Swavalambi Sarathi Yojane: 4ಲಕ್ಷ ರೂ ಸಹಾಯಧನ : ವಾಹನ ಖರೀದಿದಾರರಿಗೆ ಗುಡ್ ನ್ಯೂಸ್!

Swavalambi Sarathi Yojane

Swavalambi Sarathi Yojane : ನಿರುದ್ಯೋಗಿಗಳಿಗೆ ಬಂಪರ್ ಗುಡ್ ನ್ಯೂಸ್! ಉದ್ಯೋಗವನ್ನು ಹುಡುಕಿಕೊಂಡು ಹೋಗಿ ಎಲ್ಲಿಯೂ ಉದ್ಯೋಗ ಸಿಗದೇ ಮನೆಯಲ್ಲೇ ಕುಳಿತಿರುವವರರಿಗೆ ಕರ್ನಾಟಕ ಸರ್ಕಾರ ಬಂಪರ್ ಆಫರ್ ನೀಡಿದೆ. ನೀವು ಕೂಡ ಉದ್ಯೋಗವಿಲ್ಲದೆ ಹಾಗೆ ಕುಳಿತಿದ್ದೀರಾ? ಹಾಗಿದ್ದರೆ ಈ ಮಾಹಿತಿ ನಿಮಗಾಗಿ.

Swavalambi Sarathi Yojane

ಕರ್ನಾಟಕ ಸರ್ಕಾರವು ನಿನ್ನೆ ಅಂದರೆ ಫೆಬ್ರುವರಿ 5 ರಂದು ನಡೆದ ಕರ್ನಾಟಕ ಸಚಿವ ಸಂಪುಟದಲ್ಲಿ ಸ್ವಾವಲಂಬಿ ಸಾರಥಿ ಯೋಜನೆಗೆ (Swavalambi Sarathi Yojane)ಸಂಬಂಧಿಸಿದ ಮಹತ್ವದ ನಿರ್ಧಾರವನ್ನು ತಗೆದುಕೊಂಡಿದ್ದು, ನಿರುದ್ಯೋಗಿ ಅಭ್ಯರ್ಥಿಗಳು ಸ್ವಂತ ಉದ್ಯೋಗವನ್ನು ಕಂಡುಕೊಳ್ಳಲು ಇದೊಂದು ಸುವರ್ಣಾವಕಾಶ.

ಸರ್ಕಾರವು ಸ್ವಾವಲಂಬಿ ಸಾರಥಿ ಯೋಜನೆಯ ಅಭಿವೃದ್ಧಿಗೆ ಬಾರಿ ಮೊತ್ತದ ಹಣಕಾಸಿನ ಅನುಮೋದನೆಯನ್ನು ನೀಡಿದ್ದು, ಅರ್ಹ ಅಭ್ಯರ್ಥಿಗಳು ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಲು ಸೇವಾ ಸಿಂಧೂ ಪೋರ್ಟಲ್ ಮೂಲಕ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ಸ್ವಾವಲಂಬಿ ಸಾರಥಿ ಅರ್ಜಿ ಸಲ್ಲಿಕೆ ಯೋಜನೆ

Swavalambi Sarathi Yojane : ನೀವು ಕೂಡ ಸ್ವಂತ ಉದ್ಯೋಗ ಮಾಡುವ ಕನಸ್ಸನ್ನು ಕಾಣುತ್ತಿದ್ದೀರಾ? ಹಾಗಿದ್ದರೆ ಈ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ ನಿಮ್ಮ ಸ್ವಂತ ಉದ್ಯೋಗದ ಕನಸ್ಸನ್ನು ನನಸ್ಸು ಮಾಡಿಕೊಳ್ಳಿ. ಇದೇ ರೀತಿಯ ಇನ್ನಷ್ಟು ಸ್ಕೀಮ್ ಗಳ ಬಗ್ಗೆ ಮಾಹಿತಿ ಬೇಕಿದ್ದರೆ, ನಮ್ಮ ವೆಬ್ಸೈಟ್ ಕನ್ನಡಹೆಲ್ಫ್ ಗೆ ಭೇಟಿ ನೀಡಿ.

ಯೋಜನೆಯ ಕಿರು ಪರಿಚಯ:

ಯೋಜನೆಯ ಹೆಸರುಸ್ವಾವಲಂಬಿ ಸಾರಥಿ ಯೋಜನೆ (Swavalambi Sarathi Yojane)
ಅರ್ಹರಾದ ಅಭ್ಯರ್ಥಿಗಳುನಿರುದ್ಯೋಗಿ ಯುವಕರು
ಯೋಜನೆಯ ಲಾಭವಾಹನ ಖರೀದಿ ಮಾಡಲು ಸಬ್ಸಿಡಿ ರೂಪದಲ್ಲಿ ಸಹಾಯಧನ ನೀಡುವುದು
ಅರ್ಜಿ ಸಲ್ಲಿಸುವ ವಿಧಾನಆನ್ಲೈನ್
ಅರ್ಜಿ ಸಲ್ಲಿಸುವ ಅಧಿಕೃತ ವೆಬ್ಸೈಟ್sevasindhu.karnataka.gov.in/

ಏನಿದು ಸ್ವಾವಲಂಬಿ ಸಾರಥಿ ಯೋಜನೆ?

ಸ್ವಾವಲಂಬಿ ಸಾರಥಿ ಯೋಜನೆಯು (Swavalambi Sarathi Yojane) ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಈ ಯೋಜನೆಯಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳ ನಿರುದ್ಯೋಗಿ ಯುವಕರಿಗೆ ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಟ್ಯಾಕ್ಸಿ, ಆಟೋ ರಿಕ್ಷಾ, ಸರಕು ಸಾಗಣೆ ವಾಹನಗಳನ್ನು ಕೊಳ್ಳಲು ಸರ್ಕಾರವು ಬಾರಿ ಮೊತ್ತದ ಹಣಕಾಸಿನ ನೆರವನ್ನು ನೀಡುತ್ತದೆ.

ಸಂತೋಷದ ಸುದ್ದಿ ಏನೆಂದರೆ, ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸ್ವಾವಲಂಬಿ ಸಾರಥಿ ಯೋಜನೆಯಡಿಯಲ್ಲಿ (Swavalambi Sarathi Yojane) ಫಲಾನುಭವಿಗಳಿಗೆ ಆಟೋ ರಿಕ್ಷಾ, ಇ-ವೆಂಡಿಂಗ್ ಹಾಗೂ ಇತರೆ ವಾಹನಗಳನ್ನು ಖರೀದಿಸಲು ಬಾರಿ ಮೊತ್ತದ ಸಹಾಯಧನವನ್ನು ನೀಡಲು ಅನುಮೋದನೆಯನ್ನು ನೀಡಿದ್ದು, ಈ ವಿಷಯದ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಹಂತದಲ್ಲಿ ಕೆಳಗಿನ ಹಂತದಲ್ಲಿ ನೀಡಲಾಗಿದ್ದು, ಅವುಗಳನ್ನು ಓದಿಕೊಳ್ಳಿ.

ನಿನ್ನೆ ನಡೆದ ಕರ್ನಾಟಕ ಸಚಿವ ಸಂಪುಟವು ಯಾವುದಕ್ಕೆಲ್ಲ ಅನುಮೋದನೆ ನೀಡಿದೆ?

ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ್ಲಲಿ ನಡೆದ ಸಚಿವ ಸಂಪುಟ ಸಭೆಯು ಸ್ವಾವಲಂಬಿ ಸಾರಥಿ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಒಂದಿಷ್ಟು ಸಹಾಯವನವನ್ನು ನೀಡಲು ಅನುಮೋದನೆ ನೀಡಿದೆ. ಅವುಗಳೆಂದರೆ,

  • ಸ್ವಾವಲಂಬಿ ಸಾರಥಿ ಯೋಜನೆಯಡಿಯಲ್ಲಿ, ಆಟೋ ರಿಕ್ಷಾ, ಮತ್ತು ಕಾರನ್ನು ಖರೀದಿ ಮಾಡಲು ಫಲಾನುಭವಿಗಳಿಗೆ ₹19.18 ಕೋಟಿ ಹಣಕಾಸಿನ ನೆರವನ್ನು ಒದಗಿಸಲು ನಿನ್ನೆ ನಡೆದ ಸಚಿವ ಸಂಪುಟ ಅನುಮೋದನೆ ನೀಡಿದೆ.
  • ಬೀದಿ ಬದಿ ವ್ಯಾಪಾರಿಗಳಿಗೆ ತಮ್ಮ ವ್ಯಾಪಾರವನ್ನು ಸುಲಭ ಹಾಗೂ ಆಧುನೀಕರಣ ಗೊಳಿಸಲು ಅಗತ್ಯವಾದ ಇ-ವೆಂಡಿಂಗ್ ವಾಹನವನ್ನು ಖರೀದಿಸಲು ₹42.82 ಕೋಟಿ ಸಹಾಯಧನವನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.

ಸ್ವಾವಲಂಬಿ ಸಾರಥಿ ಯೋಜನೆಯ ಮುಖ್ಯ ಗುರಿ?

1. ಆರ್ಥಿಕ ಸಬಲೀಕರಣ:

ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿದುಳಿದ ವರ್ಗಗಳ ಅಭ್ಯರ್ಥಿಗಳಿಗೆ ವಿಶೇಷವಾಗಿ ಈ ಯೋಜನೆಯಡಿಯಲ್ಲಿ ವ್ಯಾಪಾರಕ್ಕೆ ಅಗತ್ಯವಾದ ವಾಹನಗಳನ್ನು ಖರೀದಿಸಲು ಹೆಚ್ಚಿನ ಸಬ್ಸಿಡಿ ದರದಲ್ಲಿ ಸಹಾಯಧನವನ್ನು ನೀಡುವ ಮೂಲಕ ಅವರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಉತ್ತೇಜನ ನೀಡುವುದು.

2. ಸ್ವಂತ ಉದ್ಯೋಗವನ್ನು ಸೃಷ್ಟಿಸುವುದು:

ನಿರುದ್ಯೋಗಿ ಯುವಕರಿಗೆ ಸಬ್ಸಿಡಿ ರೂಪದಲ್ಲಿ ಸಹಾಯಧನವನ್ನು ನೀಡುವ ಮೂಲಕ ಸ್ವಂತ ವಾಹನ ಖರೀದಿಸಿ, ತಾವೇ ಮಾಲೀಕರಾಗಿ ಸ್ವ-ಉದ್ಯೋಗ ನಡೆಸಲು ಅನುವು ಮಾಡಿಕೊಡುವುದು.

3. ಜೀವನೋಪಾಯಕ್ಕೆ ಭದ್ರತೆ ಒದಗಿಸುವುದು:

ಸರ್ಕಾರವು ಈ ಒಂದು ಯೋಜನೆಯಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶವನ್ನು ಸೃಷ್ಟಿಸುವ ಮೂಲಕ ಸ್ಥಿರವಾಗಿ ಆದಾಯವನ್ನು ಗಳಿಸಲು ಅವಕಾಶ ಕಲ್ಪಿಸುವುದು.

4. ವ್ಯಾಪಾರಗಳಲ್ಲಿ ಆಧುನಿಕತೆಯನ್ನು ಹೆಚ್ಚಿಸುವುದು:

ಬೀದಿ ಬದಿ ವ್ಯಾಪಾರಿಗಳು ಸಾಂಪ್ರದಾಯಿಕ ತಳ್ಳು ಗಡಿಗಳ ಮೂಲಕ ವ್ಯಾಪಾರ ಮಾಡುವ ಬದಲಿಗೆ ಆಧುನೀಕೃತ ಹಾಗೂ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸಿ ವ್ಯಾಪಾರ ಮಾಡಲು ಉತ್ತೇಜನ ನೀಡುವುದು.

ಫಲಾನುಭವಿಗಳಿಗೆ ಈ ಯೋಜನೆ ಎಷ್ಟು ಅನುಕೂಲವಾಗಿದೆ?

1. ವಾಹನಗಳಿಗೆ ಬಾಡಿಗೆ ಕಟ್ಟುವ ಹೊರೆ ಕಡಿಮೆ:

ಸರ್ಕಾರವು ಈ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ವಾಹನವನ್ನು ಖರೀದಿಮಾಡಲು ಸಹಾಯಧನವನ್ನು ನೀಡುವ ಮೂಲಕ, ಅವರು ವಾಹನ ಚಾಲಕನಿಂದ ವಾಹನದ ಮಾಲೀಕನಾಗಿ ಬಡ್ತಿಯನ್ನು ಪಡೆದುಕೊಳ್ಳಬಹುದು.

ಇದರಿಂದ ಬಾಡಿಗೆಗೆ ವಾಹನ ನೀಡಿದವರಿಗೆ ಸರಿಯಾದ ಸಮಯದಲ್ಲಿ ಬಾಡಿಗೆಯ ಹಣವನ್ನು ನೀಡದೆ ಇದ್ದಾಗ ಅವರು ಮಾಡುವ ಕಿರಿಕಿರಿ ತಪ್ಪುತ್ತದೆ.

2. ಸ್ವತಂತ್ರವಾಗಿ ಉದ್ಯೋಗ ನಡೆಸುವುದು:

ಬಾಡಿಗೆ ವಾಹನಗಳಾದರೆ ಅಗತ್ಯವಿರುವ ಸಮಯದಲ್ಲಿ ಸಿಗುವುದಿಲ್ಲ. ಇದರಿಂದಾಗಿ ಸರಕನ್ನು ಸಾಗಿಸಬೇಕಾದ ಅಂಗಡಿಗಳಿಗೆ ಸರಿಯಾದ ಸಮಯದಲ್ಲಿ ಸರಕುಗಳನ್ನ ಪೂರೈಕೆ ಮಾಡಲು ಆಗುವುದಿಲ್ಲ. ಇದರಿಂದಾಗಿ ಅಂಗಡಿ ಮಾಲೀಕರು ವಿಶ್ವಾಸವನ್ನು ಕಳೆದುಕೊಳ್ಳುವ ಸಾಧ್ಯತೆಗಳಿರುತ್ತದೆ.

ಫಲಾನುಭವಿಗಳು ಸ್ವಂತ ಸಾರಿಗೆಯನ್ನು ಖರೀದಿಸುವ ಮೂಲಕ ಸಮಯಕ್ಕೆ ಸರಕುಗಳನ್ನು ಸಾಗಾಣಿಕೆ ಮಾಡಿ ಅಂಗಡಿಯ ಮಾಲೀಕರ ನಂಬಿಕೆಯನ್ನು ಉಳಿಸಿಕೊಳ್ಳಬಹುದು.

3. ಆಧುನೀಕೃತ ವಾಹನಗಳಿಂದ ಹೆಚ್ಚಿನ ಉಳಿತಾಯ:

ಬೀದಿ ಬದಿ ವ್ಯಾಪಾರಿಗಳು ಸಾಂಪ್ರದಾಯಿಕ ತಳ್ಳುಗಾಡಿಗಳನ್ನು ಉಪಯೋಗಿಸಿ ವ್ಯಾಪಾರ ಮಾಡುವುದಾದರೆ ಹೆಚ್ಚಿನ ಸಮಯ ಬೇಕಾಗುತ್ತದೆ. ಹಾಗೂ ಇದರ ಜೊತೆಗೆ ವ್ಯಾಪಾರಿಗಳ ಶ್ರಮವು ಹೆಚ್ಚು.

ಆದರೆ, ಆಧುನೀಕೃತ ಇ-ವೆಂಡಿಂಗ್ ವಾಹನಗಳನ್ನು ಬಳಸಿ ವ್ಯಾಪಾರ ಮಾಡಿದರೆ ವ್ಯಾಪಾರವು ಸುಲಭ, ಯಾವುದೇ ಶ್ರಮದ ಅಗತ್ಯವಿಲ್ಲ ಹಾಗೂ ವಿದ್ಯುತ್ ಚಾಲಿತ ವಾಹನವಾಗಿರುವುದರಿಂದ ಪೆಟ್ರೋಲ್ ಗಳ ಖರ್ಚು ಇರುವುದಿಲ್ಲ.

ಯಾವ ವರ್ಗಗಳಿಗೆ ಎಷ್ಟೆಷ್ಟು ಸಹಾಯಧನ ನಿಗದಿಪಡಿಸಲಾಗಿದೆ?

ಜಾತಿ ಮತ್ತು ವರ್ಗಗಳಿಗೆ ಅನುಗುಣವಾಗಿ ಸಬ್ಸಿಡಿ ದರವನ್ನು ನಿಗದಿಪಡಿಸಲಾಗಿದೆ. ಅವುಗಳು ಈ ಕೆಳಕಂಡಂತಿದೆ,

  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಫಲಾನುಭವಿಗಳು:

ವಾಹನದ ಒಟ್ಟು ಮೊತ್ತದ ಮೇಲೆ 75% ಸಹಾಯಧನವನ್ನು ಪಡೆದುಕೊಳ್ಳಬಹುದು. ಉಳಿದ 25% ಮೊತ್ತವನ್ನು ತಾವೇ ಭರಿಸಬೇಕಾಗುತ್ತದೆ.

ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ(ST) ಗಳ ಫಲಾನುಭವಿಗಳು ಸರ್ಕಾರದಿಂದ ಒಟ್ಟು ₹4,00,000 ದ ವರೆಗೆ ಹಣಕಾಸಿನ ನೆರವನ್ನು ಪಡೆದುಕೊಳ್ಳಬಹುದಾಗಿದೆ.
  • ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತ ಫಲಾನುಭವಿಗಳು:

ವಾಹನದ ಒಟ್ಟು ಮೊತ್ತದ ಮೇಲೆ 50% ಸಹಾಯಧನವನ್ನು ಪಡೆದುಕೊಳ್ಳಬಹುದು. ಉಳಿದ 50% ಮೊತ್ತವನ್ನು ತಾವೇ ಪಾವತಿ ಮಾಡಬೇಕು.

ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತ ಫಲಾನುಭವಿಗಳು ಸರ್ಕಾರದಿಂದ ಒಟ್ಟು ₹3,00,000 ದ ವರೆಗೆ ಹಣಕಾಸಿನ ನೆರವನ್ನು ಪಡೆದುಕೊಳ್ಳಬಹುದಾಗಿದೆ.

ಅಭ್ಯರ್ಥಿಗಳು ಹೊಂದಿರಬೇಕಾದ ಅರ್ಹತಾ ಮಾನದಂಡಗಳು:

  • ಅರ್ಜಿ ಸಲ್ಲಿಸುವ ಫಲಾನುಭವಿಗಳು ಕರ್ನಾಟಕದ ಕಾಯಂ ನಿವಾಸಿಯಾಗಿರಬೇಕು.
  • ಫಲಾನುಭವಿಗಳು ಕನಿಷ್ಠ 18 ವರ್ಷ ಹಾಗೂ ಗರಿಷ್ಟ 55 ವರ್ಷ ವಯೋಮಿತಿ ಹೊಂದಿರಬೇಕು.
  • ಅಭ್ಯರ್ಥಿಗಳು ಚಾಲನಾ ಪರವಾನಗಿ ಹೊಂದಿರಬೇಕು.
  • ಈ ಹಿಂದೆ ಸರ್ಕಾರದ ಯಾವುದೇ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಂಡಿರಬಾರದು.
  • ಕುಟುಂಬದ ವಾರ್ಷಿಕ ಆದಾಯವು ₹6,00,000 ಮೀರಿರಬಾರದು.
ಪ್ರಮುಖ ಸೂಚನೆ: ” ಕುಟುಂಬದ ಯಾವುದೇ ಒಬ್ಬ ಸದಸ್ಯರು ಗೋವರ್ನಮೆಂಟ್ ಜಾಬ್ ನಲ್ಲಿ ಇದ್ದರೂ, ಆ ಕುಟುಂಬದ ಸದಸ್ಯರು ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಲು ಅರ್ಹರಲ್ಲ.”

ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು:

  • ಆಧಾರ್ ಕಾರ್ಡ್
  • ಚಾಲನಾ ಪರವಾನಗಿ
  • ರೇಷನ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಫೋಟೋ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಸ್ವಯಂ ಘೋಷಣಾ ಪತ್ರ
  • ವಾಸಸ್ಥಳ ದೃಢೀಕರಣ ಪತ್ರ
ಇಲ್ಲಿ ಗಮನಿಸಿ: ಸಬ್ಸಿಡಿ ಹಣವು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುತ್ತದೆ. ಆದ್ದರಿಂದ ನೀವು ಬ್ಯಾಂಕ್ ಖಾತೆಗೆ ಆಧಾರ್ ಅನ್ನು ಕಡ್ಡಾಯವಾಗಿ ಲಿಂಕ್ ಮಾಡಿರಬೇಕು.

ಅರ್ಜಿ ಸಲ್ಲಿಸುವುದು ಹೇಗೆ?

  • ಅರ್ಹ ಫಲಾನುಭವಿಗಳು ಸೇವಾ ಸಿಂಧೂ ಪೋರ್ಟಲ್ https://sevasindhu.karnataka.gov.in/ ಗೆ ಭೇಟಿ ನೀಡಿ
  • ಹೊಸ ಬಳಕೆ ದಾರರಾಗಿದ್ದರೆ, ಯೂಸರ್ ಐಡಿ ಹಾಗೂ ಪಾಸ್ ವರ್ಡ್ ಅನ್ನು ನಮೂದಿಸಿ ಲಾಗಿನ್ ಆಗಿ.
  • ಲಾಗಿನ್ ಆದ ನಂತರ ನಿಮ್ಮ ಸಮುದಾಯಕ್ಕೆ ಸಂಬಂಧಿಸಿದ ಅಭಿವೃದ್ಧಿ ನಿಗಮವನ್ನು ಆಯ್ಕೆ ಮಾಡಿಕೊಳ್ಳಿ.
  • ನಂತರ ಸ್ವಾವಲಂಬಿ ಸಾರಥಿ ಯೋಜನೆ (Swavalambi Sarathi Yojane) ಲಿಂಕ್ ಅನ್ನು ಕ್ಲಿಕ್ ಮಾಡಿ.
  • ನಂತರ ಅರ್ಜಿ ನಮೂನೆಯಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.
  • ವೈಯಕ್ತಿಕ ಹಾಗೂ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಿ ಅರ್ಜಿ ಪ್ರತಿಯನ್ನು ಪ್ರಿಂಟ್ ತಗೆದುಕೊಳ್ಳಿ.
ಮುಖ್ಯ ಮಾಹಿತಿ: “ನಿನ್ನೆ ನಡೆದ ಕರ್ನಾಟಕ ಸಚಿವ ಸಂಪುಟ ಸಭೆಯಲ್ಲಿ ಸ್ವಾವಲಂಬಿ ಸಾರಥಿ ಯೋಜನೆಯು ಬೃಹತ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಗೆ ಬರುವ 5 ಮಹಾನಗರ ಪಾಲಿಕೆಗಳಿಗೆ ಅನ್ವಯವಾಗಲಿದೆ ಎಂದು ತಿಳಿಸಿದೆ.”

ಕೊನೆಯ ಮಾತು:

ಕರ್ನಾಟಕ ಸರ್ಕಾರವು ನಿನ್ನೆ ನಡೆದ ಸಚಿವ ಸಂಪುಟದಲ್ಲಿ ಸ್ವಾವಲಂಬಿ ಸಾರಥಿ ಯೋಜನೆಯಡಿಯಲ್ಲಿ (Swavalambi Sarathi Yojane) ಕೆಲವು ವರ್ಗಗಳಿಗೆ ಅನುಗುಣವಾಗಿ ಫಲಾನುಭವಿಗಳಿಗೆ ಹಣಕಾಸಿನ ನೆರವನ್ನು ನೀಡಿದ್ದು, ಅರ್ಹ ಮತ್ತು ಆಸಕ್ತ ಫಲಾನುವಿಗಳು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.


ಇತರೆ ಪ್ರಮುಖ ಲಿಂಕುಗಳು:

Leave a Reply

Your email address will not be published. Required fields are marked *