Atal Pension Scheme : ರೂ5000/- ಪ್ರತಿ ತಿಂಗಳಿಗೆ ಒಂದು ಡೈರಿ ಮಿಲ್ಕ್ ಗೆ ಖರ್ಚು ಮಾಡುವ ಹಣವನ್ನು ಇಲ್ಲಿ ಉಳಿತಾಯ ಮಾಡಿದ್ರೆ ಸಾಕು!

Atal Pension Scheme

Atal Pension Scheme : ಇತ್ತೀಚಿನ ಸಂಸತ್ತಿನಲ್ಲಿ ನಿರ್ಮಲ ಸೀತಾರಾಮನ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮಾಧ್ಯಮ ವರ್ಗದ ಕುಟುಂಬದ ಸದಸ್ಯರುಗಳು ತಮ್ಮ ಭವಿಷ್ಯ ಬಗ್ಗೆ ಸ್ವಲ್ಪವೂ ಚಿಂತಿಸುವುದಿಲ್ಲ ಎಷ್ಟು ದುಡಿಮೆ ಮಾಡಿದರು ಮಕ್ಕಳ ವಿದ್ಯಾಭ್ಯಾಸ ಹಾಗು ಅವರ ಭವಿಷ್ಯಕ್ಕೆ ತಮ್ಮ ಬದುಕನ್ನು ಮುಡಿಪಾಗಿಡುತ್ತಾರೆ. ಆದರೆ ವಯಸ್ಸಾದ ಮೇಲೆ ನೋಡ್ತಾರೋ ಇಲ್ವೋ ಗೊತ್ತಿಲ್ಲ ಆದರೆ 100% ಈ ಸ್ಕೀಮ್ ನಿಮ್ಮನ್ನು ಜೀವನವನ್ನು ನಿಭಾಯಿಸುತ್ತದೆ.

Atal Pension Scheme in kannada

ಅದು ಯಾವ ಯೋಜನೆ? ನೀವು ಇದರ ಲಾಭ ಪಡೆದುಕೊಳ್ಳಬಹುದಾ? ಏನೆಲ್ಲಾ ಡಾಕುಮೆಂಟ್ಸ್ ಬೇಕು? ಇವುಗಳ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ.

60 ವರ್ಷದ ಬಳಿಕ ಕಾರ್ಮಿಕರು ಹಾಗು ಸಾಮಾನ್ಯ ಜನರು ನೆಮ್ಮದಿಯ ಜೀವನ ಸಾಗಿಸಲಿ ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅತ್ಯಂತ ಜನಪ್ರಿಯ ಯೋಜನೆ ಅಟಲ್ ಪಿಂಚಣಿ ಯೋಜನೆ (Atal Pension Scheme) ಕೇವಲ ₹7 ರೂಪಾಯಿ ಕಟ್ಟಿದ್ರೆ ಸಾಕು ₹5000 ಹಣ ಪಡೆಯಬಹುದು. ಈಗಾಗಲೇ ಈ ಯೋಜನೆಗೆ ದೇಶದ 8.36 ಕೋಟಿ ಜನರು ಸೇರ್ಪಡೆಯಾಗಿದ್ದು ಅದರಲ್ಲಿ ನಾಲ್ಕು ಕೋಟಿಗೂ ಹೆಚ್ಚು ಮಹಿಳೆಯರೇ ಇದ್ದಾರೆ ಎಂದು ಹಣಕಾಸು ಸಚಿವೆ ತಿಳಿಸಿದ್ದಾರೆ.

ಏನಿದು ಸ್ಪೆಷಲ್ ಪೆನ್ಷನ್ ಸ್ಕೀಮ್?

ಅಟಲ್ ಪಿಂಚಣಿ ಯೋಜನೆ (Atal Pension Scheme) ಅಸಂಘಟಿತ ವಲಯದ ಕಾರ್ಮಿಕರು ಮತ್ತು ರೈತರಿಗಾಗಿ ಸರ್ಕಾರವು ರೂಪಿಸಿರುವ ಅತಿ ಕಡಿಮೆ ಹೂಡಿಕೆಯ ಅತ್ಯಂತ ಸುರಕ್ಷಿತ ಯೋಜನೆ ಇದಾಗಿದ್ದು ಇದಕ್ಕೆ ಕೇವಲ₹7 ರೂಪಾಯಿ ಉಳಿಸುವ ಮೂಲಕ 60 ವರ್ಷದ ನಂತರ ಬದುಕಿನ ಉದ್ದಕ್ಕೂ ಪ್ರತಿ ತಿಂಗಳು ₹5000 ಪಿಂಚಣಿ ಪಡೆಯಬಹುದು ಇದು ಪ್ರೈವೇಟ್ ಕಂಪನಿಯ ಸ್ಕೀಮ್ ಅಲ್ಲ ಕೇಂದ್ರ ಸರ್ಕಾರದ ಯೋಜನೆಯಾಗಿದೆ

ಅದರಿಂದ ನೀವು ಕಟ್ಟುವ ಹಣಕ್ಕೆ ಮತ್ತು ನಿಮಗೆ ಸಿಗುವ ಪಿಂಚಣಿಗೆ ನೂರಕ್ಕೆ ನೂರು ಭರವಸೆ ಇರುತ್ತದೆ. ನಿವೃತ್ತಿ ಜೀವನವನ್ನು ಭದ್ರಪಡಿಸಲು ದುಡಿಯುವ ಸಮಯದಲ್ಲಿ ಉಳಿತಾಯಕ್ಕೆ ಒತ್ತು ನೀಡುವುದು ಉತ್ತಮ ನೀವು ಅತ್ಯಂತ ಚಿಕ್ಕ ವಯಸ್ಸಿನಿಂದಲೇ ಈ ಹಣವನ್ನು ಕಟ್ಟಲು ಪ್ರಾರಂಭಿಸಿದರೆ ತುಂಬಾಒಳ್ಳೆಯದು ಒಂದು ವೇಳೆ ಈ ಯೋಜನೆಗೆ ಭಾಗಿಯಾದ ಪತಿ ಅಥವಾ ಪತ್ನಿ ಮರಣ ಹೊಂದಿದರೆ ಈ ಯೋಜನೆಯ ಹಣವು ಕಂಟಿನ್ಯೂ ಆಗುತ್ತದೆ.

ಹಿರಿಯ ನಾಗರಿಕರಿಗೆ ವಯಸದಂತೆ ದುಡಿಯುವ ಶಕ್ತಿ ಕಡಿಮೆಯಾಗುತ್ತ ಬರುತ್ತದೆ ಹಾಗೆ ಕೆಲವು ಕುಟುಬದಲ್ಲಿ ಸರಿಯಾಗಿ ನೋಡಿಕೊಳುವುದಿಲ್ಲ ಇನ್ನ ಕೆಲವು ವಯಸ್ಸಾದವರು ಬೇರೆಯವರ ಮೇಲೆ ಅವಲಂಬನೆ ಆಗುತ್ತಾರೆ ಇಂತವರಿಗಾಗಿನೇ ಸರ್ಕಾರ  ಅಟಲ್ ಪಿಂಚಣಿ ಯೋಜನೆ (Atal Pension Scheme) ಆರಂಭಿಸಿದೆ.

ಸರ್ಕಾರದ ಇಂತ ಉತ್ತಮ ಯೋಜನೆ ಅಡಿಯಲ್ಲಿ ದೊರೆಯುವ ಸಹಾಯಧನ ಎಷ್ಟು ? ಅರ್ಜಿ ಸಲ್ಲಿಸುವುದು ಹೇಗೆ ? ಎನ್ನುವುದನ್ನು ಸಂಪೂರ್ಣವಾಗಿ ತಿಳಿಯೋಣ ಬನ್ನಿ…

ಯೋಜನೆಯ ಅವಲೋಕನ :-

ಯೋಜನೆ ಹೆಸರು ಅಟಲ್ ಪಿಂಚಣಿ ಯೋಜನೆ (Atal Pension Scheme)
ರಾಜ್ಯಕರ್ನಾಟಕದ ಗ್ರಾಮೀಣ ಮತ್ತು ನಗರ ಪ್ರದೇಶ
ಫಲಾನುಭವಿಗಳುಹಿರಿಯ ನಾಗರೀಕರು
ಒಟ್ಟು ಪಿಂಚಣಿಪ್ರತಿ ತಿಂಗಳು ₹1000 ದಿಂದ ಗರಿಷ್ಠ ₹5000 ಸಾವಿರದವರೆಗೆ

ವಯಸ್ಸಾದವರಿಗೆ ದಿನನಿತ್ಯದ ಕೆಲವು ಮೂಲಭೂತ ಅಗತ್ಯಗಳನ್ನು ಒದಗಿಸಿ ಅವರ ಜೀವನ ಮಟ್ಟವನ್ನು ಸುಧಾರಿಸುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ. ನೇರವಾಗಿ ಅವರ ಬ್ಯಾಂಕ್ ಖಾತೆಗೆ ಸರ್ಕಾರದ ಕಡೆಯಿಂದಾನೆ ಹಣ ಜಮಾ ಮಾಡಲಾಗುತ್ತದೆ.

ಈ ಯೋಜನೆ ಸಾಮಾನ್ಯ ಜನರಿಗೆ ಹೇಗೆ ಸಹಾಯಕ?

ಆತ್ಮಗೌರವದ ಬದುಕು:- ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರಿಗೆ ನಿವೃತ್ತಿಯ ನಂತರ ಯಾವುದೇ ವೇತನ ಇರುವುದಿಲ್ಲ ಉದಾಹರಣೆ ರೈತರು ಚಾಲಕರು ದಿನಗೂಲಿ ನೌಕರರು ಸಣ್ಣ ವ್ಯಾಪಾರಿಗಳು ಅಂತಹ ಸಮಯದಲ್ಲಿ ಪ್ರತಿ ತಿಂಗಳು ಕೈಸೇರುವ ₹5000 ಪಿಂಚಣಿ ಮತ್ತು ಬೇರೆಯವರ ಮುಂದೆ ಕೈಚಾಚದೆ ಸ್ವಾವಲಂಬಿಯಾಗಿ ಬದುಕನ್ನು ಬದುಕಲು ನೆರವಾಗುತ್ತದೆ

ಸಣ್ಣ ಮೊತ್ತದಿಂದ ಹೂಡಿಕೆ ಆರಂಭಿಸಬಹುದು:- ಇದು ಕೇವಲ ಒಂದು ಟೀ ಕಾಫಿ ಕುಡಿಯುವ ಮೊತ್ತಕ್ಕಿಂತಲೂ ಕಡಿಮೆ ಮಾರುಕಟ್ಟೆಯಲ್ಲಿ ಏರಲಿತಗಳಾದರು ನಿಮಗೆ ಸಿಗುವ ಕನಿಷ್ಠ ಪಿಂಚಣಿ ಮೊತ್ತಕ್ಕೆ ಸರ್ಕಾರ ಭರವಸೆ ನೀಡುತ್ತದೆ

ಕುಟುಂಬಕ್ಕೆ ರಕ್ಷಣೆ (Atal Pension Scheme) :- ಸಾಮಾನ್ಯವಾಗಿ ಮಧ್ಯಮ ವರ್ಗದವರಿಗೆ ತಮ್ಮ ನಿಂತರ ತಮ್ಮ ಹೆಂಡತಿ ಅಥವಾ ಗಂಡನ ಬದುಕು ಏನಾಗಬಹುದೆಂಬ ಚಿಂತೆ ಇರುತ್ತದೆ ಆದರೆ ಈ ಯೋಜನೆ ಮೂಲಕ ನೀವು ಮೃತಪಟ್ಟರೆ ನಿಮ್ಮ ಪತಿ ಅಥವಾ ಪತ್ನಿಗೆ ಅಷ್ಟೇ ಮೊತ್ತದ ಹಣ ಸಿಗುತ್ತದೆ ಅಥವಾ ಇಬ್ಬರೂ ಮರಣ ಹೊಂದಿದರೆ ನಿಮ್ಮ ಮಕ್ಕಳಿಗೆ 8,50,000 ಲಕ್ಷ ಹಣ ನೇರವಾಗಿ ಒಂದೇ ಸಾರಿ ಸಿಗುತ್ತದೆ

ಹಣದ ಉಳಿತಾಯ:- ಬ್ಯಾಂಕ್ ಖಾತೆಯಿಂದ ಹಣ ಆಟೋ ಡೆಬಿಟ್ ಆಗುವುದರಿಂದ ರೈತರಿಗೆ ಮತ್ತು ಸಾಮಾನ್ಯ ಜನರಿಗೆ ತಿಳಿಯದಂತೆಯೇ ಒಂದು ದೊಡ್ಡ ನಿಧಿ ಸೃಷ್ಟಿಯಾಗುತ್ತದೆ

ಪಿಂಚಣಿ ಮುತ್ತ ಮತ್ತು ಮಾಸಿಕ ಕಂತು:-

ಮಾಸಿಕ ಪಿಂಚಣಿ ತಿಂಗಳಿಗೆ ಪಾವತಿಸಬೇಕಾದ ಮೊತ್ತ ನಂತರ ನಾಮಿನೆಗೆ ಸಿಗುವ ಒಟ್ಟು ಮೊತ್ತ
1,000421.7 ಲಕ್ಷ
2,000843.4 ಲಕ್ಷ
3,0001265.1 ಲಕ್ಷ
4,0001686.8 ಲಕ್ಷ
₹5,000 ₹210₹8.5 ಲಕ್ಷ

ಅತಿ ಕಡಿಮೆ ದಿನದ ಉಳಿತಾಯ:-

  • 1000 ಹಣಕ್ಕೆ ಕೇವಲ 1.50 ಪೈಸೆ
  • 2000 ಹಣಕ್ಕೆ 3 ರೂ
  • 3000 ಹಣಕ್ಕೆ 4 ರೂಪಾಯಿ
  • 4000 ಸಾವಿರ ಹಣಕ್ಕೆ5.50
  • 5000 ಹಣಕ್ಕೆ ಕೇವಲ 7 ರೂಪಾಯಿ

ಯಜಮಾನ ಯಜಮಾನಿಯ ಸ್ಪೆಷಲ್ ಪ್ಲಾನ್:-

ಒಂದು ಕುಟುಂಬದಲ್ಲಿ ಗಂಡ ಮತ್ತು ಹೆಂಡತಿ ಇಬ್ಬರೂ 18 ವರ್ಷದಿಂದ 40 ವರ್ಷದೊಳಗ ಆಗಿದ್ದು ಇಬ್ಬರು ಈ ಯೋಜನೆಗೆ ಸೇರಿದರೆ ಅರವತ್ತು ವರ್ಷದ ನಂತರ ಒಬ್ಬರಿಗೆ ₹5000 ಮತ್ತೊಬ್ಬರಿಗೆ ₹5000 ರದಂತೆ ಒಟ್ಟು ₹10,000 ಹಣವನ್ನು ಒಂದೇ ತಿಂಗಳಿಗೆ ಪಡೆಯಬಹುದು

ಯೋಜನೆಯ ಅನುಕೂಲ :-

  • ಆದಾಯದ ಮೂಲವಿಲ್ಲದ ಹಿರಿಯ ನಾಗರಿಕರಿಗೆ ಸರ್ಕಾರದಿಂದ ಪಿಂಚಣಿ ಸಿಗುತ್ತದೆ
  • ಸಮಾಜದಲ್ಲಿ ಇವರಿಗೂ ಕೂಡ ಉತ್ತಮ ಜೀವನಕ್ಕೆ ಭದ್ರತೆ ಸಿಕ್ಕಂತಾಗುತ್ತದೆ.
  • ಸರ್ಕಾರದ ಈ ಹಣಕ್ಕೆ ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಅರ್ಜಿ ದರವ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
  • ಕಡಿಮೆ ಹೂಡಿಕೆ ಹೆಚ್ಚಿನ ಲಾಭ ಪಡೆಯಬಹುದು
  • ಇಂತ ಯೋಜನೆಗಳಿಂದ ಸಮಾಜದಲ್ಲಿವಯಸದವರು ಗೌರವಯುತವಾಗಿ ಬದುಕಲು ಆಸರೆಯಾಗಿದೆ.
  • ಹೀಗೆ ಇನ್ನು ಅನೇಕ ಪ್ರಯೋಜನಗಳು ಈ ಯೋಜನೆ ಇಂದ ಸಿಗುತ್ತೆ.

ಈ ಯೋಜನೆಗೆ ಯಾರು ಸೇರ್ಪಡೆಯಾಗಬಹುದು:-

  1. ಅಟಲ್ ಪಿಂಚಣಿ ಯೋಜನೆ (Atal Pension Scheme) , ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಲಭ್ಯ
  2. ಅರ್ಜಿದಾರರ ವಯಸ್ಸು 18 ರಿಂದ 40 ವರ್ಷಗಳ ನಡುವೆ ಇರಬೇಕು
  3. ಜನದನ್ ಖಾತೆ ಅಥವಾ ಬ್ಯಾಂಕ್ ಖಾತೆ ಇರಬೇಕು
  4. ಮೊಬೈಲ್ ನಂಬರ್ ಮತ್ತು ಆಧಾರ್ ನಂಬರ್ ಇರಬೇಕು
  5. ನಿರಂತರವಾಗಿ ತಿಂಗಳಿಗೆ ಹಣವನ್ನು ಪಾವತಿಸಬೇಕು
  6. EPF, NPS ಅಥವಾ ಇತರೆ ಸಾಮಾಜಿಕ ಭದ್ರತಾ ಯೋಜನೆಯಲ್ಲಿ ಸೇರಿದವರು ಸಾಮಾನ್ಯವಾಗಿ ಸರ್ಕಾರದ ಯೋಜನೆಗೆ ಲಾಭ ಪಡೆಯಲು ಸಾಧ್ಯವಿಲ್ಲ

ಈ ಸ್ಪೆಷಲ್ ಸ್ಕೀಮ್ ಗೆ ಯಾರು ಸೇರುವುದು ಸೂಕ್ತ:-

ಬಡ ರೈತರು, ವಾಹನ ಚಾಲಕರು, ಹೋಟೆಲ್ ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಸ್ವಯಂ ಉದ್ಯೋಗಿಗಳು, ಮನೆ ಮಂದಿ ಕೆಲಸ ಮಾಡುವವರು, ದೈನಂದಿನ ಕೂಲಿ ಕಾರ್ಮಿಕರು ಈ ಯೋಜನೆಗೆ ಸೇರುವುದು ಸೂಕ್ತ.

ಈ ಯೋಜನೆಗೆ ಅರ್ಜಿ ಹೇಗೆ ಸಲ್ಲಿಸಬೇಕು ?

ಕೆಳಗೆ ಕೊಡಲಾದ ಮಾಹಿತಿಯನ್ನ ಸರಿಯಾಗಿ ಹಾಗೆ ಸಂಪೂರ್ಣವಾಗಿ ಓದಿಕೊಂಡು ಅರ್ಜಿದಾರರು ಅರ್ಜಿಯನ್ನ ಸಲ್ಲಿಸಬಹುದಾಗಿದೆ.

ನಿಮ್ಮ ಮನೆಯ ಹತ್ತಿರದ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಗೆ ಹೋಗಿ ಅರ್ಜಿ ಸಲ್ಲಿಸಬಹುದು.

ಈ ಪ್ರಮುಖ ಹಂತವನ್ನ ಅನುಸರಿಸಿ:

1.https://www.pfrda.ವೆಬ್‌ಸೈಟ್‌ಗೆ ಹೋಗಿ ಇಲಾಖೆಗಳು ಮತ್ತು ಸೇವೆಗಳ ಬಟನ್ ಮೇಲೆ ಪ್ರೆಸ್ ಮಾಡಿ.

2. ನಂತರ ಅಟಲ್ ಪಿಂಚಣಿ ಯೋಜನೆ (Atal Pension Scheme) ಮೇಲೆ ಪ್ರೆಸ್ ಮಾಡಿ

3. ಮೂರನೇ ಹಂತದಲ್ಲಿ ಆನ್‌ಲೈನ್‌ನಲ್ಲಿ ಅನ್ವಯಿಸು ಮೇಲೆ ಪ್ರೆಸ್ ಮಾಡಿ.

4. ಈಗಾಗಲೇ ನೋಂದಣಿ ಆಗಿದ್ದರೆ, ಅರ್ಜಿದಾರಹೆಸರು, ಪಾಸ್‌ವರ್ಡ್/OTP, ಕ್ಯಾಪ್ಚಾ ನಮೂದಿಸಿ ಮತ್ತು ಲಾಗಿನ್ ಬಟನ್ ಪ್ರೆಸ್ ಮಾಡಿ.

5. ಅರ್ಜಿದಾರರ ವಿವರಗಳನ್ನು ಸರಿಯಾಗಿ ಯಾವದೇ ತಪ್ಪಿಲ್ಲದೆ ಭರ್ತಿ ಮಾಡಿ

6. ನಂತರ ನೀವು ಭರ್ತಿ ಮಾಡಿದ ಫಾರಂಅನ್ನ ಸರಿಯಾಗಿ ಪರಿಶೀಲಿಸಿ ವಿವರಗಳು ಸರಿಯಾಗಿದ್ದರೆ, ಚೆಕ್‌ಬಾಕ್ಸ್ (“ಹೌದು”) ಆಯ್ಕೆಮಾಡಿ ಮತ್ತು ಸಲ್ಲಿಸಿ.

7. ಯಾವುದೇ ರೀತಿಯ ತಿದ್ದುಪಡಿ ಇದ್ದಲ್ಲಿ ಸಂಪಾದಿಸು ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

8. ನಂತರ ಮುಂದುವರಿಯಲು ಇ-ಸಹಿ ಮಾಡಿ ಮತ್ತು ಸಲ್ಲಿಸಿ ಮೇಲೆ ಪ್ರೆಸ್ ಮಾಡಿ.

9. ಅಲ್ಲಿ ಕೇಳಿರುವ ಕೆಲವು ಮಾನದಂಡಗಳಿಗೆ ಒಪ್ಪಿಗೆ ಸೂಚಿಸಿ ಮುಂದುವರಿದ ಬಳಿಕ, ಆಧಾರ್‌ ನಂಬರ್‌ ಹಾಗೂ OTP ಯನ್ನು ನಮೂದಿಸಿ “ಸಲ್ಲಿಸು” ಬಟನ್‌ ಮೇಲೆ ಕ್ಲಿಕ್‌ ಮಾಡಿ.

10. ಸಹಿ ಮಾಡಿದ ನಂತರ, ಸ್ವೀಕೃತಿಯನ್ನು ರಚಿಸಲಾಗುತ್ತದೆ. ಸ್ವೀಕೃತಿಯು ಫಲಾನುಭವಿಗಳ ವಿವರಗಳು, ಅರ್ಜಿ ವಿವರಗಳು ಮತ್ತು ಅರ್ಜಿದಾರರ ಉಲ್ಲೇಖಕ್ಕಾಗಿ ಸಲ್ಲಿಕೆ ವಿವರಗಳನ್ನು ಒಳಗೊಂಡಿರುತ್ತದೆ.

ಪ್ರಮುಖ ದಾಖಲೆಗಳು:-

  • ನಾಮಿನಿ ವಿವರ
  • ಚೆಕ್ ಬುಕ್
  • ಗಂಡನ ಅಥವಾ ಹೆಂಡತಿಯ ಮರಣ ಪ್ರಮಾಣಪತ್ರ (ಅನ್ವಯಿಸಿದರೆ)
  • ಪಡಿತರ ಚೀಟಿ
  • ಐಡಿ ಪ್ರೊಫ್
  • ಬ್ಯಾಂಕ್ ಖಾತೆ (PassBook)
  • ವಯಸ್ಸಿನ ಪ್ರಮಾಣಪತ್ರ
  • ಮತದಾರರ ಗುರುತಿನ ಚೀಟಿ
  • ಆದಾಯ ಪ್ರಮಾಣಪತ್ರ
  • ಅರ್ಜಿದಾರರ ಫೋಟೋ

ಅಂತಿಮ ತೀರ್ಮಾನ :-

ಅಟಲ್ ಪಿಂಚಣಿ ಯೋಜನೆ (Atal Pension Scheme)ಅಸಂಘಟಿತ ವಲಯದ ಜನರಿಗೆ ಅತ್ಯಂತ ಪರಿಣಾಮಕಾರಿ ಮತ್ತು ಸುರಕ್ಷಿತ ಪೆನ್ಷನ್ ಯೋಜನೆಯಾಗಿದೆ ಈಗ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿದೆ ಆದ್ದರಿಂದ ನಿಮ್ಮ ಮುಂದಿನ ಭವಿಷ್ಯಕ್ಕೆ ಕೇವಲ ದಿನಕ್ಕೆ ಏಳು ರೂಪಾಯಿ ಉಳಿಸುವ ಮೂಲಕ 60 ವರ್ಷಗಳ ನಂತರ ಪ್ರತಿಯೊಂದು ತಿಂಗಳಿಗೂ ₹5000 ರೂಪಾಯಿವರೆಗೆ ಜೀವನಪೂರ್ತಿ ಆದಾಯವ ಪಡೆಯುವ ಅವಕಾಶವನ್ನು ಕೇಂದ್ರ ಸರ್ಕಾರ ಕಲ್ಪಿಸಿ ಕೊಟ್ಟಿದ್ದು ಈ ಯೋಜನೆಗೆ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಇದರ ಲಾಭ ಪಡೆದುಕೊಳ್ಳಿ.

ಪ್ರಮುಖ ಮಾಹಿತಿ ಗಮನಿಸಿ :-

ಒಂದು ವೇಳೆ ನಿಮ್ಮ ಅರ್ಜಿ ತಿರಸ್ಕೃತಗೊಂಡರೆ ಅಥವಾ ಯಾವುದೇ ತೀರ್ಮಾನ ವಿಳಂಬವಾದರೆ, ನೀವು ಸಂಬಂಧಪಟ್ಟ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಗೆ ಭೇಟಿ ನೀಡಿ ಮಾಹಿತಿಯನ್ನು ಪಡೆಯಬಹುದು

ಇತರೆ ಪ್ರಮುಖ ಲಿಂಕುಗಳು :-

Leave a Reply

Your email address will not be published. Required fields are marked *