ನಮಸ್ಕಾರ ರೈತರೇ, ನೀವೇನಾದರು ಬೋರೆವೆಲ್ ಕೊರೆಸಿದ್ದೀರಾ? ಹಣಕಾಸಿನ ಕೊರತೆಯಿಂದ ಮೋಟಾರ್ ಅಳವಡಣೆ ಮಾಡಲು ಸಾಧ್ಯವಾಗುತ್ತಿಲ್ಲವಾ? ಹಾಗಿದ್ದರೆ ಸರ್ಕಾರದ ಕಡೆಯಿಂದ ನೀವು ಕೊರೆಸಿದ ಬೋರೆವೆಲ್ ಗೆ ಮೋಟರ್ ಅಳವಡನೆ (Bore well Motor Subsidy) ಮಾಡಲು ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ.
ಸರ್ಕಾರವು ಕೃಷಿ ಯಾಂತ್ರೀಕರಣ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿ ರೈತರಿಗೆ ಬೋರವೆಲ್ ಗೆ ಮೋಟಾರ್ ಅಳವಡಣೆ ಮಾಡಲು ಸಬ್ಸಿಡಿ ದರದಲ್ಲಿ ಸಹಾಯಧನವನ್ನು ನೀಡುತ್ತಿದ್ದು, ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಈಗಾಗಲೇ ಆರಂಭಗೊಂಡಿದೆ. ಸಾಕಷ್ಟು ರೈತರು ಈಗಾಗಲೇ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಂಡಿದ್ದಾರೆ.
Borewell Motor Subsidy Scheme In Kannada
ಕೃಷಿ ಯಾಂತ್ರೀಕರಣ ಯೋಜನೆಗೆ ಆನ್ಲೈನ್ ಹಾಗೂ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ಕಲ್ಪಿಸಿದ್ದು, ನೀವು ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆಯಲು ಅರ್ಹರಾಗಿದ್ದರೆ ಇಂದೇ ಈ ಯೋಜನೆಗೆ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು, ಅರ್ಹತಾ ಮಾನದಂಡ, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಅಗತ್ಯ ಮಾಹಿತಿಗಳನ್ನು ಕೆಳಗಿನ ಹಂತದಲ್ಲಿ ನೀಡಲಾಗಿದ್ದು, ಈ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ಅರ್ಜಿ ಸಲ್ಲಿಸಿ. ಇನ್ನಷ್ಟು ಯೋಜನೆಗಳ ಬಗೆಗಿನ ಮಾಹಿತಿಗಾಗಿ ನಮ್ಮ ವೆಬ್ಸೈಟ್ ಕನ್ನಡ ಹೆಲ್ಪ್.ನೆಟ್ ಗೆ ಭೇಟಿ ನೀಡಿ.
ಯೋಜನೆಯ ಕಿರು ಪರಿಚಯ:
| ಯೋಜನೆಯ ಹೆಸರು | ಕೃಷಿ ಯಾಂತ್ರೀಕರಣ ಯೋಜನೆ |
| ಅರ್ಹ ಫಲಾನುಭವಿಗಳು | ರೈತರು |
| ಒಟ್ಟು ಸಹಾಯಧನ | ಮೋಟಾರ್ ನ ಒಟ್ಟು ಮೊತ್ತದ ಮೇಲೆ 50% ಇಂದ 90% ಸಬ್ಸಿಡಿ ಸಹಾಯಧನ |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ ಅಥವಾ ಆಫ್ಲೈನ್ |
ಯೋಜನೆಯ ಬಗ್ಗೆ:
ಕೃಷಿ ಯಾಂತ್ರೀಕರಣ ಯೋಜನೆಯು ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ರೈತರು ಕೃಷಿ ಚಟುವಟಿಕೆ ನಡೆಸಲು ಅಗತ್ಯವಾದ ಹೆಚ್ಚಿನ ಶ್ರಮವನ್ನು ಕಡಿಮೆ ಮಾಡಿ, ರೈತರಿಗೆ ತಮ್ಮ ಕೃಷಿ ಚಟುವಟಿಕೆಯನ್ನು ಆಧುನೀಕರಣ ಗೊಳಿಸಲು ವಿವಿಧ ಯಂತ್ರೋಪಕರಣಗಳ ಖರೀದಿಗೆ ಸರ್ಕಾರವು ರೈತರಿಗೆ ಆರ್ಥಿಕ ನೆರವನ್ನು ನೀಡುವುದಾಗಿದೆ.
ಕರ್ನಾಟಕ ಸರ್ಕಾರವು ಈ ಯೋಜನೆಯಡಿಯಲ್ಲಿ ಅರ್ಹ ರೈತರಿಗೆ ಬೋರ್ ಮೋಟಾರ್ ಖರೀದಿ ಮಾಡಲು ಮೋಟಾರ್ ನ ಒಟ್ಟು ಮೊತ್ತದ ಮೇಲೆ 50% ಇಂದ 90% ವರೆಗೆ ಸಬ್ಸಿಡಿ ರೂಪದಲ್ಲಿ ಸಹಾಯಧನವನ್ನು ನೀಡಿ, ಅವರ ಕೃಷಿ ಚಟುವಟಿಕೆಯನ್ನು ಸುಗಮ ಗೊಳಿಸುವ ಉದ್ದೇಶವನ್ನು ಹೊಂದಿದೆ.
ಕೃಷಿ ಯಾಂತ್ರೀಕರಣ ಯೋಜನೆಯನ್ನು ಜಾರಿ ಗೊಳಿಸಿರುವುದರ ಉದ್ದೇಶ:
1. ಆರ್ಥಿಕ ಸಬಲೀಕರಣ:
ದುಬಾರಿ ಮೋಟಾರ್ ಗಳನ್ನು ತಮ್ಮ ಬೋರ್ ಗೆ ಅಳವಡಣೆ ಮಾಡಲು ಕಷ್ಟವಾಗುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮೋಟಾರ್ ನ ಒಟ್ಟು ಮೊತ್ತದ ಮೇಲೆ 50% ಇಂದ 90% ಸಬ್ಸಿಡಿ ಸಹಾಯಧನ (Borewell Motor Subsidy) ನೀಡುವ ಮೂಲಕ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು.
2. ನೀರಾವರಿ ಸೌಲಭ್ಯಗಳನ್ನು ವಿಸ್ತರಿಸುವುದು:
ಮಳೆಯ ಮೇಲೆ ಅವಲಂಬಿತರಾಗಿರುವ ರೈತರಿಗೆ ತಮ್ಮ ಕೃಷಿ ಚಟುವಟಿಕೆಯಲ್ಲಿ ಶಾಶ್ವತ ನೀರಾವರಿ ಸೌಲಭ್ಯವನ್ನು ಒದಗಿಸಿ, ವರ್ಷ ಪೂರ್ತಿ ಬೆಳೆಗಳನ್ನು ಬೆಳೆಯಲು ಅವಕಾಶವನ್ನು ಕಲ್ಪಿಸುವುದು.
3. ಕೃಷಿ ಇಳುವರಿಗಳನ್ನು ಹೆಚ್ಚಿಸಲು ಉತ್ತೇಜನ:
Borewell Motor Subsidy ರೈತರು ಈ ಯೋಜನೆಯಡಿಯಲ್ಲಿ ಬೋರ್ವೆಲ್ ಗೆ ಮೋಟಾರ್ ಅಳವಡನೆ ಮಾಡುವ ಮೂಲಕ ಶಾಶ್ವತ ನೀರಾವರಿ ಸೌಲಭ್ಯಗಳನ್ನು ಒದಗಿಸಿ, ಸರಿಯಾದ ಸಮಯಕ್ಕೆ ಬೆಳೆಗಳನ್ನು ಬೆಳೆದು, ಕೃಷಿ ಇಳುವರಿಯನ್ನು ಹಾಗೂ ಬೆಳೆಗಳ ಗುಣಮಟ್ಟವನ್ನು ಹೆಚ್ಚಿಸುವುದು.
4. ಆಧುನೀಕೃತ ಯಂತ್ರಗಳ ಬಳಕೆ:
ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ಸಾಂಪ್ರದಾಯಿಕ ಮೋಟಾರ್ ಗಳ ಬದಲಿಗೆ ಕೃಷಿ ಚಟುವಟಿಕೆಯನ್ನು ದಕ್ಷತೆ ಹಾಗೂ ಪರಿಣಾಮಕಾರಿಯಾಗಿಸುವ ಯಂತ್ರಗಳನ್ನು ಅಳವಡಣೆ ಮಾಡಲು ಸರ್ಕಾರವು ಆರ್ಥಿಕ ನೆರವನ್ನು ನೀಡುವುದು.
ಕೃಷಿ ಯಾಂತ್ರೀಕರಣ ಯೋಜನೆಯಡಿಯಲ್ಲಿ ರೈತರಿಗೆ ಸಿಗುವ ಲಾಭ:
1. ಶಾಶ್ವತ ನೀರಾವರಿ ಸೌಲಭ್ಯ:
ಕರ್ನಾಟಕ ರಾಜ್ಯದ ಸಾಕಷ್ಟು ರೈತರು ಹೆಚ್ಚಿನದಾಗಿ ಮಳೆಯನ್ನೇ ನಂಬಿ ಕೃಷಿ ಚಟುವಟಿಕೆಯನ್ನು ನಡೆಸುತ್ತಾರೆ. ಅಂತಹ ರೈತರಿಗೆ ಮಳೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಈಗಾಗಲೇ ಕೊರೆಸಿದ ಬೋರ್ವೆಲ್ ಗೆ ಮೋಟಾರ್ (Borewell Motor Subsidy) ಅಳವಡಣೆ ಮಾಡುವುದರಿಂದ ವರ್ಷವಿಡೀ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತದೆ.
2. ಹಣಕಾಸಿನ ಉಳಿತಾಯ:
ರೈತರು ತಾವು ಕೊರೆಸಿದ ಬೋರ್ವೆಲ್ ಗೆ ಮೋಟಾರ್ ಅಳವಡಣೆ ಮಾಡಲು ಸರ್ಕಾರದಿಂದ 90% ವರೆಗೆ ಸಬ್ಸಿಡಿ ಪಡೆಯುವ ಮೂಲಕ ಭಾರಿ ಮೊತ್ತದ ಹಣವನ್ನು ಉಳಿತಾಯ ಮಾಡಬಹುದು. ರೈತರು ಬೋರ್ವೆಲ್ ನ ಒಟ್ಟು ಮೊತ್ತದ ಮೇಲೆ ಕೇವಲ 10% ರಷ್ಟು ಹಣವನ್ನು ಪಾವತಿ ಮಾಡಿದರೆ ಸಾಕಾಗುತ್ತದೆ.
3. ಕೃಷಿಯಲ್ಲಿ ಆಧುನಿಕತೆಯನ್ನು ಹೆಚ್ಚಿಸುವುದು:
ರೈತರು ತಾವು ಕೊರೆಸಿದ ಬೋರ್ವೆಲ್ ಗೆ ಮೋಟಾರ್(Borewell Motor Subsidy) ಅಳವಡಣೆ ಮಾಡುವ ಮೂಲಕ ತಮ್ಮ ಕೃಷಿ ಚಟುವಟಿಕೆಯಲ್ಲಿ ತುಂತುರು ನೀರಾವರಿ ಅಥವಾ ಹನಿ ನೀರಾವರಿ ಸೌಲಭ್ಯವನ್ನು ಅಳವಡಿಸುವ ಮೂಲಕ ಕಡಿಮೆ ನೀರಿನಲ್ಲಿ ಹೆಚ್ಚಿನ ಬೆಳೆಗಳನ್ನು ಬೆಳೆದು ಬೆಳೆಯ ಇಳುವರಿಯನ್ನು ಹೆಚ್ಚಿಸುವುದು.
4. ಕರೆಂಟ್ ಬಿಲ್ ಉಳಿತಾಯ:
ರೈತರು ಈ ಯೋಜನೆಯಡಿಯಲ್ಲಿ ಹೆಚ್ಚಿನ ಗುಣಮಟ್ಟವುಳ್ಳ ಹಾಗೂ ಕಡಿಮೆ ವಿದ್ಯುತ್ ಬಳಕೆಯಾಗುವ ISI ಮೋಟಾರ್ ಗಳನ್ನು ತಮ್ಮ ಬೋರ್ವೆಲ್ ಗೆ ಅಳವಡಣೆ (Borewell Motor Subsidy)ಮಾಡುವ ಮೂಲಕ ಕರೆಂಟ್ ಬಿಲ್ ಹಾಗೂ ರಿಪೇರಿ ಖರ್ಚನ್ನು ಕಡಿಮೆ ಮಾಡಬಹುದಾಗಿದೆ.
ರೈತರಿಗೆ ಸಿಗುವ ಒಟ್ಟು ಸಬ್ಸಿಡಿ ದರ:
- ಸಾಮಾನ್ಯ ಮತ್ತು ಇತರೆ ವರ್ಗಗಳ ರೈತರಿಗೆ:
ಮೋಟಾರ್ ನ ಒಟ್ಟು ಮೊತ್ತದ ಮೇಲೆ 50% ರಷ್ಟು ಸಬ್ಸಿಡಿ ರೂಪದಲ್ಲಿ ಸಹಾಯಧನವನ್ನು ಪಡೆದುಕೊಳ್ಳಬಹುದು.
- ಪರಿಶಿಷ್ಟ ಜಾತಿ ಮತ್ತು ಪಂಗಡಗಳ ರೈತರಿಗೆ:
ಮೋಟಾರ್ ನ ಒಟ್ಟು ಮೊತ್ತದ ಮೇಲೆ 90% ರಷ್ಟು ಸಬ್ಸಿಡಿ ರೂಪದಲ್ಲಿ ಸಹಾಯಧನವನ್ನು(Borewell Motor Subsidy) ಪಡೆದುಕೊಳ್ಳಬಹುದು.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾದ ರೈತರು ಯಾರು?
- ರೈತರು ಕರ್ನಾಟಕದ ಕಾಯಂ ನಿವಾಸಿಯಾಗಿರಬೇಕು.
- ರೈತರು ಕಡ್ಡಾಯವಾಗಿ FRUITS ಪೋರ್ಟಲ್ ನಲ್ಲಿ ನೋಂದಣಿಯಾಗಿರಬೇಕು.
- ಅರ್ಜಿದಾರ ರೈತರು 1 ಅಥವಾ ಒಂದಕ್ಕಿಂತ ಹೆಚ್ಚಿನ ಎಕ್ಕರೆ ಕೃಷಿ ಭೂಮಿಯನ್ನು ಹೊಂದಿದ್ದು, ಈ ಕೃಷಿ ಭೂಮಿಯು ತನ್ನ ಹೆಸರಿನಲ್ಲಿರಬೇಕು.
- ಈ ಯೋಜನೆಯಡಿಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
- ಅರ್ಜಿದಾರ ರೈತರು ತಮ್ಮ ಜಮೀನಿನಲ್ಲಿ ಈಗಾಗಲೇ ಬೋರ್ವೆಲ್ ಕೊರೆಸಿರಬೇಕು.
- ಹಿಂದಿನ 5 ವರ್ಷಗಳಲ್ಲಿ ಯಾವುದೇ ಯೋಜನೆಯಡಿಯಲ್ಲಿ (Borewell Motor Subsidy) ಯಾವುದೇ ಯಂತ್ರೋಪಕರಣಗಳಿಗೆ ಸಬ್ಸಿಡಿ ರೂಪದಲ್ಲಿ ಸಹಾಯಧನವನ್ನು ಪಡೆದಿರಬಾರದು.
ಅರ್ಜಿದಾರ ರೈತರು ಹೊಂದಿರಬೇಕಾದ ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣಪತ್ರ
- ಸಣ್ಣ ಮತ್ತು ಅತಿ ಸಣ್ಣ ರೈತರ ದೃಢೀಕರಣ ಪತ್ರ
- ಬ್ಯಾಂಕ್ ಪಾಸ್ ಬುಕ್ ಪ್ರತಿ
- ಪಾಸ್ಪೋರ್ಟ್ ಅಳತೆಯ ಫೋಟೋ
- ಜಮೀನಿನ ಪಹಣಿ
- FRUITS ID
- ಮೋಟಾರ್ ಕೋಟೇಷನ್
ಅರ್ಜಿ ಸಲ್ಲಿಸುವ ವಿಧಾನ:
ರೈತರು ಈ (Borewell Motor Subsidy) ಯೋಜನೆಯಡಿಯಲ್ಲಿ ಅರ್ಜಿಯನ್ನು ಸಲ್ಲಿಸಬೇಕಾದರೆ ಆನ್ಲೈನ್ ಹಾಗೂ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
- ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ.
- ಕೃಷಿ ಯಾಂತ್ರೀಕರಣ ಯೋಜನೆಯಡಿಯಲ್ಲಿ ಮೋಟಾರ್ ಸಬ್ಸಿಡಿ ಗೆ ಅರ್ಜಿ ಸಲ್ಲಿಸುವ ಅರ್ಜಿ ನಮೂನೆಯನ್ನು ಪಡೆದುಕೊಳ್ಳಿ.
- ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.
- ಮೇಲೆ ನಿಗದಿಪಡಿಸಿದ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ನಮೂನೆಯನ್ನು ಕಚೇರಿಗೆ ಸಲ್ಲಿಸಿ ಸ್ವೀಕೃತಿ ಪತ್ರವನ್ನು ಪಡೆದುಕೊಳ್ಳಿ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
- ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಸೇವಾ ಸಿಂಧೂ ಪೋರ್ಟಲ್ https://sevasindhu.karnataka.gov.in/ ಗೆ ಭೇಟಿ ನೀಡಿ.
- ಅಗ್ರಿಕಲ್ಚರಲ್ ಡಿಪಾರ್ಟ್ಮೆಂಟ್ ವಿಭಾಗದಲ್ಲಿ ಕೃಷಿ ಯಾಂತ್ರೀಕರಣ ಯೋಜನೆ ಎಂದು ಟೈಪ್ ಮಾಡಿ.
- ಮೋಟಾರ್ ಸಬ್ಸಿಡಿ ಗೆ ಸಂಬಂಧಿಸಿದ ಅರ್ಜಿ ನಮೂನೆಯನ್ನು ಪಡೆದುಕೊಂಡು, ಅರ್ಜಿ ನಮೂನೆಯಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಿ.
| ವಿಶೇಷ ಸೂಚನೆ: “ಈಗಾಗಲೇ ಸಾಕಷ್ಟು ಜಿಲ್ಲೆಗಳಲ್ಲಿ ಕೃಷಿ ಯಾಂತ್ರೀಕರಣ ಯೋಜನೆಯಡಿಯಲ್ಲಿ ಹೊಸದಾಗಿ ಸಲ್ಲಿಸಿದ ಅರ್ಜಿಯನ್ನು ಸ್ವೀಕರಣೆ ಮಾಡುತ್ತಿದ್ದು, ಅರ್ಜಿ ಸಲ್ಲಿಸುವ ರೈತರು ಕಡ್ಡಾಯವಾಗಿ FRUITS ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಂಡು FRUITS ID ಯನ್ನು ಹೊಂದಿರಬೇಕು.” |
ವಿಶೇಷ ಸೂಚನೆ:
- ಒಬ್ಬ ರೈತರು ಒಮ್ಮೆ ಮಾತ್ರ ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.
- ರೈತರು ಕೊರೆಸಿದ ಬೋರ್ವೆಲ್ ಅಧಿಕೃತವಾಗಿ ನೋಂದಣಿಯಾಗಿರಬೇಕು.
- ರೈತರು ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಬೇಕಾದರೆ ಇಲಾಖೆಯು ಅಂಗೀಕರಿಸಿದ ಕಂಪನಿಗಳ ಮೋಟಾರ್ ಅನ್ನೇ ಖರೀದಿ ಮಾಡಿರಬೇಕು.
ಕೊನೆಯದಾಗಿ:
ಕರ್ನಾಟಕ ಸರ್ಕಾರದ ಕೃಷಿ ಯಾಂತ್ರೀಕರಣ ಯೋಜನೆಯು ರೈತರು ತಮ್ಮ ಕೃಷಿ ಚಟುವಟಿಕೆಯನ್ನು ಆಧುನೀಕರಣ ಗೊಳಿಸಿ ಕಡಿಮೆ ಶ್ರಮದಲ್ಲಿ ಹೆಚ್ಚಿನ ಆದಾಯವನ್ನು ಗಳಿಸಲು ಅವಕಾಶವನ್ನು ಕಲ್ಪಿಸಿದೆ. ನೀವು ರೈತರಾಗಿದ್ದು, ಈ ಯೋಜನೆಯಡಿಯಲ್ಲಿ ಲಭ್ಯವನ್ನು ಪಡೆದುಕೊಳ್ಳ ಬೇಕಾದರೆ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಥವಾ ಸೇವಾ ಸಿಂಧೂ ಪೋರ್ಟಲ್ ಮೂಲಕ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.
ಇತರೆ ಪ್ರಮುಖ ಲಿಂಕುಗಳು:-
- ರೂ 35,000/- ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಅರ್ಜಿ ದಿನಾಂಕ ವಿಸ್ತರಣೆ!
- ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಖಾರಿಫ್ (Kharif) ಹಂಗಾಮಿನ ಬೆಳೆ ಪರಿಹಾರದ ಹಣ!
- ಗೃಹಲಕ್ಷ್ಮಿ ಯೋಜನೆ : ಖಾತೆಗೆ ಬಂತು ₹2,000! ಹಣ ಜಮಾ ಚೆಕ್ ಮಾಡುವ ಲಿಂಕ್!


Sass