ ಯೋಜನೆಯ ಇದಿಗ ಜಾರಿಗೆ ತಂದಿದೆ.
PMVBRY EPFO 15,000 Scheme Apply Online
ಈ ಯೋಜನೆಯ ಮೂಲಕ ಯುವಶಕ್ತಿಯನ್ನು ಮತ್ತಷ್ಟು ಹುರಿದುಂಬಿಸಲು ಪ್ರಯತ್ನವನ್ನು ನಡೆಸುತ್ತಿದ್ದು ಈ ಯೋಜನೆಗೆ ಹಲವಾರು ಮಾನದಂಡಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿದೆ ಈ ಯೋಜನೆಯ ಮೂಲಕ ಉಚಿತವಾಗಿ ತರಬೇತಿಯನ್ನ ಕೊಟ್ಟು 15 ಸಾವಿರದವರೆಗೆ ಆರ್ಥಿಕ ಸಹಾಯ ಧನವನ್ನ ನೀಡಲಾಗುತ್ತದೆ.
ಹಾಗಾದರೆ ಈ ಯೋಜನೆಯ ಲಾಭವನ್ನು ಯಾರು ಪಡೆಯಬಹುದು? ಯಾರಿಗೆ ಈ ಯೋಜನೆಗೆ ಅರ್ಹತೆ ಇರುತ್ತದೆ? ಹಾಗೂ ಯಾವ ರೀತಿ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದು? ಹೀಗೆ ಎಲ್ಲಾ ರೀತಿಯಾದ ಮಾಹಿತಿಯನ್ನು ಈ ಕೆಳಗೆ ಹಂತ ಹಂತವಾಗಿ ನೀಡಲಾಗಿದೆ.
PM ವಿಕ್ಷಿತ್ ಭಾರತ್ ರೋಜ್ಗಾರ್ ಯೋಜನೆ (PMVBRY) : ₹15,000 ಪ್ರೋತ್ಸಾಹಧನ
ಈ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ನೀವು ಸಹ ಈ ಯೋಜನೆಗೆ ಅರ್ಹತೆಯನ್ನು ಪಡೆದಿದ್ದರೆ ಅರ್ಜಿಯನ್ನು ಸಲ್ಲಿಸಿ ನೀವು ಸಹ ಈ ಮಹತ್ವಕಾಂಕ್ಷಿಯ ಯೋಜನೆಯ ಲಾಭವನ್ನು ಪಡೆಯಬಹುದು.
ಇದೇ ರೀತಿಯ ಇನ್ನಷ್ಟು ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕಾದರೆ ನಮ್ಮ ವೆಬ್ಸೈಟ್ ಕನ್ನಡಹೆಲ್ಫ್ ಗೆ ಭೇಟಿ ನೀಡುತ್ತಿರಿ.
ಪ್ರಧಾನ ಮಂತ್ರಿ ವಿಕ್ಷಿತ್ ಭಾರತ್ ರೋಜ್ಗಾರ್ ಯೋಜನೆ (PMVBRY) ಬಗ್ಗೆ?
ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತ ಒಂದು ಹೊಚ್ಚ ಹೊಸ ಯೋಜನೆ ಇದಾಗಿದ್ದು ಈ ಯೋಜನೆ ಯುವಶಕ್ತಿಯನ್ನು ಪ್ರೋತ್ಸಾಹಿಸಲು ಹಾಗೂ ಅವರಿಗೆ ಆರ್ಥಿಕ ಶಿಸ್ತನ್ನು ಕಲುಹಿಸಲು ಸರ್ಕಾರ ಜಾರಿಗೆ ತಂದಿರುವಂತ ಒಂದು ಮಹತ್ವಕಾಂಕ್ಷಿಯ ಯೋಜನೆ ಇದಾಗಿದೆ.
ಯಾರಿಗೆ ಸಿಗುತ್ತೆ ಈ ಭಾಗ್ಯ?
ಹೊಸದಾಗಿ ಕೆಲಸಕ್ಕೆ ಸೇರುವವರು ಮಾತ್ರವಲ್ಲದೆ ಈ ಕೆಳಗೆ ಕೊಟ್ಟಿರುವಂತಹ ವಿವಿಧ ಮಾನದಂಡಗಳನ್ನ ಪೂರೈಸಿರುವ ಅರ್ಹ ವ್ಯಕ್ತಿಗಳಿಗೆ ಈ ಯೋಜನೆಯ ಲಾಭ ಸಿಗಲಿದೆ.
- ಅಭ್ಯರ್ಥಿಯು ತನ್ನ ಜೀವನದಲ್ಲಿ ಮೊದಲ ಬಾರಿಗೆ EPFO (ನೌಕರರ ಭವಿಷ್ಯ ನಿಧಿ) ಅಡಿಯಲ್ಲಿ ನೊಂದಾಯಿತ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿರಬೇಕು
- ಸಾಮಾನ್ಯವಾಗಿ ಇದು ಯುವ ಜನರಿಗಾಗಿ ಮೀಸಲಾಗಿರುತ್ತದೆ EPFO ನಿಯಮಗಳ ಅನ್ವಯ).
- ನೀವು ಕೆಲಸ ಮಾಡುವ ಸಂಸ್ಥೆಯು EPFO ಅಡಿಯಲ್ಲಿ ಕಡ್ಡಾಯವಾಗಿ ನೋಂದಣಿ ಆಗಿರಬೇಕು
- ಉದ್ಯೋಗಿಯ ಮಾಸಿಕ ಒಟ್ಟು ವೇತನವು ₹1,00,000 ಕ್ಕಿಂತ ಕಡಿಮೆ ಇರಬೇಕು.
ಈ ಯೋಜನೆಯನ್ನು ಸರ್ಕಾರ ತಂದಿರುವ ಮುಖ್ಯ ಉದ್ದೇಶ?
ಪ್ರಧಾನ ಮಂತ್ರಿ ವಿಕ್ಷಿತ್ ಭಾರತ್ ರೋಜ್ಗಾರ್ ಯೋಜನೆ (PMVBRY) ಅಡಿಯಲ್ಲಿ ಮೊದಲ ಬಾರಿಗೆ ಉದ್ಯೋಗಕ್ಕೆ ಸೇರುವ ಯುವ ಜನರಿಗೆ 15 ಸಾವಿರದವರೆಗೆ ಉಚಿತವಾಗಿ ಪ್ರೋತ್ಸಾಹ ಧನದ ಜೊತೆಗೆ ಸಾಕ್ಷರತಾ ಕೋರ್ಸ್ ಗಳನ್ನು ನೀಡಲಾಗುತ್ತದೆ ಇದರಿಂದಾಗಿ ಯುವ ಜನರಿಗೆ ಒಂದು ಒಳ್ಳೆಯ ಒಂದು ವೇದಿಕೆಯನ್ನು ಸೃಷ್ಟಿ ಮಾಡಿದ ಹಾಗೆ ಆಗುತ್ತದೆ ಅನ್ನುವಂತ ಉದ್ದೇಶದಿಂದ ಈ ಒಂದು ಯೋಜನೆಯನ್ನು ಜಾರಿಗೆ ತರಲಾಗಿದೆ.
ಮುಖ್ಯ ವಿಷಯ:
| ಹಣಕಾಸು ಸಾಕ್ಷರತಾ ಕೋರ್ಸ್ (Financial Literacy Course) : ಎರಡನೇ ಕಂತಿನ 7500/- ಪಡೆಯಲು ನೀವು ಈ ಕೆಳಗಿನ ಕೋರ್ಸ್ ಮಾಡುವುದು ಕಡ್ಡಾಯವಾಗಿದೆ ಇದು EPFO (ನೌಕರರ ಭವಿಷ್ಯ ನಿಧಿ) ಆನ್ಲೈನ್ ಕೋರ್ಸ್ ಇದಾಗಿದ್ದು ಈ ಕೋರ್ಸಿಗೆ ನೀವು ಸೇರಬೇಕಾಗಿದೆ ಹಣವನ್ನ ಹೇಗೆ ಉಳಿಸಬೇಕು ಮತ್ತು ಹೂಡಿಕೆ ಮಾಡಬೇಕು ಎಂಬ ಬಗ್ಗೆ ಇದರಲ್ಲಿ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ 12 ತಿಂಗಳ ಕೆಲಸ ಮುಗಿಯುವ ಮುನ್ನ ಈ ಕೋರ್ಸ್ ಪೂರೈಸಿ ಸರ್ಟಿಫಿಕೇಟ್ ಪಡೆಯುವುದು ಅತಿ ಅವಶ್ಯಕವಾಗಿದೆ. |

ಅರ್ಜಿ ಸಲ್ಲಿಸಲು ಬೇಕಾದ ಅತೀ ಅವಶ್ಯಕ ದಾಖಲೆಗಳು:
ಈ ಕೆಳಗೆ ತಿಳಿಸಿರುವ ಅಗತ್ಯ ದಾಖಲೆಗಳನ್ನು ನೀವು ಹೊಂದಿದ್ದರೆ ನಿಮ್ಮ ಮೊಬೈಲ್ ನಲ್ಲಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಈ ಕೆಳಗೆ ಕೊಟ್ಟಿರುವ ಎಲ್ಲಾ ಮಾಹಿತಿ ಹಾಗೂ ದಾಖಲೆಗಳನ್ನು ಪರಿಶೀಲಿಸಿಕೊಳ್ಳಿ.
ಆಧಾರ್ ಕಾರ್ಡ್: ನಿಮ್ಮ ಪ್ರಾಥಮಿಕ ಗುರುತಿನ ಚೀಟಿ ಇದಾಗಿದೆ .
UAN (Universal Account Number): ಕಂಪನಿಯು ನಿಮಗೆ ನೀಡುವ EPFO ಸಂಖ್ಯೆ.
ಬ್ಯಾಂಕ್ ಖಾತೆ: ಆಧಾರ್ ಸಂಖ್ಯೆಯು ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಲಿಂಕ್ ಆಗಿರಬೇಕು (NPCI Mapping).
ಮೊಬೈಲ್ ಸಂಖ್ಯೆ: ಆಧಾರ್‌ಗೆ ಲಿಂಕ್ ಆಗಿರುವ ಸಕ್ರಿಯ ಮೊಬೈಲ್ ಸಂಖ್ಯೆ.
ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸುವುದು ಅಥವಾ ಪರಿಶೀಲಿಸುವುದು ಹೇಗೆ?
ನಿಮ್ಮ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸುವ ಬಗ್ಗೆ ಈ ಕೆಳಗೆ ಮಾಹಿತಿ ನೀಡಲಾಗಿದೆ ಉದ್ಯೋಗಿಗಳು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವಂತಹ ಅಗತ್ಯವೇ ಇರುವುದಿಲ್ಲ ನಿಮ್ಮ ಕಂಪನಿಯು ಪ್ರತಿ ತಿಂಗಳು ಸಲ್ಲಿಸುವ ECR (Electronic Challan cum Return) ಮೂಲಕವೇ ನಿಮ್ಮ ಹೆಸರು ನೋಂದಣಿ ಆಗಿರುತ್ತದೆ ಆದರೆ ನೀವು ಅರ್ಹರಿದ್ದೀರಾ ಎಂದು ಖಚಿತಪಡಿಸಿಕೊಳ್ಳಲು ಈ ಕೆಳಗಿನ ವಿವಿಧ ಹಂತಗಳನ್ನ ಫಾಲೋ ಮಾಡಿ.
🌿UMANG App ಡೌನ್‌ಲೋಡ್ ಮಾಡಿಕೊಳ್ಳಿ
🌿EPFO ಸೇವೆಗೆ ಭೇಟಿನೀಡಿ ಆಪ್‌ನಲ್ಲಿ ‘EPFO’ ಎಂದು ಸರ್ಚ್ ಮಾಡಿ.
🌿ನಿಮ್ಮ UAN ಸಂಖ್ಯೆ ಮತ್ತು ಮೊಬೈಲ್ ಗೆ ಬಂದಿರುವ OTP ಬಳಸಿ ಲಾಗಿನ್ ಆಗಿ.
🌿Scheme Eligibility ಅಲ್ಲಿ ‘PMVBRY’ ಅಥವಾ ‘Employment Linked Incentive‘ ಎಂಬ ಆಯ್ಕೆಯನ್ನು ಹುಡುಕಿ.
🌿Status Check ನಿಮ್ಮ ಅರ್ಹತೆ ಮತ್ತು ಪ್ರೋತ್ಸಾಹಧನದ ಸ್ಥಿತಿಯನ್ನು ಇಲ್ಲಿ ನೋಡಬಹುದು.
ಹೆಚ್ಚಿನ ಮಾಹಿತಿಗಾಗಿ ಹಾಗೂ ಅಧಿಕೃತ ಪೋರ್ಟಲ್:
| ಹೆಚ್ಚಿನ ಮಾಹಿತಿಗಾಗಿ ಅಧಿಕೃತ PMVBRY ವೆಬ್‌ಸೈಟ್‌ಗೆ ಭೇಟಿ ನೀಡಿ. |
ಅಗತ್ಯ ಸಲಹೆಗಳು:
- ಕೆ ವೈ ಸಿ (KYC)ಅಪ್ಡೇಟ್ ನಿಮ್ಮ ಈ ಪಿಎಫ್ ಪೋರ್ಟಲ್ (PORTAL)ನಲ್ಲಿ ಆಧಾರ್ ಬ್ಯಾಂಕ್ ವಿವರಗಳು ಮತ್ತು ಪ್ಯಾನ್ ಕಾರ್ಡ್ ಸರಿಯಾಗಿದೆಯಾ ಅಥವಾ ಅಪ್ಡೇಟ್ ಆಗಿದೆಯಾ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು
- ಮೊದಲ 12 ತಿಂಗಳ ಒಳಗೆ ಕೆಲಸ ಬದಲಿಸಿದರೆ ಪ್ರೋತ್ಸಾಹ ಧನ ಪಡೆಯುವಲ್ಲಿ ತೊಂದರೆ ಆಗಬಹುದು ಆದ್ದರಿಂದ ಕನಿಷ್ಠ ಒಂದು ವರ್ಷ ಅದೇ ಸಂಸ್ಥೆಯಲ್ಲಿ ಕೆಲಸವನ್ನ ಮುಂದುವರಿಸಬೇಕು
- ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ (LINK) ಆಗಿದೆಯಾ ಎನ್ನುವಂತ ಬಗ್ಗೆ ಖಚಿತಪಡಿಸಿಕೊಳ್ಳಿ
ಕೊನೆಯ ನುಡಿ:
ನಿಮ್ಮ ಹತ್ತಿರ ಯುಎನ್ (UAN) ನಂಬರ್ ಲಭ್ಯವಿದ್ದರೆ ನೀವು ಆನ್ಲೈನ್ ಮುಖಾಂತರ ನಿಮ್ಮ ಮೊಬೈಲ್ ನಲ್ಲಿ ಉಮಂಗ್ ಆಪ್ (UMANG) ಮೂಲಕ ಪರಿಶೀಲಿಸಿಕೊಳ್ಳಬಹುದು ಈಗಲೇ ಅರ್ಜಿಯನ್ನು ಪರಿಶೀಲಿಸಲು ಬೇಕಾಗಿರುವಂತಹ ಎಲ್ಲಾ ಮಾಹಿತಿಯನ್ನು ಕೂಡ ಈ ಮೇಲೆ ತಿಳಿಸಲಾಗಿದೆ ಅದೇ ರೀತಿ ನೀವು ಸಹ ಮಾಡಿದರೆ ಎಲ್ಲಾ ಮಾಹಿತಿಯನ್ನು ನೀವು ಪರಿಶೀಲಿಸಿಕೊಳ್ಳಬಹುದು.
ಇತರೆ ಯೋಜನೆಯ ಪ್ರಮುಖ ಲಿಂಕುಗಳು:
- PMAY 2.0: ಆಧಾರ್ ಇದ್ದರೆ ಸಾಕು, ಸ್ವಂತ ಮನೆಗೆ ಸರ್ಕಾರ ಕೊಡುತ್ತೆ ₹2.7 ಲಕ್ಷ ಸಹಾಯಧನ!
- ಗೃಹಲಕ್ಷ್ಮಿ ಯೋಜನೆ : ಖಾತೆಗೆ ಬಂತು ₹2,000! ಹಣ ಜಮಾ ಚೆಕ್ ಮಾಡುವ ಲಿಂಕ್!
- Old House Repairing Loan : ರೂ 8 ಲಕ್ಷ ಸಾಲ!ನಿಮ್ಮ ಹಳೆಯ ಮನೆ ದುರಸ್ತಿಗೆ ಕೆನರಾ ಬ್ಯಾಂಕ್ ಸಹಾಯಹಸ್ತ!
- PMAY 2.0: ಆಧಾರ್ ಇದ್ದರೆ ಸಾಕು, ಸ್ವಂತ ಮನೆಗೆ ಸರ್ಕಾರ ಕೊಡುತ್ತೆ ₹2.7 ಲಕ್ಷ ಸಹಾಯಧನ!

