ಮೊನ್ನೆ ಮೊನ್ನೆ ನಡೆದ ಬಜೆಟ್ ಮಂಡನೆಯಲ್ಲಿ ನಿರ್ಮಲ ಸೀತಾರಾಮನ್ ಇಂದ ರೈತರಿಗೆ ಸಿಗ್ತು ಬಂಪರ್ ಗಿಫ್ಟ್!. ಕೃಷಿ ಕ್ಷೇತ್ರದ ಬೆನ್ನೆಲುಬದ ರೈತರಿಗೆ ಈ ವರ್ಷದ ಕ್ಷೇತ್ರದ ಬಜೆಟ್ ಮಹತ್ವದ ನಿರೀಕ್ಷೆಯನ್ನು ಮೂಡಿಸಿದೆ. ವಿಶೇಷವಾಗಿ ಫೆಬ್ರವರಿ ತಿಂಗಳಿಂದ ಬೆಳೆಗಳಿಗೆ ಹೆಚ್ಚಾಗುವ ನೀರಿನ ಅವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಪ್ರಧಾನ ಮಂತ್ರಿ ಕುಸುಮ್ (PM-KUSUM) ಯೋಜನೆ ಅಡಿಯಲ್ಲಿ ಕೆಲ ಪ್ರಮುಖ ಬದಲಾವಣೆಯನ್ನು ತಂದಿದೆ. ಈ ಬದಲಾವಣೆಗಳು ರೈತರ ನೀರಾವರಿ ಸಮಸ್ಯೆಗೆ ಪರಿಹಾರ ನೀಡುವ ಜೊತೆಗೆ ಅವರ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ.
PM-KUSUM Yojana Karnataka Apply Online
ಬೆಳಗ್ಗೆ ಎದ್ದ ಕೂಡಲೆ ರೈತ ಮೊದಲು ಆಕಾಶದ ಕಡೆ ನೋಡ್ತಾನೆ. “ಇವತ್ತು ನೀರು ಸಿಗುತ್ತಾ?” ಅನ್ನೋ ಪ್ರಶ್ನೆ ಅವನ ಮನಸ್ಸಿನಲ್ಲಿ ದಿನದ ಆರಂಭದಿಂದಲೇ ಓಡಾಡ್ತಿರುತ್ತೆ. ಫೆಬ್ರವರಿ ತಿಂಗಳು ಬಂದರೆ ಬಿಸಿಲಿನ ತಾಪ ಹೆಚ್ಚಾಗುತ್ತೆ, ಭೂಮಿ ಬಾಯಾರಿಕೆಯಿಂದ ಬಿರುಕು ಬೀಳುತ್ತೆ, ಹೊಲದಲ್ಲಿ ನಿಂತ ಬೆಳೆಗಳಿಗೆ ನೀರಿನ ಅವಶ್ಯಕತೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತೆ. ಆದರೆ ವಿದ್ಯುತ್ ಸಮಯಕ್ಕೆ ಬರೋದಿಲ್ಲ, ಡೀಸೆಲ್ ಬೆಲೆ ಕೈಗೆಟುಕದ ಮಟ್ಟಕ್ಕೆ ಏರಿದೆ. ಇಂತಹ ಪರಿಸ್ಥಿತಿಯಲ್ಲಿ “ಬೆಳೆ ಉಳಿದ್ರೆ ಸಾಕು” ಅನ್ನೋದೇ ರೈತನ ದೊಡ್ಡ ಕನಸಾಗಿರುತ್ತೆ.

ಇಂತಹ ಪರಿಸ್ಥಿತಿಯಲ್ಲಿ ಇತ್ತೀಚೆಗೆ ಮಂಡಿಸಲಾದ ಕೇಂದ್ರ ಬಜೆಟ್ ರೈತರಿಗೆ ಹೊಸ ನಿರೀಕ್ಷೆಯ ಬೆಳಕು ತೋರಿಸಿದೆ. ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಬಜೆಟ್ ಭಾಷಣದಲ್ಲಿ ಕೃಷಿ ಹಾಗೂ ನವೀಕರಿಸಬಹುದಾದ ಶಕ್ತಿಗೆ ಹೆಚ್ಚಿನ ಹೊತ್ತು ನೀಡಿದ್ದು ಅದರ ಭಾಗವಾಗಿ ಪ್ರಧಾನಮಂತ್ರಿ ಕುಸುಮ್ ಯೋಜನೆಯಲ್ಲಿ ಕೆಲವೊಂದು ಬದಲಾವಣೆಯನ್ನು ಕೂಡ ಮಾಡಿದ್ದಾರೆ. ರೈತರು ಹೊಲಗಳಿಗೆ ಕಡಿಮೆ ವೆಚ್ಚದಲ್ಲಿ ನಿರಂತರವಾಗಿ ನೀರು ಲಭ್ಯವಾಗಬೇಕು ಎಂಬ ಉದ್ದೇಶದಿಂದ ಈ ಬದಲಾವಣೆಯನ್ನು ತರಲಾಗಿದೆ ಎನ್ನುವುದು ಸರ್ಕಾರದ ನಿಲುವು.
ಪ್ರಧಾನಮಂತ್ರಿ ಕೃಷಿ ಯೋಜನೆ ಮೂಲತಃ ಶಕ್ತಿಯ ಮೂಲ ರೈತರ ನೀರಾವರಿ ಸಮಸ್ಯೆ ಪರಿಹರಿಸಲು ರೂಪಿಸಲಾದ ಯೋಜನೆ ಎಂದರೆ ತಪ್ಪಾಗಲಾರದು. ಆದರೆ ಈಗಿನ ಬಜೆಟ್ ನಲ್ಲಿ ಈ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರುವ ಪ್ರಯತ್ನ ನಡೆಯುತ್ತಿದೆ. ಫೆಬ್ರವರಿ ಇಂದ ಆರಂಭವಾಗುವ ಕಠಿಣ ಬಿಸಿಲಿಗೆ ದಿನದಲ್ಲಿ ಬೆಳೆಗಳು ಬಾಡದಂತೆ ನೋಡಿಕೊಳ್ಳಲು ರೈತರು ಡೀಸೆಲ್ ಅಥವಾ ಅಸ್ಥಿರ ವಿದ್ಯುತ್ ಮೇಲೆ ಅವಲಂಬಿತರಾಗದೆ ಸ್ವಾವಲಂಬಿಯಾಗಿ ನೀರಾವರಿ ನಡೆಸಿಕೊಳ್ಳುವಂತೆ ಮಾಡುವುದೇ ಈ ಬದಲಾವಣೆಗಳ ಮುಖ್ಯ ಗುರಿ.
ಪಿ ಎಂ ಕುಸುಮ್ ಬಿ ಯೋಜನೆ 2026
ಸರ್ಕಾರದ ಈ ನಿರ್ಧಾರವೂ ರೈತರಿಗೆ ಕೇವಲ ತಾತ್ಕಾಲಿಕ ನೆರವಲ್ಲ ಬದಲಾಗಿ ದೀರ್ಘಕಾಲಿನ ಪರಿಹಾರವಾಗಿ ಪರಿಗಣಿಸುವ ಸಾಧ್ಯತೆ ಇದೆ. ನೀರಿನ ಲಭ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ಬೆಳೆಯ ಉತ್ಪಾದನೆಯಲ್ಲಿ ಸ್ಥಿರತೆ ತರುತ್ತದೆ. ಇದರ ಪರಿಣಾಮವಾಗಿ ರೈತರಿಗೆ ಆದಾಯ ಹೆಚ್ಚಾಗುವ ನಿರೀಕ್ಷೆಯು ಮೂಡಿಸುತ್ತದೆ. ಈ ಕಾರಣದಿಂದಲೇ ಈ ಬಾರಿ ಬಜೆಟ್ ನಲ್ಲಿ ಘೋಷಿಸಲಾದ PM-KUSUM ಯೋಜನೆಯ ಬದಲಾವಣೆಗಳನ್ನು ರೈತರಿಗೆ ಸಿಕ್ಕ “ಬಂಪರ್ ಗಿಫ್ಟ್” ಎಂದು ಕರೆಯಲಾಗುತ್ತಿದೆ.
ಒಟ್ಟಿನಲ್ಲಿ, ಹೊಲದಲ್ಲಿ ನಿಂತಿರುವ ಬೆಳೆಗೆ ನೀರು ಸಿಕ್ಕರೆ ರೈತನ ಜೀವನಕ್ಕೆ ದಾರಿ ಸಿಕ್ಕಂತೆ. ಈ ಬಾರಿ ಬಜೆಟ್ ಮೂಲಕ ಸರ್ಕಾರ ಕೊಟ್ಟಿರುವ ಸಂದೇಶ ಒಂದೇ — ರೈತನ ಸಂಕಷ್ಟವನ್ನು ಅರ್ಥ ಮಾಡಿಕೊಂಡು, ಅವನ ಜೊತೆಗೆ ನಿಲ್ಲುವ ಪ್ರಯತ್ನ. ಮುಂದಿನ ದಿನಗಳಲ್ಲಿ ಈ ಯೋಜನೆ ರೈತನ ಬದುಕಿನಲ್ಲಿ ಎಷ್ಟು ಬೆಳಕು ತುಂಬಲಿದೆ ಅನ್ನೋದು ಕಾದು ನೋಡಬೇಕಿದೆ. ಆದರೆ ಈಗಿನ ಮಟ್ಟಿಗೆ, ಈ ಘೋಷಣೆ ರೈತನ ಮನಸ್ಸಿನಲ್ಲಿ ಒಂದು ಹೊಸ ನಂಬಿಕೆ ಮೂಡಿಸಿದೆ.
| ಇಲ್ಲಿ ಗಮನಿಸಿ : “2026-27ನೇ ಸಾಲಿನ ಬಜೆಟ್ ನಲ್ಲಿ ಕೃಷಿ ಮತ್ತು ಸಂಬಂಧಿಸಿದ ಚಟುವಟಿಕೆಗಳಿಗೆ ಬರೋಬ್ಬರಿ ₹1.62-1.63 ಲಕ್ಷ ಕೋಟಿ ಮೌಲ್ಯದ ಹಣವನ್ನ ಬಜೆಟ್‌ನಲ್ಲಿ ಹಂಚಿಕೆ ಮಾಡಲಾಗಿದೆ”. |
ಸಮಸ್ಯೆ ಏನು ಅಂತ ಸರ್ಕಾರ ಗುರುತಿಸಿತು ಗೊತ್ತ ?
ಫೆಬ್ರವರಿ ತಿಂಗಳಿಂದ ಬೆಳೆಗಳಿಗೆ ನೀರು ಬೇಕು ಅನ್ನೋದು ರೈತರ ಎದುರಾಗುವ ಮುಖ್ಯ ಸಮಸ್ಯೆ. ಆದರೆ ವಿದ್ಯುತ್ ಅಥವಾ ಡೀಸೆಲ್ ಸಮಯಕ್ಕೆ ಸಿಗದೇ, ನೀರಾವರಿ ವೆಚ್ಚ ಹೆಚ್ಚಾದರೆ, ರೈತನು ತನ್ನ ಬೆಳೆಗಳಿಗೆ ಸಮಯಕ್ಕೆ ನೀರು ಕೊಡಲು ಸಾಧ್ಯವಾಗುವುದಿಲ್ಲ.
- ವಿದ್ಯುತ್ ಸರಿಯಾಗಿ ಸಿಗುವುದಿಲ್ಲ : ಹೊಲಕ್ಕೆ ಸಮಯಕ್ಕೆ ನೀರು ಬರಲ್ಲ, ಬೆಳೆ ಒಣಗುವ ಅಪಾಯ ಹೆಚ್ಚಾಗುತ್ತದೆ.
- ಡೀಸೆಲ್ ದುಬಾರಿ : ರೈತನ ಹಣಕಾಸು ಒತ್ತಡ ಹೆಚ್ಚಾಗುತ್ತದೆ, ಸಾಲ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚುತ್ತದೆ.
- ನೀರಾವರಿ ವೆಚ್ಚ ರೈತಿಗೆ ಭಾರ : ಸಾಲದ ಒತ್ತಡ ಹಾಗೂ ಆರ್ಥಿಕ ಕಷ್ಟದಿಂದ ಬೆಳೆ ಕಾಪಾಡುವುದು ಇನ್ನೂ ಕಷ್ಟವಾಗುತ್ತದೆ.
ಒಟ್ಟಾರೆ: ಸರ್ಕಾರ ಈ ಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು, PM-KUSUM ಯೋಜನೆಯನ್ನ 2026-27ನೇ ಸಾಲಿನ ಬಜೆಟ್ ನಲ್ಲಿ ಕೆಲವೊಂದು ಬದಲಾವಣೆ ಮಾಡಲು ನಿರ್ಧರಿಸಿದೆ.
ಪರಿಹಾರ ನೀಡಲು ಸರ್ಕಾರ ಏನು ಯೋಚಿಸಿತು?
ರೈತರು ತಾವು ಬೆಳೆದ ಬೆಳೆಗೆ ನೀರನ್ನ ಹಾಯಿಸಲು ಡೀಸೆಲ್ ವಿದ್ಯುತ್ ಇಲ್ಲದೆ ಇತರ ಸೌರ ಶಕ್ತಿ ಬಳಕೆಯಿಂದ ನೀರನ್ನ ತಮ್ಮ ಜಮೀನಿಗೆ ಹಾಯಿಸಿಕೊಳ್ಳಬೇಕು ಎನ್ನುವ ಚಿಂತನೆಯನ್ನು ನಡೆಸಿ ರೈತರಿಗೆ ಪರಿಹಾರವನ್ನು ನೀಡಲು ಮುಂದಾಯಿತು.
ಸರ್ಕಾರ ರೈತರಿಗೆ ನೀಡಿದ ಪರಿಹಾರ : ಸೂರ್ಯ ಶಕ್ತಿಯ ಪಂಪ್ ಬಳಸಿ ನೀರು ಎತ್ತಬೇಕು
- ಸೂರ್ಯ ಬೆಳಕು ಉಚಿತ
- ಪಂಪ್ ನಿರಂತರವಾಗಿ ಕೆಲಸ ಮಾಡುತ್ತದೆ
- ವೆಚ್ಚ ಕಡಿಮೆ
2026ರ ಬಜೆಟ್‌ನಲ್ಲಿ PM-KUSUM ಯೋಜನೆ ಬದಲಾವಣೆ
ಮೊನ್ನೆತಾನೆ ಮಂಡಿಸಿದ ಬಜೆಟ್ ನಲ್ಲಿ ಈ ಯೋಜನೆ ಯನ್ನ ಸ್ವಲ್ಪ ಬದಲಾವಣೆ ಕೂಡ ಮಾಡಲಾಯಿತು ಅಂದರೆ PM-KUSUM ಯೋಜನೆ ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಲಾಗಿದೆ.
- ಬಜೆಟ್ ಮಂಡನೆಗೂ ಮೊದಲು : ರೈತರು ಹಳ್ಳಿಯ ಪ್ರತಿಯೊಬ್ಬ ರೈತನು ತನ್ನ ಹೊಲಕ್ಕೆ ಸೌರ ಪಂಪ್ ಖರೀದಿಸಿ ಬಳಸಬೇಕಿತ್ತು ಹಾಗೆ ಪ್ರತ್ಯೇಕ ಪ್ರತಿ ರೈತರಿಗೆ ಸೌರ ಪಂಪ್, ಇದರಿಂದ ವೆಚ್ಚ ಹೆಚ್ಚು ಮತ್ತು ನಿರ್ವಹಣೆ ಕಷ್ಟವಾಗುತ್ತಿತ್ತು
- ಬದಲಾವಣೆ : ಗ್ರಾಮೀಣ ಅಥವಾ ಹಳ್ಳಿ ಮಟ್ಟದಲ್ಲಿ ಸೌರ ಶಕ್ತಿ. ಹಳ್ಳಿಯ ಹಲವಾರು ರೈತರಿಗೆ ಒಂದೇ ಸಮಯದಲ್ಲಿ ನೀರು, ಡೀಸೆಲ್ ವಿದ್ಯುತ್ ಅವಲಂಬನೆ ಕಡಿಮೆ.
ತಾತ್ಕಾಲಿಕ ನೆರವಲ್ಲ, ದೀರ್ಘಕಾಲದ ಪರಿಹಾರ ನೀಡಬೇಕೆನ್ನುವ ಪ್ರಮುಖ ಉದ್ದೇಶವನ್ನಾಗಿ ಇಟ್ಟುಕೊಂಡಿದೆ ಹಾಗಾಗಿ ಹೊಲಕ್ಕೆ ನೀರು ಸಿಗುವ ಪ್ರಮಾಣವನ್ನು ಹೆಚ್ಚಿಸುತ್ತದೆ ಜೊತೆಗೆ ಬೆಳೆ ಉತ್ಪಾದನೆ ಸ್ಥಿರವಾಗುತ್ತದೆ. ಅಷ್ಟೇ ಅಲ್ಲದೆ ರೈತರಿಗೆ ಆದಾಯ ಹೆಚ್ಚಾಗುತ್ತದೆ.
ರೈತರಿಗೆ ಈ ಬದಲಾವಣೆಯಿಂದ ನೇರವಾಗಿ ಆಗುವ ಲಾಭಗಳು :-
ಫೆಬ್ರವರಿ – ಮೇ ತಿಂಗಳ ಬೆಳೆಗಳಿಗೆ ಅತಿ ಹೆಚ್ಚಾಗಿ ನೀರು ಬೇಕಾಗುತ್ತದೆ ಇದರಿಂದ ವಿದ್ಯುತ್ ಸಮಸ್ಯೆ, ಡೀಸೆಲ್ ದುಬಾರಿ ಇಂರಿಂದ ನೀರು ಕೊಡಲು ರೈತರಿಗೆ ತುಂಬಾ ಕಷ್ಟದ ಪರಿಸ್ಥಿತಿ ಇರುತ್ತದೆ. ಇದನ್ನ ಮನಗೊಂಡ ಸರ್ಕಾರ ರೈತರಿಗೆ ಪರಿಹಾರ ನೀಡಲು ರೈತನು ತಾನೇ ಸೌರಶಕ್ತಿಯ (PM-KUSUM) ನೀರು ಎತ್ತಲು, ನಿರಂತರವಾಗಿ ಕೆಲಸ ಮಾಡಲು ಹಾಗೇನೆ ರೈತರ ವೆಚ್ಚವನ್ನು ಕೂಡ ಕಡಿಮೆ ಮೂಲಕ ರೈತರಿಗೆ ನೆರವಾಗುತ್ತದೆ.
- ಖರ್ಚು ಕಡಿಮೆ
- ಸಮಯಕ್ಕೆ ನೀರು ಸಿಗುತ್ತದೆ
- ಬೆಳೆ ಹಾನಿ ಕಡಿಮೆ
- ಆದಾಯ ಸ್ಥಿರ ಮತ್ತು ಸಾಲದ ಒತ್ತಡ ಕಡಿಮೆ
“ಒಟ್ಟಾರೆಯಾಗಿ ಹೇಳುವುದಾದರೆ ಸೌರ ಶಕ್ತಿ ಪಂಪ್ + ಸರ್ಕಾರದ ನೆರವು + ವೆಚ್ಚ ಕಡಿಮೆ + ಸಮಯಕ್ಕೆ ನೀರು+ ಬೆಳೆ ಉಳಿಕೆ + ಆದಾಯ ಸ್ಥಿರ.”
ಈ ಬದಲಾವಣೆ ಮೂಲಕ ರೈತರಿಗೆ ಫೆಬ್ರವರಿ ಇಂದ ಮೇ ತಿಂಗಳವರೆಗೆ ಹಾಗೆ ಸಮಯಕ್ಕೆ ಸರಿಯಾಗಿ ನೀರು ಸಿಗುತ್ತದೆ. “ವಿದ್ಯುತ್ ಬಿಲ್ ಭಯ ರೈತರಿಗೆ ಇನ್ಮುಂದೆ ಬೇಡ! ಬೆಲೆ ಉಳಿದರೆ ರೈತರ ಬದುಕು ಬಂಗಾರ”.
| ಮುಖ್ಯ ಮಾಹಿತಿ : PM-KUSUM ಯೋಜನೆಗೆ ಒನ್ಲೈನ್ ಮತ್ತು ಆಫ್ ಲೈನ್ ಅರ್ಜಿ ಆರಂಭವಾಗಿದ್ದು ರೈತಮಿತ್ರರು ಸರಿಯಾಗಿ ಅರ್ಜಿ ಸಲ್ಲಿಸಿ ಯೋಜನೆಯ ಲಾಭವನ್ನ ಸಂಪೂರ್ಣವಾಗಿ ಪಡೆಯಿರಿ. |
ಪ್ರಮುಖ ದಾಖಲೆ :-
- Aadhaar Card ಹೊಂದಿರಬೇಕು
- ಜಮೀನು ದಾಖಲೆ (Khatauni / 7-12) ಸಿದ್ಧವಾಗಿರಬೇಕು
- ಬ್ಯಾಂಕ್ ಖಾತೆ ಇರಬೇಕು (ಸಬ್ಸಿಡಿ ನೇರ transfer ಗೆ)
ಯಾರು ಅರ್ಹರು :-
- ಭಾರತದ ನಾಗರಿಕರಾಗಿರಬೇಕು
- ತಮ್ಮ ಜಮೀನಿನಲ್ಲಿ ಬೆಳೆಗಳು ಅಥವಾ ತುಂಬಾನೇ ಕೃಷಿ ಚಟುವಟಿಕೆಗಳಿರಬೇಕು
- ಸಣ್ಣ ರೈತ, ಮಧ್ಯಮ ಅಥವಾ ದೊಡ್ಡ ರೈತ ಆಗಿರಬೇಕು
- ಲ್ಯಾಂಡ್ ದಾಖಲೆ ಇರಬೇಕು ಹಾಗೆ ಅರ್ಜಿ ಸಲ್ಲಿಸುವ ಜಮೀನು ಸತ್ಯವಾಗಿರಬೇಕು.
ಅರ್ಜಿ ಸಲ್ಲಿಸುವ ವಿಧಾನ :-
ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ 9PM-KUSUM)
- ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ : https://pmkusum.mnre.gov.in/ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಹೊಸ ರೈತರು ನೋಂದಣಿ ಮಾಡಿ (Aadhaar + Mobile + OTP) ನೀವು ಕೊಟ್ಟಿರುವ ಮೊಬೈಲ್ ನಂಬರ್ ಗೆ OTP ಬರುತ್ತೆ ಅದರ ಮೂಲಕ
- ರೈತರು Login ಮಾಡಿಕೊಳ್ಳಿ
- ಅರ್ಜಿಯಲ್ಲಿ: ಹೆಸರು, ವಿಳಾಸ, ಜಮೀನು ವಿವರ, ಬ್ಯಾಂಕ್ ಖಾತೆ, Solar Pump ಪ್ರಕಾರ/ಸಾಮರ್ಥ್ಯ ಸರಿಯಾಗಿ ಅರ್ಜಿ ಸಲ್ಲಿಸುವ ರೈತರು ಭರ್ತಿ ಮಾಡಿ.
- ಅಗತ್ಯ ಡಾಕ್ಯುಮೆಂಟ್‌ಗಳನ್ನು upload ಮಾಡಿ: Aadhaar, Land Record, Bank Passbook, Passport ಗಾತ್ರದ ಫೋಟೋ ಪ್ರತಿಗಳನ್ನ ಆಪ್ಲೋಡ್ ಮಾಡಿ.
- ನಂತರ ಅರ್ಜಿ Submit ಬಟ್ಟನ್ ಮೇಲೆ ಕ್ಲಿಕ್ ಮಾಡಿ, Application Number ಪಡೆಯಿರಿ
- Application Number ಅನ್ನು ಉಳಿಸಿ, portal ಮೂಲಕ Status track ಮಾಡಿ
- ಸರ್ಕಾರ ಅರ್ಜಿಯನ್ನು ಪರಿಶೀಲಿಸಿ, ಮಂಜೂರು ನೀಡಿದ ಬಳಿಕ Solar Pump ಸ್ಥಾಪನೆ & subsidy ಬಿಡುಗಡೆ ಅರ್ಜಿ ಸಲ್ಲಿಸಿದ ರೈತರ ಜಮೀನಿಗೆ ದೊರೆಯುತ್ತದೆ.
ಆಫ್ ಲೈನ್ ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿ ಫಾರ್ಮ್ ಜಿಲ್ಲಾ ಕೃಷಿ/RE Dept ಕಚೇರಿ ಸಿಬ್ಬದಿಗಳ ಬಳಿ ಯೋಜನೆ ಹೆಸರನ್ನ ಹೇಳಿ ಪಡೆಯಿರಿ.
- ಫಾರ್ಮ್‌ನಲ್ಲಿ ನಿಮ್ಮ ಹೆಸರು, ವಿಳಾಸ, ಜಮೀನು ವಿವರ, ಬ್ಯಾಂಕ್ ಖಾತೆ, Solar Pump ಪ್ರಕಾರ ಸರಿಯಾಗಿ ಭರ್ತಿ ಮಾಡುತ್ತ ಬನ್ನಿ.
- ಅಗತ್ಯ ಡಾಕ್ಯುಮೆಂಟ್‌ಗಳು ಜೊತೆಗೆ: Aadhaar, Land Record, Bank Passbook, Passport size photo.
- ಅರ್ಜಿ + ಡಾಕ್ಯುಮೆಂಟ್‌ಗಳನ್ನು ಕಚೇರಿಗೆ ಸಲ್ಲಿಸಿ.
- Submission ಆದ ಮೇಲೆ Application Number / Receipt ಕೇಳಿ ಪಡೆಯಿರಿ.
- nodal agency ಅರ್ಜಿಯನ್ನು ಪರಿಶೀಲಿಸಿ, ಅನುಮೋದನೆ ಆದ ಬಳಿಕ Solar Pump ಸ್ಥಾಪನೆ & Subsidy ಬಿಡುಗಡೆ.
ಕೊನೆಯ ಮಾತು :
ಪ್ರಧಾನ ಮಂತ್ರಿ ಕುಸುಮ್ ಯೋಜನೆಗೆ (PM-KUSUM)ಅರ್ಜಿ ಸಲ್ಲಿಸದೇ ಇರುವ ಅಭ್ಯರ್ಥಿಗಳೇ ನಮ್ಮ ಕರ್ನಾಟಕದಂತ ರಾಜ್ಯದಲ್ಲಿ ಹೆಚ್ಚು ಜನ ಇದ್ದಾರೆ. 2026 ನೇ ಸಾಲಿನಲ್ಲಿಯಾದರೂ ನಮ್ಮ ಕೇಂದ್ರ ಸರ್ಕಾರ ನಡೆಸಿದ ಬಜೆಟ್ ಮಂಡನೆಯಲ್ಲಿ ಪ್ರಮುಖ ಬದಲಾವಣೆಯನ್ನು ಈ ಯೋಜನೆ ಅಡಿಯಲ್ಲಿ ಮಾಡಿದೆ. ಇದನ್ನ ತಿಳಿಯುವುದರ ಜೊತೆಗೆ ಈ ಯೋಜನೆಯಲ್ಲಿ ರೈತರಿಗೆ ಸಿಗುವ ಇವಾಗ ಲಾಭಗಳನ್ನು ಕೂಡ ಪ್ರತಿಯೊಬ್ಬ ರೈತರು ತಿಳಿಯಬೇಕೆನ್ನುವ ಉದ್ದೇಶದಿಂದ ನಮ್ಮ ಕನ್ನಡ ಹೆಲ್ಪ್ ವೆಬ್ಸೈಟ್ನಲ್ಲಿ ಸಂಪೂರ್ಣವಾದ ಮಾಹಿತಿಯನ್ನ ಹಂತ ಹಂತವಾಗಿ ವಿವರಿಸಲಾಗಿದೆ.
ಇತರೆ ಪ್ರಮುಖ ಲಿಂಕುಗಳು:
- ಕಡಿಮೆ ಬೆಲೆಯಲ್ಲಿ ಭರ್ಜರಿ ಆಫರ್ !! ನಿಮಗಾಗಿ TVS ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ 2026
- ಅಮೆಜಾನ್ ಗ್ರೇಟ್ ಸೇಲ್ 2026

