ನಿರ್ಮಲ ಸೀತಾರಾಮನ್ ಮಂಡಿಸಿದ 2026-27 ಸಾಲಿನ ಬಜೆಟ್ ಮಂಡನೆಯಲ್ಲಿ ‘ತೆಂಗು, ಗೇರು, ಶ್ರೀಗಂಧ’ ಕೃಷಿಗೆ ಹಿಚ್ಚಿನ ಆದ್ಯತೆ ಕೊಟ್ಟಿರುವುದು ಸಾಮಾನ್ಯವಾಗಿ ಪ್ರತಿಗೊಬ್ಬರಿಗೂ ಗೊತ್ತೇ ಇದೆ. ಹಾಗೆ ಇತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಂತೂ ರೈತರಿಗೆ ಕೇಂದ್ರ ಬಜೆಟ್ ನಿಂದ ಘೋಷಣೆಯಾದ ತೆಂಗು, ಗೇರು, ಶ್ರೀಗಂಧ ಕೃಷಿ ಬಗ್ಗೆ ಬಾರಿ ಸದ್ದು ಮೂಡಿಸುತ್ತಿದೆ. ಈ ಗಿಡಗಳನ್ನು ನಡಲು ಸರ್ಕಾರದಿಂದ ಭರ್ಜರಿ ಪ್ರೋತ್ಸಾಹ ಧನ ನೀಡಲು ಇಂದಿಂದ ಅಂದರೆ ಫೆಬ್ರವರಿ 7 ನೇ ತಾರೀಕಿನಿಂದ ಆನ್ಲೈನ್ ಅರ್ಜಿ ಯನ್ನ ಸರ್ಕಾರ ಆರಂಭಿಸಿದೆ.
2026 New Budget Subsidy Scheme Information in Kannada
ಈ ಬಜೆಟ್ ನಿಂದ ಹಸಿರು ಹೊಲಗಳಲ್ಲಿ ಹೊಸ ಬಂಡವಾಳ ಮತ್ತು ಉತ್ತಮ ಬೆಳವಣಿಗೆಗೆ ದಾರಿ ತೋರಲಿದೆ. ರೈತರು ತಮ್ಮ ಬೆಳೆಗಳನ್ನು ಸುಲಭವಾಗಿ ಮತ್ತು ಲಾಭದಾಯಕವಾಗಿ ಬೆಳಸಲು ಸರ್ಕಾರದಿಂದ ನೇರ ಸಹಾಯ ದೊರೆಯಲಿದೆ. ಈ ಪ್ರೋತ್ಸಾಹದಿಂದ ರೈತರು ಹೊಸ ತಂತ್ರಜ್ಞಾನ ಮತ್ತು ಉತ್ತಮ ಕೃಷಿ ವಿಧಾನಗಳನ್ನು ಅನುಸರಿಸಿ ಉತ್ಪಾದನೆ ಹೆಚ್ಚಾಗುತ್ತದೆ ಹಾಗೆ ರೈತರು ತಮ್ಮ ಹೆಸರು, ವಿಳಾಸ, ಹೊಲದ ವಿವರ ಹಾಗೂ ಬೆಳೆಸಲಿರುವ ಗಿಡಗಳ ಸಂಖ್ಯೆಯನ್ನು ದಾಖಲಿಸಿ ಅರ್ಜಿ ಸಲ್ಲಿಸಬಹುದು.
ಈ ಪ್ರಕ್ರಿಯೆ ಸರಳವಾಗಿ ಆನ್ಲೈನ್‌ನಲ್ಲಿ ನಡೆಯುತ್ತಿದೆ, ಮತ್ತು ಹತ್ತಿರದ ಕೇಂದ್ರ ಅಥವಾ ಕೃಷಿ ಸಹಾಯ ಕೇಂದ್ರದಿಂದ ಸಹ ಮಾರ್ಗದರ್ಶನ ದೊರೆಯುತ್ತದೆ.
ಮೊನ್ನೆ ನಡೆದ ಬಜೆಟ್ ಬಗ್ಗೆ ತಿಳಿಯದ ರೈತರು ಯಾವ ಸರ್ಕಾರ, ಯಾವ ರಾಜಕಾರಣಿ ಅಧಿಕಾರಕ್ಕೆ ಬಂದರೇನಂತೆ ನಮ್ಮ ರೈತರ ಕಷ್ಟ ಕೇಳುವವರು ಯಾರು ಇಲ್ಲ ಎಂದು ಚಿಂತಿಸುತ್ತಿದ್ದೀರಾ? ಅಥವಾ ಯಾವುದೇ ಕೃಷಿ ಮಾಡಲು ನಮ್ಮಲ್ಲಿ ಬಂಡವಾಳದ ಮೂಲವಿಲ್ಲ ಎಂದು ಹತಾಶರಾಗಿದ್ದೀರಾ? ದುಃಖಿಸಬೇಡಿ!. “ಯಾಕೆಂದರೆ ಮೊನ್ನೆ ತಾನೆ ನಡೆದ ಕೇಂದ್ರ ಬಜೆಟ್ ನಲ್ಲಿ ಅನೇಕ ಕೃಷಿ ಬೆಳೆಗಳನ್ನ ರೈತರು ಬೆಳೆಯಲು ಪ್ರೋತ್ಸಾಹ ಧನ ನೀಡುವುದಾಗಿ ಘೋಷಣೆ ಮಾಡಿದ್ದರು, ಆದರೆ ಇಂದಿನಿಂದ ಇದಕ್ಕೆ ಆನ್ಲೈನ್ ಅರ್ಜಿಯನ್ನು ಸರ್ಕಾರ ಪ್ರಾರಂಭಿಸಿದೆ.
ಅರ್ಜಿ ಸ್ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೆಳಗೆ ಕೊಡಲಾದ ಅರ್ಹತ ಮಾನದಂಡ, ಅಗತ್ಯ ದಾಖಲೆಗಳು, ಯಾರು ಯೋಜನೆಗೆ ಅರ್ಹರು, ಯೋಜನೆಯ ವಿಶೇಷತೆ, ಅರ್ಜಿಸಲ್ಲಿಸುವುದು ಹೇಗೆ ಈ ಎಲ್ಲ ವಿವರವನ್ನ ಓದಿಕೊಂಡು ಯೋಜನೆಗೆ ಅರ್ಜಿಯನ್ನ ಇಂದಿನಿಂದ ಸಲ್ಲಿಸಿ.
ಯೋಜನೆಯ ವಿಶೇಷತೆಗಳು (Specialization) :-
2026ರ ಕೇಂದ್ರ ಬಜೆಟ್ ನಲ್ಲಿ ಸಚಿವೆ ನಿರ್ಮಲ ಸೀತಾರಾಮನ್ ಅವರು ಘೋಷಿಸಿರುವ ಈ ಯೋಜನೆ ಅಡಿಯು ಕರ್ನಾಟಕದ ರೈತರ ಪಾಲಿಗೆ ಅತ್ಯಂತ ಮಹತ್ವದ ಬದಲಾವಣೆಯನ್ನ ತರಲಿದೆ, ಹಾಗಿದ್ರೆ ಇದರ ವಿಶೇಷತೆಗಳನ್ನ ನೋಡ್ತಾ ಹೋಗೋಣ ಬನ್ನಿ.
1. ಉತ್ಪಾದಕತೆ ಹೆಚ್ಚಿಸಲು ಹಳೆಯ ತೋಟಗಳ ಪುನರ್ಚೇತನ :
ಬಹಳ ಹಳೆಯದಾದ ಮತ್ತು ಇಳುವರಿ ಕಡಿಮೆ ನೀಡುತ್ತಿರುವ ತೆಂಗಿನ ಮರಗಳ ಬದಲಿಗೆ ಅತಿ ವೇಗವಾಗಿ ಬೆಳೆಯುವ ಮತ್ತು ಹೆಚ್ಚು ಇಳುವರಿ ನೀಡುವ ಸುಧಾರಿತ ತಳಿಗಳ ಸಸಿಗಳನ್ನು ಗಿಡಗಳನ್ನು ನೆಡುವುದರಿಂದ ಹಿಡಿದು ಅದು ಫಲ ನೀಡುವವರೆಗೆ ತಾಂತ್ರಿಕ ನೆರವು ಈ ಯೋಜನೆ ಮೂಲಕ ಸರ್ಕಾರದಿಂದ ಸಿಗಲಿದೆ.
2. ಶ್ರೀಗಂಧದ ಮರ ರೈತರ ಪಾಲಿನ ಫಿಕ್ಸೆಡ್ ಡೆಪಾಸಿಟ್ ಇದ್ದಂತೆ :
ಶ್ರೀಗಂಧದ ಬೆಳೆಯುವುದು ಕಷ್ಟವಾಗಿತ್ತು ಆದರೆ ಈಗ ಸರ್ಕಾರವೇ ನಿಮಗೆ ಗಿಡ ನೀಡಿ ಅದನ್ನ ಬೆಳೆಸಲು ವರ್ಷಹದಿನವನ್ನು ನೀಡುತ್ತದೆ ಇದು ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಮಾಡುವ ಸುರಕ್ಷತಾ ಹೂಡಿಕೆಯಾಗಿರುತ್ತದೆ
3. ಜಾಗತಿಕ ಮಾರುಕಟ್ಟೆಗೆ ನೇರ ಪ್ರವೇಶ ಪಡೆಯುವ ಅವಕಾಶ :
ರೈತರು ತಮ್ಮ ತೋಟದಲ್ಲಿ ಬೆಳೆದ ಗೇರು ಅಥವಾ ಕೋಕೋವನ್ನ ವಿಶ್ವದ ಪ್ರೀಮಿಯಂ ಬ್ರಾಂಡ್ ಮಾಡಲು ಸೈಕಾರ ನಿರ್ಧರಿಸಿದೆ ಅಂದರೆ ಮಧ್ಯವರ್ತಿಗಳ ಕಾಟವಿಲ್ಲದೆ ನಿಮ್ಮ ಉತ್ಪನ್ನಕ್ಕೆ ಅಂತರಾಷ್ಟ್ರೀಯ ಮಟ್ಟದ ಬೆಲೆ ಸಿಗುವಂತೆ ಮಾಡುವುದು ಮುಖ್ಯ ಉದ್ದೇಶವನ್ನ ಹೊಂದಿದೆ.
4. ಎ ಐ ಪವರ್ (ತಂತ್ರಜ್ಞಾನದ ಬೆಂಬಲ) ರೈತರಿಗೆ :
ರೈತರು ಯಾವ ಗಿಡಗಳನ್ನ ಬೆಳೆಯುತ್ತಾರೋ ಅಂತಹ ಗಿಡಗಳಿಗೆ ರೋಗ ಬಂದಿದೆಯೇ ? ಅಥವಾ ಮಾರುಕಟ್ಟೆ ದರ ಎಷ್ಟಿದೆ ? ಇದನ್ನು ತಿಳಿಯಲು ಕಾಯಬೇಕಿಲ್ಲ ಸರ್ಕಾರದ ಎಐ ಚಾಲಿತ “ಭಾರತ್ ವಿಸ್ತಾರ್” ತಂತ್ರಜ್ಞಾನವು ರೈತರ ಮೊಬೈಲ್ ಗೆ ತಕ್ಷಣ ಮಾಹಿತಿ ನೀಡುತ್ತದೆ.
5. ಕರಾವಳಿ ಮತ್ತು ಮಲೆನಾಡು ಭಾಗದ ರೈತರಿಗೆ ಯೋಜನೆ ವರದಾನ! ಹೇಗೆ ಗೊತ್ತ ?
ಕರ್ನಾಟಕದ ವಿಶಿಷ್ಟ ವಾತಾವರಣಕ್ಕೆ ಹೊಂದಿಕೊಳ್ಳುವ ಈ ಬೆಳೆಗಳಿಗೆ ವಿಶೇಷವಾಗಿ 350 ಕೋಟಿಗೂ ಅಧಿಕ ಮೊತ್ತವನ್ನು ಕೇವಲ ಸಂಸ್ಕರಣ ಘಟಕಗಳಿಗೆ ಮೊನ್ನೆಯ ಬಜೆಟ್ ನಲ್ಲಿ ಮೀಸಲಿಡಲು ನಿರ್ಧರಿಸಿದೆ.
ರೈತರಿಗೆ ಸಿಗುವ ಸಹಾಯಧನ ಎಷ್ಟು ? (subsidy)
ಕೇಂದ್ರದ ಬಜೆಟ್ ನಲ್ಲಿ ಘೋಷಣೆಯಾದ ಸಹಾಯಧನದ ಮೊತ್ತದ ವಿವರಗಳು ಈ ಕೆಳಕಂಡಂತೆ ಇವೆ. ರೈತರಿಗೆ ಹೊಡಿತು ಬಂಪರ್ ಲಾಟರಿ! ಯಾವ ಸರ್ಕಾರಗಳು ನೀಡದೆ ಇರುವ ಸಹಾಯಧನ 2026ರ ಬಜೆಟ್ ನಲ್ಲಿ ಕರ್ನಾಟಕ ರೈತರಿಗೆ ಸಿಕ್ಕಿದೆ.
ತೆಂಗು (coconut) ಬೆಳೆಯ ಸಹಾಯಧನದ ಮೊತ್ತ :
ಹಳೆಯ ಮರಗಳನ್ನು ತೆಗೆದು ಹೊಸ ತಳಿಗಳನ್ನು ನೀಡಲು ಹೆಕ್ಟರಿಗೆ (hectare) ಸುಮಾರು ರೂ 28,000/- ದಿಂದ ರೂ. 30,000/- ವರೆಗೂ ಸಹಾಯಧನ ನೀಡಲು ಸರ್ಕಾರ ಮುಂದಾಗಿ ಆನ್ಲೈನ್ ಅರ್ಜಿ ಆರಂಭಿಸಿದೆ. ಈ ಸಹಾಯಧನವು ಕೇಂದ್ರ ತೆಂಗು ಅಭಿವೃದ್ಧಿ ಮಂಡಳಿ ಮೂಲಕ ರೈತರಿಗೆ ನೀಡುತ್ತದೆ.
ಸರ್ಕಾರದಿಂದ ಸಸಿ ನೆಟ್ಟು ಮೊದಲ ವರ್ಷದಲ್ಲೇ ರಸಗೊಬ್ಬರ ಮತ್ತು ಕೀಟನಾಶಕಗಳಿಗೆ ಶೇಕಡಾ 50% ರಿಂದ 70%ರಷ್ಟು ರಿಯಾಯಿತಿ ರೈತರಿಗೆ ಸಿಗಲಿದೆ.
ಗೇರುಬೇಳೆ ಸಹಾಯಧನದ ಮೊತ್ತ ಹೀಗಿದೆ :
ಹೊಸ ತೋಟಗಾರಿಕಾ ವಿಸ್ತರಣೆ ಯೋಜನೆ ಅಡಿ ಪ್ರತಿ ಹೆಕ್ಟರಿಗೆ ಸುಮಾರು ರೂ 20 ಸಾವಿರ ಸಹಾಯಧನ ಸಿಗುತ್ತದೆ. ಇದನ್ನ ಮೂರು ವರ್ಷಗಳ ಅವಧಿಯಲ್ಲಿ ರೈತರ ಖಾತೆಗೆ ಸರ್ಕಾರವು ಜಮಾ ಮಾಡುತ್ತದೆ.
ಕರಾವಳಿ ರೈತರಿಗೆ ಸಿಕ್ಕಿರುವ ಪ್ಯಾಕೇಜ್ : ಕರಾವಳಿ ಭಾಗದಲ್ಲಿ ಸಂಸ್ಕಾರ ಘಟಕ ಸ್ಥಾಪಿಸಲು ಸಣ್ಣ ಉದ್ದಿಮೆ ದಾರರಿಗೆ ಗರಿಷ್ಟ 10 ಲಕ್ಷದವರೆಗೆ ರಿಯಾಯಿತಿ ಸಾಲ ಸಬ್ಸಿಡಿ ಸಿಗುವ ಅವಕಾಶ ಈ ಯೋಜನೆ ಅಡಿಯಲ್ಲಿ ಸರ್ಕಾರ ಕೊಟ್ಟಿದೆ.
ಶ್ರೀಗಂಧ (sandalwood) ಕೃಷಿಗೆ ಸರ್ಕಾರದಿಂದ ಸಿಗುವ ಸಹಾಯಧನ :-
ಕರ್ನಾಟಕ ಅರಣ್ಯ ಇಲಾಖೆಯ ಮೂಲಕ ಪ್ರತಿ ಶ್ರೀಗಂಧದ ಗಿಡಕ್ಕೆ 3 ವರ್ಷಗಳ ಕಾಲ ಒಟ್ಟು ರೂ 125/- ಪ್ರೋತ್ಸಾಹ ಧನ ಸಿಗುತ್ತದೆ.
- ಒಂದು ವರ್ಷಕ್ಕೆ ₹35/- : ಅಂದರೆ ರೈತರು ಗಿಡ ನೆಟ್ಟು ಅದು ಒಂದು ವರ್ಷ ಯಶಸ್ವಿಯಾಗಿ ಬದುಕಿದರೆ ಪ್ರತಿ ಗಿಡಕ್ಕೆ 35 ಸರ್ಕಾರದಿಂದ ಸಿಗುತ್ತದೆ.
- ಎರಡು ವರ್ಷಕ್ಕೆ ರೂ.40/- : ಅದೇ ಗಿಡ ಎರಡನೇ ವರ್ಷವೂ ಆರೋಗ್ಯಕರವಾಗಿ ಬೆಳೆದರೆ ಮತ್ತೆ ಆಗಿರಕ್ಕೆ 40 ರೂಪಾಯಿ ಸರ್ಕಾರ ಕೊಡುತ್ತದೆ.
- 3 ವರ್ಷಕ್ಕೆ ₹50/- ಸಹಾಯಧನ : ಮೂರನೇ ವರ್ಷವೂ ಗಿಡ ಚೆನ್ನಾಗಿದ್ದರೆ ಪ್ರತಿ ಗಿಡಕ್ಕೆ 50 ರೂಪಾಯಿ ಸರ್ಕಾರದಿಂದ ಸಿಗುತ್ತದೆ.
ಉದ್ಯೋಗ ಖಾತರಿ ಯೋಜನೆ :-
ನೀವು ಸ್ವಂತ ಜಮೀನಿನಲ್ಲಿ ತೆಂಗು, ಶ್ರೀಗಂಧ, ಗೇರು ಗಿಡಗಳನ್ನು ನೆಡಲು ಗುಂಡಿ ತೆಗೆಯುವುದು, ಬೇಲಿ ಹಾಕುವುದಕ್ಕೆ ದಿನಗೂಲಿ ರೂಪದಲ್ಲಿ ಹಣ ಪಡೆಯಬಹುದು ಇದು ಪ್ರತಿ ಎಕರೆಗೆ ಸುಮಾರು ₹40 ಸಾವಿರದಿಂದ ₹50,000/- ವರೆಗೆ ರೈತರಿಗೆ ಕೆಲಸದ ಆಧಾರದ ಮೇಲೆ ಸಿಗುತ್ತದೆ.
ಯೋಜನೆ ಲಾಭ ಪಡೆಯಲು ಯಾರು ಅರ್ಹರು :-
- ಸ್ವಂತ ಜಮೀನು ಇರುವ ರೈತರು
- ಅರ್ಜಿ ಸಲ್ಲಿಸುವ ರೈತರ ಹೆಸರಿನಲ್ಲಿ RTC ಇರಬೇಕು
- 5 ಎಕರೆಗಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ರೈತರಿಗೆ ಅರ್ಜಿ ಸಲ್ಲಿಸಲು ಮೊದಲ ಆದ್ಯತೆಯನ್ನ ನೀಡಲಾಗಿದೆ
- ಉದ್ಯೋಗ ಖಾತರಿ ಅಡಿಯಲ್ಲಿ ಕೂಲಿ ಹಣ ಪಡೆಯಲು ನರೇಗಾ ಕಾರ್ಡ್ ಇರಬೇಕು
- ನಿಮ್ಮ ಜಮೀನಿನಲ್ಲಿ ಹಳೆಯ ಅಥವಾ ರೋಗ ಗ್ರಂಥ ತಂಗಿ ಅಥವಾ ಗೇರು ಮರಗಳಿದ್ದರೆ ಅವುಗಳನ್ನು ತೆಗೆದು ಹೊಸ ಸಸಿ ನೆಡಲು ವಿಶೇಷ ಹಣ ಸಿಗುತ್ತದೆ.
ಅತಿ ಮುಖ್ಯವಾಗಿ ಇಲ್ಲಿ ಗಮನಿಸಿ : ಈ ಯೋಚನೆ ಮೂಲಕ ರೈತರು ತಾವೇ ತಮ್ಮ ಜಮೀನಿನಲ್ಲಿ ಅಥವಾ ಬೇರೆಯವರ ಜಮೀನಿನಲ್ಲಿ ಗಿಡ ನೆಡುವ ಕೆಲಸವನ್ನು ಮಾಡಿದರೆ ದಿನಕ್ಕೆ ರೂ 349/-ನಷ್ಟು ಕೂಲಿ ಸಿಗುತ್ತದೆ. ಹಾಗೆ ಗಿಡ ಗೊಬ್ಬರ ಮತ್ತು ಬೇಲಿ ಹಾಕಲು ಶೇಕಡ 50 ರಿಂದ 90ರಷ್ಟು ಸಬ್ಸಿಡಿ ಸಿಗುತ್ತದೆ. ಇಷ್ಟೇ ಅಲ್ಲದೆ ಶ್ರೀಗಂಧ ಗಿಡಗಳನ್ನ ನೆಟ್ಟರೆ ಮೂರು ವರ್ಷಗಳ ಕಾಲ ಪ್ರತಿ ಗಿಡಕ್ಕೆ ಒಟ್ಟು ₹125/- ಸಹಾಯಧನ ಸಿಗುತ್ತದೆ.
2026ರ ಬಜೆಟ್ ನಲ್ಲಿ ಜಾರಿ ಮಾಡಿರುವ ಈ ಯೋಜನೆಯ ಪ್ರಮುಖ ಉದ್ದೇಶ :-
- ರೈತರ ಆದಾಯ ಮೂಲವನ್ನು ಹೆಚ್ಚಿಸಲು
- ಭವಿಷ್ಯಕ್ಕೆ ಭದ್ರತೆ ಕೊಡಲು ಅಂದರೆ ಶ್ರೀಗಂಧ ಬೆಳೆಯುವುದರಿಂದ ರೈತರಿಗೆ ಸ್ಥಿರವಾದ ಆದಾಯ ಸಿಗುತ್ತದೆ ಎನ್ನುವ ಪ್ರಮುಖ ಉದ್ದೇಶವನ್ನು ಈ ಯೋಜನೆ ಹೊಂದಿದೆ.
- ಗ್ರಾಮೀಣ ಭಾಗದಲ್ಲಿ ಗಿಡ ನೆಡುವ, ಗೊಬ್ಬರ ಹಾಕುವ, ಬೇಲಿ ಹಾಕುವ, ಕೆಲಸಕ್ಕೆ ದಿನಗೂಲಿ ಹಣ ನೀಡುವುದರ ಜೊತೆಗೆ ಬಂದು ಹೊಸ ಉದ್ಯೋಗವನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿದೆ.
- ಮಾರುಕಟ್ಟೆ ತಲುಪಬೇಕೆನ್ನುವ ಪ್ರಮುಖ ಗುರಿಯದ ಹೊಂದಿದೆ.
- ಸುಧಾರಿತ ಸಸಿ ನೆಡುವ ಮೂಲಕ ಉತ್ತಮ ಇಳುವರಿ ಪಡೆಯಬೇಕು ಪ್ರತಿಯೊಬ್ಬ ರೈತರು ಎನ್ನುವ ದೃಷ್ಟಿಯಿಂದ ಈ ಯೋಜನೆಯನ್ನು ಸಿದ್ಧಪಡಿಸಿರುವಂಥದ್ದು.
ಪ್ರಮುಖ ದಾಖಲೆಗಳು :-
- ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ
- ಜಮೀನು ದಾಖಲೆ (ಆರ್ ಟಿ ಸಿ)
- ಬ್ಯಾಂಕ್ ಖಾತೆ ವಿವರ
- ಹಳೆಯ ಮರಗಳ ಮಾಹಿತಿ
- ನರೇಗಾ ಕಾರ್ಡ್
- ನಡುವ ಗಿಡಗಳ ಸಂಖ್ಯೆ
ಅರ್ಜಿ ಸಲ್ಲಿಸುವ ವಿಧಾನ :-
ಸರ್ಕಾರದ ಈ ಯೋಜನೆಗೆ ಇಂದಿನಿಂದ ಕರ್ನಾಟಕದ ಪ್ರತಿಯೊಬ್ಬ ರೈತರು ಸಹ ಆನ್ಲೈನ್ ಮತ್ತು ಆಫ್ಲೈನ್ ಎರಡು ವಿಭಾಗದಲ್ಲೂ ಅರ್ಜಿ ಸಲ್ಲಿಸುವ ಅವಕಾಶವನ್ನು ಮಾಡಿಕೊಟ್ಟಿದೆ.
೧ . ಒನ್ಲೈನ್ ಅರ್ಜಿ
ಕೆಳಗೆ ಕೊಡಲ ಪೋರ್ಟಲ್ ಮೇಲೆ ಕ್ಲಿಕ್ ಮಾಡಿ ಓಪನ್ ಮಾಡಿ.
- MIDH HortNet ಅಥವಾ i-Khedut Portal
ರೈತನಾಗಿ ನೋಂದಣಿ ಮಾಡಿ
- ಆಧಾರ್ ಸಂಖ್ಯೆ
- ಮೊಬೈಲ್ ಸಂಖ್ಯೆ
- ಬ್ಯಾಂಕ್ ಖಾತೆ ವಿವರ
ಹೊಸ ಅರ್ಜಿ ಆರಿಸಿ
- 2026 ತೆಂಗು/ಶ್ರೀಗಂಧ ಯೋಜನೆ
ಅರ್ಜಿ ಫಾರ್ಮ್ ಭರ್ತಿ ಮಾಡಿ
- ವೈಯಕ್ತಿಕ ವಿವರ
- ಜಮೀನು ವಿವರ
- ಬೆಳೆ ವಿವರ
- ಬೆಳೆಯ ಫೋಟೋ / ಜಿಯೋ-ಟ್ಯಾಗ್ (ಅಗತ್ಯವಿದ್ದರೆ)
ಅಗತ್ಯ ದಾಖಲೆ ಅಪ್‌ಲೋಡ್ ಮಾಡಿ
- ಆಧಾರ್ ಕಾರ್ಡ್
- ಬ್ಯಾಂಕ್ ಖಾತೆ
- ಜಮೀನು ದಾಖಲೆ (RTC / ಪಹಾಣಿ)
- ಇತರ ಪ್ರಮಾಣಪತ್ರಗಳು
ಅರ್ಜಿಯನ್ನು ಪರಿಶೀಲಿಸಿ ಮತ್ತು ಸಲ್ಲಿಸಿ
- Submit ಕ್ಲಿಕ್ ಮಾಡಿ
- ಅರ್ಜಿ ಸಂಖ್ಯೆ / ಟ್ರ್ಯಾಕಿಂಗ್ ID ಪಡೆಯಿರಿ
ಅರ್ಜಿ ಸ್ಥಿತಿ ಟ್ರ್ಯಾಕ್ ಮಾಡಿ
- ಪೋರ್ಟಲ್‌ನಲ್ಲಿ “Accepted / Rejected” ನೋಡಬಹುದು
- ಅನುದಾನ ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ
೨. ಆಫ್ ಲೈನ್ ಅರ್ಜಿ ಸಲ್ಲಿಸುವ ವಿಧಾನ :-
ಆಫ್ ಲೈನ್ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ರೈತರು ಈ ಕೆಳಗಿನ ವಿಧಾನವನ್ನು ಅನುಸರಿಸಿ
- ಮೊದಲು ನಿಮ್ಮ ಊರಿನ Krishi Bhavan / ಹಾರ್ಟಿಕಲ್ಚರ್ ಆಫೀಸ್ ಗೆ ರೈತರು ಭೀತಿ ಮಾಡಿ.
- ಅಲ್ಲಿನ ಅಧಿಕಾರಿಗಳ ಬಳಿ ನೀವು ಯಾವ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುತ್ತೀರೋ ಆ ಫಾರಂ ಅನ್ನ ಕೇಳಿ ಪಡೆಯಿರಿ.
- ಹೆಸರು, ವಿಳಾಸ, ಜಮೀನು ವಿವರ ಹಾಗೆ ಬೆಳೆಗಳ ವಿವರ ಇನ್ನೂ ಇತ್ಯಾದಿ ವಿವರಗಳನ್ನೆಲ್ಲ ಭರ್ತಿ ಮಾಡಿ
- ಅರ್ಜಿಯ ಜೊತೆಗೆ ಆಧಾರ್ ಕಾರ್ಡ್ ಬ್ಯಾಂಕ್ ಖಾತೆ ಜಮೀನು ದಾಖಲೆಗಳ ಪ್ರತಿಯನ್ನ ಲಗತ್ತಿಸಿ.
- ಕೊನೆಯದಾಗಿ ಅರ್ಜಿ ಪರಿಶೀಲನೆ ಮತೊಮ್ಮೆ ಮಾಡಿ ಹತ್ತಿರದ Krishi Bhavan / ಅಧಿಕಾರಿಗೆ ಅರ್ಜಿಯನ್ನ ಸಲ್ಲಿಸಿ.
- ಅರ್ಜಿಯನ್ನು ಅಂಗೀಕಾರ ಮಾಡಿದರೆ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಬರುತ್ತದೆ.
ಕೊನೆಯ ಮಾತು :
“ರೈತ ಸೌಹಾರ್ದರೇ, ನಿಮ್ಮ ಹೊಲ ನಿಮ್ಮ ಹೆಮ್ಮೆ”. ಈಗ ತೆಂಗು ಮತ್ತು ಶ್ರೀಗಂಧ, ಗೇರು ಕೃಷಿಗೆ ಸರ್ಕಾರದಿಂದ ಹೊಸ ಯೋಜನೆ ಬಂದಿದೆ. ಇದರಿಂದ ನೀವು ಬೆಳೆ ಮಾಡಲು ಸುಲಭ ಸಹಾಯ ಪಡೆಯಬಹುದು ಮತ್ತು ಅರ್ಜಿ ಸ್ವೀಕರಿಸಿದರೆ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಬರುತ್ತದೆ. ನಿಮ್ಮ ಪರಿಶ್ರಮ, ನಿಮ್ಮ ಕನಸು, ನಿಮ್ಮ ಬೆಳೆಗೆ ಈ ಯೋಜನೆ ಬೆಂಬಲ ನೀಡಲಿದೆ. ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ, ಹಂತ ಹಂತವಾಗಿ ಅರ್ಜಿ ಸಲ್ಲಿಸಿ. ನಿಮ್ಮ ಹೊಲ ಹಸಿರಾಗಲಿ, ನಿಮ್ಮ ಆದಾಯ ಹೆಚ್ಚಲಿ – ಈ ಅವಕಾಶವನ್ನು ಸಂಪೂರ್ಣವಾಗಿ ಉಪಯೋಗಿಸಿ.
“ನಿಮ್ಮ ಪರಿಶ್ರಮ ನಿಮಗೆ ಹಸಿರು ಹೊಲ ಮತ್ತು ಸಮೃದ್ಧಿ ತಂದುಕೊಡಲಿ. ಈ ಯೋಜನೆ ನಿಮ್ಮ ಬೆಳೆಗೆ ಬೆಂಬಲವಾಗಲಿದೆ!”

