Old House Repairing Loan : ತುಂಬಾ ವರ್ಷಗಳ ಹಿಂದೆ ಬೆವರು ಸುರಿಸಿ ದುಡಿದು ಸ್ವಂತ ಸೂರೊಂದನ್ನ ಕಟ್ಟಿಕೊಂಡಿದ್ದೆವು, ಈಗ ಆ ಮನೆಯು ಹಳೆಯದಾಗಿ ಮನೆ ಗೋಡೆ, ಹಂಚುಗಳು ಉದುರುತ್ತಿದೆ ಎನ್ನುವ ಚಿಂತೆ ನಿಮ್ಮಗೆ ಕಾಡಿತ್ತಿದೆಯಾ? ಅಥವಾ ಈ ನಮ್ಮ ಹಳೆ ಮನೆಯನ್ನ ಇಂದಿನ ಕಾಲದಲ್ಲಿ ರಿಪೇರಿ ಮಾಡಿಸಲು ಬೇಕಾದ ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿದ್ದೀರಾ?
Old House Repairing Loan in Kannada information
ಇಲ್ಲ “ಸಣ್ಣ ಪುಟ್ಟ ರಿಪೇರಿ ಮಾಡಿ ಮಾಡಿ ಹಣವೆಲ್ಲ ಕಾಲಿ ಆಗಿ ಕೈ ಸೋತು ನಿಂತಿದಿಯೇ ?” ಆ ಚೆಂತೆ ಇಂದ ಮೊದಲು ಹೊರ ಬನ್ನಿ! (Old House Repairing Loan) ಇಂತ ಒಂದು ಗ್ರಾಹಕರ ಸಮಸ್ಯೆ ಯನ್ನ ಅರಿತುಕೊಂಡ ಕೆನರಾ ಬ್ಯಾಂಕ್ ಬರೋಬ್ಬರಿ 8 ಲಕ್ಷ ಹೋಂ ಲೋನ್ ಕೊಡಲು ಫೆಬ್ರವರಿ ತಿಂಗಳಿಂದ ಮುಂದಾಗಿದೆ.
ಇಂತಹ ದುಬಾರಿ ದಿನಗಳಲ್ಲಿ ದಿನ ನಿತ್ಯದ ಸೇವೆಗಳನ್ನ ನಡೆಸುವುದೇ ಕಷ್ಟ ಅಂತದರಲ್ಲಿ ಮನೆ ಕಟ್ಟುವ ಮಾತಿರಲಿ ಮನೆ ರಿಪೇರಿ ಮಾಡಲು ಹಣ ಇಲ್ಲದ ಪರೀತಿಯಲ್ಲಿ ಬಹಳಷ್ಟು ಜನ ಇದ್ದಾರೆ. ಪ್ರೀತಿಯ ಮಿತ್ರರೇ ಈ ವಿಷಯವಾಗಿ ನೀವು “ದುಃಖಿಸುವುದು ಬೇಡ, ತಿಂತಿಸುವುದು ಬೇಡ” ಸಣ್ಣದಾಗಿ ಸುಂದರವಾಗಿ ಮನೆ ರಿಪೇರಿ ಮಾಡಬೇಕೆನ್ನುವ ಕನಸಿಗೆ ಕೆನರಾ ಬ್ಯಾಂಕ್ ಹೆಗಲು ಕೊಡಲು ಮುಂದಾಗಿದೆ.
ನಿಮ್ಮ ಹಳೆಯ ಮನೆ ದುರಸ್ತಿಗೆ ಕೆನರಾ ಬ್ಯಾಂಕ್ ಸಹಾಯಹಸ್ತ!
“ಇತ್ತೀಚಿನ ದಿನಗಳಲ್ಲಿ ಅನೇಕ ಬ್ಯಾಂಕುಗಳು ಗ್ರಾಹಕರಿಗೆ ತಮ್ಮ ಹೊಸ ಮನೆ ನಿರ್ಮಾಣದ ಕನಸಿಗೆ ಲಕ್ಷಗಟ್ಟಲೆ ಹೋಂ ಲೋನ್ ಕೊಡುವುದನ್ನ ಕಾಮನ್ ಆಗಿ ಪ್ರತಿಯೊಬ್ಬರೂ ನೋಡಿರ್ತೀರ. (Old House Repairing Loan)ಆದರೆ ಮೊಟ್ಟ ಮೊದಲ ಬಾರಿಗೆ ಕೆನರಾ ಬ್ಯಾಂಕ್ ಹಳೆ ಮನೆ ರಿಪೇರಿಗೆ ಲೋನ್ ಅನ್ನು ಕೊಡಲು ಮುಂದಾಗಿರುವಂತದ್ದು”.
ನಮ್ಮ ದೇಶದ ನಂಬಿಕಸ್ತ ಹಾಗೆ ಅತಿ ದೊಡ್ಡ ಮಟ್ಟದಲ್ಲಿ ತನ್ನ ಕಾರ್ಯ ನಿರ್ವಹಿಸುತ್ತಿರುವ ಕೆನರಾ ಬ್ಯಾಂಕ್, ಗ್ರಾಹಕರ ನೆರವಿಗೆ ಸದಾ ಸಿದ್ದ ಎನ್ನುವ ಭರವಸೆ ಯೊಂದಿಗೆ ಇದೀಗ ಮನೆ ರಿಪೇರಿಗೆ ಸಾಲ ಕೊಡುವುದರ ಜೊತೆ EMI ವ್ಯವಸ್ಥೆಯನ್ನು ಕಲ್ಪಿಸಿದೆ.
ಮೇಲೆ ಕೊಡಲಾದ ಕೆಲವೇ ಸಾಲುಗಳನ್ನ ಓದುತ್ತಿದ್ದಾಗಲೇ ನಿಮ್ಮಲ್ಲಿ ಕೆಲಒಂದು ಪ್ರಶ್ನೆಗಳು ಮೂಡಿರಬಹುದು. “ನನ್ನ ದಿನ ನಿತ್ಯ ಕೂಲಿ ಕೆಲ್ಸಕ್ಕೆ ಎಷ್ಟು ಸಾಲ ಸಿಗುತ್ತಾ”? ಅಥವಾ “ಸಂಬಳಕ್ಕೆ ಸಿಗುತ್ತಾ”?, “ತಿಂಗಳಿಗೆ ಎಷ್ಟು ಕಂತು ಕಟ್ಟಬೇಕು”?, “ಬಡ್ಡಿ ಏನಾದರು ಬಹಳಷ್ಟು ಇರುತ್ತಾ” ? ಹೀಗೆ ಹಲವಾರು ನಿಮ್ಮ ಗೊಂದಲ, ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರವನ್ನ ಕೆಳಗೆ ಹಂತ ಹಂತವಾಗಿ ನೀಡಲಾಗಿದ್ದು ಸಂಪೂರ್ಣವಾಗಿ ಓದಿಕೊಂಡು ನಿಮ್ಮ ಹಳೆ ಮನೆ ರಿಪೇರಿಯ ಕನಸಿಗೆ ಮೊದಲ ಹೆಜ್ಜೆ ಇಡಿ.
ರೂ. 8 ಲಕ್ಷ ಸಾಲ ಪಡೆಯಲು ನಿಮ್ಮ ತಿಂಗಳ ದುಡಿಮೆ ಎಷ್ಟಿರಬೇಕು ಗೊತ್ತ ?
ಯಾವುದೇ ಬ್ಯಾಂಕ್ ಇರಲಿ ಗ್ರಾಹಕರಿಗೆ ಸಾಲ ಕೊಡುವ ಮೊದಲು ನಿಮ್ಮ ಮರುಪಾವತಿ ಸಾಮರ್ಥ್ಯವನ್ನ (Repayment Capacity) ಖಂಡಿತವಾಗಿಯೂ ಪರಿಶೀಲನೆ ಮಾಡುತ್ತದೆ. ಹಾಗೆ ಸರಳವಾಗಿ ಹೇಳುವುದಾದರೆ ನಿಮ್ಮ ಕೈಗೆ ಸಿಗುವ ಒಟ್ಟು ತಿಂಗಳ ಸಂಬಳದಲ್ಲಿ ಎಲ್ಲಾ ಸಾಲಗಳ ಇಎಂಐ ಕಟ್ ಆದ ನಂತರವೂ ನಿಮ್ಮ ಸಂಸಾರದ ನಿರ್ವಹಣೆಗೆ ಕನಿಷ್ಠ 35% ಇಂದ 45% ಹಣ ಉಳಿಯ ಆಗಬೇಕು ಎನ್ನುವುದು ಬ್ಯಾಂಕಿನ ಒಂದು ನಿರ್ಧಾರವಾಗಿರುತ್ತದೆ.
ಇನ್ನು ಸರಳವಾಗಿ ಉದಾಹರಣೆ ಮೂಲಕ ವಿವರಣೆ (ಲೆಕ್ಕಾಚಾರ) :
- ಬ್ಯಾಂಕ್ ಸಾಲದ ಮೊತ್ತ : ₹8 ಲಕ್ಷ
- ಅಂದಾಜು ಬಡ್ಡಿ ದರ : 8% ವಾರ್ಷಿಕ ಬಡ್ಡಿ
- ಸಾಲದ ಮರುಪಾವತಿ ಅವಧಿ : 6 ವರ್ಷ
ಈ ಮೇಲಿನ ಲೆಕ್ಕಾಚಾರದ ಪ್ರಕಾರ, ನೀವು ಪ್ರತಿ ತಿಂಗಳು ₹14000 EMI ಕಟ್ಟಬೇಕಾಗುತ್ತದೆ.
ಮುಖ್ಯ ತೀರ್ಮಾನ : ಈ ಸಾಲವನ್ನು ಪಡೆದರೆ ನೀವು ಕೆನರಾ ಬ್ಯಾಂಕ್ ಗೆ ಪ್ರತಿ ತಿಂಗಳು ₹14000 EMI ಯನ್ನ ಆರಾಮಾಗಿ ಕಟ್ಟಲು, ಕನಿಷ್ಠ 40 ಸಾವಿರದಿಂದ 45 ಸಾವಿರದಷ್ಟು ಇತರೆ ಯಾವುದೇ ಕೆಲಸದಿಂದ ಸಂಬಳವನ್ನು ಪಡೆಯುತ್ತಿರಬೇಕು. ನಿಮ್ಮ ಹೆಸರಿನಲ್ಲಿ ಬೇರೆ ಯಾವುದೇ ಕಾರ್ ಲೋನ್, ಪರ್ಸನಲ್ ಲೋನ್, ಇಲ್ಲದಿದ್ದರೆ ಮಾತ್ರ ಈ ಲೆಕ್ಕಾಚಾರ ಅನ್ವಯವಾಗುತ್ತದೆ.
ಬಡ್ಡಿದರ ಮತ್ತು ಸಿಬಿಲ್ ಸ್ಕೋರ್ ರಿಯಾಯಿತಿ :-
ಕೆನರಾ ಬ್ಯಾಂಕ್ ನಿಂದ ಪ್ರತಿಯೊಬ್ಬರಿಗೂ ಒಂದೇ ರೀತಿಯ ಬಡ್ಡಿದರ ಸಿಗುವುದಿಲ್ಲ ಎಂಬ ಮಾಹಿತಿ ನಿಮಗೆ ತಿಳಿದರೆ ಉತ್ತಮ. ಈ ಬ್ಯಾಂಕ್ ನಿಂದ ಓಲ್ಡ್ ಹೌಸ್ ರಿಪೇರಿಗೆ ವರ್ಷಕ್ಕೆ 8.% ಇಂದ ಬಡ್ಡಿ ಆರಂಭವಾಗುತ್ತವೆ ಜೊತೆಗೆ ನಿಮ್ಮ ಸಿಬಿಲ್ ಸ್ಕೋರ್ ಮೇಲೆ ಈ ಬಡ್ಡಿದರ ನಿಂತಿರುತ್ತದೆ.
ಮುಖ್ಯವಾಗಿ ಈ ಕೆಳಗೆ ಗಮನಿಸಿ :
- ಲೈನ್ ನೀವು ಪಡೆಯಲು ಮುಖ್ಯವಾಗಿ 650 ಅಥವಾ ಅದಕ್ಕಿಂತ ಹೆಚ್ಚಿಗೆ ಸಿಬಿಲ್ ಸ್ಕೋರ್ ಇದ್ದಾರೆ ನಿಮ್ಮಗೆ ತುಂಬ ಕಡಿಮೆ ಬಡ್ಡಿ ದರದಲ್ಲಿ ಲೋನ್ ಸಿಗುತ್ತದೆ ಯಾಕೆಂದರೆ ಬ್ಯಾಂಕ್ ನಿಮ್ಮನ್ನ ತುಂಬಾ ಆತ್ಮೀಯ ಹಾಗೆ ವಿಶ್ವಾಸಾರ್ಹ ಗ್ರಾಹಕ ಎಂದು ಪರಿಗಣಿಸುತ್ತದೆ.
- ನೀವ್ ಏನಾದ್ರೂ ಕಡಿಮೆ ಸಿವಿಲ್ ಕೋರ್ಸ್ ಹೊಂದಿದ ಗ್ರಾಹಕರಾದರೆ ನಿಮ್ಮ ಸಿಬಿಲ್ ಸ್ಕೋರ್ 550 ರಿಂದ 600ರ ಹತ್ತಿರ ಇದ್ದಾರೆ ಬಡ್ಡಿ ದರ ಸ್ವಲ್ಪ ಹೆಚ್ಚಾಗಬಹುದು ಅಂದರೆ 8.40% ಅಷ್ಟು ಹೆಚ್ಚಾಗಿರುತ್ತದೆ.
“ಸಾಲಕ್ಕೆ ಅರ್ಜಿ ಹಾಕುವ ಮೊದಲು ಕ್ರೆಡಿಟ್ ಕಾರ್ಡ್ ಬಾಕಿ ಮತ್ತು ಸಣ್ಣ ಸಾಲಗಳನ್ನು ಕ್ಲಿಯರ್ ಮಾಡಿ ಸಿಬಿಲ್ ಸ್ಕೋರ್ ಹೆಚ್ಚಿಸಿಕೊಳ್ಳಿ, ಏಕೆಂದರೆ ಸ್ವಲ್ಪ ಬಡ್ಡಿ ಕಡಿಮೆ ಆದರೂ ದೀರ್ಘಾವಧಿಯಲ್ಲಿ ಲಕ್ಷಾಂತರ ಉಳಿತಾಯ ಸಾಧ್ಯ”.
ನಿಮ್ಮ ಸಂಬಳಕ್ಕೆ ತಕ್ಕಂತೆ ಇಎಂಐ (EMI) ಲೆಕ್ಕಾಚಾರದ ವಿವರ :
8 ಲಕ್ಷ ಸಾಲಕ್ಕೆ ವಿವಿಧ ಸಂಬಳ ಮತ್ತು ಅವಧಿಗೆ ಅನುಗುಣವಾಗಿ ಇಎಂಐ ವಿವರ ಈ ಕೆಳಗೆ ನೀಡಲಾಗಿದೆ.
| ತಿಂಗಳ ಸಂಬಳ (₹) (ಅಂದಾಜು) | ಅನುಮತಿಸಲ್ಪಡುವ EMI (₹) | ಸಾಲದ ಅವಧಿ | ₹14,000 EMI ಸಾಧ್ಯವೇ? | ಯಾರಿಗೆ ಸೂಕ್ತ? |
|---|---|---|---|---|
| ₹30,000 | ₹16,500–₹19,500 | 6 ವರ್ಷ | ರಿಸ್ಕ್ | ಶಿಫಾರಸು ಅಲ್ಲ (ಮನೆ ಖರ್ಚಿಗೆ ಹಣ ಕಡಿಮೆ) |
| ₹35,000 | ₹19,000–₹22,000 | 6 ವರ್ಷ | ಸೀಮಿತ ಸಾಧ್ಯತೆ | ಸಿಂಗಲ್ / ಕಡಿಮೆ ಖರ್ಚು ಇರುವವರು |
| ₹40,000 | ₹22,000–₹26,000 | 6 ವರ್ಷ | ಸಾಧ್ಯ | ಸಣ್ಣ ಕುಟುಂಬ / ಬೇರೆ ಸಾಲ ಇಲ್ಲದವರು |
| ₹45,000 | ₹25,000–₹29,000 | 6 ವರ್ಷ | ಆರಾಮ | ಕುಟುಂಬದ ಖರ್ಚು ಇರುವವರು |
| ₹50,000 | ₹27,500–₹32,500 | 6 ವರ್ಷ | ತುಂಬಾ ಆರಾಮ | ಸ್ಟೇಬಲ್ ಆದಾಯ + ಸೇವಿಂಗ್ ಮಾಡುವವರು |
ಲೋನ್ ಪಡೆಯಲು ನಿಮ್ಮಲ್ಲಿ ಇರಬೇಕಾದ ಪ್ರಮುಖ ಅರ್ಹತೆ :-
- ಕಡ್ಡಾಯವಾಗಿ ಭಾರತೀಯ ನಿವಾಸಿಗಳಾಗಿರಬೇಕು.
- ಸ್ಥಿರವಾದ ಆದಾಯದ ಮೂಲ ಇರಬೇಕು.
- ಕನಿಷ್ಠ 18 ವರ್ಷದಿಂದ 60 ವರ್ಷದೊಳಗಿನ ಅಭ್ಯರ್ಥಿಗಳು ಮಾತ್ರ ಲೋನ್ ಪಡೆಯಲು ಸಾಧ್ಯ.
- ಕ್ರೆಡಿಟ್ ಕಾರ್ಡ್ ಬಿಲ್‌ಗಳು ಸಮಯಕ್ಕೆ ಕಟ್ಟಿರಬೇಕು ಹಾಗೆ ಯಾವುದೇ ಡೀಫಾಲ್ಟ್ / ಓವರ್‌ಡ್ಯೂ ಲೋನ್ ಇರಬಾರದು.
ಕೆನರಾ ಬ್ಯಾಂಕ್ (Canara Bank) ನಿಮ್ಮಲ್ಲಿ ಕೇಳಲಾದ ದಾಖಲೆಗಳು :-
- ಆಧಾರ್ ಕಾರ್ಡ್ / ಪ್ಯಾನ್ ಕಾರ್ಡ್
- ಆದಾಯ ಪ್ರಮಾಣ (ಸಂಬಳ ಸ್ಲಿಪ್ / ಬ್ಯಾಂಕ್ ಸ್ಟೇಟ್ಮೆಂಟ್)
- ವಿಳಾಸ ಪುರಾವೆ
- ಪಾಸ್‌ಪೋರ್ಟ್ ಸೈಸ್ ಫೋಟೋ
ಇತರ ವೆಚ್ಚಗಳು ನಿಮ್ಮ ಗಮನದಲ್ಲಿ ಇರಬೇಕು :-
- Processing Fee: ಸಾಲದ 0.28% ವರೆಗೆ (ಕಡಿಮೆ ಮಾಡುವ ಆಫರ್ ಇದ್ದರೆ ಮನ್ನಾ ಮಾಡಬಹುದು)
- Valuation & Legal Charges: ಆಸ್ತಿಯ ಮೌಲ್ಯ ಪರಿಶೀಲನೆ + ಕಾನೂನು ದಾಖಲೆ ತಪಾಸಣೆ
- Property Insurance: ಸಾಲದ ಅವಧಿಯಲ್ಲಿ ಕಡ್ಡಾಯ, ಮನೆ/ಆಸ್ತಿಯನ್ನು ರಕ್ಷಿಸಲು
ಟಿಪ್: EMI ಬರುವ ಮೊದಲು ಈ ಎಲ್ಲ ವೆಚ್ಚಗಳನ್ನು ಲೆಕ್ಕ ಹಾಕಿ – ಇಲ್ಲದೆ “ಸರ್ಪ್ರೈಸ್ ಖರ್ಚು” ಎದುರಾಗಬಹುದು.
ಬ್ಯಾಂಕ್ ಶಾಖೆಗೆ ಹೋಗಿ ಅಲೆದಾಡುವ ಕಾಲ ಮಾಯವಾಗಿದೆ. ಈಗ ನೀವು ಮನೆಯಲ್ಲಿ ಕುಳಿತು ಕೆನರಾ ಬ್ಯಾಂಕ್ ಬ್ಯಾಂಕ್ ನ “ಆಪ್ ಮೂಲಕ ಸುಲಭವಾಗಿ ಮನೆ ರಿಪೇರಿ ಸಾಲಕ್ಕೆ ಅರ್ಜಿಯನ್ನು ಸಲ್ಲಿಸುವ” ಅವಕಾಶವನ್ನ ಬ್ಯಾಂಕ್ ಗ್ರಾಹಕರಿಗೆ ಪರಿಚಯಿಸಿದೆ.
1. ಆಪ್ ಡೌನ್‌ಲೋಡ್ ಮಾಡಿ – Canara Bank App
2. Home Repair Loan ಸೆಕ್ಷನ್ ತೆರೆಯಿರಿ
3. ವೈಯಕ್ತಿಕ ಮಾಹಿತಿ, ಆದಾಯ ಮತ್ತು ಮನೆ ವಿವರಗಳನ್ನು ಭರ್ತಿ ಮಾಡಿ
4. ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
- ಆಧಾರ್ / ಪ್ಯಾನ್
- ವಿಳಾಸ ಪುರಾವೆ
- ಸಂಬಳ ಸ್ಲಿಪ್ / ಬ್ಯಾಂಕ್ ಸ್ಟೇಟ್ಮೆಂಟ್
- ಪಾಸ್‌ಪೋರ್ಟ್ ಸೈಸ್ ಫೋಟೋ
5. ಅರ್ಜಿಯನ್ನು ಸಲ್ಲಿಸಿ – Submit ಮಾಡಿ
6. ಬ್ಯಾಂಕ್ ಪರಿಶೀಲನೆ – CIBIL, EMI ಸಾಮರ್ಥ್ಯ, ಆಸ್ತಿ ಮೌಲ್ಯ
7. ಅನುಮೋದನೆ ನಂತರ ಹಣ ಮಂಜೂರಾತಿ – EMI ಶಿಡ್ಯೂಲ್ ಪಡೆಯಿರಿ, ಮನೆ ರಿಪೇರಿ ಆರಂಭಿಸಿ
“ಸಾಲ ಪಡೆದರೆ EMI, ಬಡ್ಡಿ ದರ, ಇತರೆ ವೆಚ್ಚಗಳನ್ನು ಲೆಕ್ಕ ಹಾಕಿ ಸಮಯಕ್ಕೆ ಪಾವತಿಸಿ, ಹಣಕಾಸು ನಿರ್ವಹಣೆ ಮಾಡುತ್ತಾ ಹಳೆಯ ಮನೆಯ ಸುಂದರ ರಿಪೇರಿಯನ್ನು ಮುಗಿಸಿ.”
ನನ್ನ ಅಂತಿಮ ಮಾತು :
ಕೆನರಾ ಬ್ಯಾಂಕ್ ಈಗ ನಿಮ್ಮ ಹಳೆಯ ಮನೆಯ ರಿಪೇರಿ (Old House Repairing Loan) ಕನಸಿಗೆ ನೆರವು ನೀಡುತ್ತಿದೆ, ₹8 ಲಕ್ಷ ಹೋಂ ಲೋನ್ 6 ವರ್ಷ ಅವಧಿಗೆ 8% ಬಡ್ಡಿ ದರದಲ್ಲಿ (CIBIL ಸ್ಕೋರ್ ಅವಲಂಬಿಸಿ) ಲಭ್ಯ. EMI ₹14,000 ನಿಮ್ಮ ಸಂಬಳ ಮತ್ತು ಖರ್ಚಿಗೆ ಅನುಗುಣವಾಗಿರಬೇಕು, ಜೊತೆಗೆ Processing Fee, Legal/Valuation Charges, Property Insurance ಮುಂತಾದ ಇತರೆ ವೆಚ್ಚಗಳನ್ನು ಸಹ ಗಮನದಲ್ಲಿಡಿ. ಅರ್ಜಿಯನ್ನು ಬ್ಯಾಂಕ್ ಆಪ್ ಮೂಲಕ ಸುಲಭವಾಗಿ ಸಲ್ಲಿಸಬಹುದು, ಪರಿಶೀಲನೆ ನಂತರ ಹಣ ನಿಮ್ಮ ಖಾತೆಗೆ ಮಂಜೂರಾಗುತ್ತದೆ. EMI ನಿಯಮಿತವಾಗಿ ಪಾವತಿಸಿ, ನಿಮ್ಮ ಹಣಕಾಸು ಸುಧಾರಣೆ ಮಾಡಿ, ಹಳೆಯ ಮನೆಯ ಸುಂದರ ರಿಪೇರಿ, ನಿಮ್ಮ ಕನಸಿನ ಮನೆಗೆ ಅಡಿಪಾಯ!.
Disclaimer :
“ನಿಮ್ಮ ಮನೆಯ ಕನಸು ನನಸಾಗಲಿ ಎಂಬ ನಮ್ಮ ಪ್ರೀತಿಯ ಸಲಹೆ ಮಾತ್ರ ಇದು. ಆದರೆ ಹಣಕಾಸು ನಿರ್ಧಾರ, ಬಡ್ಡಿ ದರಗಳು ಅಥವಾ ನಿಯಮಗಳು ಬದಲಾಯಿಸಬಹುದು. ಹೀಗಾಗಿ, ಕೊನೆಯದಾಗಿ ನಿಮ್ಮ ಹಳೆಯ ಮನೆ ರಿಪೇರಿ ಲೋನ್ ಕುರಿತಂತೆ ನಿರ್ಧಾರ ಕೈಗೊಳ್ಳುವ ಮೊದಲು, ದಯವಿಟ್ಟು ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ – ನಿಮ್ಮ ಕನಸು ಸುರಕ್ಷಿತವಾಗಲಿ.”
ಇತರೆ ಪ್ರಮುಖ ಲಿಂಕುಗಳು:
- ಎಲ್ಲಾ ಗ್ರಾಮ ಪಂಚಾಯಿತಿಯಿಂದ ವಿದ್ಯಾರ್ಥಿಗಳಿಗೆ ಸಿಗುತ್ತೆಈ ವಿದ್ಯಾರ್ಥಿ ವೇತನ!
- ಹೊಸ ಅಡಿಕೆ ತೋಟಕ್ಕೆ ಬಾರಿ ಮೊತ್ತದ ಸಬ್ಸಿಡಿ!

