ನಿಮ್ಮ ಖಾತೆಗೆ 25 ನೇ ಹಾಗೂ 26 ನೇ ಕಂತಿನ ಗೃಹಲಕ್ಷ್ಮಿ ಹಣ ಜಮಾ ಆಗಿಲ್ವ? ಗೃಹಲಕ್ಷ್ಮಿ ಹಣವನ್ನು ಯಾವಾಗ ಬಿಡುಗಡೆ ಮಾಡಬಹುದು ಅಂತ ಯೋಚನೆ ಮಾಡ್ತಿದೀರಾ? ಹಾಗಿದ್ದರೆ ಈ ಮಾಹಿತಿ ನಿಮಗಾಗಿ.
ಗೃಹಲಕ್ಷ್ಮಿ ಯೋಜನೆ ಬಗ್ಗೆ ಸಚಿವರ ಭರ್ಜರಿ ಸುದ್ದಿಗೋಷ್ಠಿ :
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಈ ವಿಷಯದ ಕುರಿತು ಮೊನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, 25 ನೇ ಹಾಗೂ 26 ನೇ ಕಂತಿನ ಹಣವನ್ನು ಒಟ್ಟಿಗೆ ಗೃಹಲಕ್ಷ್ಮಿಯರ ಬ್ಯಾಂಕ್ ಖಾತೆಗೆ ಜಮಾ ಮಾಡುವುದಾಗಿ ತಿಳಿಸಿದ್ದಾರೆ. ಕೆಲವು ಮಹಿಳೆಯರ ಬ್ಯಾಂಕ್ ಖಾತೆಗೆ ಈಗಾಗಲೇ ಹಣ ಬಿಡುಗಡೆಯಾಗಿರುವ ಸಾಧ್ಯತೆ ಇದ್ದು, ನಿಮ್ಮ ಖಾತೆಗೂ ಹಣ ಜಮಾ ಆಗಿದೆಯೇ? ಎಂದು ಪರಿಶೀಲಿಸಿ.
ಹಣ ಯಾವಾಗ ಜಮಾ ಆಗಲಿದೆ? ಒಂದೇ ದಿನ ಎರಡು ಕಂತುಗಳ ಹಣವನ್ನು ಜಮಾ ಮಾಡಲಾಗುತ್ತದೆಯೇ? ಅಥವಾ ಒಂದೊಂದು ದಿನದಲ್ಲಿ ಒಂದೊಂದು ದಿನದ ಕಂತಿನ ಹಣವನ್ನು ಜಮಾ ಮಾಡಲಾಗುತ್ತದೆಯೇ? ಎನ್ನುವ ಬಗ್ಗೆ ಮಾಹಿತಿ ಬೇಕಿದ್ದರೆ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ. ಇದೇ ರೀತಿಯ ಇನ್ನಷ್ಟು ನ್ಯೂ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ ಕನ್ನಡಹೆಲ್ಫ್ ಗೆ ಭೇಟಿ ನೀಡಿ.
ಯೋಜನೆಯ ಕಿರು ಪರಿಚಯ:
| ಯೋಜನೆಯ ಹೆಸರು | ಗೃಹಲಕ್ಷ್ಮಿ ಯೋಜನೆ |
| ಅರ್ಹ ಫಲಾನುಭವಿಗಳು | ಮಹಿಳೆಯರು |
| ಬಿಡುಗಡೆ ಮಾಡುವ ಕಂತಿನ ಹಣ | 25 ಹಾಗೂ 26 ನೇ ಕಂತು |
| ಈ ಯೋಜನೆಯನ್ನು ಜಾರಿ ಗೊಳಿಸಿದ ಸರ್ಕಾರ | ಕರ್ನಾಟಕ ಸರ್ಕಾರ |
| ಪ್ರತಿ ತಿಂಗಳು ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗುವ ಹಣ | ₹2,000 |

ಯೋಜನೆಯ ಬಗ್ಗೆ ಸರಳ ವಿವರ :
ಗೃಹಲಕ್ಷ್ಮಿ ಯೋಜನೆಯು ಕರ್ನಾಟಕ ಸರ್ಕಾರವು ಆಗಸ್ಟ್ 30, 2023 ರಲ್ಲಿ ಜಾರಿಗೊಳಿಸಿದ ಯೋಜನೆಯಾಗಿದ್ದು, ಈ ಯೋಜನೆಯಡಿಯಲ್ಲಿ ಮನೆಯ ಯಜಮಾನಿಗಳಿಗೆ ಹಣಕಾಸಿನ ನೆರವನ್ನು ನೀಡಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು. “Your A/c Credited with Rs 2,000” ಈ ಯೋಜನೆಯಡಿಯಲ್ಲಿ ಅರ್ಹ ಮಹಿಳೆಯರಿಗೆ ಪ್ರತಿ ತಿಂಗಳಿಗೆ ನೇರ ನಗದು ವರ್ಗಾವಣೆಯ (DBT) ಮೂಲಕ ₹2,000 ಹಣವನ್ನು ನೇರವಾಗಿ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು.
ಈ ಯೋಜನೆಯನ್ನು ಸರ್ಕಾಯ ಯಾಕೆ ಕೈಗೆತ್ತಿಕೊಂಡಿದೆ:
1. ಸಮಾಜದಲ್ಲಿ ಮಹಿಳೆಯರ ಗೌರವವನ್ನು ಹೆಚ್ಚಿಸುವುದು:
ಕುಟುಂಬದ ಪ್ರಗತಿಗೆ ಶ್ರಮಿಸುವ ಹಾಗೂ ಕುಟುಂಬದ ಜವಾಬ್ದಾರಿಯನ್ನು ಹೊತ್ತಿರುವ ಕುಟುಂಬದ ಯಜಮಾನಿಗೆ ಗೌರವ ಸೂಚಕವಾಗಿ ಸರ್ಕಾರವು ಹಣಕಾಸಿನ ನೆರವನ್ನು ನೀಡುವ ಮೂಲಕ ಸಮಾಜದಲ್ಲಿ ಅವಳ ಗೌರವನ್ನು ಹೆಚ್ಚಿಸುವುದು.
2. ಮಹಿಳೆಯರ ಸಬಲೀಕರಣಕ್ಕೆ ಉತ್ತೇಜನ:
ಸರ್ಕಾರವು ಮನೆಯ ಯಜಮಾನಿಯರಿಗೆ ಪ್ರತಿ ತಿಂಗಳಿಗೆ ₹2,000 ಹಣವನ್ನು ನೀಡುವ ಮೂಲಕ ಅವಳನ್ನು ಆರ್ಥಿಕವಾಗಿ ಸ್ವತಂತ್ರಳನ್ನಾಗಿ ಮಾಡಿ, ಅವಳು ಸ್ವಾವಲಂಬಿಗಳಾಗಿ ಜೀವನ ನಡೆಸಲು ಅವಕಾಶ ಕಲ್ಪಿಸುವುದು.
3. ಹಣಕಾಸಿನ ನೆರವು:
ದಿನೇ ದಿನೇ ದುಬಾರಿಯಾಗುತ್ತಿರುವ ದಿನಸಿ ಸಾಮಗ್ರಿಗಳನ್ನು ಸಾಧ್ಯವಾಗದ ಕುಟುಂಬಗಳಿಗೆ ಕರ್ನಾಟಕ ಸರ್ಕಾರ ನೀಡುವ ಈ ಹಣ ಸಾಕಷ್ಟು ಬಡ ಮತ್ತು ಮಧ್ಯಮ ವರ್ಗಗಳ ಕುಟುಂಬಗಳಿಗೆ ಸಾಕಷ್ಟು ನೆರವಾಗಬಹುದು.
4. ಲಿಂಗ ಸಮಾನತೆಗೆ ಹೆಚ್ಚಿನ ಒತ್ತು:
ಪ್ರತಿ ಕುಟುಂಬದ ಯಜಮಾನಿಗೆ ತಮ್ಮ ಕುಟುಂಬದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಾಗೂ ಕುಟುಂಬದ ಒಂದಿಷ್ಟು ಅಧಿಕಾರವನ್ನು ನೀಡುವ ಮೂಲಕ ಕುಟುಂಬದಲ್ಲಿ ಹಾಗೂ ಸಮಾಜದಲ್ಲಿ ಅವಳ ಗೌರವವನ್ನು ಹೆಚ್ಚಿಸಿ, ಲಿಂಗ ಸಮಾನತೆಗೆ ಹೆಚ್ಚಿನ ಒತ್ತನ್ನು ನೀಡುವುದು.
ಮನೆಯ ಯಜಮಾನಿಯರಿಗೆ ಸಿಗುವ ಲಾಭ:
1. ಕುಟುಂಬಕ್ಕೆ ಆರ್ಥಿಕ ನೆರವು:
ಬಡ ಕುಟುಂಬಗಳಲ್ಲಿ ಕೇವಲ ಮನೆಯ ಯಜಮಾನನ ದುಡಿಮೆಯಲ್ಲಿ ಜೀವನ ನಡೆಸಲು ಸಾಧ್ಯವಾಗುವುದಿಲ್ಲ. ಮನೆಯ ಯಜಮಾನಿಗೆ ದೊರೆಯುವ ಗೃಹಲಕ್ಷ್ಮಿ ಹಣವನ್ನು ನೀಡಿ ಮನೆಯ ಯಜಮಾನ ಹಾಗೂ ಯಜಮಾನಿಯರಿಬ್ಬರು ಕೂಡ ಕೈ ಜೋಡಿಸುವ ಮೂಲಕ ಉತ್ತಮ ರೀತಿಯಲ್ಲಿ ಜೀವನ ನಡೆಸಲು ಸಾಧ್ಯವಾಗುತ್ತದೆ.
2. ಸ್ವಂತ ಉದ್ಯಮ ನಡೆಸಲು ಸಹಕಾರಿ:
ಮನೆಯ ಯಜಮಾನಿಯರು ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಬರುವ ಹಣವನ್ನು ಕೂಡಿಟ್ಟು, ತನ್ನ ಮನೆಯಲ್ಲಿಯೇ ಸಣ್ಣ ಪ್ರಮಾಣದಲ್ಲಿ ಉಪ್ಪಿನಕಾಯಿ ಮಾರಾಟ, ಕುರುಕುಲು ತಿಂಡಿಗಳ ಮಾರಾಟ, ಹೋಳಿಗೆ ತಯಾರಿಕೆ ಹಾಗೂ ಇನ್ನಿತರೆ ಸಣ್ಣ ಪುಟ್ಟ ಉದ್ಯೋಗವನ್ನು ಪ್ರಾರಂಭಿಸಬಹುದು.
3. ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು:
ಮನೆಯ ಆರ್ಥಿಕ ಮಟ್ಟವನ್ನು ನಿಭಾಯಿಸಿ ಮಕ್ಕಳ ಶಿಕ್ಷಣಕ್ಕೆ ಹಣವನ್ನು ನೀಡಬೇಕಾದರೆ ಮನೆಯ ಯಜಮಾನನಿಗೆ ಆಗುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಮನೆಯ ಯಜಮಾನಿಯು ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಸ್ಕೂಲ್ ಫೀಸ್, ಎಕ್ಸಾಮ್ ಫೀಸ್ ಹಾಗೂ ಅಗತ್ಯವಾದ ಪುಸ್ತಕಗಳ ಖರ್ಚನ್ನು ನಿಭಾಯಿಸುವ ಗೃಹಲಕ್ಷ್ಮಿ ಹಣ ನೆರವಾಗುತ್ತದೆ.
ಗೃಹಲಕ್ಷ್ಮಿ 25 ನೇ ಹಾಗೂ 26 ನೇ ಕಂತಿನ ಹಣ ಯಾವಾಗ ಜಮಾ ಆಗಲಿದೆ?
ಈ ಯೋಜನೆಗೆ ಅರ್ಹರಾದ ಸಾಕಷ್ಟು ಮಹಿಳೆಯರಿಗೆ ಈಗಾಗಲೇ ಗೃಹಲಕ್ಷ್ಮಿಯ 25 ನೇ ಕಂತಿನ ಹಣವನ್ನು ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದ್ದು, ತಾಂತ್ರಿಕ ಸಮಸ್ಯೆಯಿಂದಾಗಿ ಕೆಲವು ಮಹಿಳೆಯರಿಗೆ ಗೃಹಲಕ್ಷ್ಮಿಯ 25 ನೇ ಕಂತಿನ ಹಣ ಜಮಾ ಆಗಲಿಲ್ಲ. ಅಂತಹ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್!
ಅರ್ಹ ಮಹಿಳೆಯರಿಗೆ ಗೃಹಲಕ್ಷ್ಮಿ 26 ನೇ ಕಂತಿನ ಹಣವನ್ನು ಫೆಬ್ರವರಿಯ ಎರಡನೇ ವಾರದಲ್ಲಿ ಜಮಾ ಮಾಡುವ ಸಾಧ್ಯತೆಗಳಿದ್ದು, ತಾಂತ್ರಿಕ ಸಮಸ್ಯೆಯಿಂದ ಗೃಹಲಕ್ಷ್ಮಿ 25 ನೇ ಕಂತಿನ ಹಣ ಜಮಾ ಆಗದೆ ಇರುವ ಮಹಿಳೆಯರ ಬ್ಯಾಂಕ್ ಖಾತೆಗೆ ಒಟ್ಟಿಗೆ ₹4,000 (₹2,000+₹2,000) ಹಣ ಜಮಾ ಆಗಲಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಗೃಹಲಕ್ಷ್ಮಿ ಹಣ ಸರಿಯಾಗಿ ಬ್ಯಾಂಕ್ ಖಾತೆಗೆ ಜಮಾ ಆಗದಿರಲು ಕಾರಣವೇನು?
- e-KYC ಪ್ರಕ್ರಿಯೆ ಪೂರ್ಣಗೊಳ್ಳದೆ ಇದ್ದರೆ:
ನಿಮ್ಮ ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರ e-KYC ಪೂರ್ಣಗೊಳ್ಳದೆ ಇದ್ದರೆ, ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗುವುದಿಲ್ಲ.
- ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದೆ ಇದ್ದರೆ:
ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು. ಹಾಗೂ ಅದು NPCI ನಲ್ಲಿ ಮ್ಯಾಪಿಂಗ್ ಆಗಿರಬೇಕು
ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ?
- ನೀವು ನೇರವಾಗಿ ಬ್ಯಾಂಕಿಗೆ ಹೋಗಿ ಗೃಹಲಕ್ಷ್ಮಿ ಯೋಜನೆಯ ಹಣವನ್ನ ಚೆಕ್ ಮಾಡುವ ಅವಶ್ಯಕತೆ ಇಲ್ಲ
- ನಿಮ್ಮ ಮೊಬೈಲ್ ನಲ್ಲಿ ಇರುವಂತಹ Play store App ಮೂಲಕ ಡಿ ಬಿ ಟಿ (DBT)ಕರ್ನಾಟಕ ಆಪ್ APP ಅನ್ನು ಡೌನ್ಲೋಡ್ ಮಾಡಿ
- ಅಲ್ಲಿ ಆಧಾರ್ ನಂಬರ್ ಅನ್ನು ಹಾಕಿ ಲಾಗಿನ್ ಮಾಡ್ಬೇಕಾಗುತ್ತೆ
- ಅದಾದ ನಂತರ ಪೇಮೆಂಟ್ ಸ್ಟೇಟಸ್ (Payment Status) ಮೇಲೆ ಕ್ಲಿಕ್ ಮಾಡಿ ಗೃಹಲಕ್ಷ್ಮಿ ಯೋಜನೆಯ ಆಯ್ಕೆ ಮಾಡಿ
- ಅಲ್ಲಿ ನಿಮ್ಮ ಅಕೌಂಟ್ ನಂಬರನ್ನ (Account Number) ಎಂಟ್ರಿ ಮಾಡಿದರೆ ಹಣ ಬಂದಿದೆಯೋ ಇಲ್ಲವೋ ಎಂದು ಮಾಹಿತಿ ನಿಮಗೆ ತಿಳಿಯುತ್ತದೆ
| DBT Karnataka App | Download Now |

