Scholarship: ರೂ 35,000/- ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಅರ್ಜಿ ದಿನಾಂಕ ವಿಸ್ತರಣೆ!

Scholarship

ಕರ್ನಾಟಕ ಸರ್ಕಾರದಿಂದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಬಂತು ಗುಡ್ ನ್ಯೂಸ್!. ವಿದ್ಯಾರ್ಥಿಗಳೇ ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ನೀವು ಉತ್ತೀರ್ಣರಾಗಿದ್ದೀರಾ? ಸರ್ಕಾರ ನಮ್ಮಂತ ವಿದ್ಯಾರ್ಥಿಗಳಿಗಾಗಿ ಪ್ರತಿ ವರ್ಷ ನೀಡುತ್ತಿರುವ ಮೆಟ್ರಿಕ್ ನಂತರದ ಸ್ಕಾಲರ್ಶಿಪ್ (Scholarship) ಗೆ ಅರ್ಜಿ ಸಲ್ಲಿಸುವ ಅವಕಾಶ ನಮ್ಮ ಕೈಮೀರಿ ಹೋಯಿತು, ಇಂತಹ ಗೋಲ್ಡನ್ ಪ್ರೋತ್ಸಾಹ ಧನಕ್ಕೆ ಅರ್ಜಿ ಸಲ್ಲಿಸಲು ಕೆಲವು ಕಾರಣಾಂತರಗಳಿಂದ ಆಗಲಿಲ್ಲ ಎಂಬ ಚಿಂತೆ ನಿಮ್ಮನ್ನು ಸದಾ ಕಾಡುತ್ತಿದೆಯೇ ? ಇದೇ ತಕ್ಷಣ ಚಿಂತೆ ಮಾಡುವುದನ್ನು ಬಿಟ್ಟುಬಿಡಿ. ಯಾಕೆ ಗೊತ್ತ ? ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಈ ಪ್ರೋತ್ಸಹ ಧನಕ್ಕೆ ಸರ್ಕಾರ ಅರ್ಜಿ ಸಲ್ಲಿಸಲು ಮತ್ತೊಂದು ಅವಕಾಶವನ್ನು ಮಾಡಿಕೊಟ್ಟಿದೆ. ಹೌದು ಸ್ನೇಹಿತರೆ ನೀವು ಕೇಳುತ್ತಿರುವುದು ನೋಡುತ್ತಿರುವುದು ನಿಜ!

Scholarship in Kannada Information

2026 ನೇ ಸಾಲಿನ ಮೆಟ್ರಿಕ್ ನಂತರದ ಸ್ಕಾಲರ್ಶಿಪ್ (Scholarship) ಗೆ ಅರ್ಜಿ ಸಲ್ಲಿಸುವ ಅವಕಾಶವನ್ನು ಸರ್ಕಾರವು ಪ್ರಮುಖ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 7, 2026 ನೀಡಿತ್ತು. ಆದರೆ ಈ ಪ್ರೋತ್ಸಾಹ ಧನಕ್ಕೆ 20206ನೇ ಸಾಲಿನಲ್ಲಿ ಅನೇಕ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸದೆ ಇರುವ ವಿಚಾರವನ್ನು ಮನಗಂಡು ಸರ್ಕಾರ ಪ್ರಸ್ತುತ ಸಾಲಿನ ವಿದ್ಯಾರ್ಥಿ ವೇತನದ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು “ಫೆಬ್ರವರಿ 28ರ ವರೆಗೆ ವಿಸ್ತರಿಸಿದೆ”.

ಉತ್ತೀರ್ಣರಾದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಈ ಪ್ರೋತ್ಸಾಹ ಧನ (Scholarship) ಕೊಡುವುದು ಸರ್ಕಾರದ ಒಂದು ಉತ್ತಮ ನಿರ್ಧಾರವೆಂದರೆ ತಪ್ಪಾಗಲಾರದು. “ಈ ಪ್ರೋತ್ಸಾಹ ಧನದಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ಮತ್ತೊಂದು ಬಂಪರ್ ಅವಕಾಶ”.

ಸರ್ಕಾರವು ಇಲ್ಲಿ 10ನೇ ತರಗತಿ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಅಂದರೆ ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನ ಸಮಾಜ ಕಲ್ಯಾಣ ಇಲಾಖೆ ಅಡಿಯಿಂದ ಕೊಡಲಾಗುತ್ತದೆ.

ಸರ್ಕಾರವು ಮತ್ತೆ ಈ ದಿನಾಂಕವನ್ನ ವಿಸ್ತರಣೆ ಮಾಡುತ್ತದೆ ಎನ್ನುವ ನಿರೀಕ್ಷೆ ವಿದ್ಯಾರ್ಥಿಗಳಿಗೆ ಬೇಡ. ಕೆಳಗೆ ಕೊಡಲಾದ ಅರ್ಜಿ ಸಲ್ಲಿಸುವ ವಿಧಾನವನ್ನು ಅನುಸರಿಸಿ ಇಂದೇ ಅರ್ಜಿ ಸಲ್ಲಿಸಿ ಅಥವಾ ಸರ್ಕಾರ ಈ ಪ್ರೋತ್ಸಾಹ ಧನಕ್ಕೆ ನೀಡಿರುವ ಅಂತಿಮ ಗಡುವಿನ ಒಳಗೆ ಅರ್ಜಿಯನ್ನು ಸಲ್ಲಿಸಿ.

ವಿದ್ಯಾರ್ಥಿಗಳಿಗೆ ಎಷ್ಟು ಸ್ಕಾಲರ್ಶಿಪ್ ಮೊತ್ತ ಸಿಗುತ್ತದೆ ಗೊತ್ತಾ ?

ಪ್ರಿಯ ವಿದ್ಯಾರ್ಥಿಗಳೇ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಸ್ಕಾಲರ್ಶಿಪ್ (Scholarship) ವಿವರಗಳನ್ನು ಈ ಕೆಳಗೆ ಒಂದು ಸುಂದರವಾದ ಚಾರ್ಟ್ ಮುಖಾಂತರ ನಿಮಗಾಗಿ ರಚಿಸಲಾಗಿದೆ. ಈ ರೀತಿಯಲ್ಲಿ ನಿಮ್ಮ ವಿದ್ಯಾಭ್ಯಾಸಕ್ಕೆ ತಕ್ಕಂತೆ ಸರ್ಕಾರದಿಂದ ಸ್ಕಾಲರ್ಶಿಪ್ ಹಣವು ನೇರವಾಗಿ ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುತ್ತದೆ ಈ ಸ್ಕಾಲರ್ಶಿಪ್(Scholarship) ಮಾತ್ರದಲ್ಲಿ ಯಾವುದೇ ವಿದ್ಯಾರ್ಥಿಗಳಿಗೂ ಭೇದಭಾವ ಇರುವುದಿಲ್ಲ ನೀವು ಪಡೆದಂತಹ ಅಂಕದ ಮೇಲೆ ಈ ವಿದ್ಯಾರ್ಥಿವೇತನವು ನಿರ್ಧಾರವಾಗಿರುತ್ತದೆ.

ಕ್ರಮ ಸಂಖ್ಯೆವಿದ್ಯಾರ್ಥಿ ವರ್ಗಅರ್ಹತಾ ಶೇಕಡಾವಾರುಪ್ರೋತ್ಸಾಹ ಧನ (ರೂ.)
1SSLC ವಿದ್ಯಾರ್ಥಿಗಳು60% ರಿಂದ 75% ಮತ್ತು ಅದಕ್ಕಿಂತ ಹೆಚ್ಚು₹7,500 ರಿಂದ ₹15,000
2ಡಿಪ್ಲೋಮಾ ವಿದ್ಯಾರ್ಥಿಗಳುಉತ್ತೀರ್ಣ₹20,000
3ಪದವಿ (Degree) ವಿದ್ಯಾರ್ಥಿಗಳುಉತ್ತೀರ್ಣ₹25,000
4ಸ್ನಾತಕೋತ್ತರ ಪದವಿ (PG) ವಿದ್ಯಾರ್ಥಿಗಳುಉತ್ತೀರ್ಣ₹30,000
5ವೃತ್ತಿಪರ ಪದವಿ ವಿದ್ಯಾರ್ಥಿಗಳು (ವೈದ್ಯಕೀಯ, ತಾಂತ್ರಿಕ, ಕೃಷಿ, ಪಶು ವೈದ್ಯಕೀಯ)ಉತ್ತೀರ್ಣ₹35,000


ಸರ್ಕಾರದ ಉದ್ದೇಶ (Purpose) :-

ಸರ್ಕಾರ ಯಾವುದೇ ಒಂದು ಯೋಜನೆಯನ್ನು ಘೋಷಣೆ ಮಾಡಿದರು ತನ್ನದೇ ಆದ ಪ್ರಮುಖ ಉದ್ದೇಶವನ್ನು ಒಳಗೊಂಡಿರುತ್ತದೆ. ಅದು ಸರ್ಕಾರಿ ಯೋಜನೆಗಳಾಗಿರಲಿ, ವಿದ್ಯಾರ್ಥಿಗಳ ಪ್ರೋತ್ಸಾಹ ಧನವೇ ಆಗಿರಲಿ ತನ್ನದೇ ಗುರಿಯೊಂದಿಗೆ ಯೋಜನೆಯನ್ನ ಸಿದ್ಧಪಡಿಸುತ್ತದೆ.

ಹಾಗಿದ್ದರೆ ಮೆಟ್ರಿಕ್ ನಂತರದ ಪ್ರೋತ್ಸಾಹ ಧನ ನೀಡಲು ಸರ್ಕಾರ ಯಾವ ಉದ್ದೇಶವನ್ನು ಒಳಗೊಂಡಿದೆ ನೋಡ್ತಾ ಹೋಗೋಣ ಬನ್ನಿ,,,,,

  • ಕರ್ನಾಟಕದ ಅನೇಕ ಕುಟುಂಬಗಳು ತಮ್ಮ ಆರ್ಥಿಕ ಪರಿಸ್ಥಿತಿಯಿಂದಾಗಿ ತಮ್ಮ ಮಕ್ಕಳ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಕೊನೆಗೊಳಿಸಲು ಮುಂದಾಗುತ್ತಾರೆ ಅಥವಾ ವಿದ್ಯಾರ್ಥಿಗಳೇ ಅರ್ಧಕ್ಕೆ ತಮ್ಮ ಶಿಕ್ಷಣವನ್ನು ಮುಗಿಸಲು ಯೋಚಿಸುತ್ತಾರೆ. ಇಂತಹ ವಿಷಯಕ್ಕಾಗಿಯೇ ಸರ್ಕಾರ ಈ ಕುಟುಂಬಗಳಿಗೆ ನೆರವು ನೀಡಲು ಯಾವುದೇ ವಿದ್ಯಾರ್ಥಿಯಾದರು ತನ್ನ ಶಿಕ್ಷಣವನ್ನ ಪೂರ್ಣವಾಗಿ ಮುಗಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಈ ಯೋಜನೆಯನ್ನು ಸರ್ಕಾರ ಸಿದ್ಧಪಡಿಸಿದೆ.
  • ಪ್ರಥಮ ಪ್ರಯತ್ನದಲ್ಲಿ ಉತ್ತಮ ಅಂಕದೊಂದಿಗೆ ಪಾಸ್ ಆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ(Scholarship) ಕೊಟ್ಟು ಮುಂದಿನ ಶಿಕ್ಷಣಕ್ಕೆ ಅವರನ್ನು ಉತ್ತೇಜಿಸುವುದು.
  • ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳನ್ನು ಪದವಿ, ಸ್ನಾತಕೋತ್ತರ, ಡಿಪ್ಲೋಮಾ ಹಾಗೆ ವೃತ್ತಿಪರ ಶಿಕ್ಷಣದ ಕಡೆ ತಮ್ಮ ಗಮನವನ್ನು ಹರಿಸಲು ವಿದ್ಯಾರ್ಥಿವೇತನ ತನ್ನದೇ ಆದ ಪತ್ರ ವಹಿಸುತ್ತದೆ.
  • ಆರ್ಥಿಕವಾಗಿ ಹಿಂದುಳಿದ ಹಾಗೆಯೇ ಬಡ ವಿದ್ಯಾರ್ಥಿಗಳ ಕುಟುಂಬದ ಮೇಲೆ ಹಣದ ಒತ್ತಡ ಇದ್ದೇ ಇರುತ್ತದೆ ಈ ಒತ್ತಡವನ್ನ ಕಡಿಮೆ ಮಾಡುವುದೇ ಸರ್ಕಾರದ ಪ್ರಮುಖ ಉದ್ದೇಶ.
  • 2026 ನೇ ಸಾಲಿನ ಪ್ರೋತ್ಸಾಹ ಧನಕ್ಕೆ ಈಗಾಗಲೇ ಸರ್ಕಾರವು ಆನ್ಲೈನ್ ಅರ್ಜಿಯನ್ನು ಪ್ರಾರಂಭಿಸಿತು ಈ ದಿನಾಂಕವನ್ನು ವಿಸ್ತರಣೆ ಮಾಡಿ ಈಗಾಗಲೇ ಅರ್ಜಿ ಸಲ್ಲಿಸಲು ತಮ್ಮದೇ ಆದ ಕಾರಣಗಳನ್ನು ಒಳಗೊಂಡಿದ್ದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ಕೊಡಬೇಕೆಂದು ದಿನಾಂಕವನ್ನು ವಿತರಣೆ ಮಾಡಿದೆ.
  • ಶಿಕ್ಷಣದ ಮೂಲಕ ಪರಿಶಿಷ್ಟ ಜಾತಿ ಸಮುದಾಯದ ವಿದ್ಯಾರ್ಥಿಗಳನ್ನ ಸಮಾಜದಲ್ಲಿ ಸಮಾನರಾಗಿ ಹಾಗೆ ಸ್ವಾವಲಂಬಿಯಾಗಿ ತಮ್ಮದೇ ಆದ ಜೀವನ ನಡೆಸಬೇಕೆನ್ನುವ ಉದ್ದೇಶವನ್ನು ಹೊಂದಿದೆ.

ಯಾರು ಅರ್ಜಿ ಸಲ್ಲಿಸಲು ಅರ್ಹರು ?

1. ಪರಿಶಿಷ್ಟ ಜಾತಿ (SC/ST) ವಿದ್ಯಾರ್ಥಿಗಳು ಮಾತ್ರ ಈ ವಿದ್ಯಾರ್ಥಿ ವೇತನ (Scholarship)ಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

2. ಮೆಟ್ರಿಕ್ / 10ನೇ ತರಗತಿಯಲ್ಲಿ ಪ್ರಥಮ ಪ್ರಯತ್ನದಲ್ಲಿ ಉತ್ತಮ ಅಂಕಗಳೊಂದಿಗೆ ಪಾಸ್ ಆಗಿರುವ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

3. ವಿದ್ಯಾರ್ಹತೆ :-

  • ಡಿಪ್ಲೋಮಾ
  • ಪದವಿ (Degree)
  • ಸ್ನಾತಕೋತ್ತರ (PG)
  • ವೃತ್ತಿಪರ ಕೋರ್ಸ್‌ಗಳು (ವೈದ್ಯಕೀಯ, ತಾಂತ್ರಿಕ, ಕೃಷಿ, ಪಶು ವೈದ್ಯಕೀಯ) ಗಳನ್ನ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿಯನ್ನ ಸಲ್ಲಿಸಬಹುದು.

ಮೆಟ್ರಿಕ್ ನಂತರದ ಸ್ಕಾಲರ್ಶಿಪ್ (Scholarship) ಇಂದ ವಿದ್ಯಾರ್ಥಿಗಳಿಗಾಗುವ ಅನುಕೂಲ :-

  • ಬಡ ಕುಟುಂಬಗಳ ಮೇಲೆ ಇರುವ ಶಿಕ್ಷಣದ ಹೊರೆ ಕಡಿಮೆಯಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ಕುಟುಂಬದ ಬೆಂಬಲ ಸಿಕ್ಕಂತಾಗುತ್ತದೆ.
  • ಪುಸ್ತಕದ ಶುಲ್ಕ, ಕಾಲೇಜು, ಯೂನಿಫಾರಂ ಶುಲ್ಕ, ಪರೀಕ್ಷೆ ಫೀಸ್ ಮುಂತಾದ ಖರ್ಚುಗಳನ್ನ ಸುಲಭವಾಗಿ ವಿದ್ಯಾರ್ಥಿಗಳು ಈ ಪ್ರೋತ್ಸಾಹ ಧನದಿಂದ ಬರಿಸಿಕೊಳ್ಳಬಹುದು.
  • ಸ್ನಾತಕೋತ್ತರ ಡಿಪ್ಲೋಮಾ ಪದವಿ ಹಾಗೆ ವೃತ್ತಿಪರ ಶಿಕ್ಷಣವನ್ನ ನಿರ್ಭಯವಾಗಿ ಆಯ್ಕೆ ಮಾಡಿಕೊಳ್ಳಲು ಪ್ರೋತ್ಸಾಹಧನ ಪ್ರೋತ್ಸಾಹ ಧನದಿಂದ ಅನುಕೂಲವಾಗುತ್ತದೆ.
  • ಅನೇಕ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಹಣದ ಕೊರತೆಯಿಂದಾಗಿ ಅರ್ಧಕ್ಕೆ ಬಿಡುವ ಪರಿಸ್ಥಿತಿ ನಿವಾರಣೆಯಾಗುತ್ತದೆ.
  • ಉತ್ತಮ ಶಿಕ್ಷಣದಿಂದ ಉತ್ತಮ ಉದ್ಯೋಗ ಹಾಗೆ ಉತ್ತಮವಾಗಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಹಾಗೆ ವಿದ್ಯಾರ್ಥಿಗಳ ಸ್ವಾವಲಂಬಿ ಜೀವನಕ್ಕೆ ದಾರಿ ದೀಪವಾಗುತ್ತದೆ.
  • ಈ ಪ್ರೋತ್ಸಾಹ ಧನದಲ್ಲಿ ಮಧ್ಯವರ್ತಿಗಳ ಹಾವಳಿ ಇಲ್ಲದಿರುವುದರಿಂದ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಹಣವು ನೇರವಾಗಿರುವುದರಿಂದ ಪಾರದರ್ಶಕತೆ ಇರುತ್ತದೆ.
  • ಈ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು ಕೂಡ ಸಮಾಜದಲ್ಲಿ ಎಲ್ಲಾ ವಿದ್ಯಾರ್ಥಿಗಳಂತೆ ಸಮಾನವಾಗಿ ಶಿಕ್ಷಣ ಪಡೆಯುವ ಅವಕಾಶ ಲಭಿಸುತ್ತದೆ.

ಪ್ರೋತ್ಸಹ ಧನದ ಪ್ರಮುಖ ದಿನಾಂಕಗಳು :-

ಮೊದಲ ಪ್ರಮುಖ ದಿನಾಂಕ :-

2026ರ ಪ್ರೋತ್ಸಾಹ ಧನಕ್ಕೆ ಮೊದಲು “ಜನವರಿ ಇಂದ ಅಪ್ಲಿಕೇಶನ್ ಅನ್ನ ಆರಂಭಿಸಿದ ಸರ್ಕಾರವು ಫೆಬ್ರವರಿ 7, 2026 ಕ್ಕೆ ಕೊನೆಯ ದಿನಾಂಕವೆಂದು ಅಧಿಕೃತ ಅಧಿಸೂಚನೆಯಲ್ಲಿ ನಿಗದಿಪಡಿಸಿತ್ತು”.

ಅರ್ಜಿಗೆ ದಿನಾಂಕ ವಿಸ್ತರಣೆ :

ಅನೇಕ ವಿದ್ಯಾರ್ಥಿಗಳು ಈ ಪ್ರೋತ್ಸಾಹ ಧನ (Scholarship) ಕ್ಕೆ ಅರ್ಜಿ ಹಾಕದೆ ಇರುವುದನ್ನ ಗಮನಿಸಿದ ಸರ್ಕಾರ “ಫೆಬ್ರವರಿ 28, 2026 ಕ್ಕೆ ದಿನಾಂಕವನ್ನು ಈಗ ವಿಸ್ತರಣೆ ಮಾಡಿದೆ ಎಂದು ಸಮಾಜ ಕಲ್ಯಾಣ ಇಲಾಖೆಯು ಒಂದು ನೋಟಿಸ್ ಅನ್ನು ಹೊರಡಿತಿದೆ”.

ಅರ್ಜಿ ಸಲ್ಲಿಸಲು ನಿಮ್ಮಲ್ಲಿ ಇರಬೇಕಾದ ದಾಖಲಾತಿಗಳು ಹೀಗಿವೆ :-

ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗಬೇಕೆನ್ನುವ ಉದ್ದೇಶದಿಂದ ಚಾರ್ಟ್ ಮೂಲಕ ದಾಖಲೆಗಳ ಪಟ್ಟಿಯನ್ನು ರಚಿಸಲಾಗಿದೆ.

ಕ್ರಮ ಸಂಖ್ಯೆದಾಖಲೆಉದ್ದೇಶ / ಟಿಪ್
1ಮೆಟ್ರಿಕ್ / 10ನೇ ಫಲಿತಾಂಶಅರ್ಹತೆ ತೋರಿಸಲು
2ಮೇಲಿನ ಕೋರ್ಸಿನ ಪ್ರಮಾಣಪತ್ರ / ಅಂಕಪತ್ರಡಿಪ್ಲೋಮಾ / ಪದವಿ / PG / ವೃತ್ತಿಪರ ವಿದ್ಯಾರ್ಥಿಗಳಿಗೆ
3ಪರಿಶಿಷ್ಟ ಜಾತಿ ಪ್ರಮಾಣಪತ್ರವರ್ಗ ದೃಢೀಕರಣಕ್ಕಾಗಿ
4ಬ್ಯಾಂಕ್ ಖಾತೆ ವಿವರಧನ ನೇರ ವರ್ಗಾವಣೆಗೆ
5ಗುರುತು ದಾಖಲೆ (ಆಧಾರ್ / ಜನ್ಮ ಪ್ರಮಾಣಪತ್ರ)ವ್ಯಕ್ತಿತ್ವ ದೃಢೀಕರಣಕ್ಕೆ
6ಪಾಸ್‌ಪೋರ್ಟ್ ಸೈಜ್ ಫೋಟೋಅರ್ಜಿ ಸೇರಿಸಲು

ಅರ್ಜಿ ಸಲ್ಲಿಸುವ ವಿಧಾನ :-

ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸುವ ಅವಕಾಶವನ್ನು “ಸರ್ಕಾರ ಆನ್ಲೈನ್ ಮತ್ತು ಆಫ್ಲೈನ್ ಎರಡು ವಿಭಾಗದಲ್ಲೂ ನೀಡಿದೆ“.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ ? (Online Application)

ಈ ಮೇಲಿನ ಎಲ್ಲ ಮಾಹಿತಿಯನ್ನು ತಿಳಿದುಕೊಂಡ ಮೇಲೆ ವಿದ್ಯಾರ್ಥಿಗಳ ಮನಸ್ಸಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ ಎನ್ನುವ ಪ್ರಶ್ನೆ ನೋಡಿರುತ್ತದೆ ಈ ಪ್ರಶ್ನೆಗೆ ಉತ್ತರ ಈ ಕೆಳಗೆ ನೀಡಲಾಗಿದೆ.

ವಿವರಣೆ
ಕರ್ನಾಟಕ ಸರ್ಕಾರದ ಸಾಮಾಜಿಕ ಕಲ್ಯಾಣ ಇಲಾಖೆ ಅಥವಾ “Scholarship Portal” ಅನ್ನ ವಿದ್ಯಾರ್ಥಿಗಳು ಮೊದಲು ಪ್ರವೇಶಿಸಬೇಕು.
ನೀವು ಇದೆ ಮೊದಲು ಅರ್ಜಿ ಹಾಕುತ್ತಿದ್ದರೆ “New Registration” ಆಯ್ಕೆ ಮಾಡಿ. ಅಲ್ಲಿ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ಇಮೇಲ್, ವಿದ್ಯುತ್ ವಿವರಗಳನ್ನ ಸರಿಯಾಗಿ ಭರ್ತಿ ಮಾಡಿ.
“Post-Metric Scholarship for SC/ST Students” ಅಥವಾ “Parishishta Jati Scholarship” ಆಯ್ಕೆ ಮಾಡಬೇಕಾಗುತ್ತದೆ.
ಜನ್ಮ ದಿನಾಂಕ, ಹಾಜರಾತಿ ಸಂಖ್ಯೆ, ಪೋಷಕರ ಹೆಸರು, ವಿಳಾಸ, ಕುಟುಂಬದ ವಿವರಗಳು, ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಭರ್ತಿ ಮಾಡಿ.
1. SSLC / 10ನೇ Marks Sheet
2. ಮೇಲಿನ ಕೋರ್ಸ್ Marks Sheet / Certificate
3. ಜಾತಿ ಪ್ರಮಾಣಪತ್ರ (Caste Certificate)
4. ಆಧಾರ್ ಕಾರ್ಡ್ (Identity Proof (Aadhaar))
5. ನಿಮ್ಮ ಫೋಟೋ (Passport size photo)
ಎಲ್ಲಾ ವಿವರಗಳು ಸರಿಯಾದವೆಯೆ ಎಂದು ಮೊದಲು ಪರಿಶೀಲನೆ ಮಾಡಿ. ತಪ್ಪಿದ್ದರೆ ಸರಿ ಸರಿಪಡಿಸಿ.
“Submit” ಬಟನ್ ಒತ್ತಿ. ಅರ್ಜಿ ಸಲ್ಲಿಸಿದ acknowledgment / PDF ರಸೀದಿ ಡೌನ್‌ಲೋಡ್ ಮಾಡಿ.
ಈ ರಸೀದಿ ಮತ್ತು ದಾಖಲೆಗಳ ನಕಲು ಭವಿಷ್ಯದಲ್ಲಿ ಪರಿಶೀಲನೆಗೆ ಉಪಯೋಗವಾಗಬಹುದು. ಜೋಪಾನವಾಗಿ ತೆಗೆದಿಟ್ಟುಕೊಳ್ಳಿ.

ಟಿಪ್ಸ್ :

  1. ದಾಖಲೆಗಳು PDF / JPG ರೂಪದಲ್ಲಿ ಸಿದ್ಧಪಡಿಸಿಟ್ಟುಕೊಳ್ಳಿ.
  2. ಫೋಟೋ ಸ್ಪಷ್ಟವಾಗಿರಬೇಕು ಹಾಗೆ ಇತ್ತೀಚಿನ ಫೋಟೋ ಆಗಿರಬೇಕು .
  3. ಬ್ಯಾಂಕ್ ಖಾತೆ ವಿವರ ತಪ್ಪು ಬಂದರೆ ಹಣ ನೇರ ವರ್ಗಾವಣೆ ಸಾಧ್ಯವಿಲ್ಲ.
  4. ಕೊನೆಯ ದಿನಾಂಕ: 28 ಫೆಬ್ರವರಿ 2026 – ಸಮಯಕ್ಕೆ ಸಲ್ಲಿಸಿ.

ಆಫ್ ಲೈನ್ ಅರ್ಜಿ ಸಲ್ಲಿಸುವ ವಿಧಾನ (Offline Application Format)

ಕೆಳಗೆ ಕೊಡಲಾದ ವಿವರ ವನ್ನ ಅನುಸರಿಸಿ
ನಿಮ್ಮ ಶಾಲೆ / ಕಾಲೇಜು / ಸಮಾಜ ಕಲ್ಯಾಣ ಇಲಾಖೆಯಿಂದ ಮುದ್ರಿತ ಅರ್ಜಿ ಫಾರ್ಮ್ ಅನ್ನ ಅಲ್ಲಿನ ಸಿಬ್ಬಂದಿಗಳ ಬಳಿ ಕೇಳಿ ಪಡೆಯಿರಿ.
ನಿಮ್ಮ ವೈಯಕ್ತಿಕ ಮಾಹಿತಿ: ಹೆಸರು, ಕುಟುಂಬದ ವಿವರ, ವಿಳಾಸ, ಜನ್ಮ ದಿನಾಂಕ, ಪೋಷಕರ ಹೆಸರು, ಬ್ಯಾಂಕ್ ಖಾತೆ ವಿವರಗಳನ್ನು ಸರಿಯಾಗಿ ಅರ್ಜಿಯಲ್ಲಿ ಭರ್ತಿ ಮಾಡಿ.
ಮೆಟ್ರಿಕ್ / ಮೇಲಿನ ಕೋರ್ಸ್ ಅಂಕಪತ್ರ, ಪರಿಶಿಷ್ಟ ಜಾತಿ ಪ್ರಮಾಣಪತ್ರ, ಗುರುತು (ಆಧಾರ್/ಜನ್ಮ ಪ್ರಮಾಣಪತ್ರ), ಮತ್ತು ಪಾಸ್‌ಪೋರ್ಟ್ ಸೈಜ್ ಫೋಟೋ ಈ ಎಲ್ಲ ದಾಖಲೆಗಳು ನಿಮ್ಮಲ್ಲಿ ಇರಬೇಕು.
ಅರ್ಜಿ ಸಲ್ಲಿಸುವ ಮೊದಲು ನೀವು ಭರ್ತಿ ಮಾಡಲಾದ ಅರ್ಜಿ ಫಾರ್ಮ್ ಸರಿ ಇದೆಯೇ ಎಂದು ಪರಿಶೀಲನೆ ಮಾಡಿ
ಅರ್ಜಿಯನ್ನು ಶಾಲೆ / ಕಾಲೇಜು / ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಕೊಟ್ಟು . ಅಧಿಕಾರಿಯ ಸಹಿ / ದೃಢೀಕರಣ ಪಡೆಯಿರಿ.
ಅರ್ಜಿ ಸಲ್ಲಿಸಿದ ದಿನಾಂಕದ ರಸೀದಿ / acknowledgment ಪಡೆದರೆ ಭವಿಷ್ಯದಲ್ಲಿ ಪರಿಶೀಲನೆಗೆ ಉಪಯೋಗವಾಗುತ್ತದೆ.

ಕೊನೆಯ ಮಾತು :-

10ನೇ ತರಗತಿ ಹಾಗೆ ಮೆಟ್ರಿಕ್ ನಂತರದ ಪ್ರೋತ್ಸಾಹ ಧನಕ್ಕೆ ಅರ್ಜಿ ಸಲ್ಲಿಸಲು ಈಗಾಗಲೇ ದಿನಾಂಕವನ್ನು ವಿತರಣೆ ಮಾಡಿದೆ, ಇದನ್ನ ಸಮಾಜ ಕಲ್ಯಾಣ ಇಲಾಖೆಯು ತನ್ನ ಎಕ್ಸ್ ನಲ್ಲಿ ಮಾಹಿತಿ ನೀಡಿರುವುದು ನಮ್ಮ ಗಮನಕ್ಕೆ ಬಂದಿರುವುದರಿಂದ ಅರ್ಜಿ ಸಲ್ಲಿಸದೆ ಇರುವ ವಿದ್ಯಾರ್ಥಿಗಳಿಗೆ ಅನುಕೂಲ ಆಗಬೇಕೆ ಎನ್ನುವ ಉದ್ದೇಶದಿಂದ ಮಾಹಿತಿಯನ್ನು ಸಂಪೂರ್ಣವಾಗಿ ನಮ್ಮ ಕನ್ನಡ ಹೆಲ್ಪ್ ವೆಬ್ ಸೈಟ್ ಮೂಲಕ ತಿಳಿಸುವುದರ ಜೊತೆಗೆ ಯಾವ ರೀತಿಯಲ್ಲಿ ಅರ್ಜಿಸಿ ಅರ್ಜಿ ಸಲ್ಲಿಸಬೇಕೆನ್ನುವುದನ್ನು ತಿಳಿಸಲಾಗಿದೆ. ಇಂತಹ ಗೋಲ್ಡನ್ ಅವಕಾಶವನ್ನ ವಿದ್ಯಾರ್ಥಿಗಳು ಮಿಸ್ ಮಾಡಿಕೊಳ್ಳದೆ ಅಂತಿಮ ದಿನಾಂಕ ದೊಳಗಾಗಿ ಅರ್ಜಿಯನ್ನು ಸಲ್ಲಿಸಿ.

ಎಚ್ಚರಿಕೆಯ ಮಾತು :-

ಸರ್ಕಾರವು 2026 ಮೆಟ್ರಿಕ್ ನಂತರದ ಪ್ರೋತ್ಸಾಹ ಧನಕ್ಕೆ ಅರ್ಜಿ ಸಲ್ಲಿಸುವ ದಿನಾಂಕವನ್ನು 2ನೇ ಬಾರಿ ವಿಸ್ತರಣೆ ಮಾಡಿದೆ ಮತ್ತೆ ಮೂರನೆಯ ಬಾರಿಯೂ ವಿಸ್ತರಣೆ ಮಾಡಬಹುದು, ಆ ಸಮಯದಲ್ಲಿ ಅರ್ಜಿ ಹಾಕುತ್ತೇನೆ ಎಂದು ನೀವು ಎಂದು ಯೋಚಿಸಿದರೆ ಮೊದಲು ನಿಮ್ಮ ತಲೆಯಿಂದ ಆ ವಿಚಾರವನ್ನು ತೆಗೆದುಹಾಕಿ. ಯಾಕೆಂದರೆ 2026 ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವ ಸರ್ಕಾರದ ಯೋಜನೆಯು ಮತ್ತೆ ಅರ್ಜಿ ಸಲ್ಲಿಸುವ ಅವಕಾಶ ಸಿಗುವುದಿಲ್ಲ. ಹಾಗಾಗಿ ಅಂತಿಮ ದಿನಾಂಕದೊಳಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ.

ಇತರೆ ಯೋಜನೆಯ ಪ್ರಮುಖ ಲಿಂಕುಗಳು:-

2 thoughts on “Scholarship: ರೂ 35,000/- ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಅರ್ಜಿ ದಿನಾಂಕ ವಿಸ್ತರಣೆ!

Leave a Reply

Your email address will not be published. Required fields are marked *