ನೀವೇನಾದರೂ ಹೊಸದಾಗಿ ಮೊಬೈಲ್ ಫೋನ್ ಪರ್ಚೆಸ್ ಮಾಡಬೇಕು ಎಂದು ಬಯಸುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಗುಡ್ ನ್ಯೂಸ್! ರಿಯಲ್ಮೀ ಕಂಪನಿಯು ಗ್ರಾಹಕರಿಗೆ ಒಂದೊಳ್ಳೆಯ ಮಾಡೆಲ್ ಮೊಬೈಲ್ ಫೋನ್ (Realme Bumper Offer) ಇದೀಗ ಮಾರುಕಟ್ಟೆಗೆ ಪರಿಚಯಿಸಿದ್ದು, ಇದರ ಜೊತೆಗೆ ಅತ್ಯಾಕರ್ಷಕ ಕೊಡುಗೆಗಳನ್ನು ಗ್ರಾಹಕರಿಗೆ ನೀಡಲು ಮುಂದಾಗಿದೆ. ಆ ಹೊಸ ಮಾಡೆಲ್ ಫೋನ್ ಯಾವುದು ಎಂದು ಯೋಚನೆ ಮಾಡುತ್ತಿದ್ದೀರಾ?
Realme Bumper Offer Information In Kannada
ರಿಯಲ್ಮೀ ಕಂಪನಿಯು Realme P4 Power ಎನ್ನುವ ಹೊಸ ಮಾಡೆಲ್ ಸ್ಮಾರ್ಟ್ ಫೋನ್ (Realme Bumper Offer0 ಅನ್ನು ಪರಿಚಯಿಸಿದೆ. ಈ ಸ್ಮಾರ್ಟ್ ಫೋನ್ 10,001ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಈ ಮೊಬೈಲ್ ಫೋನ್ ವಿನ್ಯಾಸ, ವಿವಿಧ ಸಾಮರ್ಥ್ಯಗಳನ್ನು ಈ ಕೆಳಗಿನ ಹಂತದಲ್ಲಿ ನೋಡೋಣ.
ಈ ವರ್ಷದ ಕೇಂದ್ರ ಬಜೆಟ್ ಮಂಡನೆಯಲ್ಲಿ ಸ್ಮಾರ್ಟ್ ಫೋನ್ ಗಳ ಮೇಲಿನ ಆಮದು ಸುಂಕವನ್ನು ಕಡಿಮೆಯಾಗಿರುವುದರಿಂದ ಸ್ಮಾರ್ಟ್ ಫೋನ್ ಗಳ ಬೆಲೆಯೂ ಕಡಿಮೆಯಾಗುವ ನಿರೀಕ್ಷೆ ಇದ್ದು, ಇಂತಹ ಸಂದರ್ಭದಲ್ಲಿ ಸ್ಮಾರ್ಟ್ ಫೋನ್ ಕಂಪನಿಗಳು ಈ ರೀತಿಯ ಒಳ್ಳೊಳ್ಳೆ ಮಾಡೆಲ್ ಗಳ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದರೆ ಯಾವ ಗ್ರಾಹಕ ತಾನೇ ಪರ್ಚೆಸ್ ಮಾಡಲ್ಲ ಹೇಳಿ. ಇದೇ ರೀತಿಯ ಇನ್ನಷ್ಟು ಸ್ಮಾರ್ಟ್ ಫೋನ್ ಗಳ ಬಗ್ಗೆ ಮಾಹಿತಿ ಬೇಕಿದ್ದರೆ ನಮ್ಮ ವೆಬ್ಸೈಟ್ ಕನ್ನಡಹೆಲ್ಪ್ ಗೆ ಭೇಟಿ ನೀಡಿ.
Realme Bumper Offer ಸ್ಮಾರ್ಟ್ ಫೋನ್ ಗ್ರಾಹಕರ ಮನ ಸೆಳೆಯುವ ವಿನ್ಯಾಸ!

Realme P4 Power ಸ್ಮಾರ್ಟ್ ಫೋನ್ ವಿನ್ಯಾಸವು ಕೇವಲ ನೋಡಲು ಸುಂದರವಾಗಿರುವುದಷ್ಟೇ ಅಲ್ಲದೆ, ವಿಶಿಷ್ಟ ಫೀಚರ್ ಗಳನ್ನು ಹೊಂದಿದ್ದು, ಗಹಳ ಗಟ್ಟಿಮುಟ್ಟಾಗಿದೆ. ಇದರ ಜೊತೆಗೆ ಆಧುನಿಕ ಮತ್ತು ಪ್ರೀಮಿಯಂ ಲುಕ್ ಅನ್ನು ಹೊಂದಿದೆ.
ಡಿಸ್ಪ್ಲೇ ವಿನ್ಯಾಸ:
6.8 ಇಂಚಿನ 1.5K ಕರ್ವ್ಡ್ ಅಮೋಲೆಡ್ ಸ್ಕ್ರೀನ್ ಅನ್ನು ಹೊಂದಿರುವ Realme Bumper Offer ನೋಡಲು ಸ್ಲಿಮ್ ಆಗಿ ಕಾಣುವುದರಿಂದ ನೋಡಲು ತುಂಬಾ ಅತ್ಯಾಕರ್ಷಕವಾಗಿದೆ. ಜೊತೆಗೆ ಸ್ಮಾರ್ಟ್ ಫೋನಿನ ಹಿಂಭಾಗದಲ್ಲಿಯೂ ಕೂಡ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಇರುವುದರಿಂದ ನೋಡುಗರಿಗೆ ರಿಚ್ ಲುಕ್ ನೀಡುತ್ತದೆ.
Realme P4 Power ಸ್ಮಾರ್ಟ್ ಫೋನ್ IP69 ರೇಟಿಂಗ್ ಹೊಂದಿರುವುದರಿಂದ, ನೀರಿನಲ್ಲಿ ಮುಳುಗಿದರೂ, ದೂಳಿನಿಂದಲೂ ಹಾಗೂ ಕೆಳಗೆ ಬಿದ್ದರೂ ಕೂಡ ಹೆಚ್ಚಿನ ಪ್ರೊಟೆಕ್ಷನ್ ಇರುತ್ತದೆ.
ಟ್ರಾನ್ಸ್ ವ್ಯೂ ವಿನ್ಯಾಸ:
Realme P4 Power ಸ್ಮಾರ್ಟ್ ಫೋನ್ ವಿಭಿನ್ನವಾದ ಟ್ರಾನ್ಸ್ ವ್ಯೂ ವಿನ್ಯಾಸವನ್ನು ಹೊಂದಿದ್ದು, ಸ್ಮಾರ್ಟ್ ಫೋನ್ ನ ಹಿಂಭಾಗದ ಕೆಳಬದಿಯು ಮ್ಯಾಟ್ ಫಿನಿಷ್ ಹೊಂದಿದ್ದು, ಮೇಲ್ಬಾಗವು ಸರ್ಕ್ಯೂಟ್ ಮಾದರಿಯ ಪ್ಯಾಟರ್ನ್ ಹೊಂದಿದೆ.
Realme P4 Power ಸ್ಮಾರ್ಟ್ ಫೋನ್ ಧೀರ್ಘ ಬಾಳಿಕೆಯ ಸಾಮರ್ಥ್ಯ:
Realme Bumper Offer ಸ್ಮಾರ್ಟ್ ಫೋನ್ ಅತ್ಯಾಕರ್ಷಕ ವಿನ್ಯಾಸವನ್ನು ಹೊಂದಿದ್ದು, ಇದರ ಜೊತೆಗೆ ಅತ್ಯುತ್ತಮ ಸಾಮರ್ಥ್ಯವನ್ನು ಹೊಂದಿರುವುದರಿಂದ ಈ ಫೋನ್ ಗೆ ಗ್ರಾಹಕರ ಮನಸೋಲುವುದು ಖಚಿತ.
ಚಿಪ್ ಸೆಟ್ ಸಾಮರ್ಥ್ಯ:
Realme P4 Power ಸ್ಮಾರ್ಟ್ ಫೋನ್ ಮಿಡಿಯಾ ಟೆಕ್ ಡಿಮೆನ್ಸಿಟಿ 7,400 ಅಲ್ಟ್ರ ಚಿಪ್ ಸೆಟ್ ಪ್ರೊಸೆಸರ್ ಅನ್ನು ಹೊಂದಿದ್ದು, ಇದು ದಿನನಿತ್ಯದ ಬಳಕೆಯು, ಗೇಮಿಂಗ್ ಗೂ, ಮಲ್ಟಿ ಟಾಸ್ಕಿಂಗ್ ಗೂ ಬಳಸಲು ಸೂಕ್ತವಾದ ಮೊಬೈಲ್ ಫೋನ್ ಆಗಿದೆ.
ಈ ಸ್ಮಾರ್ಟ್ ಫೋನ್ ಸುಮಾರು ಒಂದು ಲಕ್ಷಕ್ಕೂ ಹೆಚ್ಚು AnTuTu ಸ್ಕೋರ್ ಹೊಂದಿರುವುದರಿಂದ, ಇದು ಅತ್ಯಂತ ವೇಗದ ಫೋನ್ ಗಳಲ್ಲಿ ಒಂದಾಗಿದೆ ಎಂದು ಹೇಳಬಹುದು.
ಬ್ಯಾಟರಿ ಸಾಮರ್ಥ್ಯ:
Realme P4 Power ಸ್ಮಾರ್ಟ್ ಫೋನ್ ಸಿಲಿಕಾನ್ ಕಾರ್ಬನ್ ಟೈಟಾನ್ ಬ್ಯಾಟರಿಯನ್ನು ಹೊಂದಿದ್ದು, ಇದೊಂದು 10,001 mAh ಸಾಮರ್ಥ್ಯದ ಬೃಹತ್ ಬ್ಯಾಟರಿಯಾಗಿದೆ. ಉಳಿದೆಲ್ಲಾ ಫೋನ್ ಗಳು ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದರೆ ಕೇವಲ 12 ರಿಂದ 15 ದಿನಗಳ ವರೆಗೆ ಸ್ಟಾಂಡ್ ಬೈನಲ್ಲಿ ಇದ್ದರೆ, ಈ ಸ್ಮಾರ್ಟ್ ಫೋನ್ ಬೃಹತ್ ಬ್ಯಾಟರಿ ಹೊಂದಿರುವುದರಿಂದ 39 ದಿನಗಳ ವರೆಗೂ ಸ್ಟಾಂಡ್ ಬೈನಲ್ಲಿ ಇರುತ್ತದೆ.
ಈ ಬೃಹತ್ ಬ್ಯಾಟರಿ ಇಂದಾಗಿ ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದರೆ ಅತಿ ಹೆಚ್ಚು ಪವರ್ ಅಗತ್ಯವಿರುವ BGMI ನಂತಹ ಗೇಮ್ ಗಳನ್ನು 11.7 ಗಂಟೆಗಳ ಕಾಲ ಆಡಬಹುದಾಗಿದೆ. ಹಾಗೂ ಯೂಟ್ಯೂಬ್ ಸ್ಟ್ರೀಮಿಂಗ್ 32 ಗಂಟೆಗಳ ಕಾಲ ಇರುವುದರಿಂದ ದಿನವಿಡೀ ಯೂಟ್ಯೂಬ್ ವಿಡಿಯೋ ನೋಡಿದರು ಬ್ಯಾಟರಿ ಖಾಲಿ ಆಗುವುದಿಲ್ಲ.
ಚಾರ್ಜಿಂಗ್ ಸಾಮರ್ಥ್ಯ:
80W super VOOC ಚಾರ್ಜರ್ ಅನ್ನು ಬಳಸಿ Realme P4 Power ಸ್ಮಾರ್ಟ್ ಫೋನ್ ಗೆ ಚಾರ್ಜ್ ಮಾಡಿದರೆ ಬೃಹತ್ ಬ್ಯಾಟರಿ ಹೊಂದಿದ್ದರು ಕೂಡ ಕೇವಲ 36 ನಿಮಿಷಗಳಲ್ಲಿ 50% ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ.
Realme Bumper Offer ಸ್ಮಾರ್ಟ್ ಫೋನ್ ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ, ಸಾಮಾನ್ಯ ಕೆಲಸಕ್ಕೆ ಫೋನ್ ಅನ್ನು ಯೂಸ್ ಮಾಡಿದರೆ 3 ರಿಂದ 4 ದಿನಗಗಳ ಕಾಲ ಚಾರ್ಜ್ ಮಾಡುವ ಅಗತ್ಯವಿಲ್ಲ.
ಸ್ಮಾರ್ಟ್ ಫೋನ್ ತಿಕ್ನೆಸ್ಸ್:
ಈ ಸ್ಮಾರ್ಟ್ ಫೋನ್ ಬೃಹತ್ ಬ್ಯಾಟರಿಯನ್ನು ಹೊಂದಿದ್ದರೂ ಕೂಡ, ಈ ಫೋನ್ ನ ದಪ್ಪವು ಕೇವಲ 9.08 mm ಇದೆ. ಹಾಗೂ ಇದರ ತೂಕವು ಕೇವಲ 215 ರಿಂದ 219 ಗ್ರಾಂ ಇದೆ. ಈ ಫೋನ್ ಬಹಳಷ್ಟು ಲೈಟ್ ವೇಟ್ ಇರುವುದರಿಂದ ಈ ಫೋನ್ ಅನ್ನು ಬಳಕೆ ಮಾಡುವವರಿಗೂ ಇದನ್ನು ಹಿಡಿದುಕೊಳ್ಳಲು ಆರಾಮದಾಯಕವಾಗಿರುತ್ತದೆ.
Realme P4 Power ಸ್ಮಾರ್ಟ್ ಫೋನ್ ಬೆಲೆ:
ಅತ್ಯಾಕರ್ಷಕ ವಿನ್ಯಾಸದ Realme Bumper Offer ಸ್ಮಾರ್ಟ್ ಫೋನ್ ಎಷ್ಟು ಮೌಲ್ಯವನ್ನು ಹೊಂದಿದೆ ಎನ್ನುವುದನ್ನು ಈ ಕೆಳಗೆ ತಿಳಿದುಕೊಳ್ಳೋಣ.
- 8GB RAM ಹಾಗೂ 128GB ಸ್ಟೋರೇಜ್ ಸಾಮರ್ಥ್ಯ ಹೊಂದಿರುವ ಫೋನ್ – ₹25,999
- 8GB RAM ಹಾಗೂ 256GB ಸ್ಟೋರೇಜ್ ಸಾಮರ್ಥ್ಯ ಹೊಂದಿರುವ ಫೋನ್ – ₹27,999
- 12GB RAM ಹಾಗೂ 256GB ಸ್ಟೋರೇಜ್ ಸಾಮರ್ಥ್ಯ ಹೊಂದಿರುವ ಫೋನ್ – ₹30,999
ಅತ್ಯಾಕರ್ಷಕ ಕೊಡುಗೆ:
Realme P4 Power ಸ್ಮಾರ್ಟ್ ಫೋನ್ ಅನ್ನು ಆಯ್ದ ಬ್ಯಾಂಕ್ ಕಾರ್ಡ್ ಗಳಲ್ಲಿ ಖರೀದಿ ಮಾಡುವವರಿಗೆ ಸುಮಾರು ₹2,000 ದಷ್ಟು ರಿಯಾಯಿತಿ ಇರುವುದರಿಂದ ಬ್ಯಾಂಕ್ ಕಾರ್ಡ್ ಮೂಲಕ ಖರೀದಿ ಮಾಡುವವರಿಗೆ ಇದೊಂದು ಒಳ್ಳೆಯ ಆಫರ್ ಆಗಿದೆ.
Realme P4 Power ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಯಲ್ಲಿ ಈಗಾಗಲೇ ಬಿಡುಗಡೆ ಮಾಡಿದ್ದು, ಪ್ರಾರಂಭಿಕ ಹಂತದಲ್ಲಿ ಖರೀದಿ ಮಾಡುವವರಿಗೆ 4 ವರ್ಷಗಳ ಬ್ಯಾಟರಿ ವಾರಂಟಿ ಸೌಲಭ್ಯವನ್ನು ನೀಡಲಾಗುವುದು.
ಜೊತೆಗೆ, ಎಕ್ಸ್ಚೇಂಜ್ ಆಫರ್ ಅನ್ನು ಬೀಡಿದ್ದು, ಹಳೆ ಫೋನ್ ನೀಡಿ ಹೊಸ ಫೋನ್ ಕೊಳ್ಳುವವರಿಗೆ ₹2,000 ರಿಯಾಯಿತಿ ನೀಡಲಾಗುವುದು. ಹಾಗೂ ರಿಯಾಲ್ ಮೀ ಫೋನ್ ಅನ್ನು ಎಕ್ಸ್ಚೇಂಜ್ ಮಾಡಿದರೆ ₹1,000 ವನ್ನು ಹೆಚ್ಚುವರಿ ಬೋನಸ್ ಆಗಿ ನೀಡಲಾಗುವುದು.
ಇವುಗಳೆಲ್ಲದರ ಜೊತೆಗೆ ಮುಖ್ಯವಾಗಿ, ಯಾವುದೇ ಬಡ್ಡಿ ಇಲ್ಲದೆ 6 ತಿಂಗಳ ಕಂತುಗಳ ಮೂಲಕ ಫೋನ್ ಅನ್ನು ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಕೊನೆಯದಾಗಿ:
Realme P4 Power ಸ್ಮಾರ್ಟ್ ಫೋನ್ ಗಮನ ಸೆಳೆಯುವ ವಿನ್ಯಾಸ, ಉತ್ತಮ ಗುಣಮಟ್ಟದ ಸಾಮರ್ಥ್ಯ, ದೀರ್ಘಬಾಳಿಕೆಗೂ ಯೋಜಗವಾದ, ಹಾಗೂ ಮಾರುಕಟ್ಟೆಗೆ ಲಾಂಚ್ ಆದ ಸಮಯದಲ್ಲೇ ಅತ್ಯಾಕರ್ಷಕ ಕೊಡುಗೆಯನ್ನು ನೀಡುವ ಮೂಲಕ ಗ್ರಾಹಕರ ಮನ ಗೆದ್ದು, ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿದೆ.
ನೀವೇನಾದರೂ ವಿಭಿನ್ನ ವಿನ್ಯಾಸದ ಫೋನ್ ಅನ್ನು ಪರ್ಚೆಸ್ ಮಾಡಲು ಇಚ್ಛಿಸಿದರೆ ಕೂಡಲೇ ನಿಮ್ಮ ಹತ್ತಿರದ ಮೊಬೈಲ್ ಸ್ಟೋರ್ ಗೆ ಭೇಟಿ ನೀಡಿ ಅಥವಾ ಆನ್ಲೈನ್ ಮೂಲಕ ಬುಕಿಂಗ್ ಮಾಡಿಕೊಳ್ಳಿ. ಈ ಉತ್ತಮ ಅವಕಾಶವನ್ನು ಮಿಸ್ ಮಾಡ್ಕೊಂಡು ನಂತರ ಕೊರಗಬೇಡಿ.
ಇತರೆ ಪ್ರಮುಖ ಲಿಂಕುಗಳು:
- ಅಮೆಜಾನ್ ಗ್ರೇಟ್ ಸೇಲ್ 2026
- ಕಡಿಮೆ ಬೆಲೆಯಲ್ಲಿ ಭರ್ಜರಿ ಆಫರ್ !! ನಿಮಗಾಗಿ TVS ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ 2026

